Tuesday, January 24, 2012

ಜಾರ್ಖಂಡ್ ರಾಜ್ಯದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಸೈಂಟ್  ಫ್ರಾನ್ಸಿಸ್  ರಸ್ತೆ , ಕೈಸ್ಟರ್ಸ     ಟೌನ್, ಬಾಬಾ ಬೈದ್ಯನಾಥ್ ದೇವಘರ್, ಜಾರ್ಖಂಡ್ -814 112, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ 


ದೇವಾಲಯದ ವಿಶೇಷತೆಗಳು: 

ಈ ದೇವಾಲಯವು ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಜಾರ್ಖಂಡ್ ರಾಜ್ಯದಲ್ಲಿರುವ ವೈದ್ಯನಾಥೇಶ್ವರದಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಬಾಬಾ ಬೈದ್ಯನಾಥ್ ದೇವಘರ್ ನಲ್ಲಿ ಮತ್ತು ಹೌರಾ-ನವದೆಹಲಿ ರೈಲ್ವೇ ಮಾರ್ಗದಲ್ಲಿರುವ ಜಾಸಿದಿ ಜಂಕ್ಷನ್ ನ ಹತ್ತಿರವಿರುತ್ತದೆ. 


ದೇವಾಲಯದ ಭೂಮಿಪೂಜೆಯನ್ನು 3ನೇ ಏಪ್ರಿಲ್ 2009 ರ ಪವಿತ್ರ ಶ್ರೀರಾಮನವಮಿಯ ದಿವಸ ನೆರವೇರಿಸಲಾಯಿತು. 


ದೇವಾಲಯದ ಉದ್ಘಾಟನೆಯನ್ನು 6ನೇ ಅಕ್ಟೋಬರ್ 2011 ರ ಪವಿತ್ರ ವಿಜಯದಶಮಿಯ ದಿನದಂದು ಪ್ರಸಿದ್ದ ಸಾಯಿ ಭಕ್ತರಾದ ಶ್ರೀ.ಚಂದ್ರಮೌಳೀಶ್ವರ ಪ್ರಸಾದ್ ಸಿಂಗ್ ರವರು ನೆರವೇರಿಸಿದರು. 


ದೇವಾಲಯವನ್ನು ಶ್ರೀ.ಮಹೇಶ್ ಕುಮಾರ್ ಸಿಂಗ್ ರವರು ಸ್ಥಾಪಿಸಿರುತ್ತಾರೆ. ಇವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಕ್ರಮಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ. 


ದೇವಾಲಯವು ಬೆಳಗಿನ ಜಾವ 6 ಗಂಟೆಗೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 9 ಗಂಟೆಗೆ ಶೇಜಾರತಿಯಾದ ನಂತರ ಮುಚ್ಚುತ್ತದೆ. 


ದೇವಾಲಯದಲ್ಲಿ ಸುಮಾರು 1.25 ಅಡಿ ಎತ್ತರದ ಅಮೃತಶಿಲೆಯ ಸಿಂಹಾಸನದ ಮೇಲೆ ಕುಳಿತಿರುವ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಅಮೃತ ಶಿಲೆಯ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ.










ದೇವಾಲಯದ ಕಾರ್ಯಚಟುವಟಿಕೆಗಳು: 

ದಿನನಿತ್ಯದ ಕಾರ್ಯಕ್ರಮಗಳು: 


ಆರತಿಯ ಸಮಯ: 

ಕಾಕಡಾ ಆರತಿ: ಬೆಳಿಗ್ಗೆ 6 ಗಂಟೆಗೆ 
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಗಂಟೆಗೆ 
ಧೂಪಾರತಿ: ಸಂಜೆ 6 ಗಂಟೆಗೆ  
ಶೇಜಾರತಿ: ರಾತ್ರಿ 9:00 ಕ್ಕೆ  

ಗುರುವಾರದಂದು ಮಾತ್ರ ಧೂಪಾರತಿಯನ್ನು ಸಂಜೆ 6:30 ಕ್ಕೆ ಮಾಡಲಾಗುತ್ತದೆ.

ದೇವಾಲಯದಲ್ಲಿ ನಡೆಯುವ ವಿಶೇಷ ಪೂಜೆಯ ವಿವರ: 

ಪೂರಿ ಹಲ್ವಾ ಭೋಗ್                       10001 ರುಪಾಯಿ
ಪೂರಿ ಹಲ್ವಾ ಸಬ್ಜಿ ಭೋಗ್                 12551 ರುಪಾಯಿ
ಕಿಚಡಿ ಭೋಗ್                                7551 ರುಪಾಯಿ
ಪೂರಿ ಖೀರ್ ಭೋಗ್                       10001 ರುಪಾಯಿ
ಗುರುವಾರದ ಸಾಧಾರಣ ಭೋಗ್      1001 ರುಪಾಯಿ

ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು: 

ಹೊಸ ವರ್ಷದ ಆಚರಣೆ.
ವಸಂತ ಪಂಚಮಿ.
ಹೋಳಿ ಹಬ್ಬ.
ಶ್ರೀ ರಾಮನವಮಿ.
ಗುರುಪೂರ್ಣಿಮೆ.
ವಿಜಯದಶಮಿ - ದೇವಾಲಯದ ವಾರ್ಷಿಕೋತ್ಸವ
ದೀಪಾವಳಿ.

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಸೈಂಟ್  ಫ್ರಾನ್ಸಿಸ್ ಶಾಲೆಯ ಹತ್ತಿರ, ಕೈಸ್ಟರ್ಸ ಟೌನ್, ಬಾಬಾ ಬೈದ್ಯನಾಥ್ ದೇವಘರ್.

ವಿಳಾಸ: 


ಶ್ರೀ ಶಿರಡಿ ಸಾಯಿ ಮಂದಿರ,
ಸೈಂಟ್  ಫ್ರಾನ್ಸಿಸ್  ರಸ್ತೆ ,
ಕೈಸ್ಟರ್ಸ ಟೌನ್, ಬಾಬಾ ಬೈದ್ಯನಾಥ್ ದೇವಘರ್,
ಜಾರ್ಖಂಡ್ -814 112, ಭಾರತ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ. ಮಹೇಶ್ ಕುಮಾರ್ ಸಿಂಗ್ / ಶ್ರೀ.ಮನೋಜ್ ಕುಮಾರ್

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು: 

+ 91 86038 04017 / +91 97987 77420 / +91 94313 84678

ಇ ಮೇಲ್ ವಿಳಾಸ: 

saimandirdeoghar@gmail.com / adityamahesh001@yahoo.com 


ಮಾರ್ಗಸೂಚಿ: 


ಬೈದ್ಯನಾಥ್ ದೇವಘರ್ ರೈಲ್ವೇ ನಿಲ್ದಾಣದಲ್ಲಿ ಇಳಿಯುವುದು. ರೈಲ್ವೇ ನಿಲ್ದಾಣದಿಂದ ಸುಭಾಷ್ ವೃತ್ತದವರೆಗೆ ಸುಮಾರು ಅರ್ಧ ಕಿಲೋಮೀಟರ್ ಕ್ರಮಿಸಿದರೆ ಸೈಂಟ್ ಫ್ರಾನ್ಸಿಸ್ ಶಾಲೆ ಸಿಗುತ್ತದೆ. ಅಲ್ಲಿಂದ ಸುಮಾರು 150 ಮೀಟರ್ ನಡೆದರೆ ಸಾಯಿಬಾಬಾ ಮಂದಿರ ಸಿಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment