Sunday, October 14, 2012

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಧಾಮ, ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ, ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆಯಲ್ಲಿರುವ ಸೊಂಡೇಕೊಪ್ಪದಲ್ಲಿ ಇರುತ್ತದೆ.  ದೇವಾಲಯವು ಶ್ರೀ ಚೆನ್ನಕೇಶವ ದೇವಾಲಯದ ಎದುರುಗಡೆಯ ರಸ್ತೆಯಲ್ಲಿದ್ದು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ 0.5 ಕಿಲೋಮೀಟರ್ , ತಾವರೆಕೆರೆ ಗ್ರಾಮದಿಂದ 7 ಕಿಲೋಮೀಟರ್ ಹಾಗೂ ನೆಲಮಂಗಲ ಗ್ರಾಮದಿಂದ 9  ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ದೇವಾಲಯವನ್ನು ಸ್ಥಳೀಯ ಗ್ರಾಮಸ್ಥರಾದ ಶ್ರೀ.ಬೆಟ್ಟಯ್ಯನವರು ದಾನವಾಗಿ ನೀಡಿರುವ 17 ಗುಂಟೆ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಭೂಮಿಪೂಜೆಯನ್ನು 27ನೇ ಜುಲೈ 2009 ರಂದು ನೆರವೇರಿಸಲಾಗಿರುತ್ತದೆ.

ದೇವಾಲಯದ ಉದ್ಘಾಟನೆಯನ್ನು 29ನೇ ಫೆಬ್ರವರಿ 2012 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಪುರೋಹಿತರಾದ ಶ್ರೀ.ಮುಕುಂದ ಕಫ್ರೆಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ರವೀಂದ್ರ ಮುಸುಡಿರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದ ಗರ್ಭಗುಡಿಯಲ್ಲಿ 6 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ವಿಗ್ರಹದ ಮುಂಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.

ದೇವಾಲಯದ ಬಲಭಾಗದಲ್ಲಿ ಅಭಿಷೇಕ ಮಂದಿರವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಪುಟ್ಟದಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಅಮೃತಶಿಲೆಯ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಸಾಯಿ ಭಕ್ತರಿಗೂ ಈ ಅಮೃತ ಶಿಲೆಯ ವಿಗ್ರಹಕ್ಕೆ "ಜಲಾಭಿಷೇಕ" ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.

ದೇವಾಲಯದ ಹಿಂಭಾಗದಲ್ಲಿರುವ ಸ್ಥಳದಲ್ಲಿ ಗುರುಸ್ಥಾನವಿದ್ದು ಇಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಆಳೆತ್ತರದ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಭಾವಚಿತ್ರವನ್ನು ಇರಿಸಲಾಗಿದೆ.

ದೇವಾಲಯದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ, ಅಮೃತಶಿಲೆಯ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹ, ಅಮೃತಶಿಲೆಯ ಪಾದುಕೆಗಳು, ನಂದಾದೀಪ ಹಾಗೂ ಬೀಸುವ ಕಲ್ಲು ಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ.

ದ್ವಾರಕಾಮಾಯಿಯ ಎದುರುಗಡೆ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಆಳೆತ್ತರದ ಭಾವಚಿತ್ರವನ್ನು ಶಿರಡಿಯ ದ್ವಾರಕಾಮಾಯಿಯಲ್ಲಿ ಇರುವಂತೆ ಕಲ್ಲಿನ ಮೇಲೆ ಇರಿಸಲಾಗಿದೆ.

ದೇವಾಲಯದ ಆವರಣದಲ್ಲಿ ಧ್ಯಾನಮಂದಿರವಿದ್ದು ಇಲ್ಲಿ "ಸಾಯಿಬಾಬಾರವರ ಜೀವನವನ್ನು ಚಿತ್ರಿಸುವ ಗೊಂಬೆ" ಗಳು, ಅಮೃತಶಿಲೆಯ ಶ್ರೀರಾಮ ಪರಿವಾರ ವಿಗ್ರಹಗಳು ಮತ್ತು ಆಂಜನೇಯನ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳವನ್ನು ಸಾಯಿ ಭಕ್ತರು ಧ್ಯಾನ ಮಾಡಲು ಹಾಗೂ ಉಚಿತ ಸಂಸ್ಕೃತ ತರಗತಿಗಳನ್ನು ನಡೆಸಲು ಬಳಸಲಾಗುತ್ತಿದೆ.





















ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ        : 6:00 ರಿಂದ 1:00 ರವರೆಗೆ.
ಸಂಜೆ        : 5:30 ರಿಂದ ರಾತ್ರಿ 8:30 ರವರೆಗೆ.

ಗುರುವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ 6:00 ರಿಂದ ರಾತ್ರಿ 8:30 ರವರೆಗೆ.


ಆರತಿಯ ಸಮಯ:

ಕಾಕಡಾ ಆರತಿ  : 6:30 ಗಂಟೆ.
ಛೋಟಾ ಆರತಿ : 8:30 ಗಂಟೆ.
ಮಧ್ಯಾನ್ಹ ಆರತಿ: 12:00 ಗಂಟೆ.
ಧೂಪಾರತಿ      : 6:00 ಗಂಟೆ.
ಶೇಜಾರತಿ       : 8:00 ಗಂಟೆ.

ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 51/- ರೂಪಾಯಿಗಳು.

ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರೂಪಾಯಿಗಳು.

ದೇವಾಲಯದಲ್ಲಿ ಶಾಶ್ವತ ಪೂಜೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 10000/- ರೂಪಾಯಿಗಳು.

ದೇವಾಲಯದಲ್ಲಿ ಒಂದು ದಿನದ ಅನ್ನದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 1008/- ರೂಪಾಯಿಗಳು.

ದೇವಾಲಯದಲ್ಲಿ ಪ್ರಸಾದ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 201/- ರೂಪಾಯಿಗಳು.

ದೇವಾಲಯದಲ್ಲಿ ವಸ್ತ್ರದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 51/- ರೂಪಾಯಿಗಳು.

ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 2:30 ರಿಂದ ಸಂಜೆ 5:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೇವಾ ಶುಲ್ಕ 51/- ರೂಪಾಯಿಗಳು.


ವಿಶೇಷ ಉತ್ಸವದ ದಿನಗಳು:

ಶ್ರೀರಾಮನವಮಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 30ನೇ ಜನವರಿ.
ಗುರುಪೂರ್ಣಿಮೆ.
ವಿಜಯದಶಮಿ.

ದೇವಾಲಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು: 

ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪ್ರತಿದಿನ ಅನ್ನದಾನವನ್ನು ಮಾಡಲಾಗುತ್ತಿದೆ.
ಪ್ರತಿವರ್ಷ ಎರಡು ಬಾರಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಆವರಣದಲ್ಲಿ ಉಚಿತ ಸಂಸ್ಕೃತ ತರಗತಿಯನ್ನು ನಡೆಸಲಾಗುತ್ತಿದೆ.
ಮಧುಮೇಹ ರೋಗಿಗಳಿಗಾಗಿ ಉಚಿತ ತಪಾಸಣ ಶಿಬಿರವನ್ನು ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಟ್ರಸ್ಟ್ ನ ವತಿಯಿಂದ ಅನೇಕ ವೃದ್ಧಾಶ್ರಮಗಳಿಗೆ ಧನಸಹಾಯವನ್ನು ಮಾಡಲಾಗುತ್ತಿದೆ.
ದೇವಾಲಯದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.


ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿರುವ ನಿತ್ಯ ಅನ್ನದಾನಕ್ಕೆ ಹಾಗೂ ದೇವಾಲಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ಸೊಂಡೇಕೊಪ್ಪ" ಐ.ಎನ್.ಜಿ ವೈಶ್ಯ ಬ್ಯಾಂಕ್, ಸೊಂಡೇಕೊಪ್ಪ ಖಾತೆ ಸಂಖ್ಯೆ:186010036027 ಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದಾಗಿದೆ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಚೆನ್ನಕೇಶವ ದೇವಾಲಯದ ಎದುರು ರಸ್ತೆ, ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ಸೊಂಡೇಕೊಪ್ಪ.

ವಿಳಾಸ:
ಸಾಯಿ ಧಾಮ
ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ),
ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ,
ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಬೆಟ್ಟಯ್ಯ/ ಶ್ರೀ.ಕೆ.ವಿ.ನಾಗೇಂದ್ರ / ಶ್ರೀ.ಕೆ.ನಾರಾಯಣ ಮೂರ್ತಿ / ಡಾ.ಎಸ್.ಬಿ.ಹರೀಶ್ / ಶ್ರೀ.ದಾಮು ಬಿ.ಪುರುಷೋತ್ತಮ್ / ಶ್ರೀ.ಬಿ.ಚಂದ್ರಶೇಖರ್ / ಶ್ರೀ.ಎಸ್.ಶಂಕರನಾರಾಯಣ. 

ದೂರವಾಣಿ ಸಂಖ್ಯೆಗಳು:
+91 94490 18243 / +91 98458 21313 / +91 96326 93828 / +91 99020 02145 / +91 93412 75056 / +91 80 2660 8243 ಮತ್ತು +91 80 2676 2516 – ಸ್ಥಿರ ದೂರವಾಣಿ.

ಇ-ಮೈಲ್ ವಿಳಾಸ:
hareeshdoc@gmail.com / nagkv99@gmail.com

ಮಾರ್ಗಸೂಚಿ: 
ಸೊಂಡೇಕೊಪ್ಪ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಚೆನ್ನಕೇಶವ ದೇವಾಲಯದ ಎದುರುಗಡೆ ರಸ್ತೆಯಲ್ಲಿ ಇರುತ್ತದೆ.  ದೇವಾಲಯವು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ ಅರ್ಧ ಕಿಲೋಮೀಟರ್, ತಾವರೆಕೆರೆಯಿಂದ 7  ಕಿಲೋಮೀಟರ್ ಹಾಗೂ ನೆಲಮಂಗಲದಿಂದ 9 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment