ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಅಖಂಡ ಸಾಯಿನಾಮ ಸಪ್ತಾಹ ಕಮಿಟಿ ಟ್ರಸ್ಟ್ (ನೋಂದಣಿ), ರೈಲ್ವೇ ನಿಲ್ದಾಣದ ಹತ್ತಿರ, ಎಸ್.ಡಿ.ಜಿ.ಎಸ್.ಕಾಲೇಜ್ ಹಿಂಭಾಗ, ಶಿರಡಿ ಸಾಯಿ ನಗರ, ಹಿಂದೂಪುರ-515 201, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ - ಕೃಪೆ: ಸಾಯಿಅಮೃತಧಾರಾ.ಕಾಂ
ಈ ದೇವಾಲಯವು ಅನಂತಪುರ ಜಿಲ್ಲೆಯ ಹಿಂದೂಪುರದ ರೈಲ್ವೇ ನಿಲ್ದಾಣದ ಹತ್ತಿರ ಮತ್ತು ಎಸ್.ಡಿ.ಜಿ.ಎಸ್ ಕಾಲೇಜಿನ ಹಿಂಭಾಗದಲ್ಲಿ ಇರುತ್ತದೆ. ಈ ದೇವಾಲಯವು ಹಿಂದೂಪುರ ರೈಲ್ವೇ ನಿಲ್ದಾಣದಿಂದ 5 ನಿಮಿಷದ ನಡಿಗೆಯ ಅಂತರದಲ್ಲಿ ಇರುತ್ತದೆ.
ಈ ದೇವಾಲಯದ ಭೂಮಿ ಪೂಜೆಯನ್ನು 29ನೇ ನವೆಂಬರ್ 1989 ರಂದು ನೆರವೇರಿಸಲಾಯಿತು.
ಈ ದೇವಾಲಯದ ಉದ್ಘಾಟನೆಯನ್ನು 25ನೇ ಫೆಬ್ರವರಿ 2002 (ಮಾಘ ಬಹುಳ ತ್ರಯೋದಶಿ) ಯಂದು ಹೈದರಾಬಾದ್ ನ ಶ್ರೀಮತಿ.ಸರಸ್ವತಿ ಮಾತಾ ರವರು ನೆರವೇರಿಸಿದರು.
ಈ ದೇವಾಲಯವನ್ನು ಶ್ರೀ.ವಿ.ಪಿ.ರಂಗಸ್ವಾಮಿಯವರು ಸ್ಥಾಪಿಸಿರುತ್ತಾರೆ ಮತ್ತು ಈ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಇವರು ಮತ್ತು ಶ್ರೀ.ಪಿ.ಎನ್.ವೇಣುಗೋಪಾಲ್ ರವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯವು ಬೆಳಿಗ್ಗೆ 5:00 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 10:00 ಕ್ಕೆ ಶೇಜಾರತಿಯೊಂದಿಗೆ ಮುಚ್ಚುತ್ತದೆ.
ದೇವಾಲಯದ ಒಳ ಆವರಣದ ಗೋಡೆಗಳ ಮೇಲೆ ಶಿರಡಿ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಬಿಂಬಿಸುವ ಚಿತ್ರಗಳನ್ನು ನೋಡಬಹುದು.
ದೇವಾಲಯದ ಗರ್ಭಗುಡಿಯಲ್ಲಿ 5 ಅಡಿ 10 ಅಂಗುಲ ಎತ್ತರದ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತ ಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ದೇವಾಲಯದಲ್ಲಿ ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಂದು ಪಲ್ಲಕ್ಕಿ ಉತ್ಸವಕ್ಕೆ ಬಳಸಲಾಗುವ 2 ಅಡಿ ಎತ್ತರದ ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಮರದ ಪಲ್ಲಕ್ಕಿ ಮತ್ತು ಉಯ್ಯಾಲೆಯನ್ನು ಕೂಡ ಕಾಣಬಹುದು.
ದೇವಾಲಯದ ಆವರಣದ ಬಲಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇದರ ಒಳಗಡೆ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೆ, ಧುನಿಯ ಎಡಭಾಗದಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟ ಮತ್ತು ಚಿತ್ರಪಟದ ಎದುರುಗಡೆಯಲ್ಲಿ ಅಮೃತ ಶಿಲೆಯ ನಂದಿಯ ವಿಗ್ರಹ ಮತ್ತು ಅಮೃತ ಶಿಲೆಯ ಪಾದುಕೆಗಳನ್ನು ಕಾಣಬಹುದು.
ದೇವಾಲಯದ ಹೊರ ಆವರಣದ ಹಿಂಭಾಗದಲ್ಲಿ ಗುರುಸ್ಥಾನವನ್ನು ಸ್ಥಾಪಿಸಲಾಗಿದ್ದು ಇಲ್ಲಿ 3 ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ತನ್ನಷ್ಟಕ್ಕೆ ತಾನೇ ಉದ್ಭವವಾಗಿರುವ ಬೇವಿನ ಮರದ ಕೆಳಗಡೆ ಇರುವಂತೆ ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಅಮೃತ ಶಿಲೆಯ ಶಿವಲಿಂಗ ಮತ್ತು ನಂದಿಯ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ಗುರುಸ್ಥಾನದಿಂದ ಸ್ವಲ್ಪವೇ ದೂರದಲ್ಲಿ ಇರುವಂತೆ ನಾಗದೇವತೆಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ.
ದೇವಾಲಯದ ಮೊದಲನೇ ಮಹಡಿಯಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು
ಆರತಿಯ ಸಮಯ:
ಕಾಕಡಾ ಆರತಿ | 5:00 AM |
ಮಧ್ಯಾನ್ಹ ಆರತಿ | 12:00 PM |
ಧೂಪಾರತಿ | 6:30 PM |
ಶೇಜಾರತಿ | 10:00 PM |
ಪ್ರತಿದಿನ ಬೆಳಿಗ್ಗೆ 7 ಘಂಟೆಯಿಂದ 8 ಘಂಟೆಯವರೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ "ಕ್ಷೀರಾಭಿಷೇಕ" ಮಾಡಲಾಗುತ್ತದೆ. ಸೇವಾಶುಲ್ಕ 50/- ರುಪಾಯಿಗಳು.
ಪ್ರತಿ ಗುರುವಾರ ಬೆಳಿಗ್ಗೆ 8 ಘಂಟೆಯಿಂದ 8.30 ರ ವರೆಗೆ ವಿಶೇಷ ವಿಳ್ಲೇದೆಲೆಯ ಅಲಂಕಾರವನ್ನು ಮಾಡಲಾಗುತ್ತದೆ. ಸೇವಾಶುಲ್ಕ 450/- ರುಪಾಯಿಗಳು.
ಪ್ರತಿ ಗುರುವಾರ ರಾತ್ರಿ 7 ಘಂಟೆಯಿಂದ 8.30 ರ ವರೆಗೆ ಪಲಕ್ಕಿ ಮೆರವಣಿಗೆಯನ್ನು ನಡೆಸಲಾಗುತ್ತದೆ. ಸೇವಾ ಶುಲ್ಕ 501/- ರುಪಾಯಿಗಳು. ರಾತ್ರಿ 7 ಘಂಟೆಯಿಂದ 9 ಘಂಟೆಯವರೆಗೆ ಮಂದಿರದ ಭಜನಾ ಮಂಡಳಿಯವರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ.
ಪ್ರತಿ ಗುರುವಾರ ರಾತ್ರಿ 7 ಘಂಟೆಯಿಂದ 8.30 ರ ವರೆಗೆ ಉಯ್ಯಾಲೆ ಸೇವೆಯನ್ನು ನಡೆಸಲಾಗುತ್ತದೆ. ಸೇವಾ ಶುಲ್ಕ 501/- ರುಪಾಯಿಗಳು.
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ಮಾಘ ಬಹುಳ ತ್ರಯೋದಶಿಯಂದು.
ಯುಗಾದಿ.
ವೈಕುಂಠ ಏಕಾದಶಿ.
ಶಿವರಾತ್ರಿ.
ಗೋಕುಲಾಷ್ಟಮಿ.
ಗುರುಪೂರ್ಣಿಮೆ.
ವಿಜಯದಶಮಿ.
ದತ್ತ ಜಯಂತಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಟ್ರಸ್ಟ್ ನ ವತಿಯಿಂದ ಸುಮಾರು 20 ಬಡ ಮಕ್ಕಳಿಗೆ ದೇವಾಲಯದ ಆವರಣದಲ್ಲಿಯೇ ಆಶ್ರಯವನ್ನು ನೀಡಿ ಅವರಿಗೆ ವಸತಿ, ಆಹಾರ, ಶೈಕ್ಷಣಿಕ ಮತ್ತಿತರ ಸೌಲಭ್ಯಗಳನ್ನು ನೀಡಲಾಗುತ್ತಿದೆ.
ವರ್ಷದಲ್ಲಿ 3 ಬಾರಿ ಹಿಂದೂಪುರದ ಸಮೀಪದಲ್ಲಿರುವ ಅಂಧರ ಶಾಲೆಯಲ್ಲಿ ಮತ್ತು ವೃದ್ಧಾಶ್ರಮಗಳಲ್ಲಿ ಅನ್ನದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಪ್ರತಿ ಗುರುವಾರ ಮಧ್ಯಾನ್ಹ ಆರತಿಯ ನಂತರ ದೇವಾಲಯದ ಆವರಣದಲ್ಲಿ ಅನೇಕ ಭಿಕ್ಷುಕರಿಗೆ ಅನ್ನದಾನವನ್ನು ಮಾಡಲಾಗುತ್ತಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಸ್ಥಳ:
ರೈಲ್ವೇ ನಿಲ್ದಾಣದ ಹತ್ತಿರ ಮತ್ತು ಎಸ್.ಡಿ.ಜಿ.ಎಸ್ ಕಾಲೇಜಿನ ಹಿಂಭಾಗ, ಹಿಂದೂಪುರ.
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಅಖಂಡ ಸಾಯಿನಾಮ ಸಪ್ತಾಹ ಕಮಿಟಿ ಟ್ರಸ್ಟ್ (ನೋಂದಣಿ),
ರೈಲ್ವೇ ನಿಲ್ದಾಣದ ಹತ್ತಿರ, ಎಸ್.ಡಿ.ಜಿ.ಎಸ್.ಕಾಲೇಜ್ ಹಿಂಭಾಗ,
ಶಿರಡಿ ಸಾಯಿ ನಗರ, ಹಿಂದೂಪುರ-515 201,
ಅನಂತಪುರ ಜಿಲ್ಲೆ, ಆಂಧ್ರಪ್ರದೇಶ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ವಿ.ಪಿ.ರಂಗಸ್ವಾಮಿ - ಅಧ್ಯಕ್ಷರು / ಶ್ರೀ. ಪಿ.ಎನ್.ವೇಣುಗೋಪಾಲ್ - ಕಾರ್ಯದರ್ಶಿ.
ಶ್ರೀ.ವಿ.ಪಿ.ರಂಗಸ್ವಾಮಿ - ಅಧ್ಯಕ್ಷರು / ಶ್ರೀ. ಪಿ.ಎನ್.ವೇಣುಗೋಪಾಲ್ - ಕಾರ್ಯದರ್ಶಿ.
ದೂರವಾಣಿ ಸಂಖ್ಯೆಗಳು:
+ 91 8556 222327 (ಅಧ್ಯಕ್ಷರು, ಸ್ಥಿರ ದೂರವಾಣಿ) / +91 94908 01426 (ಕಾರ್ಯದರ್ಶಿ) / +91 8556 225 229 (ದೇವಾಲಯ - ಸ್ಥಿರ ದೂರವಾಣಿ)
ಮಾರ್ಗಸೂಚಿ:
ಹಿಂದೂಪುರ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ಹಿಂದೂಪುರ ರೈಲ್ವೇ ನಿಲ್ದಾಣದಿಂದ 5 ನಿಮಿಷದ ನಡಿಗೆಯ ಅಂತರದಲ್ಲಿ ಈ ದೇವಾಲಯವು ಇರುತ್ತದೆ. ಶಿರಡಿ ಸಾಯಿ ನಗರದ ಎಸ್.ಡಿ.ಜಿ.ಎಸ್.ಕಾಲೇಜ್ ಹಿಂಭಾಗದಲ್ಲಿ ಮಂದಿರ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment