ಆಂಧ್ರ ಪ್ರದೇಶದ ಸಾಯಿ ಆಧ್ಯಾತ್ಮಿಕ ಕೇಂದ್ರ - ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿ, ಗಾಯತ್ರಿ ನಗರ, ಜಿಲ್ಲೆಲಗುಡ, ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ, ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ಸಮಿತಿಯ ವಿಶೇಷತೆಗಳು :
ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯನ್ನು 25ನೇ ಆಗಸ್ಟ್ 2003 ರಂದು ಶಿರಡಿ ಸಾಯಿಬಾಬಾರವರ ಪ್ರೇರೇಪಣೆ ಮತ್ತು ಆಶೀರ್ವಾದದೊಂದಿಗೆ ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಸ್ಥಾಪಿಸಿದರು. ಸಮಿತಿಯು ಸ್ಥಾಪನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಸ್ವಾಮೀಜಿಯವರು ಭಾರದ ವಿವಿಧ ಸ್ಥಳಗಳಲ್ಲಿ 175 ಕ್ಕೂ ಹೆಚ್ಚು ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞಗಳನ್ನು ಯಶಸ್ವಿಯಾಗಿ ಆಯೋಜಿಸಿರುತ್ತಾರೆ.
ಸ್ವಾಮೀಜಿಯವರು ಶ್ರೀ ಸಾಯಿ ಸಚ್ಚರಿತ್ರೆ ಮತ್ತು ಸಾಯಿ ಆರತಿಯ ಬಗ್ಗೆ ಜೀ ತೆಲುಗು ವಾಹಿನಿಯಲ್ಲಿ 10ನೇ ಡಿಸೆಂಬರ್ 2005 ರಿಂದ ಜೂನ್ 2009 ರ ವರೆಗೆ ಪ್ರವಚನ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ಅಲ್ಲದೇ, ಭಕ್ತಿ ವಾಹಿನಿಯಲ್ಲಿ ಪ್ರತಿ ಗುರುವಾರ ಸ್ವಾಮೀಜಿಯವರ ಪ್ರವಚನ ಪ್ರಸಾರವಾಗುತ್ತಿದೆ. ಈ ರೀತಿಯಲ್ಲಿ ಸಮಿತಿಯು ಸ್ವಾಮೀಜಿಯವರ ಮುಖಾಂತರ ಭಾರತ ದೇಶದಲ್ಲಷ್ಟೇ ಅಲ್ಲದೇ ವಿದೇಶಗಳಲ್ಲಿ ನೆಲೆಸಿರುವ ಜನಗಳಲ್ಲಿ ಕೂಡ ಸಾಯಿಬಾಬಾರವರ ತತ್ವಗಳನ್ನು ಪ್ರಚಾರ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆದು ಸಮಾಜದಲ್ಲಿ ವಾಸಿಸುವ ಎಲ್ಲಾ ವರ್ಗದ ಜನರಲ್ಲಿ ಪ್ರೀತಿ, ಪ್ರೇಮ ಮತ್ತು ಸಹೋದರ ಭಾವವನ್ನು ಬೆಳೆಸುವ ಉದ್ದೇಶವನ್ನು ಶ್ರೀ ಶಿರಡಿ ಸಾಯಿ ತತ್ವ ಪ್ರಚಾರ ಸಮಿತಿಯು ಹೊಂದಿರುತ್ತದೆ. ಶಿಸ್ತುಬದ್ಧತೆ, ಸಮರ್ಪಣಾ ಮನೋಭಾವ, ಭಕ್ತಿ ಮತ್ತು ವೈಚಾರಿಕತೆ - ಈ ನಾಲ್ಕು ವಿಷಯಗಳು ಸಮಿತಿಯ ಆಧಾರಸ್ಥಂಭವಾಗಿರುತ್ತವೆ.
ಸಮಿತಿಯ ಆಧ್ಯಾತ್ಮಿಕ ಕಾರ್ಯಚಟುವಟಿಕೆಗಳು:
ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಕಡೆಗಳಲ್ಲಿ ಸ್ವಾಮೀಜಿಯವರಿಂದ "ಶ್ರೀ ಶಿರಡಿ ಸಾಯಿ ಗೀತಾ ಜ್ಞಾನ ಯಜ್ಞ" ಗಳನ್ನು ನಿರಂತರವಾಗಿ ಆಯೋಜಿಸುತ್ತಾ ಬಂದಿದೆ. ಯಜ್ಞದ ಕೊನೆಯಲ್ಲಿ 27 ನಕ್ಷತ್ರಗಳಿಗೆ ಅನುಗುಣವಾಗಿ 27 ವಿವಿಧ ಬಗೆಯ ಆರತಿಗಳನ್ನು ನೀಡುವ "ಮಹಾ ನಕ್ಷತ್ರ ಆರತಿ" ನಡೆಸುವುದು ಒಂದು ವಿಶೇಷವೆಂದೇ ಹೇಳಬಹುದು.
ಸಮಿತಿಯು ಸ್ವಾಮೀಜಿಯವರು ಹಾಡಿರುವ ಸಾಯಿ ಭಜನೆಗಳ, ಶಿರಡಿ ಸಾಯಿ ಆರತಿಯ ಹಾಗೂ ಸಮಿತಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿರುವ ಮತ್ತು ಇನ್ನು ಅನೇಕ ಸಿಡಿಗಳನ್ನು, ವೀಡಿಯೋ ಸಿಡಿಗಳನ್ನು ಹೊರತಂದಿದೆ.
ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ನಾಮ ಜಪವನ್ನು ಆಯೋಜಿಸುತ್ತಾ ಬಂದಿರುತ್ತದೆ.
ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಅಖಂಡ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಆಯೋಜಿಸುತ್ತಾ ಬಂದಿರುತ್ತದೆ.
ಸಮಿತಿಯು ಮಹಾ ಶಿರಡಿ ಸಾಯಿ ಸಂಕಲ್ಪ ಸಿದ್ಧ ಧುನಿ ಪೂಜೆಯನ್ನು ಸತತವಾಗಿ ಆಯೋಜಿಸುತ್ತಾ ಬಂದಿರುತ್ತದೆ. ಅಷ್ಟೇ ಅಲ್ಲದೇ, ಸಮಿತಿಯು ಆಂಧ್ರ ಪ್ರದೇಶ, ಮಹಾರಾಷ್ಟ್ರ, ಪಾಂಡಿಚೇರಿ ಮತ್ತು ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಮತ್ತು ಸಾಯಿ ಭಕ್ತರ ಮನೆಗಳಲ್ಲಿ ಸಾಮುಹಿಕ ಶ್ರೀ ಶಿರಡಿ ಸಾಯಿ ಸತ್ಯವ್ರತವನ್ನು ಆಯೋಜಿಸುತ್ತಾ ಬಂದಿರುತ್ತದೆ.
ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿ :
ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಆಧರಿಸಿ ಸಾಯಿ ಭಕ್ತರ ಕಷ್ಟಗಳನ್ನು ನಿವಾರಿಸುವ ಉದ್ದೇಶದಿಂದ ಸಮಿತಿಯು ಶ್ರೀ ಶಿರಡಿ ಸಾಯಿ ಆಧ್ಯಾತ್ಮಿಕ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದು ಯಾರು ಯಾವ ಸಮಯದಲ್ಲಿ ಬೇಕಾದರೂ ಕೂಡ +91 99590 66663, +91 99590 77772,+99594 66663 ದೂರವಾಣಿ ಸಂಖ್ಯೆಗಳಿಗೆ ಕರೆಯನ್ನು ಮಾಡಿ ತಮ್ಮ ಸಮಸ್ಯೆಗಳಿಗೆ ಸೂಕ್ತ ಉತ್ತರಗಳನ್ನು, ಪರಿಹಾರಗಳನ್ನು ಪಡೆಯಬಹುದಾಗಿದೆ. ಇಲ್ಲಿಯವರೆಗೆ ಸರಿ ಸುಮಾರು 3,70,000 ಸಾಯಿ ಭಕ್ತರು ಈ ಸಹಾಯವಾಣಿಯ ಸಹಾಯವನ್ನು ಪಡೆದಿದ್ದಾರೆ.
ಸಮಿತಿಯ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಗಾಯತ್ರಿ ನಗರ, ಜಿಲ್ಲೆಲಗುಡ, ರಂಗಾರೆಡ್ಡಿ ಜಿಲ್ಲೆ, ಹೈದರಾಬಾದ್.
ವಿಳಾಸ:
ಗಾಯತ್ರಿ ನಗರ, ಜಿಲ್ಲೆಲಗುಡ,
ಸರೂರುನಗರ ಮಂಡಳ, ರಂಗಾರೆಡ್ಡಿ ಜಿಲ್ಲೆ,
ಹೈದರಾಬಾದ್ - 500 079, ಆಂಧ್ರ ಪ್ರದೇಶ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ ಸಾಯಿ ವಿಶ್ವ ಚೈತನ್ಯ ಸ್ವಾಮೀಜಿ.
ದೂರವಾಣಿ ಸಂಖ್ಯೆಗಳು:
+91 9866418249, +91 40 6455 0203
ಈ ಮೇಲ್ ವಿಳಾಸ:
shiridisaitps@gmail.com
ಅಂತರ್ಜಾಲ ತಾಣ:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment