ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ), ಸಾಯಿನಗರ, ಮಡಕಶಿರ - 515 301, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಮಡಕಶಿರ ಪಟ್ಟಣದ ಸಾಯಿನಗರದಲ್ಲಿ ಇರುತ್ತದೆ. ದೇವಾಲಯವು ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇದ್ದು ಅಮರಪುರಂ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.
ಈ ಮಂದಿರವು ಸ್ಯಾಂಡ್ ಸ್ಟೋನ್ (ಮರಳು ಕಲ್ಲು) ನಿಂದ ಕಟ್ಟಲಾಗಿರುವ ದಕ್ಷಿಣ ಭಾರತದ ಪ್ರಪ್ರಥಮ ಮಂದಿರವಾಗಿದ್ದು ಸುಮಾರು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬಹಳ ವೈಭವಯುತವಾಗಿ ನಿರ್ಮಿಸಲಾಗಿರುತ್ತದೆ.
ಈ ದೇವಾಲಯದ ಭೂಮಿಪೂಜೆಯನ್ನು 12ನೇ ಜುಲೈ 2000 ದಂದು ನೆರವೇರಿಸಲಾಯಿತು.
ದೇವಾಲಯವನ್ನು ಸ್ಥಳೀಯ ನಗರ ಪಂಚಾಯತಿಯವರು ಟ್ರಸ್ಟ್ ಗೆ ನೀಡಿರುವ ಸುಮಾರು 1 ಎಕರೆ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ದೇವಾಲಯದ ಉದ್ಘಾಟನೆಯನ್ನು 19ನೇ ಮೇ 2010 ರಂದು ಅನಂತಪುರ ಜಿಲ್ಲೆಯ ಪೆನುಕೊಂಡದ ಸಂತರಾದ ದಿವಂಗತ ಶ್ರೀ.ಸಾಯಿ ಕಾಳೇಶ್ವರ ಸ್ವಾಮೀಜಿಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ಶ್ರೀ.ಓ.ಚಂದ್ರಶೇಖರ ರೆಡ್ಡಿಯವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದಲ್ಲಿ 5.4 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನು ಮತ್ತು ಪವಿತ್ರ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಹೊರಗಡೆಯಲ್ಲಿ ಎರಡೂ ಬದಿಗಳಲ್ಲಿ ನಿರ್ಮಿಸಲಾಗಿರುವ ಪುಟ್ಟ ಮಂದಿರಗಳಲ್ಲಿ ಅಮೃತಶಿಲೆಯ ಗಣಪತಿ ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಎದುರುಗಡೆ ಇರುವ ಖಾಲಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಪುಟ್ಟ ಮಂದಿರದಲ್ಲಿ 2.5 ಅಡಿ ಎತ್ತರದ ಕಪ್ಪುಶಿಲೆಯ ಹನುಮಂತನ ಸುಂದರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಹನುಮಾನ್ ಮಂದಿರದ ಹಿಂಭಾಗದಲ್ಲಿರುವ ಉದ್ಯಾನವನದಲ್ಲಿ 5.5 ಅಡಿ ಎತ್ತರದ ಮೇರಿ ತಾಯಿಯ ವಿಗ್ರಹವನ್ನು "ಸರ್ವ ಧರ್ಮ ಸಮನ್ವಯ" ದ ಸಂಕೇತವಾಗಿ ಸ್ಥಾಪಿಸಲಾಗಿರುತ್ತದೆ.
ಹನುಮಾನ್ ಮಂದಿರದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿರುತ್ತದೆ. ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ ಹಾಗೂ ಎರಡು ಒರಳು ಕಲ್ಲುಗಳನ್ನು ಧುನಿಯ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.
ದೇವಾಲಯದ ಕೆಳಭಾಗದಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದ್ದು ಇಲ್ಲಿ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಧ್ಯಾನ ಮಂದಿರದ ಪಕ್ಕದಲ್ಲಿ ಸುಮಾರು 100 ಜನರಿಗೆ ಸಾಕಾಗುವಷ್ಟು ಸ್ಥಳವನ್ನು ಹೊಂದಿರುವ ಭೋಜನ ಶಾಲೆಯನ್ನು ನಿರ್ಮಿಸಲಾಗಿದೆ.
ದೇವಾಲಯದ ಮುಂಭಾಗದ ಗೇಟ್ ನ ಬಲಭಾಗದಲ್ಲಿ ತೆಂಗಿನಕಾಯಿಯನ್ನು ಒಡೆಯಲು ಸ್ಥಳವನ್ನು ನಿರ್ಮಿಸಲಾಗಿದೆ.
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ 5:30 ರಿಂದ ರಾತ್ರಿ 9:00 ರವರೆಗೆ.
ಆರತಿಯ ಸಮಯ:
ಕಾಕಡಾ ಆರತಿ : 6:00 ಗಂಟೆ.
ಮಧ್ಯಾನ್ಹ ಆರತಿ :12:00 ಗಂಟೆ.
ಧೂಪಾರತಿ : 6:00 ಗಂಟೆ.
ಶೇಜಾರತಿ : 8:30 ಗಂಟೆ.
ಪ್ರತಿದಿನ ಬೆಳಿಗ್ಗೆ 8 ಕ್ಕೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 116/- ರೂಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 1501/- ರೂಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಅನ್ನದಾನ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 10116/- ರೂಪಾಯಿಗಳು.
ದೇವಾಲಯದಲ್ಲಿ ಒಂದು ದಿನದ ಅನ್ನದಾನ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 1116/- ರೂಪಾಯಿಗಳು.
ದೇವಾಲಯದಲ್ಲಿ ಒಂದು ದಿನದ ಪ್ರಸಾದ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 300/- ರೂಪಾಯಿಗಳು.
ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 2000/- ರೂಪಾಯಿಗಳು. ಈ ಸೇವೆಯಲ್ಲಿ ಪಲ್ಲಕ್ಕಿ ಉತ್ಸವ, ಸಾಯಂಕಾಲದ ಪ್ರಸಾದ ಹಾಗೂ ಭಜನ ಸೇವೆಗಳು ಸೇರಿರುತ್ತವೆ.
ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ 12 ರವರೆಗೆ ಶಾಂತಿ ಹೋಮವನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ 12 ರವರೆಗೆ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ತಿಂಗಳೂ ಸಂಕಷ್ಟ ಚತುರ್ಥಿಯನ್ನು ಸಾಯಂಕಾಲ 6:30 ರಿಂದ ರಾತ್ರಿ 8:30 ರವರೆಗೆ ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ನಿಯಮಿತವಾಗಿ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ದತ್ತ ಜಯಂತಿಯಂದು ಸಾಮೂಹಿಕ ಗುರು ಚರಿತ್ರೆಯ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಗೀತಾ ಜಯಂತಿಯಂದು ಸಮೂಹಿಕ ಭಗವದ್ಗೀತಾ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಗುರುಪೂರ್ಣಿಮೆಯಂದು ಸಾಮೂಹಿಕ ಸಾಯಿ ಸತ್ಯವ್ರತವನ್ನು ಹಮ್ಮಿಕೊಳ್ಳಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ಗುರುವಾರ ಸಂಜೆ 7:30 ರಿಂದ ರಾತ್ರಿ 8:50 ರವರೆಗೆ ಸಾಯಿಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ವಿಶೇಷ ಉತ್ಸವದ ದಿನಗಳು:
ಹೊಸ ವರ್ಷದ ಆಚರಣೆ.
ಶ್ರೀರಾಮನವಮಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 19ನೇ ಮೇ.
ಹನುಮಾನ್ ಜಯಂತಿ.
ಗುರುಪೂರ್ಣಿಮೆ.
ಗೋಕುಲಾಷ್ಟಮಿ.
ವಿನಾಯಕ ಚತುರ್ಥಿ.
ವಿಜಯದಶಮಿ.
ದತ್ತ ಜಯಂತಿ.
ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದಲ್ಲಿ ಪ್ರತಿನಿತ್ಯ ಸುಮಾರು 200 ಜನರಿಗೆ ಹಾಗೂ ಪ್ರತಿ ಗುರುವಾರದಂದು ಸುಮಾರು 600 ಜನರಿಗೆ ಅನ್ನದಾನವನ್ನು ಮಾಡಲಾಗುತ್ತದೆ. ಭಾರತದ ಕೇವಲ ಬೆರಳಣಿಕೆಯಷ್ಟು ದೇವಾಲಯಗಳಲ್ಲಿ ಮಾತ್ರ ಈ ರೀತಿ ನಿತ್ಯಾನ್ನದಾನವನ್ನು ಮಾಡಲಾಗುತ್ತಿದೆ.
