ಶಿರಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆ ಕಾರ್ಯಕ್ರಮ - ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್, ಶಿರಡಿ
ಪ್ರಪಂಚದ ಎಲ್ಲಾ ಸಾಯಿಭಕ್ತರಿಗೆ ಒಂದು ಸಿಹಿ ಸುದ್ದಿ. ಬಹಳ ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ಶಿರಡಿ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ಮಹಾರಾಷ್ಟ್ರದ ಮುಖ್ಯ ಮಂತ್ರಿಗಳಾದ ಶ್ರೀಯುತ.ಅಶೋಕ್ ಚವಾಣ್ ರವರು ಕಳೆದ ತಿಂಗಳ 27ನೇ ಆಗಸ್ಟ್ 2010 ರ ಶುಭ ಶುಕ್ರವಾರದಂದು ನೆರವೇರಿಸಿದರು. ಉಪ ಮುಖ್ಯ ಮಂತ್ರಿಗಳಾದ ಶ್ರೀಯುತ.ಚಗನ್ ಭುಜ್ ಬಲ್, ವ್ಯವಸಾಯ ಖಾತೆ ಸಚಿವರಾದ ಶ್ರೀಯುತ. ಬಾಳಾಸಾಬ್ ತೋರಟ್, ಸಾರಿಗೆ ಸಚಿವರಾದ ಶ್ರೀಯುತ. ರಾಧಕೃಷ್ಣ ವಿಕ್ಹೆ ಪಾಟೀಲ್, ಶಿರಡಿ ಸಾಯಿಬಾಬಾ ಸಂಸ್ಥಾನದ ಚೇರ್ಮೆನ್ ಶ್ರೀಯುತ. ಜಯಂತ್ ಸಾಸನೆ, ವಿಮಾನ ನಿಲ್ದಾಣ ಪ್ರಾಧಿಕಾರದ ಮುಖ್ಯಸ್ಥರಾದ ಶ್ರೀಯುತ. ಸಿನ್ಹಾ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಸಮಾರಂಭಕ್ಕೆ ಸಿದ್ದವಾಗಿರುವ ಬೃಹತ್ ವೇದಿಕೆ
ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ.ಅಶೋಕ್ ಚವಾಣ್ ಭೂಮಿ ಫೂಜೆ ನೆರವೇರಿಸುತ್ತಿರುವ ದೃಶ್ಯ
ಈತ್ತೀಚಿನ ದಿನಗಳಲ್ಲಿ ಶಿರಡಿ ಸಾಯಿಬಾಬಾ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಪ್ರತಿನಿತ್ಯ ಸರಿ ಸುಮಾರು 30,000 ಭಕ್ತರು ಭಾರತದ ಎಲ್ಲಾ ಭಾಗಗಳಿಂದಲೂ ಮತ್ತು ದೇಶ ವಿದೇಶಗಳಿಂದಲೂ ಬಂದು ಸಾಯಿಬಾಬಾರವರ ದರ್ಶನ ಪಡೆಯುತ್ತಿದ್ದಾರೆ. ಗುರುವಾರ ಮತ್ತು ಭಾನುವಾರಗಳಂದು ಭಕ್ತರ ಸಂಖ್ಯೆ ಸುಮಾರು 1 ಲಕ್ಷ ದಾಟುತ್ತದೆ. ಪ್ರಮುಖ ಉತ್ಸವದ ದಿನಗಳಾದ ವಿಜಯದಶಮಿ, ಗುರುಪೂರ್ಣಿಮಾ, ರಾಮನವಮಿ, ಗುಡಿ ಪಾಡ್ವ (ಯುಗಾದಿ), ಗೋಕುಲಾಷ್ಟಮಿ ದಿನಗಳಂದು ಭಕ್ತರ ಸಂಖ್ಯೆ 2 ಲಕ್ಷ ದಾಟುತ್ತದೆ.
ಶ್ರೀಯುತ.ಅಶೋಕ್ ಚವಾಣ್ ರವರು ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ದೃಶ್ಯ
ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು
ಶಿರಡಿಯಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗುವುದರಿಂದ ಹೆಚ್ಚು ಹೆಚ್ಹು ಸಾಯಿ ಭಕ್ತರು ದರ್ಶನಕ್ಕೆ ಬರುವಂತೆ ಆಗುವುದೇ ಆಲ್ಲದೇ ಬಸ್ ಮತ್ತು ರೈಲುಗಳ ಜನಸಂದಣಿ ಕಡಿಮೆಯಾಗುತ್ತದೆ. ಶಿರಡಿ ವಿಮಾನ ನಿಲ್ದಾಣವು ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ರೂಪುಗೊಳ್ಳಲಿದ್ದು ಇದರ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು 260 ಕೋಟಿ ಎಂದು ಅಂದಾಜು ಮಾಡಲಾಗಿದೆ. ವಿಮಾನ ನಿಲ್ದಾಣವು ಬರುವ ವರ್ಷದ ನವೆಂಬರ್ 2011 ರ ವೇಳೆಗೆ ಪೂರ್ಣಗೊಳಿಸುವ ಉದ್ದೇಶವನ್ನು ಮಹಾರಾಷ್ಟ್ರ ಸರ್ಕಾರ ಹೊಂದಿದೆ.
No comments:
Post a Comment