ಶಿರಡಿ ಯಾತ್ರಿಕರು ಧರಿಸಬೇಕಾದ ಉಡುಪುಗಳು - ಆಧಾರ - ಸಾಯಿ ಕಾ ಆಂಗನ್ (ಅಂತರ್ಜಾಲ)
ಮುಂದಿನ ದಿನಗಳಲ್ಲಿ ಶಿರಡಿ ಸಾಯಿಬಾಬಾರವರ ದರ್ಶನಕ್ಕೆ ಹೋಗಬೇಕಾದರೆ ಧರಿಸಬೇಕಾದ ಉಡುಪುಗಳ ಬಗ್ಗೆ ಅತಿ ಶೀಘ್ರದಲ್ಲೇ ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟಣೆ ಹೊರಬೀಳುವ ಸಾಧ್ಯತೆಗಳು ಹೆಚ್ಚಾಗಿವೆ.
ದೇವಾಲಯಕ್ಕೆ ಬರುವಾಗ ಜೀನ್ಸ್, ಬರ್ಮುಡಾಗಳು, ತೋಳಿಲ್ಲದ ರವಿಕೆಗಳು, ಮಿನಿ, ಶಾರ್ಟ್ಸ್ ಹಾಗೂ ಇನ್ನು ಮುಂತಾದ ಯಾವುದೇ ರೀತಿಯ ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಿ ಬಂದರೆ ದೇವಾಲಯದ ಒಳಗಡೆಗೆ ಪ್ರವೇಶವನ್ನು ನಿರ್ಬಂಧಿಸಲು ಪ್ರಯತ್ನಗಳು ನಡೆದಿವೆ. ಮಹಿಳಾ ಯಾತ್ರಿಕರು ಸೀರೆಯನ್ನು ಹಾಗೂ ತುಂಬು ತೋಳಿನ ರವಿಕೆಯನ್ನು ಮತ್ತು ಪುರುಷರು ಕುರ್ತಾ/ಪೈಜಾಮ ಅಥವಾ ತುಂಬು ತೋಳಿನ ಶರ್ಟ್ ಗಳನ್ನು ಧರಿಸಿದರೆ ಮಾತ್ರ ಪ್ರವೇಶ ನೀಡಲು ನಿರ್ಧರಿಸಲಾಗುತ್ತಿದೆ.
ಈ ರೀತಿ ನಿರ್ಧಾರಕ್ಕೆ ಕಾರಣವೇನೆಂದರೆ ಅನೇಕ ಯಾತ್ರಿಕರು ಶಿರಡಿ ಸಾಯಿಬಾಬಾ ಸಂಸ್ಥಾನಕ್ಕೆ ಈ ವಿಷಯದ ಬಗ್ಗೆ ದೂರುಗಳನ್ನು ನೀಡಿರುತ್ತಾರೆ. ದೇವಾಲಯಕ್ಕೆ ಬರುವಾಗ ಒಳ್ಳೆಯ ರೀತಿಯಲ್ಲಿ ಬಂದರೆ ದೇವಾಲಯದ ಪವಿತ್ರತೆಗೆ ಧಕ್ಕೆ ಬರುವುದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ. ಈ ವಿಷಯದ ಬಗ್ಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಸಾಯಿಬಾಬಾ ಸಂಸ್ಥಾನದವರು ನಿರ್ಧರಿಸಿದ್ದಾರೆ.
No comments:
Post a Comment