ಮುಂದಿನ ಯೋಜನೆಗಳು:
ದೇವಾಲಯಕ್ಕೆ ಅಂಟಿಕೊಂಡಂತೆ ಇರುವ ಖಾಲಿ ಸ್ಥಳದಲ್ಲಿ ಟ್ರಸ್ಟ್ ನವರು 3 ಅಂತಸ್ತುಗಳ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆಳಗಿನ ಅಂತಸ್ತಿನಲ್ಲಿ ಸುಮಾರು 200 ಜನರು ಒಟ್ಟಿಗೆ ಕೂಡಬಹುದಾದ ಭೋಜನ ಶಾಲೆ, ಮೊದಲ ಅಂತಸ್ತಿನಲ್ಲಿ ಸಾಮಾನ್ಯ, ದಂತ, ಕಣ್ಣು ಮತ್ತು ಹೃದಯಕ್ಕೆ ಸಂಬಂಧಿಸಿದ ಸೌಲಭ್ಯಗಳಿರುವ ಆಸ್ಪತ್ರೆ, ಎರಡನೇ ಅಂತಸ್ತಿನಲ್ಲಿ ದೇವಾಲಯದ ನೌಕರರಿಗೆ ಮನೆಗಳು ಹಾಗೂ ಅತಿಥಿಗಳಿಗೆ ಉಳಿದುಕೊಳ್ಳಲು ಕೆಲವು ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿರುವ ನಿತ್ಯ ಅನ್ನದಾನಕ್ಕೆ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿ ಟ್ರಸ್ಟ್, ಮಡಕಶಿರ" ಕರ್ನಾಟಕ ಬ್ಯಾಂಕ್, ಮಡಕಶಿರ ನಿತ್ಯಾನ್ನದಾನ ಖಾತೆ ಸಂಖ್ಯೆ:4892500101723701 ಹಾಗೂ ಸಾಮಾನ್ಯ ದೇಣಿಗೆ ನೀಡಲು ದೇವಾಲಯದ ಟ್ರಸ್ಟ್ ನ ಖಾತೆ ಸಂಖ್ಯೆ: 4892500101299101 ಇವರಿಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಸರ್ಕಾರಿ ಆಸ್ಪತ್ರೆ ಎದುರುಗಡೆ, ಸಾಯಿನಗರ, ಮಡಕಶಿರ.
ವಿಳಾಸ:
ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ)
ಸಾಯಿನಗರ, ಮಡಕಶಿರ - 515 301,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಓ.ಚಂದ್ರಶೇಖರ ರೆಡ್ಡಿ -ಸಂಸ್ಥಾಪಕರು / ಶ್ರೀ.ಎಂ.ವಿ.ರಮೇಶ್ - ಉಪಾಧ್ಯಕ್ಷರು / ಶ್ರೀ.ಸಿ.ಎನ್.ಬದರಿನಾಥ್ - ಖಚಾಂಚಿ / ಶ್ರೀ.ಈ.ಗೋಪಾಲಕೃಷ್ಣ / ಶ್ರೀಮತಿ.ಎಸ್.ಪಾರಿಜಾತ - ದೇವಾಲಯದ ಮೇಲ್ವಿಚಾರಕಿ.
ದೂರವಾಣಿ ಸಂಖ್ಯೆಗಳು:
+ 91 94933 63529 – ಸಂಸ್ಥಾಪಕರು / +91 94400 18488 – ಉಪಾಧ್ಯಕ್ಷರು / +91 90003 6 9191 –ಖಚಾಂಚಿ / +91 99890 45082 – ಈ.ಗೋಪಾಲಕೃಷ್ಣ / +91 99892 70764 – ದೇವಾಲಯದ ಮೇಲ್ವಿಚಾರಕಿ.
ಮಾರ್ಗಸೂಚಿ:
ಮಡಕಶಿರದ ಅಮರಪುರಂ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇರುತ್ತದೆ ಹಾಗೂ ಅಮರಪುರಂ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ. ದೇವಾಲಯಕ್ಕೆ ಬರಲು ಹೇರಳವಾಗಿ ಆಟೋಗಳು ಸಿಗುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment