ಸಾಯಿ ಮಹಾಭಕ್ತ - ಅನ್ವರ್ ಖಾನ್ - ಕೃಪೆ: ಸಾಯಿಅಮೃತಧಾರಾ.ಕಾಂ
ಅನ್ವರ್ ಖಾನ್ ರವರು ಮಧ್ಯಪ್ರದೇಶದ ಭೂಪಾಲ್ ಬಳಿಯಿರುವ ವರ್ಹಾದ್ (ಬೆಹಾರ್) ನಲ್ಲಿ ವಾಸಿಸುತ್ತಿದ್ದರು. ಒಮ್ಮೆ ಇವರು ಸಾಯಿಬಾಬಾರವರನ್ನು ಕಾಣಲು ಬಂದರು. ಆಗ ಅವರು ಸಾಯಿಬಾಬಾರವರಿಗೆ "ನನಗೆ ಈ ಸಂಸಾರದಲ್ಲಿ ಇರಲು ಇಷ್ಟವಿಲ್ಲ" ಎಂದು ತಿಳಿಸಿದರು. ಅಲ್ಲದೆ, ಇವರು ಸುಮಾರು 12 ತಿಂಗಳುಗಳ ಕಾಲ ಶಿರಡಿಯಲ್ಲಿನ ಚಾವಡಿಯಲ್ಲಿ ಉಳಿದುಕೊಂಡಿದ್ದರು. ಬಾಬಾರವರು ಇವರಿಗೆ ಒಂದು ಮಂತ್ರವನ್ನು ಉಪದೇಶಿಸಿದರು. "ಬಿಸ್ಮಿಲ್ಲಾ, ಕುಲಿಯಾ ಹಿಯೊ ವಲ್ಕಾಫಿರೋನೋ ನಬುಡೊ ಮಾಬುದಾನಾ........." . ಬಾಬಾರವರು ಆ ಮಂತ್ರವು ಕುರಾನ್ ನ 1ನೇ ಅಧ್ಯಾಯದಲ್ಲಿ ಇರುವುದಾಗಿ ಹೇಳಿ ಅದನ್ನು ಪ್ರತಿದಿನ ಮಧ್ಯರಾತ್ರಿ ಸಮಯದಲ್ಲಿ 101 ಬಾರಿ ಪಠಣ ಮಾಡುವಂತೆ ಕೊಡ ಆದೇಶ ನೀಡಿದರು. ಅಲ್ಲದೆ, ಪಠಣದ ಕೊನೆಯಲ್ಲಿ "ದೇವುತ್" ನ್ನು ಕೂಡ ಪಠಿಸುವಂತೆ ಸಲಹೆ ನೀಡಿದರು. ನಂತರ ಬಾಬಾರವರು ಅನ್ವರ್ ರವರಿಗೆ ಪೇಡಾ ಪ್ರಸಾದವನ್ನು ನೀಡಿ ಅರೇಬಿಯಾದಲ್ಲಿದ್ದ ಬಾಗ್ದಾದ್ ಗೆ ಕಳುಹಿಸಿದರು. ಬಾಬಾರವರ ಸಲಹೆಯಂತೆ ಅನ್ವರ್ ರವರು ಮುಂಬೈಗೆ ತೆರಳಿ ಅಲ್ಲಿಂದ ಹಾಜಿ ಕಾಸಿಂ ರವರ ಸಹಾಯದಿಂದ ಅರೇಬಿಯಾಕ್ಕೆ ತೆರಳಿದರು. ಆದರೆ, ಇಲ್ಲಿಯವರೆಗೂ ಅನ್ವರ್ ರವರು ಅರೇಬಿಯಾದಿಂದ ಭಾರತಕ್ಕೆ ವಾಪಸಾಗಿಲ್ಲ ಮತ್ತು ಅವರು ಎಲ್ಲಿದ್ದಾರೆಂಬುದು ಕೂಡ ತಿಳಿದುಬಂದಿಲ್ಲ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment