Tuesday, May 31, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಸೇವಾ ಸನ್ನಿಧಿ, ಅಂಚೆ ಕಚೇರಿ ರಸ್ತೆ, ಸಾಯಿಬಾಬಾ 7ನೇ ಅಡ್ಡರಸ್ತೆ, ಕಲ್ಕೆರೆ ಮುಖ್ಯರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ದೇವಾಲಯದ ವಿಶೇಷತೆಗಳು: 

ಈ ಮಂದಿರವು ರಾಮಮುರ್ತಿನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 2008ನೇ ಇಸವಿಯ ಪವಿತ್ರ ವಿಜಯದಶಮಿಯಂದು  ಮಾಡಲಾಯಿತು. ಮಂದಿರದ ನಿರ್ಮಾಣವನ್ನು 3ನೇ ಡಿಸೆಂಬರ್ 2008 ರಂದು ಪ್ರಾರಂಭಿಸಲಾಯಿತು.

ಈ ಮಂದಿರದ ಉದ್ಘಾಟನೆಯನ್ನು 14ನೇ ಫೆಬ್ರವರಿ 2011 ರಂದು ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆ ಗ್ರಾಮದ ಅವಧೂತ ಶ್ರೀ.ಶ್ರೀ.ಶ್ರೀ.ರಮಾನಂದ ಸ್ವಾಮೀಜಿಯವರು ನೆರವೇರಿಸಿದರು. 

ಈ ದೇವಾಲಯವನ್ನು ಶ್ರೀ.ರಾಜಣ್ಣರವರು ಸ್ಥಳೀಯ ಸಾಯಿಭಕ್ತರ ನೆರವಿನೊಂದಿಗೆ ನಿರ್ಮಿಸಿರುತ್ತಾರೆ.

ದೇವಾಲಯದ ಮೊದಲನೇ ಮಹಡಿಯಲ್ಲಿ ನಾಲ್ಕು ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ವಿಗ್ರಹದ ಎದುರುಗಡೆ ಪವಿತ್ರ ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ಶಿರಡಿಯಲ್ಲಿರುವಂತೆ ಸಾಯಿಬಾಬಾರವರ ಎದುರುಗಡೆ ನಂದಿಯ ವಿಗ್ರಹ, ಸಾಯಿಬಾಬಾರವರ ವಿಗ್ರಹದ ಎರಡೂ ಕಡೆಗಳಲ್ಲಿ ಸಿದ್ಧಿ ಗಣಪತಿ ಮತ್ತು ದತ್ತಾತ್ರೇಯರ ವಿಗ್ರಹಗಳು ಮತ್ತು ದತ್ತಾತ್ರೇಯ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿರುವ ಕೂರ್ಮದ ವಿಗ್ರಹವನ್ನು  ಸಾಯಿಭಕ್ತರು ನೋಡಬಹುದು. 

ದೇವಾಲಯದ ನೆಲ ಮಹಡಿಯಲ್ಲಿ ಧ್ಯಾನ ಮಂದಿರವನ್ನು ಸ್ಥಾಪಿಸಲಾಗಿದ್ದು ಈ ಸ್ಥಳದಲ್ಲಿ ಪಿರಮಿಡ್ ಧ್ಯಾನವನ್ನು ಉಚಿತವಾಗಿ ಸ್ಥಳೀಯ ಸಾಯಿ ಭಕ್ತರಿಗೆ ಹೇಳಿಕೊಡಲಾಗುತ್ತಿದೆ. 









 

ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 8:00 ಕ್ಕೆ 

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತಿ ಗುರುವಾರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ದೇವಾಲಯದ ಆಡಳಿತ ಮಂಡಳಿ ಯಾವುದೇ ಸೇವಾ ಶುಲ್ಕವನ್ನು ನಿಗದಿ ಮಾಡಿರುವುದಿಲ್ಲ.

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 14ನೇ ಫೆಬ್ರವರಿ ಯಂದು .
2. ಗುರು ಪೂರ್ಣಿಮೆ.
3. ಶ್ರೀರಾಮನವಮಿ. 
4. ವಿಜಯದಶಮಿ. 
5.ಶ್ರೀಕೃಷ್ಣ ಜನ್ಮಾಷ್ಟಮಿ. 
6.ದತ್ತ ಜಯಂತಿ.

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಅಂಕಮ್ಮ ದೇವಾಲಯದ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. 

ವಿಳಾಸ:
ಶ್ರೀ ಶಿರಡಿ ಸಾಯಿ ಸೇವಾ ಸನ್ನಿಧಿ, 
ಅಂಚೆ ಕಚೇರಿ ರಸ್ತೆ, ಸಾಯಿಬಾಬಾ 7ನೇ ಅಡ್ಡರಸ್ತೆ, 
ಕಲ್ಕೆರೆ ಮುಖ್ಯರಸ್ತೆ, ರಾಮಮುರ್ತಿನಗರ, 
ಬೆಂಗಳೂರು-560 016. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀ.ರಾಜಣ್ಣ. 

ದೂರವಾಣಿ ಸಂಖ್ಯೆಗಳು:  
+ 91 98806 89935

ಮಾರ್ಗಸೂಚಿ: 
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಅಂಕಮ್ಮ ದೇವಾಲಯದ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. ಬಸ್ ಸಂಖ್ಯೆಗಳು: 315-D, 315-P, 315-E, 313, 313-F, 300-E ಮತ್ತು ಇನ್ನು ಹಲವಾರು ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 
 

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ನಿವಾಸ, ನಂ.4ಬಿ, ಹೆಚ್.ಟಿ.ಲೇನ್, ಆದಿತ್ಯ ಲೇಔಟ್, ಕಲ್ಕೆರೆ ಮುಖ್ಯ ರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ   

ದೇವಾಲಯದ ವಿಶೇಷತೆಗಳು: 

ಈ ಮಂದಿರವು ರಾಮಮುರ್ತಿನಗರದ ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುತ್ತದೆ. 

ಈ ಮಂದಿರದ ಭೂಮಿಪೂಜೆಯನ್ನು 4ನೇ ಫೆಬ್ರವರಿ 2010 ರಂದು ಮಾಡಲಾಯಿತು. 

ಈ ಮಂದಿರದ ಉದ್ಘಾಟನೆಯನ್ನು 16ನೇ ಮೇ 2010 ರಂದು ಬೆಂಗಳೂರಿನ ಗ್ರಾಮಾಂತರದ ಹೊಸಕೋಟೆ ತಾಲ್ಲೂಕಿನ ಬೂದಿಗೆರೆ ಗ್ರಾಮದ ವೇದ ಬ್ರಹ್ಮ ಶ್ರೀ.ಶಿವಕುಮಾರ್ ರವರು ನೆರವೇರಿಸಿದರು. 

ತಮ್ಮ ಮನೆಯ ಒಂದು ಕೋಣೆಯನ್ನೇ ಸಾಯಿ ಮಂದಿರವನ್ನಾಗಿ ಶ್ರೀಮತಿ.ಜಯಂತಿಯವರು ಮಾರ್ಪಡಿಸಿದ್ದಾರೆ. ಈ ಮಂದಿರಕ್ಕೆ ಎಲ್ಲಾ ಮತಕ್ಕೆ ಸೇರಿದ ಸಾಯಿ ಭಕ್ತರೂ ಬಂದು ಹೋಗುವುದೇ ಒಂದು ವಿಶೇಷ. 

ಮಂದಿರದಲ್ಲಿ ಶಿರಡಿ ಸಾಯಿಬಾಬಾರವರ ಸುಂದರವಾದ ಅಮೃತಶಿಲೆಯ ವಿಗ್ರಹ, ಪಾದುಕೆಗಳು, ಪಂಚಲೋಹದ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಚಿತ್ರಪಟವನ್ನು ಸಾಯಿಭಕ್ತರು ನೋಡಬಹುದು. 




ಮಂದಿರದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ : ಬೆಳಿಗ್ಗೆ 8 ಘಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ: ಸಂಜೆ 6 ಘಂಟೆಗೆ 
ಶೇಜಾರತಿ: ರಾತ್ರಿ 9:30 ಕ್ಕೆ 

ಪ್ರತಿನಿತ್ಯ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕ ಮತ್ತು ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಪ್ರತಿ ಗುರುವಾರ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 

1. ಮಂದಿರದ ವಾರ್ಷಿಕೋತ್ಸವ ಪ್ರತಿ ವರ್ಷದ 16ನೇ ಮೇಯಂದು .
2. ಗುರು ಪೂರ್ಣಿಮೆ.
3. ದೀಪಾವಳಿ. 
4. ವಿಜಯದಶಮಿ.

ಮಂದಿರದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಕ್ರೈಸ್ಟ್ ದಿ ಕಿಂಗ್ ಶಾಲೆಯ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. 

ವಿಳಾಸ:
ಶ್ರೀ ಸಾಯಿ ನಿವಾಸ, 
ನಂ.4ಬಿ, ಹೆಚ್.ಟಿ.ಲೇನ್, 
ಆದಿತ್ಯ ಲೇಔಟ್, ಕಲ್ಕೆರೆ ಮುಖ್ಯ ರಸ್ತೆ, 
ರಾಮಮುರ್ತಿನಗರ, ಬೆಂಗಳೂರು-560 016. ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿ: 
ಶ್ರೀಮತಿ.ಎಸ್.ಜಯಂತಿ. 

ದೂರವಾಣಿ ಸಂಖ್ಯೆಗಳು: 
+ 91 94489 37559 / +91 99018 39940

ಮಾರ್ಗಸೂಚಿ: 
ಕಲ್ಕೆರೆ ಮುಖ್ಯರಸ್ತೆಯಲ್ಲಿ ಇರುವ ಕ್ರೈಸ್ಟ್ ದಿ ಕಿಂಗ್ ಶಾಲೆಯ ಹಿಂಭಾಗದಲ್ಲಿ ಈ ಮಂದಿರ ಇರುತ್ತದೆ. ರಾಮಮುರ್ತಿನಗರದ ಆಲದ ಮರದ ಬಸ್ ಸ್ಟಾಪ್ ನಿಂದ 5 ನಿಮಿಷ ನಡೆದರೆ ಮಂದಿರ ಸಿಗುತ್ತದೆ. ಬಸ್ ಸಂಖ್ಯೆಗಳು: 315-D, 315-P, 315-E, 313, 313-F, 300-E ಮತ್ತು ಇನ್ನು ಹಲವಾರು ಬಸ್ ಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Monday, May 23, 2011

ದಾಬೋಲ್ಕರ್ ಆಲಿಯಾಸ್ ಹೇಮಾಡಪಂತರ ಮುಂಬೈನ  ಮನೆ  - "ಸಾಯಿ ನಿವಾಸ್" - ಕೃಪೆ: ಸಾಯಿಅಮೃತಧಾರಾ.ಕಾಂ 

ಸಾಯಿ ಸಚ್ಚರಿತೆಯ 40ನೇ ಅಧ್ಯಾಯದಲ್ಲಿ ಉಲ್ಲೇಖಿಸಲಾಗಿರುವ ಹೇಮಾಡಪಂತರ ಹೋಳಿ ಹುಣ್ಣಿಮೆಯ ಔತಣ ಮುಂಬೈನ ಬಾಂದ್ರಾದ ಈ ಮನೆಯಲ್ಲೇ ನಡೆಯಿತು. ಈ ಮನೆಯಲ್ಲಿ ಈಗಲೂ ಎಲ್ಲ ವಸ್ತುಗಳನ್ನು ಅತ್ಯಂತ ಜೋಪಾನವಾಗಿ ಕಾಪಾಡಿಕೊಂಡು ಬಂದಿರುತ್ತಾರೆ ಮತ್ತು  ಸಾಯಿ ಭಕ್ತರು ಅವುಗಳನ್ನು ಹೋಗಿ ನೋಡಿಕೊಂಡು ಬರಬಹುದಾಗಿದೆ. 


ಮೆಟ್ಟಿಲುಗಳು:

ಅಂದು ಹೋಳಿ ಹುಣ್ಣಿಮೆಯ ದಿನ. ಮಧ್ಯಾನ್ಹದ ಹೊತ್ತಿಗೆ ಅಡಿಗೆ ತಯಾರಾಗಿತ್ತು. ದೇವರ ಪೂಜೆ ನೆರವೇರಿಸಿ ಊಟಕ್ಕೆ ಎಳೆಯನ್ನು ಹಾಕಿದ್ದರು. ಮನೆಯವರೆಲ್ಲ  ಊಟಕ್ಕೆ ತಮ್ಮ ತಮ್ಮ ಮನೆಗಳ ಮೇಲೆ ಕುಳಿತಿದ್ದರು. ಎಲೆಗಳಿಗೆ ಆಹಾರವನ್ನು ಬಡಿಸಿದ್ದರು. ಎಲ್ಲರು ಹೇಮಾಡಪಂತರು ಹೇಳಿದ್ದ ಅತಿಥಿಯ ಬರುವನ್ನೇ ನಿರೀಕ್ಷಿಸುತ್ತಿದ್ದರು. ಮಧ್ಯಾನ್ಹ ಮೀರುತ್ತಿತ್ತು. ಆದರೂ ಅತಿಥಿಯ ಸುಳಿವೇ ಇರಲಿಲ್ಲ. ನಂತರ ಬಾಗಿಲು ಹಾಕಿ ಎಲ್ಲ ಎಲೆಗಳಿಗೂ ತುಪ್ಪವನ್ನು ಬಡಿಸಿದರು. ಎಲ್ಲರೂ ಇನ್ನೇನು ಊಟವನ್ನು ಪ್ರಾರಂಭಿಸಬೇಕು ಎಂದುಕೊಳ್ಳುವಷ್ಟರಲ್ಲಿ ಬಾಗಿಲು ಬಡಿದ ಸಪ್ಪಳ ಕೇಳಿಸಿತು. ಮೆಟ್ಟಿಲುಗಳನ್ನು ಯಾರೋ ಹತ್ತಿಬರುತ್ತಿರುವ ಶಬ್ದ ಕೇಳಿಸಿತು. ಹೇಮಾಡಪಂತರು ಹೋಗಿ ಬಾಗಿಲು ತೆರೆದು ನೋಡಲಾಗಿ ಆಲಿ ಮಹಮ್ಮದ್ ಮತ್ತು ಇಸ್ಮೂ ಮುಜಾವರ್ ಅವರನ್ನು ಕಂಡರು. ಮನೆಯವರೆಲ್ಲ ಊಟಕ್ಕೆ ಕುಳಿತಿರುವುದನ್ನು ನೋಡಿ ತೊಂದರೆ ಕೊಟ್ಟಿದ್ದಕ್ಕಾಗಿ ಅವರು ಕ್ಷಮೆ ಬೇಡಿ "ಊಟ ಮಾಡಲು ನಿಮಗೆ ಎಲ್ಲರೂ ಕಾಯುತ್ತಿದ್ದಾರೆ. ಇದನ್ನು ತೆಗೆದುಕೊಳ್ಳಿ" ಎಂದು ಹಳೆ ಕಾಗದದಲ್ಲಿ ಸುತ್ತಿದ್ದ ಫೋಟೋ ಒಂದನ್ನು ಹೇಮಾಡಪಂತರ ಕೈಗಿತ್ತು "ನಂತರ ವಿವರವಾಗಿ ತಿಳಿಸುವೆವು. ಊಟ ಮುಗಿಸಿ ಬನ್ನಿ" ಎಂದು ಹೇಳಿ ಹೋದರು. 


ಪವಿತ್ರ ಸಾಯಿ ಸಚ್ಚರಿತೆ ಗ್ರಂಥ: 

ಹೇಮಾಡಪಂತರು "ಸಾಯಿ ಸಚ್ಚರಿತೆ" ಗ್ರಂಥವನ್ನು 1910 ರಲ್ಲಿ ಬರೆಯಲು ಪ್ರಾರಂಭಿಸಿದರು. ಪ್ರಥಮ ಆವೃತ್ತಿಯು 1929 ರಲ್ಲಿ ಹೊರಬಂದಿತು. ಈ ಪವಿತ್ರ ಗ್ರಂಥವು ಎಲ್ಲಾ ಸಾಯಿ ಭಕ್ತರ ಮನೆಯಲ್ಲೂ ಇರಲೇಬೇಕು ಮತ್ತು ಈ ಗ್ರಂಥವು ಮನೆಯವರೆಲ್ಲ ಅತ್ಯಂತ ಪ್ರೀತಿ ಮತ್ತು ಭಕ್ತಿಯಿಂದ ಪಾರಾಯಣ ಮಾಡಲೇಬೇಕಾದ ಗ್ರಂಥವಾಗಿರುತ್ತದೆ. ಪ್ರತಿನಿತ್ಯ ಒಂದು ಅಧ್ಯಾಯವನ್ನಾದರೂ ಪಾರಾಯಣ ಮಾಡಿದರೆ ಅಮಿತ ಸುಖ ಲಭಿಸುತ್ತದೆ. ಗುರುಪೂರ್ಣಿಮೆ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಈ ಗ್ರಂಥದ ಪಾರಾಯಣ ಮಾಡುವುದು ಅತ್ಯಂತ ಶ್ರೇಯಸ್ಕರ. ಈ ಗ್ರಂಥವನ್ನು ಪಾರಾಯಣ ಮಾಡಿದರೆ ಸಾಯಿಬಾಬಾರವರು ಭಕ್ತನನ್ನು ಈ ಭವಸಾಗರದಿಂದ ಪಾರು ಮಾಡುವರು. ಅಲ್ಲದೆ, ಖಾಯಿಲೆಯಿಂದ ನರಳುತ್ತಿರುವವರಿಗೆ ಆರೋಗ್ಯ, ಬಡವರಿಗೆ ಧನ ದೊರೆಯುತ್ತದೆ.

ಸಾಯಿ ಸಚ್ಚರಿತ್ರೆ ರಚಿಸಿದ ಡೆಸ್ಕ್:

ಈ ಡೆಸ್ಕ್ ಮೇಲೆ ಹೇಮಾಡಪಂತರು ಪವಿತ್ರ ಸಾಯಿ ಸಚ್ಚರಿತ್ರೆಯನ್ನು ರಚಿಸಿರುತ್ತಾರೆ. ಈ ಡೆಸ್ಕ್ ಪೂಜಾ ಕೋಣೆಯ ಕೊನೆಯಲ್ಲಿ  ಸಾಯಿಬಾಬಾರವರ ಚಿತ್ರಪಟದ ಕೆಳಗಡೆ ಇರಿಸಲಾಗಿತ್ತು. ಈ ಡೆಸ್ಕ್ ನ ಮುಂದೆ ಹೇಮಾಡಪಂತರು ಅನೇಕ ವರ್ಷಗಳು ಗಂಟೆಗಟ್ಟಲೆ ಕುಳಿತು ಸಾಯಿ ಸಚ್ಚರಿತ್ರೆಯನ್ನು ರಚಿಸಿ ಸಾಯಿಬಾಬಾರವರ ಅನೇಕ ಲೀಲೆಗಳನ್ನು ರಚಿಸಿ ಆ ಪವಿತ್ರ ಅಮೃತವನ್ನು ನಮಗೆ ಉಣಬಡಿಸಿದ್ದಾರೆ. 

ಸಾಯಿಬಾಬಾರವರ ವಿಗ್ರಹ: 

ಈ ವಿಗ್ರಹದ ಮುಂದೆ ಹೇಮಾಡಪಂತರು ಧ್ಯಾನ ಮಾಡುತ್ತಿದ್ದರೆಂದು ತಿಳಿದುಬಂದಿದೆ. ಈ ವಿಗ್ರಹದ "ಜೀವಂತ ಕಣ್ಣುಗಳು" ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ. ಈ ವಿಗ್ರಹದಿಂದ ಅನೇಕ ಲೀಲೆಗಳು ಘಟಿಸಿವೆಯೆಂದು ಹೇಮಾಡಪಂತರ ಧರ್ಮಪತ್ನಿ ಹೇಳುತ್ತಾರೆ. 

ಸಾಯಿಬಾಬಾರವರ ಹೋಳಿ ಹುಣ್ಣಿಮೆಯ ಚಿತ್ರಪಟ: 

ಈ ಚಿತ್ರಪಟವನ್ನು ಆಲಿ ಮಹಮ್ಮದ್ ಮತ್ತು ಇಸ್ಮೂ ಮುಜಾವರ್ ರವರು ಹೋಳಿ ಹುಣ್ಣಿಮೆಯ ದಿನ ಹೇಮಾಡಪಂತರಿಗೆ ತಂದು ಕೊಟ್ಟಿರುತ್ತಾರೆ. ಈ ಚಿತ್ರಪಟವನ್ನು ಔತಣದ ದಿನ ಅತಿಥಿಗೆ ಎಂದು ಮೀಸಲಾಗಿಟ್ಟಿದ್ದ ಸ್ಥಳದಲ್ಲಿ ಇರಿಸಿರುತ್ತಾರೆ. ಹೇಮಾಡಪಂತರಿಗೆ ಕನಸಿನಲ್ಲಿ ಸಾಯಿಬಾಬಾರವರು ಕಾಣಿಸಿಕೊಂಡು ನಿಮ್ಮ ಮನೆಗೆ ಔತಣಕ್ಕೆ ಬರುತ್ತೇನೆ ಎಂದು ಹೇಳಿ ಈ ಚಿತ್ರಪಟದ ರೂಪದಲ್ಲಿ ಬಂದು ತಮ್ಮ ಭಕ್ತನ ಆಸೆಯನ್ನು ಪೂರೈಸಿ ತಮ್ಮ ಮಾತನ್ನು ಉಳಿಸಿಕೊಂಡಿರುತ್ತಾರೆ. 


ಇತರ ಪವಿತ್ರ ವಸ್ತುಗಳು: 

ಪೂಜಾ ಕೋಣೆಯ ಎಡಬದಿಯಲ್ಲಿ ಅನೇಕ ಪವಿತ್ರ ವಸ್ತುಗಳನ್ನು ಇರಿಸಲಾಗಿದೆ. ಒಂದು ಗಾಜಿನ ಪೆಟ್ಟಿಗೆಯಲ್ಲಿ ಸಾಯಿಬಾಬಾರವರು ನೀಡಿದ ಎರಡು ಪವಿತ್ರ ನಾಣ್ಯಗಳು, ಪವಿತ್ರ ಪಾದುಕೆಗಳು, ಹೇಮಾಡಪಂತರು ಉಪಯೋಗಿಸುತ್ತಿದ್ದ ಕನ್ನಡಕವನ್ನು ಇರಿಸಲಾಗಿದೆ. 



ಬಾಬಾರವರ ಚಿತ್ರಪಟ: 

ಈ ಕಲ್ಲಿನ ಮೇಲೆ ಕುಳಿತ ಸಾಯಿಬಾಬಾರವರ ಚಿತ್ರಪಟವನ್ನು ಸಾಯಿಯವರ ಭಕ್ತರಾದ ಶ್ರೀ.ಶ್ಯಾಮರಾವ್ ಜಯಕರ್ ರವರು ರಚಿಸಿರುತ್ತಾರೆ. ಹೇಮಾಡಪಂತರ ಮನೆಯ ಒಳಗೆ ಹೋದ ಕೂಡಲೇ ಎಡಭಾಗದಲ್ಲಿ ಈ ಚಿತ್ರಪಟವನ್ನು ಕಾಣಬಹುದು. ಈ ಚಿತ್ರಪಟವನ್ನು 26ನೇ ಡಿಸೆಂಬರ್ 1916 ರಂದು ರಚಿಸಲಾಯಿತೆಂದು ತಿಳಿದುಬಂದಿದೆ ಮತ್ತು ಚಿತ್ರಪಟದಲ್ಲಿ ಈ ದಿನಾಂಕ ಮತ್ತು ಸಹಿಯನ್ನು ಕೂಡ ನೋಡಬಹುದು. ಈ ಚಿತ್ರಪಟದಲ್ಲಿ ಅನೇಕ ವಿಶೇಷಗಳನ್ನು ಕಾಣಬಹುದು. 80 ವರ್ಷಗಳಿಗೂ ಹಳೆಯದಾದ ಈ ಚಿತ್ರಪಟದಲ್ಲಿ ಬಾಬಾರವರ ಹಿಂದೆ "ಶೇಷನಾಗ" ನನ್ನು, ಬಾಬಾರವರ ಎದೆಯ ಭಾಗದಲ್ಲಿ "ಸ್ವಸ್ತಿಕ್" ಚಿನ್ಹೆಯನ್ನು ಕಾಣಬಹುದು. ಯಾರೋ ಭಕ್ತರು ಚಂದನದಿಂದ ಸ್ವಸ್ತಿಕ್ ಚಿನ್ಹೆಯನ್ನು ಬರೆದಂತೆ ನಮಗೆ ಕಾಣುತ್ತದೆ. ಅಲ್ಲದೆ, ಮತ್ತೊಂದು "ಸ್ವಸ್ತಿಕ್" ಚಿನ್ಹೆಯನ್ನು ಬಾಬಾರವರ ಬಲಗಾಲಿನಲ್ಲಿ ಕಾಣಬಹುದು. 


1997 ರಲ್ಲಿ ಸದ್ಗುರು ಶ್ರೀ.ಅನಿರುದ್ಧ ಬಾಪುರವರು ಸಾಯಿ ನಿವಾಸ್ ನಲ್ಲಿ ಧ್ಯಾನಕ್ಕೊಸ್ಕರವಾಗಿ ಸಾಯಿಬಾಬಾರವರ ಒಂದು ವಿಗ್ರಹವನ್ನು ಸ್ಥಾಪಿಸಿದರು. ಅಂದಿನಿಂದ ಸಾಯಿಬಾಬಾರವರ ಈ ವಿಗ್ರಹದ ಮುಂದೆ "ಓಂ ಕೃಪಾಸಿಂಧು ಶ್ರೀ ಸಾಯಿನಾಥಾಯ ನಮಃ" ಎಂಬ ಸಾಯಿ ಮಂತ್ರವನ್ನು ಜಪಿಸುತ್ತ ಧ್ಯಾನ ಮಾಡಲು ಭಕ್ತರಿಗೆ ಅವಕಾಶ ನೀಡಲಾಗಿದೆ.



28ನೇ ಮಾರ್ಚ್ 1996 ರಂದು ಹೇಮಾಡಪಂತರ ಮೊಮ್ಮಗ ಶ್ರೀ.ಅಪ್ಪಾಸಾಹೇಬ್ ದಾಬೋಲ್ಕರ್ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮೀನಾವಾಹಿನಿ ದಾಬೋಲ್ಕರ್ ರವರಿಗೆ ಸದ್ಗುರು ಶ್ರೀ.ಅನಿರುದ್ಧ ಬಾಪುರವರು ಕುಳಿತುಕೊಂಡಿದ್ದ ಸ್ಥಳದಲ್ಲಿ ಶಿರಡಿ ಸಾಯಿಬಾಬಾರವರ ದರ್ಶನವಾಯಿತೆಂದು ಹೇಳಲಾಗುತ್ತದೆ. ಅಂದಿನಿಂದ ಶ್ರೀ ಸಾಯಿ ನಿವಾಸ್ ದ್ವಾರಕಾಮಾಯಿಯಾಗಿ ಪರಿವರ್ತನೆಗೊಂದು ಇಲ್ಲಿಗೆ ಬರುವ ಅಸಂಖ್ಯಾತ ಸಾಯಿ ಭಕ್ತರನ್ನು ರಕ್ಷಿಸುತ್ತಿದೆ.

ಶ್ರೀ ಸಾಯಿ ನಿವಾಸ್ ನ ದರ್ಶನದ ಸಮಯ:
ಪ್ರತಿದಿನ ಬೆಳಿಗ್ಗೆ 8 ಘಂಟೆಯಿಂದ 1 ಘಂಟೆಯವರೆಗೆ ಮತ್ತು ಸಂಜೆ 4:30 ರಿಂದ ರಾತ್ರಿ 10 ಘಂಟೆಯವರೆಗೆ ಮತ್ತು ಗುರುವಾರದಂದು ಬೆಳಿಗ್ಗೆ 8 ಘಂಟೆಯಿಂದ ಸಂಜೆ 4:30ರವರೆಗೆ ಶ್ರೀ ಸಾಯಿ ನಿವಾಸ್ ದರ್ಶನಕ್ಕೆ ತೆರೆದಿರುತ್ತದೆ. 

ಆರತಿಯ ಸಮಯ: 
ಪ್ರತಿದಿನ ರಾತ್ರಿ 7 ಘಂಟೆಗೆ ಆರತಿಯನ್ನು ಮಾಡಲಾಗುತ್ತದೆ. ಆರತಿಯ ನಂತರ ಹರಿ ನಾಮಸ್ಮರಣೆ, ಈಶ್ವರ ನಾಮಸ್ಮರಣೆ, ಅನಿರುದ್ಧರವರ ನಾಮಜಪ  ಅಥವಾ ಗಣೇಶ ಅಥರ್ವಶೀರ್ಷದ ಪಠಣವನ್ನು ಮಾಡಲಾಗುತ್ತದೆ. 


ವಿಶೇಷ ಉತ್ಸವದ ದಿನಗಳು:
1. ಹೋಳಿ ಹುಣ್ಣಿಮೆ - ಈ ದಿನ ಸಾಯಿಬಾಬಾರವರು ವಿಗ್ರಹದ ರೂಪದಲ್ಲಿ ಶ್ರೀ ಸಾಯಿ ನಿವಾಸ್ ಗೆ ಬಂದ ದಿನ. 
2. ಸದ್ಗುರು ನವರಾತ್ರಿ ಉತ್ಸವ (ಆಶ್ವಯುಜ ನವರಾತ್ರಿ ಉತ್ಸವ)


ಸಾಯಿ ನಿವಾಸದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ:  
ಬಾಂದ್ರಾ ರೈಲ್ವೇ ನಿಲ್ದಾಣದಿಂದ 10 ನಿಮಿಷದ ನಡೆದರೆ ಶ್ರೀ ಸಾಯಿ ನಿವಾಸ ಸಿಗುತ್ತದೆ. 


ವಿಳಾಸ:
ಶ್ರೀ.ಸಾಯಿ ನಿವಾಸ್ 
ಸಂತ ಮಾರ್ಟಿನ್ ರಸ್ತೆ, 
ಬಾಂದ್ರಾ (ಪಶ್ಚಿಮ), 
ಮುಂಬೈ-400 053. ಭಾರತ. 


ಮುಖ್ಯ ಕಾರ್ಯಾಲಯ:
ಶ್ರೀ.ಅನಿರುದ್ಧ ಉಪಾಸನಾ ಫೌನ್ಡೇಶನ್, 
2ನೇ ಮಹಡಿ, ಹ್ಯಾಪಿ ಹೋಂ, ಪ್ಲಾಟ್ ನಂ.551,
ಟಿಪಿಯೆಸ್-3, 8ನೇ ರಸ್ತೆ, ಖಾರ್ ದೂರವಾಣಿ ವಿನಿಮಯ ಕೇಂದ್ರದ ಹಿಂಭಾಗ, 
ಖಾರ್ (ಪಶ್ಚಿಮ), ಮುಂಬೈ-400 052. ಭಾರತ.


ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಸುನೀಲ್ ಸಿನ್ಹಾ ಮಂತ್ರಿ / ಶ್ರೀ.ಮಹೇಶ್ ಸಿನ್ಹಾ ಜಂತಿಯೇ - ಮುಖ್ಯ ಕಾರ್ಯಕಾರಿ ಅಧಿಕಾರಿಗಳು. 


ದೂರವಾಣಿ ಸಂಖ್ಯೆ:

+91 98690 22971 / +91 98210 75164 

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 


ಮಾರ್ಗಸೂಚಿ: 
ಬಾಂದ್ರಾ ರೈಲ್ವೇ ನಿಲ್ದಾಣದಿಂದ 10 ನಿಮಿಷದ ನಡೆದರೆ ಶ್ರೀ ಸಾಯಿ ನಿವಾಸ ಸಿಗುತ್ತದೆ.

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, May 21, 2011

4ನೇ  ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿರುವ ಬೆಂಗಳೂರಿನ ಶ್ರೀ.ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರ - 22 ನೇ ಮೇ 2011 - ಕೃಪೆ: ಸಾಯಿ ಅಮೃತಧಾರಾ.ಕಾಂ  

ಬೆಂಗಳೂರಿನ ಕಾಫಿ ಬೋರ್ಡ್ ಬಡಾವಣೆಯ ಶ್ರೀ.ಸರ್ವಧರ್ಮಪ್ರಿಯ ಸಾಯಿ ದ್ವಾರಕಾಮಾಯಿ ಮಂದಿರವು ತನ್ನ 4ನೇ ವಾರ್ಷಿಕೋತ್ಸವವನ್ನು ಮುಂದಿನ ತಿಂಗಳ 12ನೇ ಜೂನ್ 2011 ರಿಂದ 14ನೇ ಜೂನ್ 2011 ರ ವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. 

ಹೆಚ್ಚಿನ ವಿವರಗಳಿಗಾಗಿ ಆಮಂತ್ರಣ ಪತ್ರವನ್ನು ಈ ಕೆಳಗಡೆ ಲಗ್ಗತಿಸಲಾಗಿದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ
ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ (ನೋಂದಣಿ), ಕಾಶಿ ವಿಶ್ವನಾಥ ಬಡಾವಣೆ, ಕೃಷ್ಣರಾಜಪುರಂ, ಬೆಂಗಳೂರು-560 036. ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಬೆಂಗಳೂರಿನ ಕೃಷ್ಣರಾಜಪುರಂ ನ ಕಾಶಿ ವಿಶ್ವನಾಥ ಬಡಾವಣೆಯಲ್ಲಿರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 2004ನೇ ಇಸವಿಯಲ್ಲಿ ಮಾಡಲಾಯಿತು. 

ಈ ದೇವಾಲಯದ ಉದ್ಘಾಟನೆಯನ್ನು ಬೇಲಿ ಮಠದ ಸ್ವಾಮೀಜಿಗಳಾದ ಶ್ರೀ.ಶ್ರೀ.ಶ್ರೀ.ಶಿವಮುರ್ತಿ ಶಿವಾಚಾರ್ಯ ಸ್ವಾಮೀಜಿಯವರು 18ನೇ ಜೂನ್ 2008 ರಂದು ಮಾಡಿದರು. ಆದರೆ, ದೇವಾಲಯದ ಆಡಳಿತ ಮಂಡಳಿಯವರು ವಾರ್ಷಿಕೋತ್ಸವವನ್ನು ಗುರುಪೂರ್ಣಿಮೆಯಂದು ಆಚರುವ ಪರಿಪಾಠ ಇಟ್ಟುಕೊಂಡಿದ್ದಾರೆ. 

ಈ ದೇವಾಲಯದ ನಿರ್ಮಾಣಕ್ಕೆ ಬೇಕಾದ ಭೂಮಿಯನ್ನು ಶ್ರೀ.ಸಿ.ನಾರಾಯಣಪ್ಪರವರು ನೀಡಿರುತ್ತಾರೆ. ದೇವಾಲಯದ ಕಟ್ಟಡ ನಿರ್ಮಾಣಕ್ಕೆ ಬೇಕಾದ ಧನಸಹಾಯವನ್ನು ಶ್ರೀ.ಶ್ರೀನಿವಾಸ್ ರವರು ಮತ್ತು ಸ್ಥಳೀಯ ಸಾಯಿಭಕ್ತರು ಮಾಡಿರುತ್ತಾರೆ. ದೇವಾಲಯದ ಉಸ್ತುವಾರಿಯನ್ನು ಶ್ರೀ.ಹೆಚ್.ಎ.ಪಾರ್ಶ್ವನಾಥ್ ರವರು ವಹಿಸಿಕೊಂಡಿರುತ್ತಾರೆ. 
ದೇವಾಲಯದ ಒಳಗಡೆ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವನ್ನು, ಪಾದುಕೆಗಳನ್ನು ಮತ್ತು ಸಾಯಿಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪನೆ ಮಾಡಿರುವುದನ್ನು ಸಾಯಿ ಭಕ್ತರು ನೋಡಬಹುದು. 

ದೇವಾಲಯದ ಎಡಭಾಗದಲ್ಲಿ ನಿತ್ಯ ಪ್ರಸಾದಕ್ಕೆ ಅನುಕೂಲವಾಗುವಂತೆ ಪಾಕಶಾಲೆಯನ್ನು ನಿರ್ಮಿಸಲಾಗಿದೆ. 






ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 

ಆರತಿಯ ಸಮಯ: 
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 6 ಘಂಟೆಗೆ 
ಮಧ್ಯಾನ್ಹ ಆರತಿ: ಪ್ರತಿದಿನ ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ : ಪ್ರತಿದಿನ ಸಂಜೆ 6 ಘಂಟೆಗೆ 
ಶೇಜಾರತಿ: ಪ್ರತಿದಿನ ರಾತ್ರಿ 8 ಘಂಟೆಗೆ ಮತ್ತು ಗುರುವಾರ ರಾತ್ರಿ 9 ಘಂಟೆಗೆ  

ಪ್ರತಿದಿನ ಬೆಳಿಗ್ಗೆ ಕಾಕಡಾ ಆರತಿಯ ನಂತರ ಸಾಯಿಬಾಬಾರವರ ಬೆಳ್ಳಿಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 150/- ರುಪಾಯಿಗಳು. 
ಪ್ರತಿ ತಿಂಗಳ ಹುಣ್ಣಿಮೆಯ ದಿನ ಸಂಜೆ 6:30 ಕ್ಕೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾ ಶುಲ್ಕ 25/- ರುಪಾಯಿಗಳು. 
ಪ್ರತಿದಿನ ಸಂಜೆ ಧೂಪಾರತಿಯ ನಂತರ 6:30 ಕ್ಕೆ ಸ್ಥಳೀಯ ಸಾಯಿಭಕ್ತರಿಂದ ವಿಷ್ಣು ಸಹಸ್ರನಾಮ ಪಠಣವಿರುತ್ತದೆ. 
ಪ್ರತಿ ಗುರುವಾರ ಸಂಜೆ 6:30 ರಿಂದ 7:30 ರವರೆಗೆ  ಸ್ಥಳೀಯ ಭಕ್ತರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ. 
ಪ್ರತಿ ಗುರುವಾರ ಬೆಳಿಗ್ಗೆ ಮತ್ತು ಸಂಜೆ ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗುತ್ತದೆ. 

ವಿಶೇಷ ಉತ್ಸವದ ದಿನಗಳು: 
  1. ಶಿವರಾತ್ರಿ. 
  2. ಶ್ರೀರಾಮನವಮಿ. 
  3. ಗುರು ಪೂರ್ಣಿಮೆ - ದೇವಾಲಯದ ವಾರ್ಷಿಕೋತ್ಸವ. 
  4. ವಿಜಯದಶಮಿ. 
  5. ದತ್ತ ಜಯಂತಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಕೃಷ್ಣರಾಜಪುರಂ ಪೋಲಿಸ್ ಠಾಣೆ ಮತ್ತು ಎಂ.ಎಂ.ಕಲ್ಯಾಣ ಮಂಟಪದ ಬಳಿ.


ವಿಳಾಸ: 
ಶ್ರೀ.ಶಿರಡಿ ಸಾಯಿ ಮಂದಿರ                                                                                                                             ಶ್ರೀ ಶಿರಡಿ ಸಾಯಿ ಮಂದಿರ ಸೇವಾ ಟ್ರಸ್ಟ್ (ನೋಂದಣಿ),  
ಕಾಶಿ ವಿಶ್ವನಾಥ ಬಡಾವಣೆ, ಕೃಷ್ಣರಾಜಪುರಂ, 
ಬೆಂಗಳೂರು-560 036. ಕರ್ನಾಟಕ. 

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಹೆಚ್.ಎ.ಪಾರ್ಶ್ವನಾಥ್ / ಶ್ರೀ.ಶ್ರೀನಿವಾಸ್ / ಶ್ರೀ.ಎ.ಸತ್ಯಮುರ್ತಿ-ಅರ್ಚಕರು. 

ದೂರವಾಣಿ ಸಂಖ್ಯೆಗಳು: 
+ 91 94480 30204 / +91 99800 44009 / +91 89708 00845 – ಅರ್ಚಕರು 

ಮಾರ್ಗಸೂಚಿ: 
ಕೃಷ್ಣರಾಜಪುರಂ ಕೊನೆಯ ಬಸ್ ನಿಲ್ದಾಣದಲ್ಲಿ ಇಳಿದು ಎದುರುಗಡೆಯ ಕೃಷ್ಣರಾಜಪುರಂ ಪೋಲಿಸ್ ಠಾಣೆಯ ರಸ್ತೆಯಲ್ಲಿ 5 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ದೇವಾಲಯವು ಕೃಷ್ಣರಾಜಪುರಂ ಪೋಲಿಸ್ ಠಾಣೆ ಮತ್ತು ಎಂ.ಎಂ.ಕಲ್ಯಾಣ ಮಂಟಪದ ಬಳಿ ಇರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, May 18, 2011

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ), ಸೂಲಿಬೆಲೆ-562 129, ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ.  

ದೇವಾಲಯದ ವಿಶೇಷತೆಗಳು: 
ಈ ದೇವಾಲಯವು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಿಂದ ದೇವನಹಳ್ಳಿಗೆ ತೆರಳುವ ಮಧ್ಯಭಾಗದಲ್ಲಿ ಸೂಲಿಬೆಲೆ ಗ್ರಾಮದಲ್ಲಿರುತ್ತದೆ. ಹೊಸಕೋಟೆ ಮತ್ತು ದೇವನಹಳ್ಳಿಯಿಂದ 16 ಕಿಲೋಮೀಟರ್ ಸಮಾನಾಂತರ ದೂರದಲ್ಲಿದೆ. 

ದೇವಾಲಯದ ಭೂಮಿಪೂಜೆಯನ್ನು 2002 ನೇ ಇಸವಿಯಲ್ಲಿ ಮಾಡಲಾಯಿತು. 

ಈ ದೇವಾಲಯವನ್ನು 29ನೇ ಮೇ 2006 ರಂದು ಆದಿಚುಂಚನಗಿರಿ ಮಠದ ಸ್ವಾಮೀಜಿಯವರಾದ ಶ್ರೀ.ಶ್ರೀ.ಶ್ರೀ.ಬಾಲಗಂಗಾಧರನಾಥ ಸ್ವಾಮೀಜಿಯವರು ಉದ್ಘಾಟಿಸಿದರು. 

ಈ ದೇವಾಲಯವನ್ನು ಶ್ರೀ.ಜನಾರ್ದನ ರೆಡ್ಡಿಯವರು ಪ್ರಾರಂಭಿಸಿರುತ್ತಾರೆ. ಶ್ರೀ.ಸುರೇಶರವರು ದೇವಾಲಯದ ಎಲ್ಲಾ ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುತ್ತಾರೆ. 

ಸಾಯಿಬಾಬಾ ದೇವಾಲಯದಲ್ಲಿ ನಾಲ್ಕೂವರೆ ಅಡಿ ಎತ್ತರದ ಸುಂದರ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ನಿತ್ಯ ಅಭಿಷೇಕಕ್ಕೆ ಮತ್ತು ಗುರುವಾರದ ಪಲ್ಲಕ್ಕಿ ಉತ್ಸವಕ್ಕೆ ಪಂಚಲೋಹದ ಸಾಯಿಬಾಬಾರವರ ವಿಗ್ರಹವನ್ನು ಉಪಯೋಗಿಸಲಾಗುತ್ತಿದೆ. ಪಂಚಲೋಹ ವಿಗ್ರಹವನ್ನು ಅಮೃತ ಶಿಲೆಯ ಸಾಯಿಬಾಬಾ ವಿಗ್ರಹದ ಮುಂಭಾಗದಲ್ಲಿ ನೋಡಬಹುದು. ಅಮೃತ ಶಿಲೆಯ ಪವಿತ್ರ ಪಾದುಕೆಗಳನ್ನು ಸಾಯಿಬಾಬಾ ವಿಗ್ರಹದ ಕೆಳಗಡೆ ಸ್ಥಾಪಿಸಲಾಗಿದೆ. ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಶಿರಡಿಯಲ್ಲಿ ಇರುವಂತೆ ಸಾಯಿಬಾಬಾರವರ ವಿಗ್ರಹದ ಎದುರುಗಡೆ ಸ್ಥಾಪಿಸಲಾಗಿದೆ. 

ಅಮೃತ ಶಿಲೆಯ ಗಣೇಶ ಮತ್ತು ದತ್ತಾತ್ರೇಯ ವಿಗ್ರಹಗಳನ್ನು ಸಾಯಿಬಾಬಾ ದೇವಾಲಯದ ಹೊರಗಡೆ ಎರಡೂ ಬದಿಯಲ್ಲಿ ಪ್ರತಿಷ್ಟಾಪಿಸಲಾಗಿದೆ. 

ಶಿವಲಿಂಗ (ಕಾಶಿ ವಿಶ್ವೇಶ್ವರ) ಮತ್ತು ಪಾರ್ವತಿ ದೇವಿಯ ದೇವಾಲಯವು ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆಗೆ ಸೇರಿದ್ದು ಅದರ ಉಸ್ತುವಾರಿಯನ್ನು ಕೂಡ ಸಾಯಿಬಾಬಾ ದೇವಾಲಯದ ಟ್ರಸ್ಟ್ ನವರೇ ವಹಿಸಿಕೊಂಡಿರುತ್ತಾರೆ. 








ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ: 
ಕಾಕಡಾ ಆರತಿ - ಬೆಳಿಗ್ಗೆ 6:00 ಘಂಟೆಗೆ 
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ 
ಧೂಪಾರತಿ - ಸಂಜೆ 6 ಘಂಟೆಗೆ 
ಶೇಜಾರತಿ - ರಾತ್ರಿ 8 ಘಂಟೆಗೆ 

ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿನಿತ್ಯ ಕ್ಷೀರಾಭಿಷೇಕ (51/- ರುಪಾಯಿಗಳು)  ಮತ್ತು ಪಂಚಾಮೃತ ಅಭಿಷೇಕ (151/- ರುಪಾಯಿಗಳು)ವನ್ನು ತಪ್ಪದೆ ಮಾಡಲಾಗುತ್ತದೆ. 

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 10 ಘಂಟೆಯಿಂದ 12 ಘಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಆಚರಿಸಲಾಗುತ್ತದೆ. ಸೇವಾಶುಲ್ಕ 25/- ರುಪಾಯಿಗಳು.

ದೇವಾಲಯಕ್ಕೆ ಬರುವ ಎಲ್ಲಾ ಭಕ್ತರಿಗೆ ಪ್ರತಿನಿತ್ಯ ಪ್ರಸಾದ ವಿನಿಯೋಗದ ವ್ಯವಸ್ಥೆಯನ್ನು ಮಾಡಲಾಗಿದೆ. 

ವಿಶೇಷ ಉತ್ಸವದ ದಿನಗಳು:
  1. ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 29ನೇ ಮೇಯಂದು. 
  2. ಶ್ರೀರಾಮನವಮಿ - ಹಳ್ಳಿಯ ಸುತ್ತಲೂ ಪಲ್ಲಕ್ಕಿ ಉತ್ಸವವನ್ನು ಕೊಂಡೊಯ್ಯಲಾಗುತ್ತದೆ. 
  3. ಶ್ರೀಕೃಷ್ಣ ಜನ್ಮಾಷ್ಟಮಿ. 
  4. ಗುರು ಪೂರ್ಣಿಮೆ. 
  5. ದತ್ತ ಜಯಂತಿ.
  6. ವಿಜಯದಶಮಿ. 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 
ಸೂಲಿಬೆಲೆ ಪೋಲಿಸ್ ಠಾಣೆ ಮತ್ತು ವಿದ್ಯುತ್ ಶಕ್ತಿ ಇಲಾಖೆಯ ಹತ್ತಿರ.

ವಿಳಾಸ: 
ಶಿರಡಿ ಸಾಯಿ ಮಂದಿರ,
ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ),
ಸೂಲಿಬೆಲೆ-562 129,
ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 
ಶ್ರೀ.ಜನಾರ್ಧನ ರೆಡ್ಡಿ  / ಶ್ರೀ.ಸುರೇಶ  /  ಶ್ರೀ.ರಾಮಮೋಹನ್ - ಅರ್ಚಕರು

ದೂರವಾಣಿ ಸಂಖ್ಯೆಗಳು: 
+ 91 93422 01225 / +91 99804 17361

ಮಾರ್ಗಸೂಚಿ: 
ಸೂಲಿಬೆಲೆ ಪೋಲಿಸ್ ಠಾಣೆ ಮತ್ತು ವಿದ್ಯುತ್ ಶಕ್ತಿ ಇಲಾಖೆಯ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಹೊಸಕೋಟೆಯಿಂದ ದೇವನಹಳ್ಳಿಗೆ ತೆರಳುವ ಎಲ್ಲಾ ಬಸ್ ಗಳಿಗೆ ಸೂಲಿಬೆಲೆಯಲ್ಲಿ ನಿಲುಗಡೆ ಇರುತ್ತದೆ. ಹೊಸಕೋಟೆ ಮತ್ತು ದೇವನಹಳ್ಳಿಯಿಂದ 16 ಕಿಲೋಮೀಟರ್ ಸಮಾನಾಂತರ ದೂರದಲ್ಲಿ ಸೂಲಿಬೆಲೆ ಇರುತ್ತದೆ.



ಕನ್ನಡ ಅನುವಾದ: ಶ್ರೀಕಂಠ ಶರ್ಮ

ಹಿಂದಿ ಚಲನಚಿತ್ರ ನಟ ಮಿಥುನ್ ಚಕ್ರವರ್ತಿ ಶಿರಡಿ ಭೇಟಿ - 18ನೇ ಮೇ 2011 - ಕೃಪೆ: ಸಾಯಿಅಮೃತಧಾರಾ.ಕಾಂ  

ಖ್ಯಾತ ಹಿಂದಿ ಚಲನಚಿತ್ರ ನಟ ಶ್ರೀ.ಮಿಥುನ್ ಚಕ್ರವರ್ತಿಯವರು 18ನೇ ಮೇ 2011 ರಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿ ದರ್ಶನ ಪಡೆದರು.  



ಕನ್ನಡ ಅನುವಾದ:ಶ್ರೀಕಂಠ ಶರ್ಮ

Tuesday, May 17, 2011

ಬೆಂಗಳೂರು ಗ್ರಾಮಾಂತರದ ಸಾಯಿಬಾಬಾ ಮಂದಿರ-ಶ್ರೀ ಸಾಯಿನಾಥ ಜ್ಞಾನ ಮಂದಿರ, ಭಟ್ರೇನಹಳ್ಳಿ (ಮಳ್ಳೂರು), ವಿಜಯಪುರ ಹೋಬಳಿ, ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 135, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು:

ಈ ದೇವಾಲಯವು ವಿಜಯಪುರ ಮತ್ತು ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಭಟ್ರೇನಹಳ್ಳಿ ಎಂಬ ಸ್ಥಳದಲ್ಲಿದೆ. ಈ ದೇವಾಲಯವು ವಿಜಯಪುರದಿಂದ 5 ಕಿಲೋಮೀಟರ್ ಮತ್ತು ದೇವನಹಳ್ಳಿಯಿಂದ 14 ಕಿಲೋಮೀಟರ್ ಅಂತರದಲ್ಲಿರುತ್ತದೆ.

ಈ ದೇವಾಲಯದ ಭೂಮಿಪೂಜೆಯನ್ನು ಸೆಪ್ಟೆಂಬರ್ 2004 ರಲ್ಲಿ ನೆರವೇರಿಸಲಾಯಿತು.

ಈ ದೇವಾಲಯವನ್ನು 14ನೇ ಸೆಪ್ಟೆಂಬರ್ 2005 ರಂದು ಮತ್ತೂರು ಗ್ರಾಮದ ಖ್ಯಾತ ವೇದ ವಿದ್ವಾನ್ ವೇದ ಬ್ರಹ್ಮಶ್ರೀ.ನಾರಾಯಣಮುರ್ತಿಯವರು ಬೆಂಗಳೂರಿನ ಶ್ರೀ.ನಾರಾಯಣ ಶಾಸ್ತ್ರಿ ಮತ್ತು ಶ್ರೀ.ಸುರೇಶ ಶಾಸ್ತ್ರಿಯವರ ಸಹಯೋಗದೊಂದಿಗೆ ಉದ್ಘಾಟಿಸಿದರು.

ಈ ದೇವಾಲಯವನ್ನು ಸಹೋದರರಾದ ಶ್ರೀ.ಎಂ.ಏನ್.ವೆಂಕಟೇಶಪ್ಪ ಮತ್ತು ಶ್ರೀ.ಎಂ.ಏನ್.ನಾರಾಯಣ ಸ್ವಾಮಿಯವರು ಜಂಟಿಯಾಗಿ ಪ್ರಾರಂಭಿಸಿರುತ್ತಾರೆ. ಶ್ರೀ.ಎಂ.ಏನ್.ನಾರಾಯಣ ಸ್ವಾಮಿಯವರು ದೇವಾಲಯದ ಪೂರ್ಣ ಮೇಲ್ವಿಚಾರಣೆ ಮತ್ತು ಉಸ್ತುವಾರಿಯನ್ನು ವಹಿಸಿಕೊಂಡು ದೇವಾಲಯದ ಎಲ್ಲ ಕಾರ್ಯಕ್ರಮಗಳನ್ನೂ ಬಹಳ ಚೆನ್ನಾಗಿ ನಡೆಸುತ್ತಾ ಬಂದಿದ್ದಾರೆ.

ದೇವಾಲಯದ ಒಳಭಾಗ, ಹೊರಭಾಗ ಮತ್ತು ನೆಲವನ್ನು ಬಿಳಿಯ ಅಮೃತ ಶಿಲೆಯಿಂದ ಶೃಂಗರಿಸಲಾಗಿದೆ. ದೇವಾಲಯದ ಮೇಲ್ಭಾಗದಲ್ಲಿ ಬಣ್ಣ ಬಣ್ಣದ ಹೂಗಳ ವರ್ಣಚಿತ್ರಗಳನ್ನು ಕಾಣಬಹುದು. ದೇವಾಲಯದ ಒಳಭಾಗದ ಗೋಡೆಯ ಸುತ್ತಲೂ ಸಾಯಿಬಾಬಾರವರ ಜೀವನ ಚರಿತ್ರೆಯನ್ನು ಬಿಂಬಿಸುವ ಚಿತ್ರಪಟಗಳನ್ನು ತೂಗುಹಾಕಲಾಗಿದೆ.

ದೇವಾಲಯವು ಬೆಳಗಿನ ಜಾವ 6 ಘಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿಯ ಶೇಜಾರತಿಯೊಂದಿಗೆ 8 ಘಂಟೆಗೆ ಮುಚ್ಚುತ್ತದೆ. ಮಧ್ಯೆ ದೇವಾಲಯದ ಬಾಗಿಲನ್ನು ಹಾಕುವುದಿಲ್ಲ. 

ದೇವಾಲಯದ ರಾಜ ಗೋಪುರದ ಮಧ್ಯಭಾಗದಲ್ಲಿ "ಓಂ" ಎಂದು ಬಹಳ ಸುಂದರವಾಗಿ ಕೆತ್ತಲಾಗಿದ್ದು, ಪವಿತ್ರ ಓಂಕಾರವು
 ಸಾಯಿಭಕ್ತರನ್ನು ಸ್ವಾಗತಿಸುತ್ತದೆ.  ಅಮೃತ ಶಿಲೆಯಲ್ಲಿ ಕೆತ್ತಲ್ಪಟ್ಟಿರುವ ಎರಡು ಆನೆಗಳು ಮತ್ತು ಎರಡು ದ್ವಾರಪಾಳಕರುಗಳನ್ನು ದೇವಾಲಯದ ಮುಖ್ಯದ್ವಾರದಲ್ಲಿ ಸ್ಥಾಪಿಸಲಾಗಿದೆ. ದೇವಾಲಯದ ಹೊರಆವರಣದ ಗೋಡೆಯ ಸುತ್ತಲೂ ವಿವಿಧ ದೇವತೆಗಳ ವಿಗ್ರಹಗಳನ್ನು ಬಹಳ ಸುಂದರವಾಗಿ ಕೆತ್ತಲಾಗಿದೆ.

ಅಮೃತ ಶಿಲೆಯ ಸರಿ ಸುಮಾರು 5 ಅಡಿಯ ಸಾಯಿಬಾಬಾರವರ ವಿಗ್ರಹವನ್ನು ದೇವಾಲಯದ ಒಳಗಡೆ ಸಾಯಿಭಕ್ತರು ನೋಡಬಹುದು. ಅಲ್ಲದೆ, 3 ಚಿಕ್ಕ ಅಮೃತ ಶಿಲೆಯ ವಿಗ್ರಹಗಳನ್ನು ಮತ್ತು 1 ಪಂಚಲೋಹದ ವಿಗ್ರಹಗಳನ್ನು ಕೂಡ ಗರ್ಭಗುಡಿಯಲ್ಲಿ ಕಾಣಬಹುದು. ಪಂಚಲೋಹದ ವಿಗ್ರಹವನ್ನು ಪ್ರತಿ ಗುರುವಾರ ಪಲ್ಲಕ್ಕಿಯ ಸಮಯದಲ್ಲಿ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಬಳಸಲಾಗುತ್ತಿದೆ.

ಸಾಯಿಬಾಬಾರರವರ ಗರ್ಭಗುಡಿಯ ಎಡಭಾಗದಲ್ಲಿ ಗಣಪತಿಯ ವಿಗ್ರಹವನ್ನು ಮತ್ತು ಬಲಭಾಗದಲ್ಲಿ ಸುಬ್ರಮಣ್ಯ ಮತ್ತು ಅಯ್ಯಪ್ಪ ದೇವರುಗಳ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ಎದುರುಗಡೆ ಶಿರಡಿಯಲ್ಲಿ ಇರುವಂತೆ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.

ದೇವಾಲಯದ ಹೊರಆವರಣದಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಗುರುಸ್ಥಾನವಿದ್ದು ಅಲ್ಲಿ ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾರವರ ಚಿತ್ರಪಟವನ್ನು ಇರಿಸಲಾಗಿದೆ. ಗುರುಸ್ಥಾನದ ಪಕ್ಕದಲ್ಲಿ ಸ್ವಲ್ಪ ದೂರದಲ್ಲಿ ಕಪ್ಪು ಶಿಲೆಯ ಬಲಮುರಿ ಗಣೇಶನ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲಿಂದ ಸ್ವಲ್ಪ ದೂರದಲ್ಲಿಯೇ ಅಮೃತ ಜಲಕಂಠ ಈಶ್ವರನ ಮತ್ತು ಗಂಗಾ ಮಾತೆಯ ವಿಗ್ರಹಗಳನ್ನು ನಂದಿಯ ವಿಗ್ರಹವನ್ನು ಕೂಡ ಸ್ಥಾಪಿಸಲಾಗಿದೆ.













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:

ಕಾಕಡಾ ಆರತಿ - ಬೆಳಿಗ್ಗೆ 6 ಘಂಟೆಗೆ
ಮಧ್ಯಾನ್ಹ ಆರತಿ - ಮಧ್ಯಾನ್ಹ 12 ಘಂಟೆಗೆ
ಧೂಪಾರತಿ - ಸಂಜೆ 6 ಘಂಟೆಗೆ
ಶೇಜಾರತಿ - ರಾತ್ರಿ 8 ಘಂಟೆಗೆ

ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ವಿಶೇಷ ಅಭಿಷೇಕ, ಸಹಸ್ರನಾಮ ಅರ್ಚನೆ ಮತ್ತು ಪೂಜೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಮಂಗಳವಾರದಂದು ಸುಬ್ರಮಣ್ಯ ಮತ್ತು ಅಯ್ಯಪ್ಪ ದೇವರುಗಳಿಗೆ ವಿಶೇಷ ಅಭಿಷೇಕ ಮತ್ತು ಅರ್ಚನೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಬುಧವಾರದಂದು ಬಲಮುರಿ ಗಣಪತಿಗೆ ವಿಶೇಷ ಅಭಿಷೇಕ ಮತ್ತು ಅರ್ಚನೆಯನ್ನು ಬೆಳಿಗ್ಗೆ 9 ಘಂಟೆಗೆ ಮಾಡಲಾಗುತ್ತದೆ.

ಪ್ರತಿ ಗುರುವಾರದಂದು ಕಾಕಡಾ ಆರತಿಯ ನಂತರ ವಿಶೇಷ ಅಭಿಷೇಕ, ಅರ್ಚನೆ, ಪೂಜೆ ಮತ್ತು ಅಲಂಕಾರಗಳನ್ನು ದೇವಾಲಯದಲ್ಲಿರುವ ಎಲ್ಲ ದೇವರ ವಿಗ್ರಹಗಳಿಗೆ ಮಾಡಲಾಗುತ್ತದೆ. ಬೆಳಗಿನ ಜಾವ ವಿಷ್ಣು ಸಹಸ್ರನಾಮ ಪಠಣವನ್ನು ಮಾಡಲಾಗುತ್ತದೆ. ದಿನನಿತ್ಯದಂತೆ ಗುರುಸ್ಥಾನಕ್ಕೆ ಮತ್ತು ಪವಿತ್ರ ಬೇವಿನ ಮರಕ್ಕೆ ಧೂಪಾರತಿಯನ್ನು ಮಾಡಲಾಗುತ್ತದೆ. ಸಂಜೆ ಧೂಪಾರತಿಯ ನಂತರ ವಿಶೇಷ ಭಜನೆ, ಪಲ್ಲಕ್ಕಿ ಉತ್ಸವ ಕಾರ್ಯಕ್ರಮವಿರುತ್ತದೆ. ಅಲ್ಲದೆ, ಶೇಜಾರತಿಯ ನಂತರ ಮಹಾಪ್ರಸಾದವನ್ನು ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೂ ವಿತರಿಸಲಾಗುತ್ತದೆ.

ಪ್ರತಿ ಶುಕ್ರವಾರದಂದು ವಿಶೇಷ ಅಭಿಷೇಕ, ಕುಂಕುಮಾರ್ಚನೆ, ದೇವಿ ಅಷ್ಟೋತ್ತರ ಮತ್ತು ಲಲಿತಾಸಹಸ್ರನಾಮವನ್ನು ದೇವಾಲಯದಲ್ಲಿರುವ ಶ್ರೀಚಕ್ರದ ವಿಗ್ರಹಕ್ಕೆ ಬೆಳಿಗ್ಗೆ 10:30 ರಿಂದ 12:00 ಘಂಟೆಯ ನಡುವೆ ಮಾಡಲಾಗುತ್ತದೆ.

ಪ್ರತಿ ಶನಿವಾರದಂದು ಬೆಳಿಗ್ಗೆ 8:30 ಕ್ಕೆ ಗಣಪತಿಯ ವಿಗ್ರಹಕ್ಕೆ ವಿಶೇಷ ಅಭಿಷೇಕ, ಅರ್ಚನೆ ಮತ್ತು ಪೂಜೆಯನ್ನು ಮಾಡಲಾಗುತ್ತದೆ. ಸಂಜೆಯ ಧೂಪಾರತಿಯ ನಂತರ ಅಯ್ಯಪ್ಪ ಸ್ವಾಮಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. 

ಪ್ರತಿ ಭಾನುವಾರದಂದು ಬೆಳಗಿನ ಕಾಕಡಾ ಆರತಿಯ ನಂತರ 6:30 ಕ್ಕೆ ದೇವಾಲಯದಲ್ಲಿರುವ ಎಲ್ಲ ದೇವರುಗಳ ವಿಗ್ರಕ್ಕೆ ವಿಶೇಷ ಅಭಿಷೇಕ, ಅರ್ಚನೆ ಮತ್ತು ಪೂಜೆಯನ್ನು ನೆರವೇರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 6 ಘಂಟೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ.

ಪ್ರತಿ ತಿಂಗಳ ಚೌತಿಯಂದು ಸಂಕಷ್ಟ ಗಣಪತಿ ವ್ರತವನ್ನು ಸಂಜೆ 6 ಘಂಟೆಗೆ ಹಮ್ಮಿಕೊಳ್ಳಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:
  1. ಪ್ರತಿ ವರ್ಷದ 14ನೇ ಸೆಪ್ಟೆಂಬರ್ ದೇವಾಲಯದ ವಾರ್ಷಿಕೋತ್ಸವ.
  2. ವೈಕುಂಠ ಏಕಾದಶಿ.
  3. ಶಿವರಾತ್ರಿ.
  4. ಮಕರ ಸಂಕ್ರಾಂತಿ.
  5. ಶ್ರೀ ರಾಮನವಮಿ - ಹಳ್ಳಿಯ ಸುತ್ತಲೂ ಪಲ್ಲಕ್ಕಿಯ ಉತ್ಸವ.
  6. ಗುರುಪೂರ್ಣಿಮೆ.
  7. ವಿಜಯದಶಮಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದ ಹಿಂಭಾಗದಲ್ಲಿ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪ ಎಂಬ ಮದುವೆಯ ಮನೆಯನ್ನು ನಿರ್ಮಿಸಲಾಗಿದ್ದು ಈ ಸ್ಥಳವನ್ನು ಬಡವರಿಗೆ ಅತ್ಯಂತ  ಕಡಿಮೆ ದರದಲ್ಲಿ ಮದುವೆ ಮತ್ತು ಇತರ ವಿಶೇಷ ಸಮಾರಂಭಗಳಿಗೆ ನೀಡಲಾಗುತ್ತಿದೆ.

ಕಲ್ಯಾಣ ಮಂಟಪದ ಪಕ್ಕದಲ್ಲಿ 4 ಅತಿಥಿ ಕೋಣೆಗಳನ್ನು ನಿರ್ಮಿಸಲಾಗಿದ್ದು ಇದನ್ನು ದೂರದಿಂದ ದರ್ಶನಕ್ಕೆ ಬರುವ ಸಾಯಿ ಭಕ್ತರಿಗೆ ಉಳಿದುಕೊಳ್ಳಲು ಉಚಿತವಾಗಿ ನೀಡಲಾಗುತ್ತಿದೆ.

ಪ್ರತಿ ವರ್ಷ ಸರಿ ಸುಮಾರು 100 ಜನ ಸಾಯಿ ಭಕ್ತರನ್ನು ಉಚಿತವಾಗಿ ದೇವಾಲಯದ ವತಿಯಿಂದ ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
5ನೇ ಕಿಲೋಮೀಟರ್, ಭಟ್ರೇನಹಳ್ಳಿ, ವಿಜಯಪುರ ಹೋಬಳಿ.

ವಿಳಾಸ:
ಶ್ರೀ ಸಾಯಿನಾಥ ಜ್ಞಾನ ಮಂದಿರ
ಭಟ್ರೇನಹಳ್ಳಿ (ಮಳ್ಳೂರು), ವಿಜಯಪುರ ಹೋಬಳಿ, 
ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ-562 135, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಂ.ಏನ್.ವೆಂಕಟೇಶಪ್ಪ / ಶ್ರೀ.ಎಂ.ಏನ್.ನಾರಾಯಣಸ್ವಾಮಿ / ಶ್ರೀ.ಎಂ.ಅಮರನಾಥ / ಶ್ರೀ.ಕೆ.ಎಸ್.ಮುನಿನಾರಾಯಣಪ್ಪ / ಶ್ರೀ.ಲಕ್ಷ್ಮೀಪತಿ-ಅರ್ಚಕರು

ದೂರವಾಣಿ ಸಂಖ್ಯೆಗಳು:
+ 91 98450 73333 / +91 98805 07896 / +91 99455 15800 / +91 96117 29295

ಮಾರ್ಗಸೂಚಿ:
ಈ ದೇವಾಲಯವು ವಿಜಯಪುರ ಮತ್ತು ಶಿಡ್ಲಘಟ್ಟ ಮುಖ್ಯರಸ್ತೆಯಲ್ಲಿರುವ ಭಟ್ರೇನಹಳ್ಳಿ ಎಂಬ ಸ್ಥಳದಲ್ಲಿದೆ. ಈ ದೇವಾಲಯವು ವಿಜಯಪುರದಿಂದ 5 ಕಿಲೋಮೀಟರ್ ಮತ್ತು ದೇವನಹಳ್ಳಿಯಿಂದ 14 ಕಿಲೋಮೀಟರ್ ಅಂತರದಲ್ಲಿರುತ್ತದೆ. ಶಿಡ್ಲಘಟ್ಟಕ್ಕೆ ಹೋಗುವ ಎಲ್ಲ ಬಸ್ ಗಳು ಸಾಯಿಬಾಬಾ ಮಂದಿರದ ಎದುರುಗಡೆ ನಿಲ್ಲುತ್ತದೆ. ವಿಜಯಪುರ ಬಸ್ ನಿಲ್ದಾಣದಿಂದ ದೇವಾಲಯವು ಸುಮಾರು 3 ಕಿಲೋಮೀಟರ್ ಗಳ ಅಂತರದಲ್ಲಿದೆ.



ಕನ್ನಡ ಅನುವಾದ:ಶ್ರೀಕಂಠ ಶರ್ಮ

Monday, May 16, 2011

ಬೆಂಗಳೂರಿನ ಲಗ್ಗೆರೆ ಸಾಯಿಬಾಬಾ ಮಂದಿರದ ಪ್ರಥಮ ವಾರ್ಷಿಕೋತ್ಸವ, ಸಾಯಿ ರಾಜ ಗೋಪುರದ ಮಹಾ ಕುಂಭಾಭಿಷೇಕ ಮತ್ತು ಧುನಿ ಪ್ರತಿಷ್ಟಾಪನೆ - 18ನೇ ಆಗಸ್ಟ್ 2011 ರಿಂದ 21ನೇ ಆಗಸ್ಟ್ 2011 - ಕೃಪೆ: ಸಾಯಿಅಮೃತಧಾರಾ.ಕಾಂ

ಬೆಂಗಳೂರಿನ ಲಗ್ಗೆರೆ ಸಾಯಿಬಾಬಾ ಮಂದಿರವು ತನ್ನ ಪ್ರಥಮ ವಾರ್ಷಿಕೋತ್ಸವವನ್ನು 18ನೇ ಆಗಸ್ಟ್ 2011 ರಿಂದ 21ನೇ ಆಗಸ್ಟ್ 2011 ರವರೆಗೆ ಅತ್ಯಂತ ವಿಜೃಂಭಣೆಯಿಂದ ಆಚರಿಸಿಕೊಳ್ಳುತ್ತಿದೆ. ಈ ವಿಶೇಷ ಕಾರ್ಯಕ್ರಮದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ಕಾರ್ಯಕ್ರಮ ವಿವರಗಳು: 
18ನೇ ಆಗಸ್ಟ್ 2011 ರಿಂದ 21ನೇ ಆಗಸ್ಟ್ 2011 - ಸಾಯಿ ರಾಜಗೋಪುರದ ಮಹಾ ಕುಂಭಾಭಿಷೇಕ 
20ನೇ ಆಗಸ್ಟ್ 2011 ರಿಂದ 21ನೇ ಆಗಸ್ಟ್ 2011 -ಅಖಿಲ ಭಾರತ ಸಾಯಿ ಭಕ್ತರ ಸಮ್ಮೇಳನ 
18ನೇ ಆಗಸ್ಟ್ 2011 ರಿಂದ 21ನೇ ಆಗಸ್ಟ್ 2011 - ಪ್ರತಿದಿನ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು 
21ನೇ ಆಗಸ್ಟ್ 2011 - ಸಾಯಿ ಧುನಿಯ ಪ್ರತಿಷ್ಠಾಪನಾ ಕಾರ್ಯಕ್ರಮ 
21ನೇ ಆಗಸ್ಟ್ 2011 - ಉಚಿತ ಸಾಮುಹಿಕ ವಿವಾಹ ಕಾರ್ಯಕ್ರಮ 
21ನೇ ಆಗಸ್ಟ್ 2011 - ಅಂಗವಿಕಲರಿಗೆ ಉಚಿತ ಸಲಕರಣೆಗಳ ವಿತರಣಾ ಕಾರ್ಯಕ್ರಮ 
21ನೇ ಆಗಸ್ಟ್ 2011 - ಬೃಹತ್ ಸಾಯಿ ಪಲ್ಲಕ್ಕಿ ಉತ್ಸವ ಕಾರ್ಯಕ್ರಮ 
21ನೇ ಆಗಸ್ಟ್ 2011 - ಲಕ್ಷ ದೀಪೋತ್ಸವ ಕಾರ್ಯಕ್ರಮ 
22ನೇ ಆಗಸ್ಟ್ 2011 ರಿಂದ 9ನೇ ಅಕ್ಟೋಬರ್ 2011 ರವರೆಗೆ - ಅಖಂಡ "ಓಂ ಸಾಯಿ ಶ್ರೀ ಸಾಯಿ ಜಯ ಜಯ ಸಾಯಿ" ಸಾಯಿನಾಮ ಜಪ ಸಪ್ತ ಸಪ್ತಾಹ ಕಾರ್ಯಕ್ರಮ.

ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾಯಿ ಭಕ್ತರು ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಬೇಕೆಂದು ಸಾಯಿಮಂದಿರದ ಆಡಳಿತ ಮಂಡಳಿಯವರು ಈ ಮುಖಾಂತರ ಮನವಿ ಮಾಡಿಕೊಳ್ಳುತ್ತಾರೆ. 

ಕಾರ್ಯಕ್ರಮದ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಈ ಕೆಳಕಂಡ ವಿಳಾಸವನ್ನು ಸಂಪರ್ಕಿಸಬಹುದು: 

ಶ್ರೀ ಸಾಯಿಬಾಬಾ ಮಂದಿರ 
ಅಂತರರಾಷ್ಟ್ರೀಯ ಶಿರಡಿ ಸಾಯಿ ಸಂಸ್ಥೆ (ನೋಂದಣಿ)
ಕೆಂಪೇಗೌಡ ಬಡಾವಣೆ ಬಸ್ ನಿಲ್ದಾಣದ ಹಿಂಭಾಗ, 
ಲಗ್ಗೆರೆ ಹೊರ ವರ್ತುಲ ಮುಖ್ಯ ರಸ್ತೆ, 
ಬೆಂಗಳೂರು-560 058. ಕರ್ನಾಟಕ.
ದೂರವಾಣಿ ಸಂಖ್ಯೆ: +91 91412 78067 / +91 89046 64272 / +91 81239 21929 /+91 93411 55451
ಈ ಮೇಲ್ ವಿಳಾಸ: isssf.blore@gmail.com 
ಅಂತರ್ಜಾಲ ತಾಣ: http://www.isssf.org

ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, May 12, 2011

ಬೆಂಗಳೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ದುರ್ಗಾದೇವಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ, 7ನೇ ಅಡ್ಡರಸ್ತೆ, ರಾಮಮುರ್ತಿನಗರ, ಬೆಂಗಳೂರು-560 016, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  


ದೇವಾಲಯದ ವಿಶೇಷತೆಗಳು:

ದುರ್ಗಾದೇವಿಯ ಆಲಯವನ್ನು 1995 ರಲ್ಲಿ ಪ್ರಪ್ರಥಮವಾಗಿ ಪ್ರಾರಂಭಿಸಲಾಯಿತು. ನಂತರ 9ನೇ ಜೂನ್ 2009 ರಲ್ಲಿ ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ದೇವಾಲಯದಲ್ಲಿ ಶಿರಡಿ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಯಿತು.

ದೇವಾಲಯದಲ್ಲಿ ಅಮೃತ ಶಿಲೆಯ ಶಿರಡಿ ಸಾಯಿಬಾಬಾರವರ ವಿಗ್ರಹ, ದ್ವಾರಕಾಮಾಯಿ ಸಾಯಿಬಾಬಾ ವಿಗ್ರಹ, ಕಪ್ಪು ಶಿಲೆಯ ದುರ್ಗಾ ದೇವಿ (ಒಂದು ದೊಡ್ಡ ವಿಗ್ರಹ ಮತ್ತೊಂದು ಸಣ್ಣ ವಿಗ್ರಹ), ಗಣೇಶ, ಸುಬ್ರಮಣ್ಯ, ನವಗ್ರಹ, ನಾಗದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.










ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ಆರತಿಯ ಸಮಯ:
ಬೆಳಿಗ್ಗೆ 6:00 ಘಂಟೆಗೆ
ಸಂಜೆ 6:30 ಘಂಟೆಗೆ

ವಿಶೇಷ ಉತ್ಸವದ ದಿನಗಳು:

  1. ಪ್ರತಿ ವರ್ಷದ 1ನೇ ಜನವರಿ.
  2. ಶ್ರೀರಾಮನವಮಿ.
  3. ಗುರುಪೂರ್ಣಿಮೆ.
  4. ವಿಜಯದಶಮಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:

ಸ್ಥಳ:
ರಾಮಮುರ್ತಿನಗರ ಚರ್ಚ್ ಬಳಿ

ವಿಳಾಸ:
ಶ್ರೀ ದುರ್ಗಾದೇವಿ ಮತ್ತು ಶ್ರೀ ಶಿರಡಿ ಸಾಯಿಬಾಬಾ ಮಂದಿರ, 
7ನೇ ಅಡ್ಡರಸ್ತೆ, ರಾಮಮುರ್ತಿನಗರ,
ಬೆಂಗಳೂರು-560 016, ಕರ್ನಾಟಕ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಅನಸೂಯ ನಾಗಪ್ಪ

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ:
+91 98802 15771 

ಮಾರ್ಗಸೂಚಿ:
ರಾಮಮುರ್ತಿನಗರದ ಚರ್ಚ್ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ. ಮಜೆಸ್ಟಿಕ್, ಮಾರ್ಕೆಟ್ ಮತ್ತು ಶಿವಾಜಿನಗರದಿಂದ ರಾಮಮುರ್ತಿ ನಗರಕ್ಕೆ ಒಳ್ಳೆಯ ಬಸ್ ಸೌಕರ್ಯವನ್ನು ಕಲ್ಪಿಸಲಾಗಿದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

Tuesday, May 10, 2011

ಬಹುಮುಖ ಪ್ರತಿಭೆಯ ಸಾಯಿ ಬಂಧು ದೀಪಕ್ ಶರ್ಮ ಕುಲುವಿ - ಕೃಪೆ: ಸಾಯಿಅಮೃತಧಾರಾ.ಕಾಂ  


ಶ್ರೀ.ದೀಪಕ್ ಶರ್ಮ ಕುಲುವಿಯವರು ದೆಹಲಿಯ ಪ್ರಸಿದ್ದ ಬರಹಗಾರರು, ಗಾಯಕರು, ವ್ಯಂಗ್ಯಚಿತ್ರಕಾರರು  ಮತ್ತು ಸಂಗೀತ ಸಂಯೋಜಕರಾಗಿದ್ದಾರೆ. ಇವರು 3ನೇ ಮೇ 1962 ರಂದು ಹಿಮಾಚಲಪ್ರದೇಶದ ಧರ್ಮಶಾಲಾದಲ್ಲಿ ಜನಿಸಿದರು. ಇವರ ತಂದೆ ಶ್ರೀ.ಜೈದೇವ್ ವಿದ್ರೋಹಿ ಮತ್ತು ತಾಯಿ ಶ್ರೀಮತಿ.ವಿದ್ಯಾದೇವಿ. ಇವರು ಸಂಗೀತಗಾರರು ಮತ್ತು ಬರಹಗಾರರ ವಂಶದಲ್ಲಿ ಜನಿಸಿದರು. ಇವರ ತಂದೆಯವರು ಪ್ರಸಿದ್ದ ಬರಹಗಾರರು, ವರದಿಗಾರರು, ಕುಲು ಪ್ರೆಸ್ ಕ್ಲಬ್ ನ ಮುಖ್ಯ ಸಲಹೆಗಾರರು ಮತ್ತು ಹಿಮಾಚಲಪ್ರದೇಶ ಬರಹಗಾರ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರು ಹಿಮಾಚಲಪ್ರದೇಶ ವಿಶ್ವವಿದ್ಯಾನಿಲಯದಿಂದ ಪದವಿಯನ್ನು ಪಡೆದಿದ್ದಾರೆ. ಇಲ್ಲಿಯವರೆಗೂ ಇವರು 250 ಕ್ಕೂ ಹೆಚ್ಚು ಹಿಂದಿ ಮತ್ತು ಉರ್ದು ಗಜಲ್ ಗಳನ್ನು, 1000 ಹಿಂದಿ, ಉರ್ದು ಮತ್ತು ಕಂಗ್ರಿ ಶೇರ್ ಗಳನ್ನು, 500 ಹಿಂದಿ ಕಥೆಗಳನ್ನು, 100 ಹಿಂದಿ ಮತ್ತು ಪಂಜಾಬಿ ಹಾಡುಗಳನ್ನು, 500 ಹಿಂದಿ, ಪಂಜಾಬಿ, ಕುಲುವಿ ಮತ್ತು ಕಂಗ್ರಿ ಕವನಗಳನ್ನು, 150 ಹಿಂದಿ ಪತ್ರಿಕಾ ಬರಹಗಳನ್ನು, 500 ಹಿಂದಿ  ಭಜನೆಗಳನ್ನು, 40 ಆಂಗ್ಲ ಕವನಗಳನ್ನು, 35 ಆಂಗ್ಲ ಮಕ್ಕಳ ಕವಿತೆಗಳನ್ನು, 100 ನುಡಿ ಮುತ್ತುಗಳನ್ನು, 120 ಹಿಂದಿ ಮಕ್ಕಳ ಕವಿತೆಗಳನ್ನು, 350 ಆಂಗ್ಲ ಮತ್ತು ಹಿಂದಿ ವ್ಯಂಗ್ಯಚಿತ್ರಗಳನ್ನು ಮತ್ತು 10 ಹಿಂದಿ, ಉರ್ದು ಕವಾಲಿ ಮಾದರಿಯ ಸೂಫಿಯಾನ ಗೀತೆಗಳನ್ನು ರಚಿಸಿದ್ದಾರೆ.

ಅಷ್ಟೇ ಅಲ್ಲದೇ, ಶ್ರೀ.ದೀಪಕ್ ಶರ್ಮ ಕುಲುವಿಯವರು 1000 ಕ್ಕೂ ಹೆಚ್ಚು ಭಜನೆ, ಗಜಲ್, ಪಂಜಾಬಿ ಮತ್ತು ಹಿಂದಿ ಗೀತೆಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು 3000 ಕ್ಕೂ ಹೆಚ್ಚು  ವಿವಿಧ ಪ್ರಕಾರದ ಬರಹಗಳನ್ನು ರಚಿಸಿದ್ದು ಅವುಗಳು ವಿವಿಧ ವೃತ್ತ ಪತ್ರಿಕೆಗಳು, ಮಾಸ ಪತ್ರಿಕೆಗಳು, ಪುಸ್ತಕಗಳಲ್ಲಿ ಪ್ರಕಟವಾಗಿವೆ. ಅಲ್ಲದೆ, 22 ಸಣ್ಣ ಮತ್ತು ದೊಡ್ಡ ಪುಸ್ತಕಗಳನ್ನು  ಬರೆದಿದ್ದು ಅವುಗಳು ಅಂತರ್ಜಾಲದಲ್ಲಿ ಲಭ್ಯವಿರುತ್ತದೆ. ನೇರ ಅಂತರ್ಜಾಲ ಮಾಸಪತ್ರಿಕೆಯಾದ "ಜರ್ನಲಿಸ್ಟ್ ಟುಡೇ ನೆಟ್ ವರ್ಕ್" ನ ಪತ್ರಕರ್ತರಾಗಿದ್ದಾರೆ. ಜಸ್ಟ್ ಇಂಡಿಯಾ ಮಾಸಪತ್ರಿಕೆಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. "ಸ್ವತಂತ್ರ ರೈಟರ್" ನಿಯತಕಾಲಿಕೆಯ ವರದಿಗಾರರಾಗಿದ್ದಾರೆ. ಇವರು ಚಿತ್ರಕಲಾವಿದರೂ ಕೂಡ ಆಗಿದ್ದು 300 ವಿವಿಧ ಬಗೆಯ ವರ್ಣ ಚಿತ್ರಗಳು, ತೈಲ ಚಿತ್ರಗಳು ಮತ್ತು ಇತರ ಪ್ರಕಾರದ ಚಿತ್ರಗಳನ್ನು ರಚಿಸಿದ್ದಾರೆ. 
ಶ್ರೀ.ದೀಪಕ್ ಶರ್ಮ ಕುಲುವಿಯವರು ಹಿರಿಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಪ್ರತಿಷ್ಟಿತ ಲಾಯಿಡ್ ಇನ್ಸುಲೆಶನ್ಸ್ (ಇಂಡಿಯಾ) ಲಿಮಿಟೆಡ್, ನವದೆಹಲಿ ಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಪ್ರಸಿದ್ದ ಸಾಯಿ ಭಜನ ಗಾಯಕಿ ಶ್ರೀಮತಿ.ಕುಮುದ್ ಶರ್ಮರವರನ್ನು ವಿವಾಹವಾಗಿ, ಮಗ ಉದಯೋನ್ಮುಖ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ   ಶ್ರೀ.ದೀಪಾಂಕರ್ ಶರ್ಮ ಮತ್ತು ಮಗಳು ಉದಯೋನ್ಮುಖ ಕಥಕ್ ನೃತ್ಯಪಟು ಕುಮಾರಿ.ದೀಪಾಲಿ ಶರ್ಮರವರೊಂದಿಗೆ ನವದೆಹಲಿಯ ತಮ್ಮ ನಿವಾಸದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರಿಗೆ 2009 ರಲ್ಲಿ ನವದೆಹಲಿಯ ಅಖಿಲ ಭಾರತ ಸ್ವತಂತ್ರ ಲೇಖಕ ಮಂಚದ ವತಿಯಿಂದ ನೀಡುವ ಸಾಹಿತ್ಯ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ಜೆ-1/385, ಡಿಡಿಎ ಫ್ಲಾಟ್ಸ್, ಕಲ್ಕಾಜಿ, ನವದೆಹಲಿ-110 019.ಭಾರತ.

ದೂರವಾಣಿ ಸಂಖ್ಯೆಗಳು: 
+91 91362 11486  /  +91 11 3088 2881

ಈ ಮೇಲ್ ವಿಳಾಸ:

ಅಂತರ್ಜಾಲ ತಾಣ: 

ಅಲ್ಬಮ್ ಗಳು: 
ಅಂತರ್ಜಾಲ ತಾಣವಾದ ಫೇಸ್ ಬುಕ್ ನಲ್ಲಿ "ದೀಪಕ್ ಕುಮಾರ್ ಕುಲುವಿ" ಮತ್ತು "ದೀಪ್ಕುಮುದ್ ಸುರ್ ಸಂಗಮ್" ಎಂಬಲ್ಲಿ ಇವರ ಭಜನೆಯ ವೀಡಿಯೋಗಳನ್ನು ನೋಡಬಹುದು. 

ಭಜನೆಗಳು: 
ಇವರ ಭಜನೆಯ ವೀಡಿಯೋಗಳನ್ನು ಫೇಸ್ ಬುಕ್, ಯು ಟ್ಯೂಬ್, ಹಿಂಧಾರಾ ಬ್ಲಾಗ್ ನಲ್ಲಿ ನೋಡಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ
ಸಾಯಿ ಭಜನ ಗಾಯಕಿ - ಶ್ರೀಮತಿ.ಕುಮುದ್ ಶರ್ಮ - ಕೃಪೆ: ಸಾಯಿಅಮೃತಧಾರಾ.ಕಾಂ



ದೆಹಲಿಯ ಪ್ರಸಿದ್ದ ಸಾಯಿ ಭಜನ ಗಾಯಕಿಯಾದ ಶ್ರೀಮತಿ.ಕುಮುದ್ ಶರ್ಮರವರು 15ನೇ ಜೂನ್ 1966 ರಂದು ಹಿಮಾಚಲ ಪ್ರದೇಶದ ಕುಲುವಿನಲ್ಲಿ ಜನಿಸಿದರು. ಇವರ ತಂದೆ ದಿವಂಗತ ಶ್ರೀ.ಎಫ್.ಸಿ.ಬಾಪಾ ಮತ್ತು ತಾಯಿ ಶ್ರೀಮತಿ.ಯಶೋದಾ ದೇವಿ. ಪ್ರಸ್ತುತ ಇವರು ಖ್ಯಾತ ಸಾಯಿ ಬರಹಗಾರರಾದ ಶ್ರೀ.ದೀಪಕ್ ಶರ್ಮ ಕುಲುವಿಯವರನ್ನು ವಿವಾಹವಾಗಿ, ತಮ್ಮ ಪುತ್ರ  ಉದಯೋನ್ಮುಖ  ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಶ್ರೀ.ದೀಪಾಂಕರ್ ಶರ್ಮ ಮತ್ತು ಉದಯೋನ್ಮುಖ ಕಥಕ್ ನೃತ್ಯಪಟುವಾದ ಮಗಳು ಕುಮಾರಿ.ದೀಪಾಲಿ ಶರ್ಮರವರೊಂದಿಗೆ ನವದೆಹಲಿಯಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ. 

ಶ್ರೀಮತಿ.ಕುಮುದ್ ಶರ್ಮರವರು ಹಿಮಾಚಲ ಪ್ರದೇಶ ವಿಶ್ವವಿದ್ಯಾನಿಲಯದಿಂದ ಬಿ.ಎ.ಪದವಿಯನ್ನು ಪಡೆದಿದ್ದಾರೆ. ಅಲ್ಲದೆ, ಗಂಧರ್ವ ಮಹಾವಿದ್ಯಾಲಯದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತರಬೇತಿಯನ್ನು ಪಡೆದಿದ್ದಾರೆ. ದೆಹಲಿಯ ಸುತ್ತ ಮುತ್ತ ಅನೇಕ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡುತ್ತಿರುವುದಷ್ಟೇ ಅಲ್ಲದೆ ಶಿಕ್ಷಕಿಯಾಗಿ ಮತ್ತು ಸಂಗೀತ ಶಿಕ್ಷಕಿಯಾಗಿ ಕಳೆದ 25 ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದಾರೆ. 

ಶ್ರೀಮತಿ.ಕುಮುದ್ ಶರ್ಮ ಅವರು ನೃತ್ಯ, ಬರವಣಿಗೆ ಮತ್ತು ಭಕ್ತಿ ಗೀತೆಗಳ ಗಾಯನದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ್ದಾರೆ. ಇ.ಟಿ.ಸಿ.ಪಂಜಾಬ್ ವಾಹಿನಿಯಲ್ಲಿ ಪ್ರಸಾರವಾದ "ಕಬಾಬ್ ಕಾರ್ನರ್" ಕಾರ್ಯಕ್ರಮದಲ್ಲಿ ಕೂಡ ಭಾಗವಹಿಸಿದ್ದಾರೆ. 

ಶ್ರೀ.ದೀಪಕ್ ಶರ್ಮ ಕುಲುವಿಯವರು ರಚಿಸಿ, ಸಂಗೀತ ನಿರ್ದೇಶನವನ್ನು ಮಾಡಿರುವ ಶ್ರೀಮತಿ.ಕುಮುದ್ ಶರ್ಮರವರ ಪ್ರಥಮ ಆಲ್ಬಮ್ "ಮಾತಾ ದಿಯಾ ಚುನಿಯಾನ್" ಅತಿ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. 

ಶ್ರೀಮತಿ.ಕುಮುದ್ ಶರ್ಮರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ಕೊಡಲಾಗಿದೆ. 

ವಿಳಾಸ: 
ಜೆ-1/385, ಡಿಡಿಎ ಫ್ಲಾಟ್ಸ್, ಕಲ್ಕಾಜಿ, ನವದೆಹಲಿ-110 019.ಭಾರತ.

ದೂರವಾಣಿ ಸಂಖ್ಯೆಗಳು: 
+91 93500 78399 / +91 92101 92800

ಈ ಮೇಲ್ ವಿಳಾಸ: 

ಅಂತರ್ಜಾಲ ತಾಣ: 

ಅಲ್ಬಮ್ ಗಳು: 
ಅಂತರ್ಜಾಲ ತಾಣವಾದ ಫೇಸ್ ಬುಕ್ ನಲ್ಲಿ "ದೀಪಕ್ ಕುಮಾರ್ ಕುಲುವಿ" ಮತ್ತು "ದೀಪ್ಕುಮುದ್ ಸುರ್ ಸಂಗಮ್" ಎಂಬಲ್ಲಿ ಇವರ ಭಜನೆಯ ವೀಡಿಯೋಗಳನ್ನು ನೋಡಬಹುದು. 

ಭಜನೆಗಳು: 
ಇವರ ಭಜನೆಯ ವೀಡಿಯೋಗಳನ್ನು ಫೇಸ್ ಬುಕ್, ಯು ಟ್ಯೂಬ್, ಹಿಂಧಾರಾ ಬ್ಲಾಗ್ ನಲ್ಲಿ ನೋಡಬಹುದು. 

ಕನ್ನಡ ಅನುವಾದ: ಶ್ರೀಕಂಠ ಶರ್ಮ