ಶಿರಡಿ ಸಾಯಿ ತತ್ವ ಪ್ರಚಾರಕ ಶ್ರೀ.ಸಾಯಿ ವಿಶ್ವ ಚೈತನ್ಯ ಸ್ವಾಮೀಜಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯ ಸಂಸ್ಥಾಪಕರು. ಇವರು ತಮ್ಮ ಆಧ್ಯಾತ್ಮಿಕ ಉಪದೇಶಗಳ ಮುಖಾಂತರ ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಲ್ಲಿ ಪ್ರೀತಿ, ಪ್ರೇಮ ಮತ್ತು ಸಹೋದರ ಭಾವವನ್ನು ಬೆಳೆಸುವ ಉದ್ದೇಶದಿಂದ ಸ್ವಾಮೀಜಿಯವರು ಈ ಪ್ರಚಾರ ಸಮಿತಿಯನ್ನು ಪ್ರಾರಂಭಿಸಿರುತ್ತಾರೆ.
ಸ್ವಾಮೀಜಿಯವರು 27ನೇ ನವೆಂಬರ್ 1971 ರಂದು ಆಂಧ್ರಪ್ರದೇಶದ ಹೈದರಾಬಾದ್ ನಲ್ಲಿ ಜನಿಸಿದರು. ಇವರ ತಾಯಿಯವರು ಶ್ರೀಮತಿ.ಕುಸುಮ ಮತ್ತು ತಂದೆಯವರು ಶ್ರೀ.ಎ.ವಿ.ಶರ್ಮ. ಇವರು ತಿರುಪತಿ ವೆಂಕಟೇಶ್ವರನ ಪರಮ ಭಕ್ತರಾಗಿರುತ್ತಾರೆ. ಇವರು ಬಾಲ್ಯದಲ್ಲಿ ತಮ್ಮ ಮಾತಾ ಪಿತೃಗಳೊಂದಿಗೆ ಹಾಗೂ ತಮ್ಮಂದಿರೊಂದಿಗೆ ಬೆಳೆಯುತ್ತಾ ತಮ್ಮ ಶಾಲೆಯ ವ್ಯಾಸಂಗವನ್ನು ವಿಜಯವಾಡಾದಲ್ಲೂ ಮತ್ತು ಕಾಲೇಜ್ ವ್ಯಾಸಂಗವನ್ನು ಹೈದರಾಬಾದ್ ನಲ್ಲೂ ಮಾಡಿದರು. ಚಿಕ್ಕಂದಿನಲ್ಲೇ ಇವರು ತಮ್ಮ ಬುದ್ಧಿವಂತಿಕೆಯ ಉತ್ತರಗಳಿಂದ ತಮ್ಮ ತಂದೆ ತಾಯಿಗಳನ್ನು, ಹಿರಿಯರನ್ನು ಬೆರಗುಗೊಳಿಸಿದರು.
ಎಲ್ಲರಂತೆ ವಿದ್ಯೆಯನ್ನು ಗಳಿಸಿ ಕೆಲಸಕ್ಕೆ ಸೇರಿಕೊಂಡರೂ ಕೂಡ ಇವರ ಅಂತರ್ವಾಣಿಯು ಇವರನ್ನು ಆಧ್ಯಾತ್ಮಿಕ ಸತ್ಯದರ್ಶನದತ್ತ ಮುಖ ಮಾಡುವಂತೆ ಮಾಡಿತು. ಕೊನೆಗೆ ಅನೇಕ ವರ್ಷಗಳ ಸತತ ಪ್ರಯತ್ನದಿಂದ ಮತ್ತು ಶಿರಡಿ ಸಾಯಿಬಾಬಾರವರ ಆಶೀರ್ವಾದದ ಫಲವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಪಡೆಯುವಲ್ಲಿ ಯಶಸ್ವಿಯಾದರು.
ಸ್ವಾಮೀಜಿಯವರ ವಿಶೇಷತೆ ಏನೆಂದರೆ ಇವರು ಎಲ್ಲಾ ವಯಸ್ಸಿನ ಜನರೊಡನೆ ಬಹಳ ಬೇಗ ಬೆರೆಯುತ್ತಾರೆ ಮತ್ತು ಅನೇಕ ವರ್ಷಗಳಿಂದ ಪರಿಚಯ ಇರುವವರಂತೆ ನಡೆದುಕೊಳ್ಳುತ್ತಾರೆ. ಅನೇಕ ಸಾಯಿಭಕ್ತರು ಕರೆದ ತಕ್ಷಣ ಓಡಿಹೋಗಿ ಅವರನ್ನು ಸಾವಿನ ದವಡೆಯಿಂದ ಪಾರು ಮಾಡಿ ಅವರ ಲೌಕಿಕ ಕಷ್ಟಗಳನ್ನು ಪರಿಹಾರ ಮಾಡಿರುತ್ತಾರೆ. ಅನೇಕ ಸಾಧು ಸಂತರುಗಳಂತೆ ಇವರು ಕೂಡ ಸಮಾಜದ ಅನೇಕ ಜನರುಗಳ ಬಾಯಿಗೆ ತುತ್ತಾದರು. ಆದರೆ ಅವುಗಳಿಗೆ ಬೆಲೆ ಕೊಡದೆ ಇಲ್ಲಿಯವರೆಗೂ ತಮ್ಮ ಉತ್ತಮ ಕಾರ್ಯಗಳನ್ನು ನಡೆಸಿಕೊಂಡು ಬಂದಿದ್ದಾರೆ. "ನನ್ನ ಬಳಿ ಬರುವ ಎಲ್ಲರಿಗೂ ನಾನು ಆಹ್ವಾನ ನೀಡುತ್ತೇನೆ" ಎಂದು ಹೇಳುತ್ತಾ ಯಾವುದೇ ಲಿಂಗ ಭೇಧವನ್ನು ತೋರದೆ, ಎಲ್ಲಾ ವರ್ಗದ, ವರ್ಣದ ಮತ್ತು ಅಂತಸ್ತಿನ ಜನರಿಗೂ ಶಿರಡಿ ಸಾಯಿಯವರ ತತ್ವವನ್ನು ಭೋಧನೆ ಮಾಡುತ್ತಾ ಬಂದಿದ್ದಾರೆ.
ಸ್ವಾಮೀಜಿಯವರು ಶ್ರೀ ಸಾಯಿ ಸಚ್ಚರಿತ್ರೆ ಮತ್ತು ಸಾಯಿ ಆರತಿಯ ಬಗ್ಗೆ ಜೀ ತೆಲುಗು ವಾಹಿನಿಯಲ್ಲಿ 10ನೇ ಡಿಸೆಂಬರ್ 2005 ರಿಂದ ಜೂನ್ 2009 ರ ವರೆಗೆ ಪ್ರವಚನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಲ್ಲದೇ, ಭಕ್ತಿ ವಾಹಿನಿಯಲ್ಲಿ ಪ್ರತಿ ಗುರುವಾರ ಸ್ವಾಮೀಜಿಯವರ ಪ್ರವಚನ ಪ್ರಸಾರವಾಗುತ್ತಿದೆ. ಅಲ್ಲದೆ, ಸ್ವಾಮೀಜಿಯವರು ಜೀ ತೆಲುಗು ವಾಹಿನಿಯಲ್ಲಿ ಪ್ರಸಾರವಾದ "ಸಮಸ್ಯಲು ಮೀವಿ, ಸಮಾಧಾನಾಲು ಸಾಯಿವಿ" ಕಾರ್ಯಕ್ರಮದ ಮುಖಾಂತರ ಸಾಯಿಬಾಬಾರವರ ಆಶೀರ್ವಾದದಿಂದ ಸಾಯಿಭಕ್ತರ ಅನೇಕ ಸಮಸ್ಯೆಗಳನ್ನು ಪರಿಹರಿಸಿದ್ದಾರೆ. ಈ ರೀತಿಯಲ್ಲಿ ಸ್ವಾಮೀಜಿಯವರು ಭಾರತ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಜನಗಳಲ್ಲಿ ಕೂಡ ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯನ್ನು 25ನೇ ಆಗಸ್ಟ್ 2003 ರಂದು ಶಿರಡಿ ಸಾಯಿಬಾಬಾರವರ ಪ್ರೇರೇಪಣೆ ಮತ್ತು ಆಶೀರ್ವಾದದೊಂದಿಗೆ ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಸ್ಥಾಪಿಸಿದರು. ಸಮಿತಿಯು ಸ್ಥಾಪನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸ್ವಾಮೀಜಿಯವರು ಭಾರತದ ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಕಡೆಗಳಲ್ಲಿ 175 ಕ್ಕೂ ಹೆಚ್ಚು "ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞ" ಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ.
ಸ್ವಾಮೀಜಿಯವರು ಯಜ್ಞದ ಕೊನೆಯಲ್ಲಿ 27 ನಕ್ಷತ್ರಗಳಿಗೆ ಅನುಗುಣವಾಗಿ 27 ವಿವಿಧ ಬಗೆಯ ಆರತಿಗಳನ್ನು ಕೇರಳದ ಪಂಚವಾದ್ಯಗಳೊಂದಿಗೆ "ಮಹಾ ನಕ್ಷತ್ರ ಆರತಿ" ನೀಡುವುದು ಒಂದು ವಿಶೇಷವೆಂದೇ ಹೇಳಬಹುದು.
ಸ್ವಾಮೀಜಿಯವರು ಸಾಯಿಬಾಬಾರವರ ಆಶೀರ್ವಾದದಿಂದ ಶಿರಡಿಯ ಸಮಾಧಿ ಮಂದಿರದಲ್ಲಿ ಕೂಡ 3 ಬಾರಿ ಪ್ರವಚನವನ್ನು ನೀಡಿರುತ್ತಾರೆ.
ಸ್ವಾಮೀಜಿಯವರು 2003 ರಿಂದ ಇಲ್ಲಿಯವರೆಗೂ ಸಾವಿರಾರು ಸಾಯಿ ಭಜನೆಗಳನ್ನು, ಶಿರಡಿ ಸಾಯಿ ಆರತಿಯನ್ನು ಹಾಡಿರುತ್ತಾರೆ. ಸಮಿತಿಯು ಅದರ ಆಡಿಯೋ ಸಿಡಿಗಳನ್ನು, ವೀಡಿಯೋ ಸಿಡಿಗಳನ್ನು ಹೊರತಂದಿರುತ್ತದೆ.
ಸ್ವಾಮೀಜಿಯವರು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ನಾಮ ಜಪವನ್ನು ಆಯೋಜಿಸುತ್ತಾ ಬಂದಿರುತ್ತಾರೆ.ಸ್ವಾಮೀಜಿ ಮತ್ತು ಅವರ ಸಂಗಡಿಗರು 24 ಘಂಟೆಗಳ ಕಾಲ ನಿರಂತರವಾಗಿ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ನಾಮಜಪವನ್ನು ಹಾಡುತ್ತಾರೆ.
ಸ್ವಾಮೀಜಿಯವರು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಆಯೋಜಿಸುತ್ತಾ ಬಂದಿರುತ್ತಾರೆ. ಸ್ವಾಮೀಜಿ ಮತ್ತು ಅವರ ಸಂಗಡಿಗರು 30 ಘಂಟೆಗಳ ಕಾಲ ನಿರಂತರವಾಗಿ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಮಾಡುತ್ತಾರೆ.
ಸ್ವಾಮೀಜಿಯವರು ಮಹಾ ಶಿರಡಿ ಸಾಯಿ ಸಂಕಲ್ಪ ಸಿದ್ಧ ಧುನಿ ಪೂಜೆಯನ್ನು ಸತತವಾಗಿ ಆಯೋಜಿಸುತ್ತಾ ಬಂದಿದ್ದಾರೆ. ಅಷ್ಟೇ ಅಲ್ಲದೇ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಮುಹಿಕ ಶ್ರೀ ಶಿರಡಿ ಸಾಯಿ ಸತ್ಯವ್ರತವನ್ನು ಆಯೋಜಿಸುತ್ತಾ ಬಂದಿರುತ್ತಾರೆ.
ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿ :
ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಆಧರಿಸಿ ಸಾಯಿ ಭಕ್ತರ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಸ್ವಾಮೀಜಿಯವರು ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದು ಯಾರು ಯಾವ ಸಮಯದಲ್ಲಿ ಬೇಕಾದರೂ ಕೂಡ +91 99590 66663, +91 99590 77772,+99594 66663 ದೂರವಾಣಿ ಸಂಖ್ಯೆಗಳಿಗೆ ಕರೆಯನ್ನು ಮಾಡಿ ತಮ್ಮ ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು, ಪರಿಹಾರಗಳನ್ನು ಪಡೆಯಬಹುದಾಗಿದೆ. ಇಲ್ಲಿಯವರೆಗೆ ಸರಿ ಸುಮಾರು 3,70,000 ಸಾಯಿ ಭಕ್ತರು ಈ ಸಹಾಯವಾಣಿಯ ಸಹಾಯವನ್ನು ಪಡೆದಿದ್ದಾರೆ.
ಸ್ವಾಮೀಜಿಯವರ ಸಂಪರ್ಕದ ವಿವರಗಳು:
ಗಾಯತ್ರಿ ನಗರ, ಜಿಲ್ಲೆಲಗುಡ,
ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ,
ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ.
ದೂರವಾಣಿ ಸಂಖ್ಯೆಗಳು:
+91 9866418249, +91 40 6455 0203
ಈ ಮೇಲ್ ವಿಳಾಸ:
shiridisaitps@gmail.com
ಅಂತರ್ಜಾಲ ತಾಣ:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment