ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಮುಂದಿನ ತಿಂಗಳ 2ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ ಶ್ರೀ ಸಾಯಿಬಾಬಾರವರ 96ನೇ ಪುಣ್ಯತಿಥಿ ಉತ್ಸವವನ್ನು ಹಮ್ಮಿಕೊಳ್ಳುತ್ತಿದೆ. ಅದರ ಆಹ್ವಾನ ಪತ್ರಿಕೆಯನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ:
ಎಲ್ಲಾ ಸಾಯಿ ಭಕ್ತರೂ ಹೆಚ್ಚಿನ ಸಂಖ್ಯೆಯಲ್ಲಿ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಶ್ರೀ ಸಾಯಿಬಾಬಾರವರ ಕೃಪೆಗೆ ಪಾತ್ರರಾಗಿ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಈ ಮೂಲಕ ವಿನಂತಿ ಮಾಡಿದ್ದಾರೆ.
ಶ್ರೀ ಸಾಯಿಬಾಬಾರವರ ಮಹಾಸಮಾಧಿ ಉತ್ಸವವಿರುವ ಕಾರಣ 12ನೇ ಅಕ್ಟೋಬರ್ 2014, ಗುರುವಾರದಿಂದ 4ನೇ ಅಕ್ಟೋಬರ್ 2014, ಶನಿವಾರದವರೆಗೆ ಯಾವುದೇ ವಿಐಪಿ ದರ್ಶನ/ಆರತಿ ದರ್ಶನ ಪಾಸ್ ಗಳನ್ನು ನೀಡಲಾಗುವುದಿಲ್ಲ. ಅಲ್ಲದೇ, ಶ್ರೀ ಸಾಯಿ ಸತ್ಯನಾರಾಯಣ ವ್ರತ ಹಾಗೂ ಅಭಿಷೇಕ ಪೂಜೆಗಳ ಸೇವಾ ಚೀಟಿಗಳನ್ನು ಸಹ ನೀಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಸಾಯಿ ಭಕ್ತರು ಶ್ರೀ ಸಾಯಿಬಾಬಾ ಸಂಸ್ಥಾನದ ಆಡಳಿತ ಕಚೇರಿಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.
ಕಾರ್ಯಕ್ರಮದ ವಿವರಗಳು:
02-10-2014; ಗುರುವಾರ - ಮೊದಲ ದಿನ
ಬೆಳಿಗ್ಗೆ:
4.30 : ಕಾಕಡಾ ಆರತಿ
5.00 : ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ.
5.15 : ದ್ವಾರಕಾಮಾಯಿಯಲ್ಲಿ ಶ್ರೀ ಸಾಯಿ ಸಚ್ಚರಿತ್ರೆಯ ಅಖಂಡ ಪಾರಾಯಣದ ಪ್ರಾರಂಭ
5.20 : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ.
ಮಧ್ಯಾನ್ಹ:
12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ.
ಸಾಯಂಕಾಲ:
4.00 -6.00 : ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಕೀರ್ತನೆಯ ಆರಂಭ.
6.15 : ಧೂಪಾರತಿ.
ರಾತ್ರಿ:
7.30-10.30 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15 : ಶಿರಡಿ ಗ್ರಾಮದ ಸುತ್ತಾ ಬಾಬಾರವರ ಪಲ್ಲಕ್ಕಿ ಉತ್ಸವದ ಮೆರವಣಿಗೆ.
10.30 : ಶೇಜಾರತಿ
ಅಖಂಡ ಪಾರಾಯಣದ ಅಂಗವಾಗಿ ದ್ವಾರಕಾಮಾಯಿಯನ್ನು ರಾತ್ರಿಯಿಡೀ ತೆರೆದಿಡಲಾಗುತ್ತದೆ.
3-10-2014; ಶುಕ್ರವಾರ (ಮುಖ್ಯ ದಿವಸ) - ಎರಡನೇ ದಿನ
ಬೆಳಿಗ್ಗೆ:
4.30 : ಕಾಕಡಾ ಆರತಿ
5.00 : ದ್ವಾರಕಾಮಾಯಿಯಲ್ಲಿ ಅಖಂಡ ಪಾರಾಯಣದ ಸಮಾಪ್ತಿ. ಶ್ರೀ ಸಾಯಿಬಾಬಾರವರ ಭಾವಚಿತ್ರ ಹಾಗೂ ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೆರವಣಿಗೆ.
5.15 : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ.
9.00 : "ಭಿಕ್ಷಾ ಜೋಳಿ" ಕಾರ್ಯಕ್ರಮ.
10.00 : ಕೀರ್ತನೆ ಕಾರ್ಯಕ್ರಮ.
10.30 : ಆರಾಧನಾ ವಿಧಿ ವಿಧಾನಗಳು ಹಾಗೂ ಪೂಜೆ.

5.00 : ಮೆರವಣಿಗೆ ಹಾಗೂ ಖಂಡೋಬ ಮಂದಿರದ ಬಳಿ ಸೀಮೋಲ್ಲಂಘನ ಕಾರ್ಯಕ್ರಮ.
6.15 : ಧೂಪಾರತಿ
ರಾತ್ರಿ:
7.30-10.00 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
9.15 : ಶಿರಡಿ ಗ್ರಾಮದ ಸುತ್ತಾ ಶ್ರೀ ಸಾಯಿಬಾಬಾರವರ ರಥೋತ್ಸವ.
ಮುಖ್ಯ ದಿವಸವಾದ ಕಾರಣ , ಸಮಾಧಿ ಮಂದಿರ ರಾತ್ರಿಯಿಡಿ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ರಾತ್ರಿ 11.00 ರಿಂದ ಮಾರನೇ ದಿನ ಬೆಳಗಿನ ಜಾವ 5.00 ರವರೆಗೆ ಸಮಾಧಿ ಮಂದಿರದ ಹಿಂಭಾಗದ ವೇದಿಕೆಯ ಮೇಲೆ ಹಲವಾರು ಸಾಯಿ ಭಕ್ತರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು.
4-10-2014; ಶನಿವಾರ ( ಕೊನೆಯ ದಿವಸ) - ಮೂರನೇ ದಿನ
ಬೆಳಿಗ್ಗೆ:
5.05 : ಭಗವಾನ್ ಶ್ರೀ ಸಾಯಿಬಾಬಾರವರಿಗೆ ಮಂಗಳಸ್ನಾನ. ನಂತರ ದರ್ಶನ ಆರಂಭ.
6.45 : ಗುರುಸ್ಥಾನದಲ್ಲಿ ರುದ್ರಾಭಿಷೇಕ ಕಾರ್ಯಕ್ರಮ.
10:00 : ಗೋಪಾಲ ಕಾಲ ಮತ್ತು ದಹಿ ಹಂಡಿ ಕಾರ್ಯಕ್ರಮ.
ಮಧ್ಯಾನ್ಹ:
12.30 : ಮಧ್ಯಾನ್ಹ ಆರತಿ. ನಂತರ ತೀರ್ಥ ಪ್ರಸಾದ ವಿನಿಯೋಗ.
ಸಾಯಂಕಾಲ:
6.15 : ಧೂಪಾರತಿ
ರಾತ್ರಿ:
7.30 -10.00 : ಸಾಯಿನಗರದ ಬೃಹತ್ ವೇದಿಕೆಯ ಮೇಲೆ ಆಹ್ವಾನಿತ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ
10.30 : ಶೇಜಾರತಿ.
ಈ ವರ್ಷದ ಉತ್ಸವವನ್ನು ಯಶಸ್ವಿಯಾಗಿ ಆಚರಿಸುವ ನಿಟ್ಟಿನಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಅದ ಶ್ರೀ.ಶಶಿಕಾಂತ್ ಕುಲಕರ್ಣಿ, ತ್ರಿ-ಸದಸ್ಯ ಸಮಿತಿಯ ಸದಸ್ಯರು ಹಾಗೂ ಮುಖ್ಯ ಜಿಲ್ಲಾ ನ್ಯಾಯಾಧೀಶರಾದ ಶ್ರೀ.ಅನಿಲ್ ಕಾವಡೆಯವರ ಮಾರ್ಗದರ್ಶನದಲ್ಲಿ ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ, ಎಲ್ಲಾ ನಿರ್ವಾಹಕ ಅಧಿಕಾರಿಗಳೂ, ಎಲ್ಲಾ ವಿಭಾಗಗಳ ಮುಖ್ಯಸ್ಥರೂ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಎಲ್ಲಾ ನೌಕರರೂ ಬಹಳ ಶ್ರಮವಹಿಸಿ ಮಾಡಿರುತ್ತಾರೆ ಎಂದು ಕಾರ್ಯಕಾರಿ ಅಧಿಕಾರಿ ಹಾಗೂ ಉಪ ವಿಭಾಗಾಧಿಕಾರಿಗಳಾದ ಶ್ರೀ.ಕುಂದನ್ ಕುಮಾರ್ ಸೋನಾವಾನೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:
Post a Comment