ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸ ವರ್ಷದ ಆಚರಣೆ - ಕೃಪೆ:ಸಾಯಿಅಮೃತಧಾರಾ.ಕಾಂ
ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ.ಶಿವರಾಜ್ ಸಿಂಗ್ ಚವಾಣ್ ರವರು ಹೊಸ ವರ್ಷದ ಅಂಗವಾಗಿ ಇದೇ ತಿಂಗಳ 1ನೇ ಜನವರಿ 2012, ಭಾನುವಾರ ದಂದು ತಮ್ಮ ಕುಟುಂಬ ಸದಸ್ಯರ ಸಮೇತ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಹಾಗೂ ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆಯವರು ಕೂಡ ಉಪಸ್ಥಿತರಿದ್ದರು.
ಸಮಾಧಿಯ ದರ್ಶನದ ನಂತರ, ಮಧ್ಯಪ್ರದೇಶದ ಮುಖ್ಯಮಂತ್ರಿಗಳನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆಯವರು ಕೂಡ ಉಪಸ್ಥಿತರಿದ್ದರು.
ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವಾರದ ಶ್ರೀ.ಪ್ರಫುಲ್ ಪಟೇಲ್ ರವರು ಹೊಸ ವರ್ಷದ ಅಂಗವಾಗಿ ಇದೇ ತಿಂಗಳ 1ನೇ ಜನವರಿ 2012, ಭಾನುವಾರ ದಂದು ತಮ್ಮ ಕುಟುಂಬ ಸದಸ್ಯರ ಸಮೇತ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆಯವರು ಹಾಗೂ ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆ, ಶ್ರೀ.ಶಂಕರ ರಾವ್ ಕೊಲ್ಹೇ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು.
ಸಮಾಧಿಯ ದರ್ಶನದ ನಂತರ, ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆ ಸಚಿವಾರದ ಶ್ರೀ.ಪ್ರಫುಲ್ ಪಟೇಲ್ ರವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಉಪಾಧ್ಯಕ್ಷರಾದ ಶ್ರೀ.ಶಂಕರ ರಾವ್ ಕೊಲ್ಹೇ ಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಶ್ರೀ.ಕೃಷ್ಣಚಂದ್ರ ಪಾಂಡೆ ಮತ್ತು ಶ್ರೀ.ಅಶೋಕ್ ಕಂಬೇಕರ್ ರವರುಗಳು ಕೂಡ ಉಪಸ್ಥಿತರಿದ್ದರು.
ವ್ಯವಸಾಯ ಮತ್ತು ಮಾರುಕಟ್ಟೆ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೆ ಪಾಟೀಲ್ ಮತ್ತು ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಶ್ರೀಮತಿ.ಶಾಲಿನಿ ತಾಯಿ ವಿಕ್ಹೆ ಪಾಟೀಲ್ ರವರುಗಳು ಹೊಸ ವರ್ಷದ ಅಂಗವಾಗಿ ಇದೇ ತಿಂಗಳ 1ನೇ ಜನವರಿ 2012, ಭಾನುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು ಮತ್ತು ಸಾಯಿಬಾಬಾರವರ ಪಾದುಕಾ ಪೂಜೆಯನ್ನು ಕೂಡ ನೆರವೇರಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷರಾದ ಶ್ರೀ.ಜಯಂತ್ ಸಾಸನೆ ಮತ್ತು ಶ್ರೀರಾಮಪುರ ನಗರಸಭೆಯ ಅಧ್ಯಕ್ಷೆಯಾದ ಶ್ರೀಮತಿ.ರಾಜಶ್ರೀ ಸಾಸನೆಯವರುಗಳು ಕೂಡ ಉಪಸ್ಥಿತರಿದ್ದರು.
ಹೊಸ ವರ್ಷದ ಅಂಗವಾಗಿ ಇದೇ ತಿಂಗಳ 1ನೇ ಜನವರಿ 2012, ಭಾನುವಾರ ದಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರ ಮತ್ತು ಪ್ರಾಂಗಣವನ್ನು ಪುಣೆಯ ಸಾಯಿಭಕ್ತರಾದ ಶ್ರೀ.ರಾಜೇಶ್ ಜೈನ್ ರವರು ನೀಡಿದ ದೇಣಿಗೆಯ ಸಹಾಯದಿಂದ ಬಹಳ ಸುಂದರವಾಗಿ ಅಲಂಕರಿಸಿದ್ದರು.
ಹೊಸ ವರ್ಷದ ಅಂಗವಾಗಿ ಇದೇ ತಿಂಗಳ 1ನೇ ಜನವರಿ 2012, ಭಾನುವಾರ ದಂದು ದೇಶದ ನಾನಾ ಭಾಗಗಳಿಂದ ಮತ್ತು ವಿದೇಶದಿಂದ ಸಾಯಿಭಕ್ತರು ಶಿರಡಿಗೆ ಆಗಮಿಸಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment