ಚಿತ್ತೂರಿನ ಸಾಯಿಮಂದಿರ - ಶ್ರೀ ಶಿರಡಿ ಸಾಯಿಬಾಬಾ ಅಭ್ಯುದಯ ಆಶ್ರಮ, ಶಿರ್ಡಿಪುರಂ, ಪುಲ್ಲುರ್ ಕ್ರಾಸ್, ಎಸ್.ಆರ್.ಪುರಂ ಮಂಡಳ - ಕೃಪೆ - ಶ್ರೀ. ಶೇಖರ ರಾಜು
ದೇವಾಲಯದ ವಿಶೇಷತೆಗಳು
ಗುರುಸ್ಥಾನವು ಏಪ್ರಿಲ್ ೨೦೦೭ ರಲ್ಲಿ ಮೊದಲು ಉದ್ಘಾಟನೆಗೊಂಡಿತು.
ಸಾಯಿಮಂದಿರವು ೨೧ ನೇ ಜೂನ್ ೨೦೦೭ ರಂದು ಅಮ್ಮುಲ ಸಾಂಭಶಿವರಾವ್ ರವರಿಂದ ಉದ್ಘಾಟನೆಗೊಂಡಿತು.
ಈ ದೇವಾಲಯವನ್ನು ಶ್ರೀಯುತ ಸಿ.ದಿಲೀಪ್ ರಾಜು ರವರು ಶ್ರೀಯುತ ಶೇಖರ ರಾಜುರವರೊಂದಿಗೆ ಸೇರಿ ಮತ್ತು ಸಾಯಿಭಕ್ತರ ಸಹಕಾರದೊಂದಿಗೆ ನಿರ್ಮಿಸಿದರು ಮತ್ತು ಕಾಲಾನಂತರದಲ್ಲಿ ಮಂದಿರವನ್ನು ಶ್ರೀ. ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ) ಗೆ ದಾನವಾಗಿ ನೀಡಿದ್ದಾರೆ.
ಗುರುಸ್ಥಾನದಲ್ಲಿ ವಿನಾಯಕ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳಿವೆ.
ನಂದಿಯ ವಿಗ್ರಹವನ್ನು ಸಾಯಿಬಾಬಾ ದೇವಾಲಯದ ಹೊರಗಡೆ ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ.
ಸಾಯಿಬಾಬಾ ದೇವಾಲಯದ ಮುಂದುಗಡೆ ಶ್ರೀ ಸಾಯಿ ಕೋಟಿ ಸ್ಥೂಪವನ್ನು ನಿರ್ಮಿಸಲಾಗಿದೆ.
ದ್ವಾರಕಾಮಾಯಿಯನ್ನು ಸಾಯಿಬಾಬಾ ದೇವಾಲಯದ ಮುಂದುಗಡೆಯಲ್ಲಿ ಸ್ಥಾಪಿಸಲಾಗಿದ್ದು,ಇದರ ಒಳಗಡೆ ಬೆಂಗಳೂರಿನ ಬಿ.ಟಿ.ಎಂ.ಸಾಯಿಬಾಬಾ ಮಂದಿರದಿಂದ ತಂದ ಪವಿತ್ರ ಅಗ್ನಿಯಿಂದ ಧುನಿಯನ್ನು ಸ್ಥಾಪಿಸಲಾಗಿದೆ.
ಗುರುಸ್ಥಾನದ ಪಕ್ಕದಲ್ಲಿ ನವಗ್ರಹ ದೇವರುಗಳ ದೇವಸ್ಥಾನವನ್ನು ಕಟ್ಟಲಾಗಿದೆ.
ನವಗ್ರಹ ದೇವಸ್ಥಾನದ ಪಕ್ಕದಲ್ಲಿ ನಾಗ ದೇವರ ದೇವಾಲಯವನ್ನು ಕಟ್ಟಲಾಗಿದೆ.
ಸಾಯಿಬಾಬಾರವರ ವಿಗ್ರಹ
ವಿನಾಯಕ, ದತ್ತಾತ್ರೇಯ ಹಾಗೂ ಸುಬ್ರಮಣ್ಯ ದೇವರ ವಿಗ್ರಹಗಳು
ಪವಿತ್ರ ಧುನಿ ಮಾ
ಶ್ರೀ ಸಾಯಿ ಕೋಟಿ ಸ್ಥೂಪ
ನವಗ್ರಹಗಳು
ನಾಗ ದೇವರುಗಳು
ದಿನನಿತ್ಯದ ಕಾರ್ಯಕ್ರಮಗಳು
ಆರತಿ ಸಮಯ
ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೩೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೮:೩೦ ಘಂಟೆಗೆ
ಮಧ್ಯಾನ್ಹ ಆರತಿ - ಮಧ್ಯಾನ್ಹ ೧೨:೦೦ ಘಂಟೆಗೆ
ಧೂಪಾರತಿ - ಸಂಜೆ ೬:೦೦ ಘಂಟೆಗೆ
ಶೇಜಾರತಿ - ರಾತ್ರಿ ೮:೦೦ ಘಂಟೆಗೆ
ಗುರುಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ೭ ರಿಂದ ೯ ಘಂಟೆಯವರೆಗೆ ಅಭಿಷೇಕ ನಡೆಸಲಾಗುತ್ತದೆ. ಇದರ ಸೇವಾ ಶುಲ್ಕ ೧೦೧/- ರೂಪಾಯಿಗಳು.
ಪ್ರತಿದಿನ ಬೆಳಗ್ಗೆ ೯ ರಿಂದ ೧೦:೩೦ ರವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕ ನಡೆಸಲಾಗುತ್ತದೆ. ಇದರ ಸೇವಾ ಶುಲ್ಕ ೧೦೧/- ರುಪಾಯಿಗಳಾಗಿದ್ದು ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು.ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ.
ಪ್ರತಿದಿನ ಧುನಿ ಪೂಜೆಯನ್ನು ಬೆಳಗ್ಗೆ ೧೧:೪೫ ಕ್ಕೆ , ಸಂಜೆ ೫:೪೫ ಕ್ಕೆ ಮತ್ತು ರಾತ್ರಿ ೭:೪೫ ಕ್ಕೆ ಮಾಡಲಾಗುತ್ತದೆ.
ಪ್ರತಿ ಗುರುವಾರ ಪಲ್ಲಕ್ಕಿ ಸೇವೆಯನ್ನು ಸಂಜೆ ೭:೧೫ ಕ್ಕೆ ನಡೆಸಲಾಗುತ್ತದೆ.
ಪ್ರತಿ ಗುರುವಾರ ಚಾಮರ ಸೇವೆಯನ್ನು ಸಂಜೆ ೭:೧೫ ಕ್ಕೆ ನಡೆಸಲಾಗುತ್ತದೆ.
ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು
೧. ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆಯ ಕಾರ್ಯಕ್ರಮ)
೨. ಪ್ರತಿ ವರ್ಷದ ೨ ನೇ ಮೇ ಬೆಳಗ್ಗೆ ೮:೦೦ ರಿಂದ ರಾತ್ರಿ ೮:೦೦ ರ ವರೆಗೆ ಅಖಂಡ ಸಾಯಿ ನಾಮ ಜಪ ಹಮ್ಮಿಕೊಳ್ಳಲಾಗುತ್ತದೆ.
೩. ಶ್ರೀ ರಾಮನವಮಿ.
೪. ಗುರುಪೂರ್ಣಿಮೆ.
೫. ಪ್ರತಿ ವರ್ಷದ ೨೮ ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
೬. ವಿಜಯದಶಮಿ ( ಸಾಯಿಬಾಬಾ ಸಮಾಧಿ ದಿವಸ).
೭. ದತ್ತ ಜಯಂತಿ.
ಮೇಲೆ ತಿಳಿಸಿದ ಎಲ್ಲಾ ವಿಶೇಷ ಉತ್ಸವದ ದಿನಗಳಲ್ಲಿ ವಿವಿಧ ಭಜನ ಗಾಯಕರಿಂದ ಭಜನೆಯನ್ನು ಮತ್ತು ಸಾಯಿ ಮಹಾಪ್ರಸಾದ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು
- ಬಡ ಜನರ ವೈದ್ಯಕೀಯ ಖರ್ಚಿನ ಸ್ವಲ್ಪ ಭಾಗವನ್ನು ದೇವಾಲಯದವರು ಟ್ರಸ್ಟ ನವರ ಆದೇಶದಂತೆ ನೀಡುತ್ತಾರೆ.
- ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡುವುದು.
- ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವುದು.
- ಸಮಾಜದಲ್ಲಿನ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಉಚಿತವಾಗಿ ಸೀರೆ, ಶಾಲುಗಳು ಮತ್ತು ಹೊದಿಕೆಗಳನ್ನು ವಿತರಣೆ ಮಾಡುವುದು.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ
ವಿಳಾಸ :
ಶ್ರೀ.ಶಿರಡಿ ಸಾಯಿಬಾಬಾ ಅಭ್ಯುದಯ ಆಶ್ರಮ
ಶ್ರೀ ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ)
ಶಿರ್ಡಿಪುರಂ, ಪುಲ್ಲುರ್ ಕ್ರಾಸ್, ಎಸ್.ಆರ್. ಮಂಡಲ
ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.
ಸಂಪರ್ಕಿಸಬೇಕಾದ ವ್ಯಕ್ತಿಗಳು :
ದೇವಾಲಯದ ಮ್ಯಾನೇಜರ್ / ಶ್ರೀ. ದಿಲೀಪ್ ರಾಜು / ಶ್ರೀ. ಸುರೇಶ / ಶ್ರೀ. ಶೇಖರ ರಾಜು / ಶ್ರೀ. ಕೃಷ್ಣ ಕುಮಾರ್
ದೂರವಾಣಿ ಸಂಖ್ಯೆಗಳು:
೦೯೪೪೧೭೭೪೩೯೧ / ೯೯೦೦೮ ೫೬೧೧೬ / ೯೮೪೫೦ ೪೯೪೬೮ / ೯೯೦೦೦ ೦೦೦೭೨ / ೯೪೪೯೦ ೨೯೩೯೩
ಈ ಮೇಲ್ ವಿಳಾಸ :
ಮಾರ್ಗಸೂಚಿ :
ಚಿತ್ತೂರು ಮತ್ತು ಪುತ್ತೂರು ಮುಖ್ಯ ಹೆದ್ದಾರಿಯಲ್ಲಿ ೩೨ ನೇ ಮೈಲಿಗಲ್ಲಿನ ಬಳಿ ದೇವಾಲಯವಿದೆ.
No comments:
Post a Comment