ದಕ್ಷಿಣ ಕನ್ನಡ ಜಿಲ್ಲೆಯ ಹಾಗೂ ಮಂಗಳೂರಿನ ಪ್ರಪ್ರಥಮ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ), ಲೇಡಿ ಹಿಲ್,ಉರ್ವ,ಚಿಲಿಂಬಿ, ಮಂಗಳೂರು-575 006, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ
ಮಂಗಳೂರಿನ ಭೂಮಿಯನ್ನು ಮತ್ತು ಅಲ್ಲಿನ ಜನರನ್ನು ಪಾವನಗೊಳಿಸುವ ಸಲುವಾಗಿ ಸ್ವತಃ ಶಿರಡಿ ಸಾಯಿಬಾಬಾರವರೇ ಮುಂಬೈನ ಸಾಯಿಭಕ್ತೆ ಚಂದ್ರಾಭಾಯಿಯವರೊಂದಿಗೆ ಆಗಮಿಸಿದರು. ಚಂದ್ರಾಭಾಯಿಯವರ ಕನಸಿನಲ್ಲಿ ಕಾಣಿಸಿಕೊಂಡು "ನನ್ನನ್ನು ನಿನ್ನೊಂದಿಗೆ ಮಂಗಳೂರಿಗೆ ಕರೆದುಕೊಂಡು ಹೋಗು" ಎಂದು ಸಾಯಿಯವರು ನುಡಿದಿದ್ದರು. ಅದರಂತೆ, 1965 ರಲ್ಲಿ ಚಂದ್ರಾಭಾಯಿಯವರು ದಕ್ಷಿಣ ಕನ್ನಡದ ಪ್ರಪ್ರಥಮ ಸಾಯಿಬಾಬಾ ಮಂದಿರವನ್ನು ಉರ್ವ, ಚಿಲಿಂಬಿಯ ತಮ್ಮ ಸ್ವಗೃಹದಲ್ಲಿ ಪ್ರಾರಂಭಿಸಿದರು.
ಸಾಯಿಯವರ ವಾಣಿಯಾದ "ಶ್ರದ್ಧೆ ಮತ್ತು ತಾಳ್ಮೆ" ಯನ್ನು ತಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದರಿಂದ ಜೀವನದಲ್ಲಿ ಬಂದ ಕಷ್ಟಗಳನ್ನೆಲ್ಲಾ ಧೈರ್ಯವಾಗಿ ಎದುರಿಸಿ ಜಯಶಾಲಿಯಾದರು. ಸಾಯಿಬಾಬಾರವರ ಆಶೀರ್ವಾದದಿಂದ ಅವರ ಮನೆಯವರೆಲ್ಲರ ಕಷ್ಟಗಳು ದೂರವಾದವು. ನಿಧಾನವಾಗಿ ಈ ಮಂದಿರಕ್ಕೆ ಬರುತ್ತಿದ್ದ ಜನರಲ್ಲಿ ಕೂಡ ಸಾಯಿಯವರು ತಮ್ಮ ಚಮತ್ಕಾರಗಳನ್ನು ತೋರಿಸಿ ಜನರ ಲೌಕಿಕ ಹಾಗೂ ಆಧ್ಯಾತ್ಮಿಕ ಕೋರಿಕೆಗಳನ್ನು ಈಡೇರಿಸಿದರು.
ಚಂದ್ರಾಭಾಯಿಯವರು ಕಾಲವಾದ ನಂತರ ಈ ಮಂದಿರದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಅವರ ಮೊಮ್ಮಗನಾದ ವಿಶ್ವಾಸ್ ಕುಮಾರ್ ದಾಸ್ ರವರು ವಹಿಸಿಕೊಂಡಿರುತ್ತಾರೆ. ಪ್ರತಿನಿತ್ಯ ಈ ಮಂದಿರಕ್ಕೆ ನೂರಾರು ವಿದ್ಯಾರ್ಥಿಗಳು ಬರುವುದೇ ಒಂದು ವಿಶೇಷ. ಗುರುವಾರದ ದಿನ ಈ ಮಂದಿರದಲ್ಲಿ ಸಾಯಿ ಭಕ್ತ ಸಾಗರವೇ ಹರಿದು ಬರುತ್ತದೆ.
ಈ ದೇವಾಲಯವು ಮಂಗಳೂರು ಉಡುಪಿ ಮುಖ್ಯರಸ್ತೆಯಲ್ಲಿ ಲೇಡಿ ಹಿಲ್ ಚರ್ಚ್ ನ ಎದುರುಗಡೆ ಮತ್ತು ಮೋರ್ ಸೂಪರ್ ಮಾರುಕಟ್ಟೆ ಹತ್ತಿರ ಇರುವ ಉರ್ವ, ಚಿಲಿಂಬಿ ಯಲ್ಲಿ ಇರುತ್ತದೆ. ದೇವಾಲಯವು ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು ಆರು ಕಿಲೋಮೀಟರ್ ಗಳ ಅಂತರದಲ್ಲಿರುತ್ತದೆ.
ದೇವಾಲಯವನ್ನು ಮೊದಲು ಒಂದು ಮನೆಯಲ್ಲಿ 1965 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು.
ಕಾಲಾನಂತರದಲ್ಲಿ ಆ ಮನೆಯ ಪಕ್ಕದಲ್ಲಿದ್ದ ಸ್ಥಳದಲ್ಲಿ ದೇವಾಲಯವನ್ನು ನಿರ್ಮಿಸಿ ಅದನ್ನು 20ನೇ ಏಪ್ರಿಲ್ 1967 ರಂದು ಸಾವಿರಾರು ಜನ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದ ಸಂಸ್ಥಾಪಕ ಅಧ್ಯಕ್ಷೆಯಾದ ಶ್ರೀಮತಿ.ಚಂದ್ರಾಭಾಯಿಯವರು ಉದ್ಘಾಟಿಸಿದರು.
ದೇವಾಲಯವನ್ನು ಶ್ರೀಮತಿ.ಚಂದ್ರಾ ಭಾಯಿಯವರು ನಿರ್ಮಿಸಿರುತ್ತಾರೆ. ಇವರ ಮೊಮ್ಮಗನಾದ ಶ್ರೀ.ವಿಶ್ವಾಸ್ ಕುಮಾರ್ ದಾಸ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಮಂದಿರದಲ್ಲಿ ಸುಮಾರು 4 ಅಡಿ 1/4 ಅಂಗುಲ ಎತ್ತರದ ಮಿಶ್ರಿತ ಸಿಮೆಂಟ್ ನಿಂದ ಮಾಡಿದ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಸುಮಾರು 3 ಅಡಿ ಎತ್ತರದ ಗ್ರಾನೈಟ್ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಹಿಂಭಾಗದಲ್ಲಿ ಬೆಳ್ಳಿಯ ಪ್ರಭಾವಳಿ ಹಾಗೂ ಸಾಯಿಬಾಬಾರವರ ವಿಗ್ರಹದ ಮೇಲ್ಭಾಗದಲ್ಲಿ ಬೆಳ್ಳಿಯ ಆದಿಶೇಷ ಇದ್ದು ಗರ್ಭಗುಡಿಗೆ ಹೆಚ್ಚಿನ ಶೋಭೆಯನ್ನು ತಂದಿದೆ. ಸುಮಾರು 3/4 ಅಡಿ ಎತ್ತರದ ಬೆಳ್ಳಿಯ ಸಾಯಿಬಾಬಾರವರ ವಿಗ್ರಹವು ಗರ್ಭಗುಡಿಯಲ್ಲಿ ಇದ್ದು ಇದನ್ನು ಪ್ರತಿನಿತ್ಯ ಅಭಿಷೇಕಕ್ಕೆ ಬಳಸಲಾಗುತ್ತಿದೆ.
ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಬಳಸಲಾಗುವ ಮರದ ಪಲ್ಲಕ್ಕಿಯನ್ನು ಮಂದಿರದ ಒಳಗಡೆ ಕಾಣಬಹುದು.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ
ಅಷ್ಟೋತ್ತರ ನಾಮಾವಳಿ : ಬೆಳಿಗ್ಗೆ 8 ಘಂಟೆಗೆ
ಛೋಟಾ ಆರತಿ : ಬೆಳಿಗ್ಗೆ 9:30 ಕ್ಕೆ
ಮಧ್ಯಾನ್ಹ ಆರತಿ : ಮಧ್ಯಾನ್ಹ 12 ಘಂಟೆಗೆ
ಧೂಪಾರತಿ : ಸಂಜೆ 6 ಘಂಟೆಗೆ
ಮಹಾಪೂಜಾ: ರಾತ್ರಿ 8 ಘಂಟೆಗೆ
ಶೇಜಾರತಿ: ರಾತ್ರಿ 9 ಘಂಟೆಗೆ
ಪ್ರತಿನಿತ್ಯ ಬೆಳ್ಳಿಯ ಸಾಯಿಬಾಬಾರವರ ವಿಗ್ರಹಕ್ಕೆ ಅಭಿಷೇಕವನ್ನು ನಡೆಸಲಾಗುತ್ತದೆ. ಯಾವುದೇ ನಿಗದಿತ ಸೇವಾ ಶುಲ್ಕ ಇರುವುದಿಲ್ಲ.
ಪ್ರತಿನಿತ್ಯ ಅಷ್ಟೋತ್ತರ ನಾಮಾವಳಿ ಪೂಜೆಯನ್ನು ಮಂದಿರದಲ್ಲಿ ನಡೆಸಲಾಗುತ್ತಿದೆ. ಯಾವುದೇ ನಿಗದಿತ ಸೇವಾ ಶುಲ್ಕ ಇರುವುದಿಲ್ಲ.
ಪ್ರತಿನಿತ್ಯ ನಡೆಯುವ ಪೂಜೆ ಮತ್ತು ಆರತಿಯನ್ನು ಹೊರತುಪಡಿಸಿ ವಿಶೇಷ ಪೂಜೆಗಳಾದ ಪಾದ ಪೂಜೆ, ಅಲಂಕಾರ ಪೂಜೆ, ಗುರುವಾರದ ವಿಶೇಷ ಪೂಜೆ ಮತ್ತು ಅನ್ನದಾನ ಕಾರ್ಯಕ್ರಮವನ್ನು ಮಂದಿರದಲ್ಲಿ ನಡೆಸಿಕೊಂಡು ಬರಲಾಗುತ್ತಿದೆ.
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ 20ನೇ ಏಪ್ರಿಲ್.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ಶ್ರೀ ಕೃಷ್ಣ ಜನ್ಮಾಷ್ಟಮಿ.
ದೀಪಾವಳಿ.
ತುಳಸಿ ಪೂಜೆ.
ವಿಜಯದಶಮಿ.
ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಟ್ರಸ್ಟ್ ನ ವತಿಯಿಂದ ಅನಿಯಮಿತವಾಗಿ ಮಂಗಳೂರಿನ ಸುತ್ತಮುತ್ತಲೂ ವಾಸಿಸುವ ಕೆಲ ವರ್ಗದ ಜನರಿಗೆ, ಅಂಧರಿಗೆ, ಅಂಗವಿಕಲರಿಗೆ ಅನ್ನದಾನ, ಶಿಕ್ಷಣ ಹಾಗೂ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಒಕ್ಕಲಿಗರ ಸಂಘದ ಹಿಂಭಾಗ, ಲೇಡಿ ಹಿಲ್ ಚರ್ಚ್ ಎದುರುಗಡೆ, ಉರ್ವ, ಚಿಲಿಂಬಿ, ಮಂಗಳೂರು.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸೇವಾ ಟ್ರಸ್ಟ್ (ನೋಂದಣಿ),
ಲೇಡಿ ಹಿಲ್, ಉರ್ವ, ಚಿಲಿಂಬಿ, ಮಂಗಳೂರು-575 006, ಕರ್ನಾಟಕ.
ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀ.ವಿಶ್ವಾಸ್ ಕುಮಾರ್ ದಾಸ್ - ಮ್ಯಾನೇಜಿಂಗ್ ಟ್ರಸ್ಟಿ.
ದೂರವಾಣಿ ಸಂಖ್ಯೆಗಳು:
+91 94481 35711 / +91 824 2455711
ಇಮೇಲ್ ವಿಳಾಸ:
ಅಂತರ್ಜಾಲ ತಾಣ:
http://www.shirdisaimangalore.org ಮಾರ್ಗಸೂಚಿ:
ಲೇಡಿ ಹಿಲ್ ಬಸ್ ನಿಲ್ದಾಣದಲ್ಲಿ ಇಳಿಯುವುದು. ಒಕ್ಕಲಿಗರ ಸಂಘದ ಹಿಂಭಾಗದಲ್ಲಿ ದೇವಾಲಯವಿರುತ್ತದೆ. ದೇವಾಲಯವು ಮಂಗಳೂರು ಬಸ್ ನಿಲ್ದಾಣದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುತ್ತದೆ. ಬಸ್ ಸಂಖ್ಯೆಗಳು: 1,2,13,15,45,60 ಮತ್ತು 61.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment