Tuesday, October 30, 2012
Saturday, October 27, 2012
ಸುಮಧುರ ಕಂಠದ ಸಾಯಿ ಭಜನ ಗಾಯಕ - ಶ್ರೀ.ಚಿಂಟು ಪಂಡಿತ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಚಿಂಟು ಪಂಡಿತ್ (ದೀಕ್ಷಿತ್) ರವರು ಪಂಜಾಬ್ ಮೂಲದ ಪ್ರಸಿದ್ಧ ಸಾಯಿ ಭಜನ ಗಾಯಕರು. ಇವರು 30ನೇ ಡಿಸೆಂಬರ್ 1987 ರಂದು ಪಂಜಾಬ್ ನ ಲೂಧಿಯಾನಾದಲ್ಲಿ ಶ್ರೀಮತಿ.ಬ್ರಿಜ್ ಲತಾ ದೀಕ್ಷಿತ್ ಮತ್ತು ಶ್ರೀ.ರಾಮರೂಪ್ ದೀಕ್ಷಿತ್ ರವರ ಮಗನಾಗಿ ಜನಿಸಿದರು.
ಇವರು ಆಗ್ರಾದ ಡಾ.ಭೀಮರಾವ್ ಅಂಬೇಡ್ಕರ್ ಯೂನಿವರ್ಸಿಟಿಯಿಂದ ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ, ಲೂಧಿಯಾನಾದ ಪ್ರಾಚೀನ ವಿದ್ಯಾ ಕೇಂದ್ರದಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪ್ರಥಮ ದರ್ಜೆಯನ್ನು ಗಳಿಸಿರುತ್ತಾರೆ. ಇವರು ಚಂಡೀಘಡ - ಸೆಕ್ಟರ್ 32, ಲೂಧಿಯಾನಾ, ಫ್ಲೋರ್, ಜಲಂಧರ್ ಮತ್ತು ಇನ್ನು ಹಲವಾರು ಕಡೆಗಳಲ್ಲಿ ತಮ್ಮ ಸಾಯಿ ಭಜನ ಸಂಧ್ಯಾ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ತಮ್ಮ ಸಾಯಿ ಭಜನೆಯ ಮೂಲಕ ಪ್ರಪಂಚದಾದ್ಯಂತ ಸಾಯಿ ಲೀಲೆಗಳನ್ನು ಪ್ರಚಾರ ಮಾಡುವ ಹೆಬ್ಬಯಕೆ ಇವರದು.
ಪ್ರಸುತ ಇವರು ತಮ್ಮ ತಂದೆ, ತಾಯಿ, ಧರ್ಮಪತ್ನಿ ಹಾಗೂ ಮಗನೊಂದಿಗೆ ತಮ್ಮ ಲೂಧಿಯಾನಾ ದ ಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ಚಿಂಟು ಪಂಡಿತ್ (ದೀಕ್ಷಿತ್) ರವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ಶ್ರೀ.ಚಿಂಟು ಪಂಡಿತ್ (ದೀಕ್ಷಿತ್)
ಸಾಯಿಬಾಬಾ ಮಂದಿರ, ಗಲ್ಲಿ ನಂ.10,
ಸತ್ ಜೋತ್ ನಗರ, ಜೋಸಫ್ ಶಾಲೆಯ ಹಿಂಭಾಗ,
ದುಗ್ರಿ ದಂಡ್ರಾ ರಸ್ತೆ,
ಲೂಧಿಯಾನಾ - 141 002, ,
ಪಂಜಾಬ್, ಭಾರತ
ದೂರವಾಣಿ ಸಂಖ್ಯೆಗಳು:
+91 97808 22945, +91 90233 52853
ಇ-ಮೈಲ್ ವಿಳಾಸ:
chintupandit87@gmail.com
ಫೇಸ್ ಬುಕ್ ವಿಳಾಸ:
http://facebook.com/chintu.pandit3
ಕನ್ನಡ ಅನುವಾದ: ಶ್ರೀಕಂಠ ಶರ್ಮ
ಶ್ರೀ ಶಿವಸಾಯಿ ಟ್ರಸ್ಟ್ ನ ವತಿಯಿಂದ ಸಾಯಿಬಾಬಾರವರ 94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಆಚರಣೆ - ಕೃಪೆ: ಸಾಯಿ ಪರಮೇಶ್ ಕುಮಾರ್, ಬಂಗಾರಪೇಟೆ
ಶ್ರೀ ಶಿವಸಾಯಿ ಟ್ರಸ್ಟ್ ಇದೇ ತಿಂಗಳ 24ನೇ ಅಕ್ಟೋಬರ್ 2012, ಬುಧವಾರದಂದು ಬಂಗಾರಪೇಟೆಯ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಸಾಯಿಬಾಬಾರವರ 94ನೇ ಮಹಾಸಮಾಧಿ ದಿವಸ ಹಾಗೂ ವಿಜಯದಶಮಿ ಉತ್ಸವದ ಅಂಗವಾಗಿ ವಿಶೇಷ ಪೂಜೆ, ಅಲಂಕಾರ, ಭಜನೆ ಹಾಗೂ ಅನ್ನದಾನ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ನೆರವೇರಿಸಿತು.
ಟ್ರಸ್ಟ್ ನ ಪದಾಧಿಕಾರಿಗಳಾದ ಶ್ರೀ.ಪರಮೇಶ್ ಕುಮಾರ್, ಸ್ಥಳೀಯ ಸಾಯಿ ಭಕ್ತರುಗಳಾದ ಶಿವಕುಮಾರ್, ರತ್ನಮ್ಮ ಚಂದ್ರಪ್ಪ, ವರುಣ್, ಉಮೇಶ್, ಅನಿಲ್, ಸಂಪಂಗಿರಾಮ ಗುಪ್ತಾ, ರಾಮಕೃಷ್ಣಪ್ಪ, ಬಾಬು, ರಾಕೇಶ್, ಮಣಿ, ನಾಗರಾಜ್, ರಾಮಚಂದ್ರಪ್ಪ ಮತ್ತು ಇನ್ನು ಹಲವಾರು ಟ್ರಸ್ಟ್ ನ ಸದಸ್ಯರುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದ ಬಗ್ಗೆ ಪ್ರಕಟವಾದ ವಿವಿಧ ಪತ್ರಿಕಾ ವರದಿಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ಲಗತ್ತಿಸಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Thursday, October 25, 2012
ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" - ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ - ಕೃಪೆ:ಸಾಯಿಅಮೃತಧಾರಾ.ಕಾಂ
ಚನ್ನೈನ ಶಿರಡಿ ಸಾಯಿ ಟ್ರಸ್ಟ್ ನ ವತಿಯಿಂದ ಸಾಯಿ ಭಕ್ತರಿಗಾಗಿ ನಿರ್ಮಿಸಲಾದ ವಸತಿ ಸಮುಚ್ಚಯ "ಸಾಯಿ ಆಶ್ರಮ" ವನ್ನು ಇದೇ ತಿಂಗಳ ಪವಿತ್ರ ವಿಜಯದಶಮಿಯ ದಿನವಾದ 24ನೇ ಅಕ್ಟೋಬರ್ 2012, ಬುಧವಾರದಂದು ಮಧ್ಯಾನ್ಹ 3:00 ಗಂಟೆಗೆ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಲಾಯಿತು. ಮಧ್ಯಾನ್ಹ ಆರತಿಯ ನಂತರ ಶಿರಡಿಯ ಸಮಾಧಿ ಮಂದಿರದಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಿರಡಿ ಸಾಯಿ ಟ್ರಸ್ಟ್ ನ ಸಂಸ್ಥಾಪಕರೂ ಹಾಗೂ ಟ್ರಸ್ಟಿಗಳಾದ ಶ್ರೀ.ಕೆ.ವಿ.ರಮಣಿಯವರು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರೂ ಹಾಗೂ ಅಹಮದ್ ನಗರ ಜಿಲ್ಲಾ ನ್ಯಾಯಾಧೀಶರೂ ಆದ ಶ್ರೀ.ಜಯಂತ್ ಡಿ.ಕುಲಕರ್ಣಿಯವರಿಗೆ ವಸತಿ ಸಮುಚ್ಚದ ದಾಖಲೆ ಪತ್ರಗಳನ್ನು ನೀಡಿದರು. ಸಂಸತ್ ಸದಸ್ಯರಾದ ಶ್ರೀ.ಬಿ.ಆರ್.ವಾಕ್ಚುರೆ, ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಯಾದ ಶ್ರೀ.ಕಿಶೋರ್ ಮೋರೆ, ಶಿರಡಿ ಸಾಯಿಬಾಬಾ ಸಂಸ್ಥಾನದ ಹಿಂದಿನ ಅಧ್ಯಕ್ಷರೂ ಹಾಗೂ ತಮ್ಮ ಕಾರ್ಯಾವಧಿಯಲ್ಲಿ ಸಾಯಿ ಆಶ್ರಮದ ನಿರ್ಮಾಣಕ್ಕೆ ಚಾಲನೆಯನ್ನು ಪ್ರಾರಂಭಿಸಿದ ಕೀರ್ತಿಗೆ ಭಾಜನರಾದ ಶ್ರೀ.ಜಯಂತ್ ಮುರಳೀಧರ ಸಾಸನೆ ಹಾಗೂ ಹಲವಾರು ಗಣ್ಯವಕ್ತಿಗಳು ಈ ಸರಳ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ.ಕೆ.ವಿ.ರಮಣಿಯವರು ಪ್ರಪಂಚದ ಎಲ್ಲಾ ಮೂಲೆಗಳಿಂದ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ ಸಲುವಾಗಿ ಈ ದತ್ತಿ ಸೇವಾ ಯೋಜನೆಯನ್ನು ಕೈಗೊಳ್ಳಲಾಯಿತು ಎಂದು ತಿಳಿಸಿದರು. 25 ಕೋಟಿ ರೂಪಾಯಿ ವೆಚ್ಚದಲ್ಲಿ 6 ಲಕ್ಷ ಚದರ ಅಡಿಯ ವಿಶಾಲ ಪ್ರದೇಶದಲ್ಲಿ 18 ತಿಂಗಳುಗಳಲ್ಲಿ 10000 ಕ್ಕೂ ಹೆಚ್ಚು ಸಾಯಿಭಕ್ತರಿಗೆ ವಸತಿಯನ್ನು ಕಲ್ಪಿಸುವ ಸಲುವಾಗಿ ನಿರ್ಮಾಣ ಮಾಡುವ ಉದ್ದೇಶವನ್ನು ಹೊಂದಿದ್ದ ಈ ಸಾಯಿ ಆಶ್ರಮದ ನಿರ್ಮಾಣದ ಒಡಂಬಡಿಕೆ ಪತ್ರಕ್ಕೆ 4ನೇ ಫೆಬ್ರವರಿ 2006 ರಂದು ಸಹಿ ಹಾಕಲಾಯಿತು. ವಸತಿ ಸಮುಚ್ಚಯ ನಿರ್ಮಾಣಕ್ಕೆ ಬೇಕಾದ 19.68 ಎಕರೆ ಭೂಮಿಯನ್ನು ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನವು ಶಿರಡಿಯ ಎರಡು ಕಡೆಗಳಲ್ಲಿ ಜುಲೈ 2007 ರಲ್ಲಿ ನೀಡಿತು.
ಶಿರಡಿ ಸಾಯಿ ಟ್ರಸ್ಟ್ ಸೆಪ್ಟೆಂಬರ್ 2007 ರಲ್ಲಿ ನಿರ್ಮಾಣ ಕಾರ್ಯವನ್ನು ಆರಂಭಿಸಿ ಈಗ ಈ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಿದೆ. ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳು ಮತ್ತು ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಒಟ್ಟು 14,000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಈ ವಸತಿ ಸಮುಚ್ಚಯಗಳನ್ನು 9.60 ಲಕ್ಷ ಚದರ ಅಡಿಯಷ್ಟು ವಿಶಾಲವಾದ ಭೂಪ್ರದೇಶದಲ್ಲಿ ಸುಮಾರು 110 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ನಿರ್ಮಾಣ ಮಾಡಲಾಗಿದೆ.
ಈ ಸಾಯಿ ಆಶ್ರಮ ಯೋಜನೆಗೆ ತಗುಲಿರುವ ಸಂಪೂರ್ಣ ನಿರ್ಮಾಣ ವೆಚ್ಚವನ್ನು ಯಾವುದೇ ವ್ಯಕ್ತಿ ಅಥವಾ ಸಂಘ-ಸಂಸ್ಥೆಗಳಿಂದ ದೇಣಿಗೆಯನ್ನು ಸ್ವೀಕರಿಸದೇ ಚನ್ನೈನ ಶಿರಡಿ ಸಾಯಿ ಟ್ರಸ್ಟ್ ಸ್ವತಃ ಭರಿಸಿರುತ್ತದೆ.
ಈ ವಸತಿ ಯೋಜನೆಯಲ್ಲಿ 12 ಗುತ್ತಿಗೆದಾರರು ಕಾರ್ಯ ನಿರ್ವಹಿಸಿರುತ್ತಾರೆ. 18 ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕೆಂದುಕೊಂಡಿದ್ದ ಈ ಯೋಜನೆಯು ನಿರ್ಮಾಣ ಉದ್ಯಮದಲ್ಲಿನ ಆರ್ಥಿಕ ಹಿಂಜರಿತ, ಉಕ್ಕು, ಸಿಮೆಂಟ್ , ಮರಳು, ಇಟ್ಟಿಗೆ,ನುರಿತ ಕಾರ್ಮಿಕರ ಕೊರತೆ, ಯೋಜನೆಯ ಗಾತ್ರ 6 ಲಕ್ಷ ಚದರ ಅಡಿಯಿಂದ 9.60 ಲಕ್ಷ ಚದರ ಅಡಿಗಳಿಗೆ ಹೆಚ್ಚಾದದ್ದು ಮತ್ತು ಯೋಜನೆಯ ಮೊತ್ತ 25 ಕೋಟಿ ರೂಪಾಯಿಗಳಿಂದ 110 ಕೋಟಿ ರೂಪಾಯಿಗಳಿಗೆ ಹೆಚ್ಚಾದ ಕಾರಣಗಳಿಂದ ತಡವಾಗಿ ಪೂರ್ಣಗೊಂಡಿತು. ಶಿರಡಿ ಸಾಯಿ ಟ್ರಸ್ಟ್ ಯೋಜನೆ ಮೊತ್ತವನ್ನು ಕಡಿತಗೊಳಿಸದೇ ನಿರ್ಮಾಣದಲ್ಲಿ ಉತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಬಳಸಿ ಎರಡೂ ವಸತಿ ಸಮುಚ್ಚಯಗಳನ್ನು ಉತ್ತಮವಾಗಿ ನಿರ್ಮಾಣ ಮಾಡಿರುತ್ತದೆ ಎಂದು ಶ್ರೀ.ಕೆ.ವಿ.ರಮಣಿಯವರು ತಿಳಿಸಿದರು.
ಶಿರಡಿ ಸಾಯಿಬಾಬಾ ಸಂಸ್ಥಾನವು ಬಾಹ್ಯ ಸೇವೆಗಳಾದ ಉತ್ತಮ ರಸ್ತೆ, ಪಾದಚಾರಿ ಮಾರ್ಗ, ವಿದ್ಯುತ್, ಬೀದಿ ದೀಪ ಹಾಗೂ ನೀರಿನ ವ್ಯವಸ್ಥೆಗಳನ್ನು 45 ಕೋಟಿ ರೂಪಾಯಿಗಳನ್ನು ವಿನಿಯೋಗಿಸಿ ಮಾಡಿರುತ್ತದೆ.
ಸಾಯಿ ಆಶ್ರಮ - 1 ರಲ್ಲಿ 1536 ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದ್ದು ಸುಮಾರು 9000 ಭಕ್ತರು ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ. ಅಲ್ಲದೆ, ಒಂದು ಓಪನ್ ಏರ್ ಥಿಯೇಟರ್ ಅನ್ನು ಕೂಡ ನಿರ್ಮಾಣ ಮಾಡಲಾಗಿದ್ದು ಇಲ್ಲಿ ಸುಮಾರು 2000 ಸಾಯಿ ಭಕ್ತರು ಒಂದೆಡೆ ಕುಳಿತು ಸಾಯಿ ಭಜನೆ, ಕೀರ್ತನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸುವ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಗಳು ಇಲ್ಲದ ಸಮಯದಲ್ಲಿ ಈ ಸ್ಥಳದಲ್ಲಿ ಸಾಯಿಬಾಬಾ ಪಲ್ಲಕ್ಕಿ ಯಾತ್ರಿಗಳು ಮತ್ತು ಪಾದಯಾತ್ರಿಗಳು ಉಳಿದುಕೊಳ್ಳಲು ಅವಕಾಶ ನೀಡಲಾಗುತ್ತದೆ.
ಸಾಯಿ ಅಶ್ರಮ - 2 ರಲ್ಲಿ 192 ವಿಶಾಲವಾದ ಹಾಲ್ ಗಳನ್ನು ನಿರ್ಮಿಸಲಾಗಿದ್ದು ಸುಮಾರು 5000 ಸಾಯಿ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಯಿರುತ್ತದೆ. ಅಲ್ಲದೇ, ಒಂದು ಸಾಮಾನ್ಯ ಸೇವಾ ಬ್ಲಾಕ್ ಅನ್ನು ನಿರ್ಮಿಸಲಾಗಿದ್ದು ಅಲ್ಲಿ ಭಕ್ತರಿಗೆ ರೆಸ್ಟೋರೆಂಟ್ ನಿರ್ಮಾಣ ಮಾಡಲಾಗಿದೆ.
ಸಾಯಿ ಆಶ್ರಮ - 1 ಮತ್ತು 2 ರ ಖಾಲಿ ಸ್ಥಳದಲ್ಲಿ ವಿವಿಧ ಬಗೆಯ 1,350 ಮರಗಳು, 50,000 ಗಿಡಗಳು ಮತ್ತು 27,000 ಚದರ ಅಡಿಯಲ್ಲಿ ವಿಶಾಲವಾದ ಹುಲ್ಲುಗಾವಲನ್ನು ನಿರ್ಮಿಸಲಾಗಿದ್ದು ಭಕ್ತರಿಗೆ ಉಳಿದುಕೊಳ್ಳಲು ಒಳ್ಳೆಯ ವಾತಾವರಣವನ್ನು ನಿರ್ಮಿಸಲಾಗಿದೆ.
ಸಾಯಿ ಆಶ್ರಮ - 1 ರ ಮೂರು ಬ್ಲಾಕ್ ಗಳಲ್ಲಿ ನಿರ್ಮಾಣ ಮಾಡಲಾಗಿರುವ 384 ಕೊಠಡಿಗಳು ಸಂಪೂರ್ಣ ಹವಾನಿಯಂತ್ರಿತವಾಗಿರುತ್ತವೆ. ಸಾವಿರಾರು ದ್ವಿಚಕ್ರ ವಾಹನಗಳು, ಕಾರ್ ಗಳು ಹಾಗೂ ಬಸ್ ಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ನೈಸರ್ಗಿಕ ಸಮತೋಲವನ್ನು ಕಾಯ್ದುಕೊಳ್ಳುವ ಸಲುವಾಗಿ ಎರಡು ಬೃಹತ್ ಸೆಪ್ಟಿಕ್ ಟ್ಯಾಂಕ್ ಗಳನ್ನು ನಿರ್ಮಿಸಲಾಗಿದ್ದು ಶುದ್ಧೀಕರಣಗೊಳಿಸಿದ ನೀರನ್ನು ಶೌಚಾಲಯ ಹಾಗೂ ಇನ್ನಿತರ ಕಾರ್ಯಗಳಿಗೆ ಬಳಸಲಾಗುವಂತೆ ವ್ಯವಸ್ಥೆ ಮಾಡಲಾಗಿದೆ. ವಸತಿ ಸಮುಚ್ಚಯದ ಎಲ್ಲಾ ಕೊಠಡಿಗಳಲ್ಲಿ ಸೌರಶಕ್ತಿ ಚಾಲಿತ ನೀರಿನ ಹೀಟರ್ ಗಳನ್ನು ಇರಿಸಲಾಗಿದೆ.
ಶ್ರೀ ಸಾಯಿಬಾಬಾ ಸಂಸ್ಥಾನವು ಈ ಎರಡೂ ವಸತಿ ಸಮುಚ್ಚಯಗಳ ಮೇಲ್ವಿಚಾರಣೆಯನ್ನು ಹಾಗೂ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳಲು ಸಿಬ್ಬಂದಿಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಈಗಾಗಲೇ ಪ್ರಾರಂಭಿಸಿದ್ದು ಅತಿ ಶೀಘ್ರದಲ್ಲಿಯೇ ಈ ವಸತಿ ಸಮುಚ್ಚಯಗಳನ್ನು ಲೋಕಾರ್ಪಣೆ ಮಾಡಲಿದೆ.
ಈ ವಸತಿ ಸಮುಚ್ಚಯಗಳನ್ನು ಪ್ರಾರಂಭಿಸಿದ ನಂತರ ಸಾಯಿ ಭಕ್ತರು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಾಲಯದಲ್ಲಿ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ. ಅಲ್ಲದೆ, ಮುಂಬೈ, ಚನ್ನೈ, ಸಿಕಂದರಾಬಾದ್ ಮತ್ತು ಬೆಂಗಳೂರಿನಲ್ಲಿರುವ ಸಂಸ್ಥಾನದ ಮಾಹಿತಿ ಕೇಂದ್ರಗಳ ಮುಖಾಂತರ ಹಾಗೂ ಸಂಸ್ಥಾನದ ಅಂತರ್ಜಾಲ ತಾಣದ ಮೂಲಕ ಆನ್ ಲೈನ್ ಮುಖಾಂತರ ಕೂಡ ಇಲ್ಲಿನ ಕೊಠಡಿಗಳನ್ನು ಕಾದಿರಿಸಬಹುದಾಗಿದೆ.
ಶಿರಡಿ ಸಾಯಿ ಟ್ರಸ್ಟ್, ಚನ್ನೈ ಈ ವಸತಿ ಸಮುಚ್ಚಯಗಳ ನಿರ್ಮಾಣ ಕಾರ್ಯವನ್ನು ಸಂಪೂರ್ಣಗೊಳಿಸಿ ಶಿರಡಿ ಸಾಯಿಬಾಬಾರವರ ಪಾದಗಳಿಗೆ ಸಮರ್ಪಣೆಯನ್ನಾಗಿ ನೀಡಿರುತ್ತದೆ. ಶಿರಡಿ ಸಾಯಿ ಟ್ರಸ್ಟ್, ತಾನು ಯಾವುದೇ ಅಧಿಕಾರವನ್ನು ಇಟ್ಟುಕೊಳ್ಳದೇ ಈ ಎರಡೂ ವಸತಿ ಸಮುಚ್ಚಯಗಳ ಎಲ್ಲಾ ಜಾಗವನ್ನು ಹಾಗೂ ಎಲ್ಲಾ ಸಂಬಂಧಪಟ್ಟ ದಾಖಲೆಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಹಸ್ತಾಂತರ ಮಾಡಿರುತ್ತದೆ. ಕೇವಲ ಸೇವಾ ಮನೋಭಾವದಿಂದ ಈ ಕಾರ್ಯವನ್ನು ಶಿರಡಿ ಸಾಯಿ ಟ್ರಸ್ಟ್ ಮಾಡಿರುತ್ತದೆ.
ಶಿರಡಿ ಸಾಯಿ ಟ್ರಸ್ಟ್ ನ ಈ ಉತ್ತಮ ಕಾರ್ಯದಿಂದ ಪ್ರಪಂಚದ ಎಲ್ಲಾ ಮೂಲೆಗಳಿಂದ ಪ್ರತಿನಿತ್ಯ ಸಾಯಿಬಾಬಾರವರ ದರ್ಶನಕ್ಕೆಂದು ಶಿರಡಿಗೆ ಹರಿದು ಬರುತ್ತಿರುವ ಸಾಯಿಭಕ್ತ ಸಾಗರಕ್ಕೆ ಅತ್ಯಂತ ಕಡಿಮೆ ದರದಲ್ಲಿ ವಸತಿಯನ್ನು ಒದಗಿಸುವ ಶಿರಡಿ ಸಾಯಿಬಾಬಾ ಸಂಸ್ಥಾನದ ಬಹುದಿನಗಳ ಕನಸು ನನಸಾಗುತ್ತಿದೆ.
ಶಿರಡಿ ಸಾಯಿಬಾಬಾರವರಿಗೆ, ಸಾಯಿಬಾಬಾ ಸಂಸ್ಥಾನಕ್ಕೆ ಹಾಗೂ ಸಾಯಿ ಭಕ್ತರಿಗೆ ಸೇವೆಯನ್ನು ಸಲ್ಲಿಸುವ ಈ ಜೀವಮಾನದ ಅವಕಾಶವನ್ನು ನೀಡಿದ್ದಕ್ಕಾಗಿ ಶಿರಡಿ ಸಾಯಿ ಟ್ರಸ್ಟ್, ಚನ್ನೈ ಶ್ರೀ ಸಾಯಿಬಾಬಾ ಸಂಸ್ಥಾನಕ್ಕೆ ತನ್ನ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Tuesday, October 23, 2012
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಅಂಗವಾಗಿ 23ನೇ ಅಕ್ಟೋಬರ್ 2012, ಮಂಗಳವಾರದಂದು ನಡೆದ ಮೊದಲ ದಿನದ ಕಾರ್ಯಕ್ರಮದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯ ಮೊದಲನೇ ಅಧ್ಯಾಯವನ್ನು ಪಾರಾಯಣ ಮಾಡುವ ಮೂಲಕ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಉದ್ಘಾಟಿಸಿದರು.
ಶ್ರೀ ಸಾಯಿಬಾಬಾರವರ 94ನೇ ಪುಣ್ಯತಿಥಿಯ ಅಂಗವಾಗಿ 23ನೇ ಅಕ್ಟೋಬರ್ 2012, ಮಂಗಳವಾರದಂದು ನಡೆದ ಮೊದಲ ದಿನದ ಕಾರ್ಯಕ್ರಮದಲ್ಲಿ ಶ್ರೀ ಸಾಯಿಬಾಬಾರವರ ವಿಗ್ರಹ, ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆ ಹಾಗೂ ವೀಣೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಈ ಮೆರವಣಿಗೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತರಾವ್ ಮಾನೆ ಹಾಗೂ ದೇವಾಲಯದ ಮೇಲ್ವಿಚಾರಕರಾದ ಶ್ರೀ.ರಾಮರಾವ್ ಶೆಲ್ಕೆಯವರು ಭಾಗವಹಿಸಿದ್ದರು.
ಕನ್ನಡ ಅನುವಾದ:ಶ್ರೀಕಂಠ ಶರ್ಮ
Sunday, October 14, 2012
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಸಾಯಿ ಧಾಮ, ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ, ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಕರ್ನಾಟಕ ರಾಜ್ಯದ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬೆಂಗಳೂರು ಉತ್ತರ ತಾಲ್ಲೂಕಿನ ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆಯಲ್ಲಿರುವ ಸೊಂಡೇಕೊಪ್ಪದಲ್ಲಿ ಇರುತ್ತದೆ. ದೇವಾಲಯವು ಶ್ರೀ ಚೆನ್ನಕೇಶವ ದೇವಾಲಯದ ಎದುರುಗಡೆಯ ರಸ್ತೆಯಲ್ಲಿದ್ದು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ 0.5 ಕಿಲೋಮೀಟರ್ , ತಾವರೆಕೆರೆ ಗ್ರಾಮದಿಂದ 7 ಕಿಲೋಮೀಟರ್ ಹಾಗೂ ನೆಲಮಂಗಲ ಗ್ರಾಮದಿಂದ 9 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.
ದೇವಾಲಯವನ್ನು ಸ್ಥಳೀಯ ಗ್ರಾಮಸ್ಥರಾದ ಶ್ರೀ.ಬೆಟ್ಟಯ್ಯನವರು ದಾನವಾಗಿ ನೀಡಿರುವ 17 ಗುಂಟೆ ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ದೇವಾಲಯದ ಭೂಮಿಪೂಜೆಯನ್ನು 27ನೇ ಜುಲೈ 2009 ರಂದು ನೆರವೇರಿಸಲಾಗಿರುತ್ತದೆ.
ದೇವಾಲಯದ ಉದ್ಘಾಟನೆಯನ್ನು 29ನೇ ಫೆಬ್ರವರಿ 2012 ರಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಪುರೋಹಿತರಾದ ಶ್ರೀ.ಮುಕುಂದ ಕಫ್ರೆಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ಶ್ರೀ.ರವೀಂದ್ರ ಮುಸುಡಿರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದ ಗರ್ಭಗುಡಿಯಲ್ಲಿ 6 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ವಿಗ್ರಹದ ಮುಂಭಾಗದಲ್ಲಿ ಅಮೃತಶಿಲೆಯ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಬಲಭಾಗದಲ್ಲಿ ಅಭಿಷೇಕ ಮಂದಿರವನ್ನು ಸ್ಥಾಪಿಸಲಾಗಿದ್ದು ಇಲ್ಲಿ ಪುಟ್ಟದಾದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಅಮೃತಶಿಲೆಯ ವೇದಿಕೆಯ ಮೇಲೆ ಪ್ರತಿಷ್ಟಾಪಿಸಲಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಸಾಯಿ ಭಕ್ತರಿಗೂ ಈ ಅಮೃತ ಶಿಲೆಯ ವಿಗ್ರಹಕ್ಕೆ "ಜಲಾಭಿಷೇಕ" ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ದೇವಾಲಯದ ಹಿಂಭಾಗದಲ್ಲಿರುವ ಸ್ಥಳದಲ್ಲಿ ಗುರುಸ್ಥಾನವಿದ್ದು ಇಲ್ಲಿ ಪವಿತ್ರ ಬೇವಿನ ಮರದ ಕೆಳಗಡೆ ಆಳೆತ್ತರದ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಭಾವಚಿತ್ರವನ್ನು ಇರಿಸಲಾಗಿದೆ.
ದೇವಾಲಯದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ. ಅಲ್ಲದೇ, ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ, ಅಮೃತಶಿಲೆಯ ದ್ವಾರಕಾಮಾಯಿ ಸಾಯಿಬಾಬಾರವರ ವಿಗ್ರಹ, ಅಮೃತಶಿಲೆಯ ಪಾದುಕೆಗಳು, ನಂದಾದೀಪ ಹಾಗೂ ಬೀಸುವ ಕಲ್ಲು ಗಳನ್ನು ಸಾಯಿ ಭಕ್ತರು ನೋಡಬಹುದಾಗಿದೆ.
ದ್ವಾರಕಾಮಾಯಿಯ ಎದುರುಗಡೆ "ಕಲ್ಲಿನ ಮೇಲೆ ಕುಳಿತಿರುವ ಸಾಯಿಬಾಬಾ" ರವರ ಆಳೆತ್ತರದ ಭಾವಚಿತ್ರವನ್ನು ಶಿರಡಿಯ ದ್ವಾರಕಾಮಾಯಿಯಲ್ಲಿ ಇರುವಂತೆ ಕಲ್ಲಿನ ಮೇಲೆ ಇರಿಸಲಾಗಿದೆ.
ದೇವಾಲಯದ ಆವರಣದಲ್ಲಿ ಧ್ಯಾನಮಂದಿರವಿದ್ದು ಇಲ್ಲಿ "ಸಾಯಿಬಾಬಾರವರ ಜೀವನವನ್ನು ಚಿತ್ರಿಸುವ ಗೊಂಬೆ" ಗಳು, ಅಮೃತಶಿಲೆಯ ಶ್ರೀರಾಮ ಪರಿವಾರ ವಿಗ್ರಹಗಳು ಮತ್ತು ಆಂಜನೇಯನ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಈ ಸ್ಥಳವನ್ನು ಸಾಯಿ ಭಕ್ತರು ಧ್ಯಾನ ಮಾಡಲು ಹಾಗೂ ಉಚಿತ ಸಂಸ್ಕೃತ ತರಗತಿಗಳನ್ನು ನಡೆಸಲು ಬಳಸಲಾಗುತ್ತಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ : 6:00 ರಿಂದ 1:00 ರವರೆಗೆ.
ಸಂಜೆ : 5:30 ರಿಂದ ರಾತ್ರಿ 8:30 ರವರೆಗೆ.
ಗುರುವಾರ ಮತ್ತು ಭಾನುವಾರಗಳಂದು ಬೆಳಿಗ್ಗೆ 6:00 ರಿಂದ ರಾತ್ರಿ 8:30 ರವರೆಗೆ.
ಆರತಿಯ ಸಮಯ:
ಕಾಕಡಾ ಆರತಿ : 6:30 ಗಂಟೆ.
ಛೋಟಾ ಆರತಿ : 8:30 ಗಂಟೆ.
ಮಧ್ಯಾನ್ಹ ಆರತಿ: 12:00 ಗಂಟೆ.
ಧೂಪಾರತಿ : 6:00 ಗಂಟೆ.
ಶೇಜಾರತಿ : 8:00 ಗಂಟೆ.
ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಕ್ಷೀರಾಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 51/- ರೂಪಾಯಿಗಳು.
ಪ್ರತಿದಿನ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರೂಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಪೂಜೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 10000/- ರೂಪಾಯಿಗಳು.
ದೇವಾಲಯದಲ್ಲಿ ಒಂದು ದಿನದ ಅನ್ನದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 1008/- ರೂಪಾಯಿಗಳು.
ದೇವಾಲಯದಲ್ಲಿ ಪ್ರಸಾದ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 201/- ರೂಪಾಯಿಗಳು.
ದೇವಾಲಯದಲ್ಲಿ ವಸ್ತ್ರದಾನ ಸೇವೆಯನ್ನು ಮಾಡಲು ಅವಕಾಶ ಕಲ್ಪಿಸಲಾಗಿದೆ. ಸೇವಾ ಶುಲ್ಕ 51/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಮಧ್ಯಾನ್ಹ 2:30 ರಿಂದ ಸಂಜೆ 5:00 ಗಂಟೆಯವರೆಗೆ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಸೇವಾ ಶುಲ್ಕ 51/- ರೂಪಾಯಿಗಳು.
ವಿಶೇಷ ಉತ್ಸವದ ದಿನಗಳು:
ಶ್ರೀರಾಮನವಮಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 30ನೇ ಜನವರಿ.
ಗುರುಪೂರ್ಣಿಮೆ.
ವಿಜಯದಶಮಿ.
ದೇವಾಲಯದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಾರ್ಯಚಟುವಟಿಕೆಗಳು:
ದೇವಾಲಯಕ್ಕೆ ಬರುವ ಎಲ್ಲಾ ಸಾಯಿ ಭಕ್ತರಿಗೂ ಪ್ರತಿದಿನ ಅನ್ನದಾನವನ್ನು ಮಾಡಲಾಗುತ್ತಿದೆ.
ಪ್ರತಿವರ್ಷ ಎರಡು ಬಾರಿ ಉಚಿತ ನೇತ್ರ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಆವರಣದಲ್ಲಿ ಉಚಿತ ಸಂಸ್ಕೃತ ತರಗತಿಯನ್ನು ನಡೆಸಲಾಗುತ್ತಿದೆ.
ಮಧುಮೇಹ ರೋಗಿಗಳಿಗಾಗಿ ಉಚಿತ ತಪಾಸಣ ಶಿಬಿರವನ್ನು ದೇವಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗುತ್ತಿದೆ.
ದೇವಾಲಯದ ಟ್ರಸ್ಟ್ ನ ವತಿಯಿಂದ ಅನೇಕ ವೃದ್ಧಾಶ್ರಮಗಳಿಗೆ ಧನಸಹಾಯವನ್ನು ಮಾಡಲಾಗುತ್ತಿದೆ.
ದೇವಾಲಯದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿರುವ ನಿತ್ಯ ಅನ್ನದಾನಕ್ಕೆ ಹಾಗೂ ದೇವಾಲಯದ ಇತರ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ), ಸೊಂಡೇಕೊಪ್ಪ" ಐ.ಎನ್.ಜಿ ವೈಶ್ಯ ಬ್ಯಾಂಕ್, ಸೊಂಡೇಕೊಪ್ಪ ಖಾತೆ ಸಂಖ್ಯೆ:186010036027 ಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದಾಗಿದೆ.
ಸ್ಥಳ:
ಚೆನ್ನಕೇಶವ ದೇವಾಲಯದ ಎದುರು ರಸ್ತೆ, ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ಸೊಂಡೇಕೊಪ್ಪ.
ವಿಳಾಸ:
ಸಾಯಿ ಧಾಮ
ಶ್ರೀ ಶಿರಡಿ ಸಾಯಿಬಾಬಾ ಸಮರ್ಪಣ ಸಮಿತಿ (ನೋಂದಣಿ),
ತಾವರೆಕೆರೆ - ನೆಲಮಂಗಲ ಮುಖ್ಯರಸ್ತೆ, ದಾಸನಪುರ ಹೋಬಳಿ,
ಸೊಂಡೇಕೊಪ್ಪ, ಬೆಂಗಳೂರು ಉತ್ತರ ತಾಲ್ಲೂಕು - 562 130,
ಬೆಂಗಳೂರು ಗ್ರಾಮಾಂತರ ಜಿಲ್ಲೆ,
ಕರ್ನಾಟಕ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಬೆಟ್ಟಯ್ಯ/ ಶ್ರೀ.ಕೆ.ವಿ.ನಾಗೇಂದ್ರ / ಶ್ರೀ.ಕೆ.ನಾರಾಯಣ ಮೂರ್ತಿ / ಡಾ.ಎಸ್.ಬಿ.ಹರೀಶ್ / ಶ್ರೀ.ದಾಮು ಬಿ.ಪುರುಷೋತ್ತಮ್ / ಶ್ರೀ.ಬಿ.ಚಂದ್ರಶೇಖರ್ / ಶ್ರೀ.ಎಸ್.ಶಂಕರನಾರಾಯಣ.
ದೂರವಾಣಿ ಸಂಖ್ಯೆಗಳು:
+91 94490 18243 / +91 98458 21313 / +91 96326 93828 / +91 99020 02145 / +91 93412 75056 / +91 80 2660 8243 ಮತ್ತು +91 80 2676 2516 – ಸ್ಥಿರ ದೂರವಾಣಿ.
ಇ-ಮೈಲ್ ವಿಳಾಸ:
hareeshdoc@gmail.com / nagkv99@gmail.com
ಮಾರ್ಗಸೂಚಿ:
ಸೊಂಡೇಕೊಪ್ಪ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಚೆನ್ನಕೇಶವ ದೇವಾಲಯದ ಎದುರುಗಡೆ ರಸ್ತೆಯಲ್ಲಿ ಇರುತ್ತದೆ. ದೇವಾಲಯವು ಸೊಂಡೇಕೊಪ್ಪ ಬಸ್ ನಿಲ್ದಾಣದಿಂದ ಅರ್ಧ ಕಿಲೋಮೀಟರ್, ತಾವರೆಕೆರೆಯಿಂದ 7 ಕಿಲೋಮೀಟರ್ ಹಾಗೂ ನೆಲಮಂಗಲದಿಂದ 9 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Friday, October 5, 2012
ಅನಂತಪುರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ), ಸಾಯಿನಗರ, ಮಡಕಶಿರ - 515 301, ಅನಂತಪುರ ಜಿಲ್ಲೆ, ಆಂಧ್ರಪ್ರದೇಶ, ಭಾರತ - ಕೃಪೆ:ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಆಂಧ್ರಪ್ರದೇಶ ರಾಜ್ಯದ ಅನಂತಪುರ ಜಿಲ್ಲೆಯ ಮಡಕಶಿರ ಪಟ್ಟಣದ ಸಾಯಿನಗರದಲ್ಲಿ ಇರುತ್ತದೆ. ದೇವಾಲಯವು ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇದ್ದು ಅಮರಪುರಂ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ.
ಈ ಮಂದಿರವು ಸ್ಯಾಂಡ್ ಸ್ಟೋನ್ (ಮರಳು ಕಲ್ಲು) ನಿಂದ ಕಟ್ಟಲಾಗಿರುವ ದಕ್ಷಿಣ ಭಾರತದ ಪ್ರಪ್ರಥಮ ಮಂದಿರವಾಗಿದ್ದು ಸುಮಾರು 3 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿ ಬಹಳ ವೈಭವಯುತವಾಗಿ ನಿರ್ಮಿಸಲಾಗಿರುತ್ತದೆ.
ಈ ದೇವಾಲಯದ ಭೂಮಿಪೂಜೆಯನ್ನು 12ನೇ ಜುಲೈ 2000 ದಂದು ನೆರವೇರಿಸಲಾಯಿತು.
ದೇವಾಲಯವನ್ನು ಸ್ಥಳೀಯ ನಗರ ಪಂಚಾಯತಿಯವರು ಟ್ರಸ್ಟ್ ಗೆ ನೀಡಿರುವ ಸುಮಾರು 1 ಎಕರೆ ಸ್ವಂತ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿದೆ.
ದೇವಾಲಯದ ಉದ್ಘಾಟನೆಯನ್ನು 19ನೇ ಮೇ 2010 ರಂದು ಅನಂತಪುರ ಜಿಲ್ಲೆಯ ಪೆನುಕೊಂಡದ ಸಂತರಾದ ದಿವಂಗತ ಶ್ರೀ.ಸಾಯಿ ಕಾಳೇಶ್ವರ ಸ್ವಾಮೀಜಿಯವರು ಟ್ರಸ್ಟ್ ನ ಸದಸ್ಯರು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ಶ್ರೀ.ಓ.ಚಂದ್ರಶೇಖರ ರೆಡ್ಡಿಯವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದಲ್ಲಿ 5.4 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತಶಿಲೆಯ ನಂದಿಯ ವಿಗ್ರಹವನ್ನು ಮತ್ತು ಪವಿತ್ರ ಪಾದುಕೆಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಹೊರಗಡೆಯಲ್ಲಿ ಎರಡೂ ಬದಿಗಳಲ್ಲಿ ನಿರ್ಮಿಸಲಾಗಿರುವ ಪುಟ್ಟ ಮಂದಿರಗಳಲ್ಲಿ ಅಮೃತಶಿಲೆಯ ಗಣಪತಿ ಹಾಗೂ ದತ್ತಾತ್ರೇಯ ದೇವರುಗಳ ವಿಗ್ರಹಗಳನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಎದುರುಗಡೆ ಇರುವ ಖಾಲಿ ಸ್ಥಳದಲ್ಲಿ ನಿರ್ಮಿಸಲಾಗಿರುವ ಪುಟ್ಟ ಮಂದಿರದಲ್ಲಿ 2.5 ಅಡಿ ಎತ್ತರದ ಕಪ್ಪುಶಿಲೆಯ ಹನುಮಂತನ ಸುಂದರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಹನುಮಾನ್ ಮಂದಿರದ ಹಿಂಭಾಗದಲ್ಲಿರುವ ಉದ್ಯಾನವನದಲ್ಲಿ 5.5 ಅಡಿ ಎತ್ತರದ ಮೇರಿ ತಾಯಿಯ ವಿಗ್ರಹವನ್ನು "ಸರ್ವ ಧರ್ಮ ಸಮನ್ವಯ" ದ ಸಂಕೇತವಾಗಿ ಸ್ಥಾಪಿಸಲಾಗಿರುತ್ತದೆ.
ಹನುಮಾನ್ ಮಂದಿರದ ಎಡಭಾಗದಲ್ಲಿ ದ್ವಾರಕಾಮಾಯಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿರುತ್ತದೆ. ದ್ವಾರಕಾಮಾಯಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರ ಹಾಗೂ ಎರಡು ಒರಳು ಕಲ್ಲುಗಳನ್ನು ಧುನಿಯ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.
ದೇವಾಲಯದ ಕೆಳಭಾಗದಲ್ಲಿ ಧ್ಯಾನ ಮಂದಿರವನ್ನು ನಿರ್ಮಿಸಲಾಗಿದ್ದು ಇಲ್ಲಿ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಧ್ಯಾನ ಮಂದಿರದ ಪಕ್ಕದಲ್ಲಿ ಸುಮಾರು 100 ಜನರಿಗೆ ಸಾಕಾಗುವಷ್ಟು ಸ್ಥಳವನ್ನು ಹೊಂದಿರುವ ಭೋಜನ ಶಾಲೆಯನ್ನು ನಿರ್ಮಿಸಲಾಗಿದೆ.
ದೇವಾಲಯದ ಮುಂಭಾಗದ ಗೇಟ್ ನ ಬಲಭಾಗದಲ್ಲಿ ತೆಂಗಿನಕಾಯಿಯನ್ನು ಒಡೆಯಲು ಸ್ಥಳವನ್ನು ನಿರ್ಮಿಸಲಾಗಿದೆ.
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ 5:30 ರಿಂದ ರಾತ್ರಿ 9:00 ರವರೆಗೆ.
ಆರತಿಯ ಸಮಯ:
ಕಾಕಡಾ ಆರತಿ : 6:00 ಗಂಟೆ.
ಮಧ್ಯಾನ್ಹ ಆರತಿ :12:00 ಗಂಟೆ.
ಧೂಪಾರತಿ : 6:00 ಗಂಟೆ.
ಶೇಜಾರತಿ : 8:30 ಗಂಟೆ.
ಪ್ರತಿದಿನ ಬೆಳಿಗ್ಗೆ 8 ಕ್ಕೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 116/- ರೂಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 1501/- ರೂಪಾಯಿಗಳು.
ದೇವಾಲಯದಲ್ಲಿ ಶಾಶ್ವತ ಅನ್ನದಾನ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 10116/- ರೂಪಾಯಿಗಳು.
ದೇವಾಲಯದಲ್ಲಿ ಒಂದು ದಿನದ ಅನ್ನದಾನ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 1116/- ರೂಪಾಯಿಗಳು.
ದೇವಾಲಯದಲ್ಲಿ ಒಂದು ದಿನದ ಪ್ರಸಾದ ಸೇವೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 300/- ರೂಪಾಯಿಗಳು.
ದೇವಾಲಯದಲ್ಲಿ ಗುರುವಾರ ವಿಶೇಷ ಪೂಜೆಗೆ ಅವಕಾಶವಿರುತ್ತದೆ. ಸೇವಾ ಶುಲ್ಕ 2000/- ರೂಪಾಯಿಗಳು. ಈ ಸೇವೆಯಲ್ಲಿ ಪಲ್ಲಕ್ಕಿ ಉತ್ಸವ, ಸಾಯಂಕಾಲದ ಪ್ರಸಾದ ಹಾಗೂ ಭಜನ ಸೇವೆಗಳು ಸೇರಿರುತ್ತವೆ.
ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ 12 ರವರೆಗೆ ಶಾಂತಿ ಹೋಮವನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ತಿಂಗಳ ಹುಣ್ಣಿಮೆಯಂದು ಬೆಳಿಗ್ಗೆ 9:30 ರಿಂದ 12 ರವರೆಗೆ ಸತ್ಯನಾರಾಯಣ ಪೂಜೆಯನ್ನು ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ತಿಂಗಳೂ ಸಂಕಷ್ಟ ಚತುರ್ಥಿಯನ್ನು ಸಾಯಂಕಾಲ 6:30 ರಿಂದ ರಾತ್ರಿ 8:30 ರವರೆಗೆ ನೆರವೇರಿಸಲಾಗುತ್ತದೆ. ಸೇವಾ ಶುಲ್ಕ 516/- ರೂಪಾಯಿಗಳು.
ದೇವಾಲಯದಲ್ಲಿ ಪ್ರತಿ ವರ್ಷ ಭಾದ್ರಪದ ಮಾಸದಲ್ಲಿ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ನಿಯಮಿತವಾಗಿ ಸಾಮೂಹಿಕ ಹನುಮಾನ್ ಚಾಲೀಸ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ದತ್ತ ಜಯಂತಿಯಂದು ಸಾಮೂಹಿಕ ಗುರು ಚರಿತ್ರೆಯ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಗೀತಾ ಜಯಂತಿಯಂದು ಸಮೂಹಿಕ ಭಗವದ್ಗೀತಾ ಪಾರಾಯಣವನ್ನು ಮಾಡಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಕಾರ್ತೀಕ ಮಾಸದಲ್ಲಿ ಲಕ್ಷ ದೀಪೋತ್ಸವವನ್ನು ಹಮ್ಮಿಕೊಳ್ಳಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ವರ್ಷ ಗುರುಪೂರ್ಣಿಮೆಯಂದು ಸಾಮೂಹಿಕ ಸಾಯಿ ಸತ್ಯವ್ರತವನ್ನು ಹಮ್ಮಿಕೊಳ್ಳಲಾಗುತ್ತದೆ.
ದೇವಾಲಯದಲ್ಲಿ ಪ್ರತಿ ಗುರುವಾರ ಸಂಜೆ 7:30 ರಿಂದ ರಾತ್ರಿ 8:50 ರವರೆಗೆ ಸಾಯಿಭಜನೆಯನ್ನು ಹಮ್ಮಿಕೊಳ್ಳಲಾಗುತ್ತದೆ.
ವಿಶೇಷ ಉತ್ಸವದ ದಿನಗಳು:
ಹೊಸ ವರ್ಷದ ಆಚರಣೆ.
ಶ್ರೀರಾಮನವಮಿ.
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 19ನೇ ಮೇ.
ಹನುಮಾನ್ ಜಯಂತಿ.
ಗುರುಪೂರ್ಣಿಮೆ.
ಗೋಕುಲಾಷ್ಟಮಿ.
ವಿನಾಯಕ ಚತುರ್ಥಿ.
ವಿಜಯದಶಮಿ.
ದತ್ತ ಜಯಂತಿ.
ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದಲ್ಲಿ ಪ್ರತಿನಿತ್ಯ ಸುಮಾರು 200 ಜನರಿಗೆ ಹಾಗೂ ಪ್ರತಿ ಗುರುವಾರದಂದು ಸುಮಾರು 600 ಜನರಿಗೆ ಅನ್ನದಾನವನ್ನು ಮಾಡಲಾಗುತ್ತದೆ. ಭಾರತದ ಕೇವಲ ಬೆರಳಣಿಕೆಯಷ್ಟು ದೇವಾಲಯಗಳಲ್ಲಿ ಮಾತ್ರ ಈ ರೀತಿ ನಿತ್ಯಾನ್ನದಾನವನ್ನು ಮಾಡಲಾಗುತ್ತಿದೆ.
ಮುಂದಿನ ಯೋಜನೆಗಳು:
ದೇವಾಲಯಕ್ಕೆ ಅಂಟಿಕೊಂಡಂತೆ ಇರುವ ಖಾಲಿ ಸ್ಥಳದಲ್ಲಿ ಟ್ರಸ್ಟ್ ನವರು 3 ಅಂತಸ್ತುಗಳ ಕಟ್ಟಡವನ್ನು ನಿರ್ಮಾಣ ಮಾಡುತ್ತಿದ್ದಾರೆ. ಕೆಳಗಿನ ಅಂತಸ್ತಿನಲ್ಲಿ ಸುಮಾರು 200 ಜನರು ಒಟ್ಟಿಗೆ ಕೂಡಬಹುದಾದ ಭೋಜನ ಶಾಲೆ, ಮೊದಲ ಅಂತಸ್ತಿನಲ್ಲಿ ಸಾಮಾನ್ಯ, ದಂತ, ಕಣ್ಣು ಮತ್ತು ಹೃದಯಕ್ಕೆ ಸಂಬಂಧಿಸಿದ ಸೌಲಭ್ಯಗಳಿರುವ ಆಸ್ಪತ್ರೆ, ಎರಡನೇ ಅಂತಸ್ತಿನಲ್ಲಿ ದೇವಾಲಯದ ನೌಕರರಿಗೆ ಮನೆಗಳು ಹಾಗೂ ಅತಿಥಿಗಳಿಗೆ ಉಳಿದುಕೊಳ್ಳಲು ಕೆಲವು ಕೋಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ.
ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿರುವ ನಿತ್ಯ ಅನ್ನದಾನಕ್ಕೆ ಹಾಗೂ ದೇವಾಲಯದ ಅಭಿವೃದ್ಧಿ ಕಾರ್ಯಗಳಿಗೆ ದೇಣಿಗೆಯನ್ನು ನೀಡಲು ಇಚ್ಚಿಸುವ ಸಾಯಿ ಭಕ್ತರು "ಶ್ರೀ ಶಿರಡಿ ಸಾಯಿ ಟ್ರಸ್ಟ್, ಮಡಕಶಿರ" ಕರ್ನಾಟಕ ಬ್ಯಾಂಕ್, ಮಡಕಶಿರ ನಿತ್ಯಾನ್ನದಾನ ಖಾತೆ ಸಂಖ್ಯೆ:4892500101723701 ಹಾಗೂ ಸಾಮಾನ್ಯ ದೇಣಿಗೆ ನೀಡಲು ದೇವಾಲಯದ ಟ್ರಸ್ಟ್ ನ ಖಾತೆ ಸಂಖ್ಯೆ: 4892500101299101 ಇವರಿಗೆ ಸಂದಾಯವಾಗುವಂತೆ ದೇಣಿಗೆಯನ್ನು ನೀಡಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಸರ್ಕಾರಿ ಆಸ್ಪತ್ರೆ ಎದುರುಗಡೆ, ಸಾಯಿನಗರ, ಮಡಕಶಿರ.
ವಿಳಾಸ:
ಶ್ರೀ ಶಿರಡಿ ಸಾಯಿ ಟ್ರಸ್ಟ್ (ನೋಂದಣಿ)
ಸಾಯಿನಗರ, ಮಡಕಶಿರ - 515 301,
ಅನಂತಪುರ ಜಿಲ್ಲೆ,
ಆಂಧ್ರಪ್ರದೇಶ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಓ.ಚಂದ್ರಶೇಖರ ರೆಡ್ಡಿ -ಸಂಸ್ಥಾಪಕರು / ಶ್ರೀ.ಎಂ.ವಿ.ರಮೇಶ್ - ಉಪಾಧ್ಯಕ್ಷರು / ಶ್ರೀ.ಸಿ.ಎನ್.ಬದರಿನಾಥ್ - ಖಚಾಂಚಿ / ಶ್ರೀ.ಈ.ಗೋಪಾಲಕೃಷ್ಣ / ಶ್ರೀಮತಿ.ಎಸ್.ಪಾರಿಜಾತ - ದೇವಾಲಯದ ಮೇಲ್ವಿಚಾರಕಿ.
ದೂರವಾಣಿ ಸಂಖ್ಯೆಗಳು:
+ 91 94933 63529 – ಸಂಸ್ಥಾಪಕರು / +91 94400 18488 – ಉಪಾಧ್ಯಕ್ಷರು / +91 90003 6 9191 –ಖಚಾಂಚಿ / +91 99890 45082 – ಈ.ಗೋಪಾಲಕೃಷ್ಣ / +91 99892 70764 – ದೇವಾಲಯದ ಮೇಲ್ವಿಚಾರಕಿ.
ಮಾರ್ಗಸೂಚಿ:
ಮಡಕಶಿರದ ಅಮರಪುರಂ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಸರ್ಕಾರಿ ಆಸ್ಪತ್ರೆಯ ಎದುರುಗಡೆ ಇರುತ್ತದೆ ಹಾಗೂ ಅಮರಪುರಂ ಬಸ್ ನಿಲ್ದಾಣದಿಂದ ಕೇವಲ 1 ಕಿಲೋಮೀಟರ್ ಗಳ ಅಂತರದಲ್ಲಿ ಇರುತ್ತದೆ. ದೇವಾಲಯಕ್ಕೆ ಬರಲು ಹೇರಳವಾಗಿ ಆಟೋಗಳು ಸಿಗುತ್ತವೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Subscribe to:
Posts (Atom)