Monday, October 1, 2012

ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, ಶ್ರೀ ಶಿರಡಿ ಸಾಯಿ ದೇವಸ್ಥಾನ ಕಮಿಟಿ (ನೋಂದಣಿ), ಕೊತ್ತಪೇಟ ಹತ್ತಿರ, ಆರ್.ಎಸ್.ರಸ್ತೆ, ರಾಮನಗರ, ಧರ್ಮಾವರಂ - 515 672, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಧರ್ಮಾವರಂ ಪಟ್ಟಣದ ಕೊತ್ತಪೇಟಾ ಬಳಿಯಿರುವ ಆರ್.ಎಸ್. ರಸ್ತೆಯಲ್ಲಿರುವ ರಾಮನಗರದಲ್ಲಿ ಇರುತ್ತದೆ.  ದೇವಾಲಯವು ರೈಲ್ವೇ ಕ್ವಾರ್ಟರ್ಸ್ ಹತ್ತಿರ ಹಾಗೂ ಧರ್ಮಾವರಂ  ರೈಲು ನಿಲ್ದಾಣದಿಂದ ನಡಿಗೆಯ ಅಂತರದಲ್ಲಿ ಇರುತ್ತದೆ.

ದೇವಾಲಯವನ್ನು ರೈಲ್ವೇ ಇಲಾಖೆಯವರು ದೇವಾಲಯದ ಟ್ರಸ್ಟ್ ಗೆ ಗುತ್ತಿಗೆ ನೀಡಿರುವ ಭೂಮಿಯಲ್ಲಿ ನಿರ್ಮಾಣ ಮಾಡಲಾಗಿದೆ.
 
ದೇವಾಲಯದ ಉದ್ಘಾಟನೆಯನ್ನು 25ನೇ ನವೆಂಬರ್ 1998 ರಂದು ದೇವಾಲಯದ ಟ್ರಸ್ಟ್ ನ ಸದಸ್ಯರು ಸಾವಿರಾರು ಸ್ಥಳೀಯ ಸಾಯಿ ಭಕ್ತರ  ಸಮ್ಮುಖದಲ್ಲಿ  ನೆರವೇರಿಸಿರುತ್ತಾರೆ.

ಶ್ರೀ.ಜಿ.ಶಿವಸುಬ್ರಮಣ್ಯಮ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯ ಪದಾಧಿಕಾರಿಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 2-1/2 ಅಡಿ ಎತ್ತರದ ಸುಂದರ ಬಿಳಿ ಸಿಮೆಂಟ್ ನಲ್ಲಿ ತಯಾರಿಸಿರುವ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದಲ್ಲಿ ಕಪ್ಪು ಶಿಲೆಯ ಶಿವಲಿಂಗ ಹಾಗೂ ಅದರ ಎದುರುಗಡೆ ನಂದಿಯ ವಿಗ್ರಹವನ್ನು ಸಹ ಪ್ರತಿಷ್ಟಾಪಿಸಲಾಗಿದೆ.

ಪವಿತ್ರ ಬೇವಿನ ಮರದ ಅಡಿಯಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.

ಸಾಯಿಬಾಬಾ ದೇವಾಲಯದ ಗರ್ಭಗುಡಿಯ ಎದುರುಗಡೆಯಿರುವ ಸ್ಥಳದಲ್ಲಿ ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ ಹಾಗೂ ಮರದ ಪಾದುಕೆಗಳನ್ನು ಇರಿಸಲಾಗಿದೆ.










ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 4:00 ರಿಂದ ರಾತ್ರಿ 9:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 4:30 ಗಂಟೆ.
ಮಧ್ಯಾನ್ಹ ಆರತಿ: 12:00 ಗಂಟೆ.
ಧೂಪಾರತಿ     : 6:30 ಗಂಟೆ.
ಶೇಜಾರತಿ      : 8:30 ಗಂಟೆ.

ಪ್ರತಿದಿನ ಬೆಳಿಗ್ಗೆ 7 ಗಂಟೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಹಾಗೂ ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ ಒಂದು ದೇವರಿಗೆ 150/- ರೂಪಾಯಿಗಳು.

ಪ್ರತಿ ತಿಂಗಳ ಬಹುಳ ಏಕಾದಶಿಯ ದಿನದಂದು ದೇವಾಲಯದಲ್ಲಿ ಸಾಯಿ ಸತ್ಯವ್ರತವನ್ನು ಬೆಳಿಗ್ಗೆ 9:00 ರಿಂದ ಮಧ್ಯಾನ್ಹ 12:00 ಗಂಟೆಯವರೆಗೆ ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 58/- ರೂಪಾಯಿಗಳು.

ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:00 ರಿಂದ ಮಧ್ಯಾನ್ಹ 12:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 58/- ರೂಪಾಯಿಗಳು.

ವಿಶೇಷ ಉತ್ಸವದ ದಿನಗಳು:

ಶ್ರೀರಾಮನವಮಿ - ರಥೋತ್ಸವ ಹಮ್ಮಿಕೊಳ್ಳಲಾಗುತ್ತದೆ.
ಗುರುಪೂರ್ಣಿಮೆ - ದೇವಾಲಯದ ವಾರ್ಷಿಕೋತ್ಸವ. ಅನ್ನದಾನವನ್ನು ಮಾಡಲಾಗುತ್ತದೆ. 
ಗೋಕುಲಾಷ್ಟಮಿ - ಗೋಪಾಲಕಾಲ ಕಾರ್ಯಕ್ರಮ ನಡೆಸಲಾಗುತ್ತದೆ .
ವಿಜಯದಶಮಿ - ದೀಪೋತ್ಸವ ಕಾರ್ಯಕ್ರಮ ನಡೆಸಲಾಗುತ್ತದೆ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:

ದೇವಾಲಯದಲ್ಲಿ ಪ್ರತಿದಿನ  ಮಧ್ಯಾನ್ಹ ಆರತಿಯ ನಂತರ ಬಡ ಬಗ್ಗರಿಗೆ ಅನ್ನದಾನ ಮಾಡಲಾಗುತ್ತಿದೆ.

ದೇವಾಲಯದ ಆವರಣದಲ್ಲಿ ಪ್ರತಿದಿನ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ತಪಾಸಣೆಯನ್ನು ಮಾಡಿ ಔಷಧಿಯನ್ನು ಸ್ಥಳೀಯ ಸಾಯಿಬಂಧು ಡಾಕ್ಟರ್ ಗಳು ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ದೇಣಿಗೆಗೆ ಮನವಿ:

ಶ್ರೀ ಶಿರಡಿ ಸಾಯಿ ದೇವಸ್ಥಾನ ಕಮಿಟಿ (ನೋಂದಣಿ) ಯು ದೇವಾಲಯದ ದಿನನಿತ್ಯದ ನಿರ್ವಹಣೆಗಾಗಿ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಸಾಯಿ ಭಕ್ತರಿಂದ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು ಹಣ / ಚೆಕ್ / ಡಿಡಿ ರೂಪದಲ್ಲಿ "ಶ್ರೀ ಶಿರಡಿ ಸಾಯಿ ದೇವಸ್ಥಾನ ಕಮಿಟಿ (ನೋಂದಣಿ)", ಉಳಿತಾಯ ಖಾತೆ ಸಂಖ್ಯೆ:21578, ಆಂಧ್ರ ಪ್ರಗತಿ ಗ್ರಾಮೀಣ ಬ್ಯಾಂಕ್, ಧರ್ಮಾವರಂ ಶಾಖೆ ಇವರಿಗೆ ಸಂದಾಯವಾಗುವಂತೆ ಕಳುಹಿಸಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ರೈಲ್ವೇ ಕ್ವಾರ್ಟರ್ಸ್ ಹತ್ತಿರ, ಆರ್.ಎಸ್.ರಸ್ತೆ, ರಾಮನಗರ, ಧರ್ಮಾವರಂ.
.

ವಿಳಾಸ:
ಶ್ರೀ ಶಿರಡಿ ಸಾಯಿಬಾಬಾ ಮಂದಿರ
ಶ್ರೀ ಶಿರಡಿ ಸಾಯಿ ದೇವಸ್ಥಾನ ಕಮಿಟಿ (ನೋಂದಣಿ),
ಕೊತ್ತಪೇಟ ಹತ್ತಿರ, ಆರ್.ಎಸ್.ರಸ್ತೆ, ರಾಮನಗರ,
ಧರ್ಮಾವರಂ - 515 672,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಜಿ.ಶಿವಸುಬ್ರಮಣ್ಯಮ್ / ಶ್ರೀ.ಡಿ.ಶಿವಶಂಕರ್ / ಶ್ರೀ.ಎಸ್.ನಾಗಭೂಷಣ

ದೂರವಾಣಿ ಸಂಖ್ಯೆಗಳು:
+ 91 94409 29637 / +91 94930 49300  


ಮಾರ್ಗಸೂಚಿ: 
ಧರ್ಮಾವರಂ ರೈಲು ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ರೈಲ್ವೇ ಕ್ವಾರ್ಟರ್ಸ್ ಹತ್ತಿರ ಹಾಗೂ ಧರ್ಮಾವರಂ  ರೈಲು ನಿಲ್ದಾಣದಿಂದ ನಡಿಗೆಯ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment