Sunday, August 15, 2010

ಸಾಯಿ ಮಹಾಭಕ್ತ - ಮೇಘಶ್ಯಾಮ ರೇಗೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ 

ಮೇಘಶ್ಯಾಮ ರೇಗೆ

ಮೇಘಶ್ಯಾಮ ರೇಗೆಯವರು ಇಂದೂರು ಹೈಕೋರ್ಟ್ ನ ನಿವೃತ್ತ ನ್ಯಾಯಧೀಶರಾಗಿದ್ದರು. ಇವರು ಚಿಕ್ಕಂದಿನಿಂದ ಧಾರ್ಮಿಕ ಮನೋಭಾವ ಉಳ್ಳವರಾಗಿದ್ದರು. ಆದುದರಿಂದ ಇವರು ಸಾಯಿಬಾಬಾರವರಿಂದ ಹೆಚ್ಚು ಪ್ರಯೋಜನ ಪಡೆದರು. ಇವರ ಮನೆ ದೇವರು ಗೋವಾದ ದುರ್ಗೆಯಾಗಿದ್ದು ಚಿಕ್ಕಂದಿನಿಂದ ಇವರು ಅನನ್ಯ ಭಕ್ತಿಯಿಂದ ದುರ್ಗೆಯನ್ನು ಪೂಜಿಸುತ್ತಿದ್ದರು. ಇವರ ೮ ನೇ ವಯಸ್ಸಿನಲ್ಲಿ ಇವರಿಗೆ ಉಪನಯನವಾಯಿತು. ಆಗಿನಿಂದಲೇ ಗಾಯತ್ರಿ ಮಂತ್ರ ಮತ್ತು ಸಂಧ್ಯಾವಂದನೆಯನ್ನು ತಪ್ಪದೆ ನಿತ್ಯವೂ ಆಚರಿಸುತ್ತಿದ್ದರು. ಆನಂತರ ರವಿ ವರ್ಮರವರ ಧ್ರುವನಾರಾಯಣ ಚಿತ್ರವು ಇವರನ್ನು ಬಹಳ ಆಕರ್ಷಿಸಿತು ಮತ್ತು  ನಾರಾಯಣನ ಬಗ್ಗೆ ಅಪಾರ ಭಕ್ತಿಯು ಬೆಳೆಯಿತು. ಕೊನೆಯ ಕಾಲದಲ್ಲಿ ನಾರಾಯಣನಲ್ಲಿ ಪಾದಗಳಲ್ಲಿ ಲೀನವಾಗಬೇಕೆಂಬ ಬಯಕೆ ಇವರಲ್ಲಿ ಬೆಳೆಯಿತು. ಇವರು ನಿತ್ಯ ದೇವರ ಪೂಜೆ, ಪ್ರಾರ್ಥನೆ, ಧ್ಯಾನ ಮಾಡುವುದಲ್ಲದೆ ಯೋಗಾಸನ ಮತ್ತು ಪ್ರಾಣಾಯಾಮ ಕೂಡ ಮಾಡುತ್ತಿದ್ದರು. ಇವರು ಎರಡು ಘಂಟೆಗಳವರೆಗೆ ಪದ್ಮಾಸನ ಅಥವಾ ಸಿದ್ದಾಸನ ಸ್ಥಿತಿಯಲ್ಲಿ ಕುಳಿತುಕೊಳ್ಳಬಲ್ಲವರಾಗಿದ್ದರು. ಒಂದು ದೇವರ ಚಿತ್ರಪಟವನ್ನು ೧೫ ನಿಮಿಷಗಳ ಕಾಲ ತದೇಕ ಚಿತ್ತದಿಂದ ನೋಡುತ್ತಿದ್ದರು. ಇವೆಲ್ಲವನ್ನೂ ಇವರು ಯಾವ ಗುರುವಿನ ಮಾರ್ಗದರ್ಶನವಿಲ್ಲದೆ ಮಾಡುತ್ತಿದ್ದರು. ಪ್ರಾಣಾಯಾಮ ಮಾಡುವಾಗ ಉಸಿರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಲ್ಲವರಾಗಿದ್ದರು. ಇವರು ತಮ್ಮ ಹೃದಯದ ಬಡಿತವನ್ನು ತಹಬದಿಯಲ್ಲಿ ಇಟ್ಟುಕೊಳ್ಳುವ ಅಥವಾ ಹೃದಯದ ಬಡಿತವನ್ನೇ ನಿಲ್ಲಿಸಬಲ್ಲ ಶಕ್ತಿಯನ್ನು ಹೊಂದಿದ್ದರು. ವಿಷ್ಣುವಿನಲ್ಲಿದ್ದ ಅನನ್ಯ ಭಕ್ತಿ ಮತ್ತು ನಿರಂತರ ಆಧ್ಯಾತ್ಮಿಕ ಸಾಧನೆ ಇವರಿಗೆ ತಮ್ಮ ೨೧ ನೇ ವಯಸ್ಸಿನಲ್ಲಿ ಫಲ ಕೊಟ್ಟಿತು.

ಕ್ರಿ.ಶ.೧೯೧೦ ರ ಒಂದು ರಾತ್ರಿ ಇವರಿಗೆ ಸತತ ೩ ಬಾರಿ ವಿಶೇಷವಾದ ಕನಸಾಯಿತು. ಮೊದಲನೇ ಕನಸಿನಲ್ಲಿ ಇವರ ದೇಹದಲ್ಲಿ ಬದಲಾವಣೆಯಾದಂತೆ ತೋರಿತು. ಇವರಿಂದ ಇವರ ದೇಹ ಬೇರೆಯಾದಂತೆ ತೋರಿತು ಮತ್ತು ಇವರು ಆ ದೇಹವನ್ನು ವೀಕ್ಷಿಸುತ್ತಿದ್ದಂತೆ ಭಾಸವಾಯಿತು. ಇವರ ಮುಂದೆ ವಿಷ್ಣು ನಾರಾಯಣ ನಿಂತಂತೆ ಅನಿಸಿತು. ಈ ಕನಸಿನಿಂದ ಆಧ್ಯಾತ್ಮಿಕ ಮಾರ್ಗದಲ್ಲಿ ಮೊದಲನೆಯ ಹೆಜ್ಜೆಯಾದ ದೇಹ ಮತ್ತು ಆತ್ಮಗಳ ಸಂಬಂಧದ ಅರಿವು ಅವರಿಗೆ ಆಯಿತು. ಒಂದು ಘಂಟೆಯ ನಂತರ ಮತ್ತೊಂದು ಕನಸಾಯಿತು. ಈ ಬಾರಿ ಇವರಿಂದ ಇವರ ದೇಹ ಬೇರೆಯಾದಂತೆ ತೋರಿತು ಮತ್ತು ಇವರು ಆ ದೇಹವನ್ನು ವೀಕ್ಷಿಸುತ್ತಿದ್ದಂತೆ ಭಾಸವಾಯಿತು. ಇವರ ಮುಂದೆ ವಿಷ್ಣು ನಾರಾಯಣ ನಿಂತಂತೆ ಅನಿಸಿತು. ಇಷ್ಟೇ ಆಲ್ಲದೇ ಮತ್ತೊಬ್ಬರು ನಿಂತಂತೆ ಭಾಸವಾಯಿತು. ವಿಷ್ಣು ನಾರಾಯಣ ಅವರ ಕಡೆ ಬೆರಳು ತೋರಿಸುತ್ತಾ ಅವರು ಶಿರಡಿ ಸಾಯಿಬಾಬಾರವರೆಂದು ಮತ್ತು ಅವರನ್ನು ಇನ್ನು ಮುಂದೆ ಆಶ್ರಯಿಸಬೇಕೆಂದು ಹೇಳಿದಂತೆ ಭಾಸವಾಯಿತು. ಈ ಕನಸು ರೇಗೆಯವರಿಗೆ ತಮ್ಮ ಆಧ್ಯಾತ್ಮಿಕ ಗುರುವನ್ನು ತೋರಿಸುವಲ್ಲಿ ಯಶಸ್ವಿಯಾಯಿತು. ಇನ್ನೊಂದು ಘಂಟೆಯ ನಂತರ ೩ ನೇ ಕನಸಾಯಿತು. ಅದರಲ್ಲಿ ಇವರು ಗಾಳಿಯಲ್ಲಿ ಪ್ರಯಾಣ ಮಾಡುತ್ತಿರುವಂತೆ ಭಾಸವಾಯಿತು. ಅದೇ ರೀತಿ ಪ್ರಯಾಣ ಮಾಡಿ ಅವರು ಒಂದು ಹಳ್ಳಿಗೆ ಬಂದರು. ಅದು ಯಾವ ಸ್ಥಳವೆಂದು ವಿಚಾರಿಸಲಾಗಿ ಹಳ್ಳಿಯವರು ಅದು ಶಿರಡಿ ಗ್ರಾಮವೆಂದು ಹೇಳಿದರು. ಅಲ್ಲಿ ಸಾಯಿಬಾಬಾರವರು ಇರುವರೇ ಎಂದು ಹಳ್ಳಿಯವರನ್ನು ಕೇಳಲು ಅವರು ಇರುವರೆಂದು ಹೇಳಿ ಅವರಿದ್ದ ಮಸೀದಿಯ ಬಳಿಗೆ ಇವರನ್ನು ಕರೆದುಕೊಂಡು ಹೋದಂತೆ ಅನಿಸಿತು. ಮಸೀದಿಯಲ್ಲಿ ಸಾಯಿಬಾಬಾರವರು ಕಾಲುಚಾಚಿ ಕುಳಿತಿದ್ದರು. ಅವರನ್ನು ನೋಡಿದ ಕೂಡಲೇ ರೇಗೆಯವರು ಅವರ ಕಾಲಿಗೆ ನಮಸ್ಕರಿಸಿದರು. ಆದರೆ ಅವರಿಂದ ನಮಸ್ಕಾರ ಸ್ವೀಕರಿಸದೆ ತಕ್ಷಣವೇ ಮೇಲಕ್ಕೆದ್ದು "ನೀನೇಕೆ ನನ್ನ ದರ್ಶನ ಮಾಡುತ್ತೀಯ. ನಾನೇ ನಿನಗೆ ಋಣಿಯಾಗಿದ್ದೇನೆ. ನಾನು ನಿನ್ನ ದರ್ಶನ ಮಾಡಬೇಕು" ಎಂದು ಹೇಳುತ್ತಾ ತಮ್ಮ ತಲೆಯನ್ನು ರೇಗೆಯವರ ಪಾದಗಳಲ್ಲಿ ಇಟ್ಟಂತೆ ಭಾಸವಾಯಿತು. ಅಲ್ಲಿಗೆ ೩ ನೇ ಕನಸು ಮುಗಿಯಿತು. ಈ ೩ ಕನಸುಗಳು ರೇಗೆಯವರ ಮೇಲೆ ತುಂಬಾ ಪ್ರಭಾವವನ್ನು ಬೀರಿದವು.

ರೇಗೆಯವರ ಮನದಲ್ಲಿ ಸಾಯಿಬಾಬಾರವರು ಭದ್ರವಾಗಿ ನೆಲೆ ಊರಿದರು. ಶಿರಡಿಗೆ ಹೋಗಬೇಕೆಂಬ ಬಯಕೆ ಮನದಲ್ಲಿ ತೀವ್ರವಾಯಿತು. ಆದರೆ ಆಗ ಅವರಿನ್ನು ಚಿಕ್ಕವರಿದ್ದು ಓದುತ್ತಿದ್ದರು. ಕೆಲವು ಕಾಲದ ನಂತರ ರೇಗೆಯವರು ಶಿರಡಿಗೆ ಹೋಗುವಲ್ಲಿ ಸಫಲರಾದರು. ರೇಗೆಯವರು ಶಿರಡಿಗೆ ಹೋಗಿ ಸಾಯಿಯವರ ಪಾದಪದ್ಮಗಳಿಗೆ ಭಕ್ತಿಯಿಂದ ನಮಸ್ಕರಿಸಿದರು. ಕೂಡಲೇ ಸಾಯಿಬಾಬಾರವರು "ಏನು ನೀನು ಒಬ್ಬ ಮನುಷ್ಯನಿಗೆ ನಮಸ್ಕರಿಸುತ್ತೀಯ" ಎಂದು ಕೇಳಿದರು. ಕೂಡಲೇ ರೇಗೆಯವರಿಗೆ ತಮಗೆ ಹಿಂದೆ ಬಿದ್ದ ಕನಸುಗಳು ನೆನಪಾದವು. ಅಲ್ಲಿಂದ ಎದ್ದು ರೇಗೆಯವರು ಮಂಟಪದ ಬಳಿ ಹೋಗಿ ಕುಳಿತರು. ಅಲ್ಲಿ ಎಷ್ಟು ಹೊತ್ತು ಕುಳಿತಿದ್ದರೋ ಅವರಿಗೆ ತಿಳಿಯಲಿಲ್ಲ. ಇವರಿಗೆ ಅತ್ಯಾಶ್ಚರ್ಯವಾಯಿತು. ಇವರು ಓದಿದ್ದರಿಂದ ಇವರಿಗೆ ಮಾನವ ಮಾತ್ರರಿಗೆ ನಮಸ್ಕಾರ ಮಾಡಬಾರದೆಂಬ ವಿಷಯ ತಿಳಿದಿತ್ತು. ಇವರು ಸಂದಿಗ್ಧ ಪರಿಸ್ಥಿತಿಯಲ್ಲಿ ಬಿದ್ದರು. ಕನಸಿನಲ್ಲಿ ಇವರಿಗೆ ಸಾಯಿಯವರನ್ನು ಗುರುವಾಗಿ ಸ್ವೀಕರಿಸುವಂತೆ ಆದೇಶ ಬಂದಿತ್ತು. ಇಲ್ಲಿ ನೋಡಿದರೆ ಸಾಯಿಯವರು ಇವರನ್ನು ಹತ್ತಿರ ಬಂದು ನಮಸ್ಕಾರ ಮಾಡಲು ಕೂಡ ಬಿಡುತ್ತಿರಲಿಲ್ಲ. ಇವರಿಗೆ ಏನು ಮಾಡಬೇಕೆಂದು ತಿಳಿಯಲಿಲ್ಲ. ಇವರು ಸಾಯಿಯವರನ್ನು ಗುರುವಾಗಿ ಸ್ವೀಕರಿಸಲು ಬಹಳ ಧೃಡ ಮನಸ್ಸಿನಿಂದ ಶಿರಡಿಗೆ ಬಂದಿದ್ದರಿಂದ ಒಂದೆಡೆ ಸುಮ್ಮನೆ ಕುಳಿತರು. ಜನರೆಲ್ಲಾ ಬಂದು ಸಾಯಿದರ್ಶನ ಮಾಡಿಕೊಂಡು ಹೋಗುವ ತನಕ ಕಣ್ಣು ಮುಚ್ಚಿಕೊಂಡು ತಾಳ್ಮೆಯಿಂದ ಒಂದೆಡೆ ಕುಳಿತಿದ್ದರು. ಮಧ್ಯಾನ್ಹದ ವೇಳೆಗೆ ಇವರು ಕಣ್ಣು ಬಿಟ್ಟು ನೋಡಲಾಗಿ ಜನರೆಲ್ಲಾ ತಮ್ಮ ಮನೆಗಳಿಗೆ ಹೋಗಿದ್ದರು ಮತ್ತು ಸಾಯಿಯವರೊಬ್ಬರೇ ಇರುವುದು ಕಾಣಿಸಿತು. ಆದರೆ ಮಧ್ಯಾನ್ಹದ ವೇಳೆ ಸಾಯಿಬಾಬಾರವರನ್ನು ಯಾರು ಕೂಡ ಹೋಗಿ ನೋಡಲು ಅವಕಾಶ ಇರಲಿಲ್ಲ. ಆದರೆ ರೇಗೆಯವರಿಗೆ ಇದೆ ಒಳ್ಳೆಯ ಸಮಯ ಎಂದು ಗೊತ್ತಾಯಿತು. ಸಾಯಿಯವರು ತಮ್ಮನ್ನು ಬೈದರೂ ಅಥವಾ ಹೊಡೆಯಲು ಬಂದರೂ ಕೂಡ ಪರವಾಗಿಲ್ಲ ಎಂದು ಮನದಲ್ಲಿ ಅಂದುಕೊಂಡು ಸಾಯಿಯವರ ಬಳಿಗೆ ಹೋದರು. ಸಾಯಿಯವರು ಇವರು ತಮ್ಮ ಬಳಿಗೆ ಬರುವಂತೆ ಪ್ರೀತಿಯಿಂದ ಕರೆದರು. ರೇಗೆಯವರು ಸಾಯಿಯವರ ಬಳಿ ಬಂದು ಅವರ ಪಾದಪದ್ಮಗಳಿಗೆ ಪ್ರಣಾಮವನ್ನು ಸಲ್ಲಿಸಿದರು. ಸಾಯಿಯವರು ರೇಗೆಯವರನ್ನು ಪ್ರೀತಿಯಿಂದ ತಬ್ಬಿಕೊಂಡು ತಮ್ಮ ಬಳಿ ಕೂಡಿಸಿಕೊಂಡು "ನೀನು ನನ್ನ ಮಗು. ಬೇರೆಯವರು ನಮ್ಮ ಬಳಿಯಿದ್ದಾಗ ನಮ್ಮ ಮಕ್ಕಳನ್ನು ಹತ್ತಿರ ಬರಲು ನಾವು ಬಿಡುವುದಿಲ್ಲ ಅಲ್ಲವೇ?" ಎಂದು ಕೇಳಿದರು. ಆಗ ರೇಗೆಯವರಿಗೆ ಏಕೆ ಸಾಯಿಯವರು ತಮ್ಮನ್ನು ಅಲ್ಲಿಯವರೆಗೆ ಹತ್ತಿರ ಬರಲು ಬಿಡಲಿಲ್ಲ ಎಂಬ ವಿಷಯ ತಿಳಿಯಿತು. ತಮ್ಮನ್ನು ಮಗುವೆಂದು ಸಾಯಿಯವರು ಕರೆದಿದ್ದರಿಂದ ರೇಗೆಯವರಿಗೆ ತಾವು ಸಾಯಿಬಾಬಾರವರ ಅಂಕಿತ ಶಿಷ್ಯರೆಂದು ಗೊತ್ತಾಯಿತು. ತಮ್ಮ ಕನಸು ನಿಜವಾಯಿತು ಮತ್ತು ತಮ್ಮ ಜೀವಮಾನದ ಕೊನೆಯವರೆಗೆ ಸಾಯಿಬಾಬಾರವರೇ ತಮ್ಮ ಗುರು ಎಂದು ವಿಷ್ಣು ನಾರಾಯಣ ಆದೇಶ ನೀಡಿದ್ದು ರೇಗೆಯವರ ಮನಸ್ಸಿನಲ್ಲಿ ಚೆನ್ನಾಗಿ ನಿಂತುಬಿಟ್ಟಿತು.

ಸಾಯಿಬಾಬಾರವರು ರೇಗೆಯವರಿಗೆ ರಾಧಾಕೃಷ್ಣಮಾಯಿಯ ಬಳಿಗೆ ಹೋಗಲು ಹೇಳಿದರು. ರಾಧಾಕೃಷ್ಣಮಾಯಿಯವರು ರೇಗೆಯವರನ್ನು ತಮ್ಮ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದರು. ಸಾಯಿಯವರು ಪ್ರತಿನಿತ್ಯ ಒಂದು ರೊಟ್ಟಿಯನ್ನು ಪ್ರಸಾದವಾಗಿ ರಾಧಾಕೃಷ್ಣಮಾಯಿಯವರಿಗೆ ಕಳುಹಿಸುತ್ತಿದ್ದರು. ಆದರೆ ರೇಗೆಯವರು ಶಿರಡಿಯಲ್ಲಿದ್ದಾಗ ಎರಡು ರೊಟ್ಟಿಯನ್ನು ಕಳುಹಿಸುತ್ತಿದ್ದರು. ರಾಧಾಕೃಷ್ಣಮಾಯಿಯವರು ಸಾಯಿಯವರನ್ನು ಬಹುವಾಗಿ ಪ್ರೀತಿಸುತ್ತಿದ್ದರು ಮತ್ತು ಸಾಯಿ ಸಂಸ್ಥಾನದ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಪುರಂದರೆ, ರೇಗೆ ಮತ್ತು ಇನ್ನು ಮುಂತಾದ ಅನೇಕ ಜನರ ಕೈಲಿ ರಾಧಾಕೃಷ್ಣಮಾಯಿ ಸಂಸ್ಥಾನದ ಎಲ್ಲಾ ಕೆಲಸಗಳನ್ನು ಮಾಡಿಸುತ್ತಿದ್ದರು. ಆದರೆ ಸೇವೆ ಮಾಡುವುದೊಂದೇ ಭಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗುವುದಿಲ್ಲ. ಆದರೆ ರಾಧಾಕೃಷ್ಣಮಾಯಿಯವರು ಭಕ್ತಿಗೂ ಮೀರಿದ ಕೆಲವು ವಿಶೇಷ ಶಕ್ತಿಗಳನ್ನು ಹೊಂದಿದ್ದರು. ಮನಸ್ಸಿನ ಏಕಾಗ್ರತೆಯನ್ನು ಹೊಂದಿದ್ದಷ್ಟೇ ಆಲ್ಲದೇ ಒಳ್ಳೆಯ ದನಿಯನ್ನು ಪಡೆದಿದ್ದರು ಮತ್ತು ಚೆನ್ನಾಗಿ ಹಾಡುತ್ತಿದ್ದರು. ರೇಗೆಯವರು ಕೂಡ ಒಳ್ಳೆಯ ಕಂಠವನ್ನು ಹೊಂದಿದ್ದು ಚೆನ್ನಾಗಿ ಹಾಡುತ್ತಿದ್ದರು. ಇವರಿಬ್ಬರೂ ಕಲೆತು ಅನೇಕ ಆಧ್ಯಾತ್ಮಿಕ ವಿಚಾರಗಳನ್ನು ಚರ್ಚಿಸಿ ಅವುಗಳನ್ನು ಯಾರಿಗೂ ಹೇಳ್ಡದೆ ಬಹಳ ಗೌಪ್ಯವಾಗಿರಿಸಿಕೊಳ್ಳುತ್ತಿದ್ದರು. ರಾಧಾಕೃಷ್ಣಮಾಯಿಯವರು ಜಪವನ್ನು ಮಾಡುವಂತೆ ರೇಗೆಯವರಿಗೆ ಹೇಳಲು ಯಾವ ದೇವರ ಜಪ ಮಾಡಬೇಕೆಂದು ರೇಗೆ ಕೇಳಿದರು. ಆಗಾ ರಾಧಕೃಷ್ಣಮಾಯಿ ರಾಮ, ಕೃಷ್ಣ, ವಿಠಲ ಅಥವಾ ಇನ್ನ್ಯಾವ ದೇವರ ಜಪವನ್ನು ಕೂಡ ಮಾಡಬಹುದು. ಆದರೆ ತಮಗೆ ಸಾಯಿಯವರೇ ಎಲ್ಲಾ ದೇವರ ರೂಪವಾದ್ದರಿಂದ ಸಾಯಿ ಜಪವನ್ನು ತಾವು ಮಾಡುವುದಾಗಿ ಹೇಳಿದರು. ಇದನ್ನು ಕೇಳಿ ರೇಗೆಯವರು ಕೂಡ ಸಾಯಿ ನಾಮ ಜಪ ಮಾಡಲು ಪ್ರಾರಂಭಿಸಿದರು. ಇದು ಒಮ್ಮೆ ಸಾಯಿಯವರಿಗೆ ಗೊತ್ತಾಯಿತು. ಸಾಯಿಯವರು ಬಂದು ರೇಗೆಯವರನ್ನು ಏನು ಮಾಡುತ್ತಿದ್ದೆ ಎಂದು ಕೇಳಿದರು. ರೇಗೆ ನನ್ನ ದೇವರ ಜಪ ಮಾಡುತ್ತಿದ್ದೆ ಎಂದು ಹೇಳಿದರು. ಸಾಯಿಯವರು ನಿನ್ನ ದೇವರು ಯಾರೆಂದು ಕೇಳಲು, ರೇಗೆಯವರು ನಿಮಗೆ ಎಲ್ಲಾ ಗೊತ್ತಿದೆಯಲ್ಲ ಎಂದರು. ಸಾಯಿಯವರು ಹಾಗಾದರೆ ಸರಿ ಎಂದು ಸಾಯಿ ನಾಮ ಜಪ ಮಾಡಲು ತಮ್ಮ ಒಪ್ಪಿಗೆ ಇದೆ ಎಂದು ಸೂಚಿಸಿದರು. ರಾಧಾಕೃಷ್ಣಮಾಯಿ ಮತ್ತು ರೇಗೆಯವರಿಗೆ ಸಾಯಿಬಾಬಾರವರ ಮೇಲೆ ಅತೀವ ಪ್ರೀತಿ ಇತ್ತು ಮತ್ತು ಸಾಯಿಯವರು ಕೂಡ ಇವರಿಬ್ಬರನ್ನು ಬಹಳವಾಗಿ ಪ್ರೀತಿಸುತ್ತಿದ್ದರು.

ಒಮ್ಮೆ ಸಾಯಿಯವರು ಸಾಧನೆಯ ಬಗ್ಗೆ ರೇಗೆಯವರಿಗೆ ಒಂದು ಒಳ್ಳೆಯ ಭೋದನೆಯನ್ನು ಮಾಡಿದರು. ಒಂದು ಗುರುಪೂರ್ಣಿಮೆಯ ದಿವಸ ಎಲ್ಲಾ ಸಾಯಿಭಕ್ತರು ಧಾರ್ಮಿಕ ಗ್ರಂಥಗಳನ್ನು ತೆಗೆದುಕೊಂಡು ಬಂದು ಸಾಯಿಬಾಬಾರವರ ಕೈಗೆ ಕೊಟ್ಟು ಅವರಿಂದ ಅದನ್ನು ಆಶೀರ್ವಾದ ಪೂರ್ವಕವಾಗಿ ವಾಪಸು ಪಡೆದು ನಂತರ ಓದಲು ತೆಗೆದುಕೊಂಡು ಹೋಗುತ್ತಿದ್ದರು. ರೇಗೆಯವರು ಕೂಡ ಸಾಯಿಯವರ ಬಳಿಗೆ ಬಂದರು. ಆದರೆ ಅವರು ಯಾವ ಪುಸ್ತಕವನ್ನು ತಮ್ಮ ಜೊತೆ ತಂದಿರಲಿಲ್ಲ. ಸಾಯಿಬಾಬಾರವರು ಅದನ್ನು ಮನಗಂಡು ರೇಗೆಯವರಿಗೆ "ಈ ಜನರು ಪುಸ್ತಕಗಳಲ್ಲಿ ಬ್ರಹ್ಮನನ್ನು ಕಾಣಲು ಬಯಸುತ್ತಾರೆ. ಆದರೆ ಈ ಪುಸ್ತಕಗಳು ಅನೇಕ ಗೊಂದಲಗಳನ್ನು ಮನದಲ್ಲಿ ಹುಟ್ಟು ಹಾಕುತ್ತವೆ. ಆದುದರಿಂದ ನೀನು ಮಾಡಿದ್ದು ಸರಿಯಾಗಿದೆ. ಯಾವ ಪುಸ್ತಕಗಳನ್ನು ನೀನು ಓದಬೇಡ. ನನ್ನ ರೂಪವನ್ನು ನೀನು ಹೃದಯದಲ್ಲಿ ಇಟ್ಟುಕೋ. ನಿನ್ನ ಮನದ ಮತ್ತು ಹೃದಯದ ನಡುವೆ ಏಕತಾನತೆ ಬೆಳೆಸಿಕೊಂಡರೆ ಅಷ್ಟೇ ಸಾಕು" ಎಂದು ಹೇಳಿದರು.

ಹಾಗೆಂದು ಹೇಳಿದ ಮಾತ್ರಕ್ಕೆ ಸಾಯಿಬಾಬಾರವರು ಪುಸ್ತಕಗಳನ್ನು ಓದಲೇಬಾರದೆಂಬ ನಿಯಮವನ್ನೇನು ತಮ್ಮ ಭಕ್ತರ ಮೇಲೆ ಹೇರುತ್ತಿರಲಿಲ್ಲ. ಸಾಯಿಬಾಬಾರವರೇ ಸ್ವತಃ ಅನೇಕ ಭಕ್ತರಿಗೆ ಏಕನಾಥ ಭಾಗವತ, ಭಾವಾರ್ಥ ರಾಮಾಯಣ, ಜ್ಞಾನೇಶ್ವರಿ, ವಿಷ್ಣು ಸಹಸ್ರನಾಮ, ಭಗವದ್ಗೀತಾ ಮುಂತಾದ ಧಾರ್ಮಿಕ ಗ್ರಂಥಗಳನ್ನು ಪಾರಾಯಣ ಮಾಡಲು ಹೇಳುತ್ತಿದ್ದರು. ಆದರೆ ಪುಸ್ತಕಗಳಿಗಿಂತ ಹೆಚ್ಚಾಗಿ ಗುರುವಿನ ಅನನ್ಯ ಧ್ಯಾನವನ್ನು ಪ್ರತಿಪಾದಿಸುತ್ತಿದ್ದರು. ರೇಗೆಯವರಿಗೆ ಇದರ ನೇರ ಅನುಭವ ಆಗಾಗ್ಗೆ ಆಗುತ್ತಲೇ ಇರುತ್ತಿತ್ತು.

ಕ್ರಿ.ಶ.೧೯೧೬ ರ ರಾಮನವಮಿ ಸಂದರ್ಭದಲ್ಲಿ ಎಲ್ಲಾ ಸಾಯಿಭಕ್ತರು ಬಾಬಾರವರಿಗೆ ವಿಧ ವಿಧವಾದ ವಸ್ತ್ರಗಳನ್ನು ನೀಡುತ್ತಿದ್ದರು ಮತ್ತು ಅದನ್ನು ಅವರ ಆಶೀರ್ವಾದ ಎಂದು ಹಿಂದಕ್ಕೆ ಪಡೆಯುತ್ತಿದ್ದರು. ಆಗ ರೇಗೆ ಯವರು ಸಹ ೮೫/- ರುಪಾಯಿಗಳನ್ನು ಖರ್ಚು ಮಾಡಿ ಒಂದು ಅಂದವಾದ ಮಸ್ಲಿನ್ ಬಟ್ಟೆಯನ್ನು ಕೊಂಡರು. ಹೇಗಾದರೂ ಮಾಡಿ ಅದನ್ನು ಸಾಯಿಬಾಬಾರವರಿಗೆ ಕೊಡಬೇಕೆಂದು ಮತ್ತು ಪುನಃ ಅದನ್ನು ವಾಪಾಸ್ ಪಡೆಯದೇ ಸಾಯಿಯವರ ಕೈನಲ್ಲಿ ಕಟ್ಟಿಕೊಂಡರೆ ಚೆನ್ನಾಗಿರುತ್ತದೆ ಎಂದು ಯೋಚನೆ ಮಾಡುತ್ತಾ ಯಾರಿಗೂ ತಿಳಿಯದಂತೆ ಸಾಯಿಬಾಬಾರವರು ಕುಳಿತುಕೊಳ್ಳುತ್ತಿದ್ದ ಗದ್ದುಗೆಯ ಕೆಳಗೆ ಮುಚ್ಚಿಟ್ಟರು. ಸ್ವಲ್ಪ ಸಮಯದ ನಂತರ ಗದ್ದುಗೆಯಿಂದ ಮೇಲೆದ್ದ ಬಾಬಾರವರು ಆ ಗದ್ದುಗೆಯನ್ನು ಚೆನ್ನಾಗಿ ಕೊಡವಿ ಎಂದು ಅಲ್ಲಿದ ಭಕ್ತರಿಗೆ ಹೇಳಿದರು. ಆಗ ರೇಗೆ ಅಡಗಿಸಿಟ್ಟಿದ್ದ ಮಸ್ಲಿನ್ ವಸ್ತ್ರವು ಬಾಬಾರವರಿಗೆ ಕಂಡಿತು. ಅದನ್ನು ನೋಡಿದ ಬಾಬಾರವರು ತಮ್ಮ ಕೈಗಳಿಗೆ ಅದನ್ನು ತೆಗೆದುಕೊಂಡು "ಈ ವಸ್ತ್ರವು ಯಾರದು. ನಾನು ಇದನ್ನು ಹಿಂದಕ್ಕೆ ಕೊಡುವುದಿಲ್ಲ. ಇದು ನನ್ನದು" ಎಂದು ಹೇಳುತ್ತಾ ತಮ್ಮ ಕೈಗಳಿಗೆ ಅದನ್ನು ತೊಟ್ಟುಕೊಂಡು ರೇಗೆಯವರ ಕಡೆ ನೋಡುತ್ತಾ "ಇದು ನನಗೆ ಚೆನ್ನಾಗಿ ಕಾಣುತ್ತದೆ ಅಲ್ಲವೇ" ಎಂದು ಕೇಳಿದರು. ಇದರಿಂದ ರೇಗೆಯವರಿಗೆ ಆದ ಆನಂದವನ್ನು ಸಾಯಿಭಕ್ತರು ಊಹಿಸಬಹುದು.

ಗ್ವಾಲಿಯರ್ ನ ನಿವೃತ್ತ ನ್ಯಾಯಾಧೀಶರಾದ ಪಿ.ಆರ್. ಅವಸ್ಥೆಯವರು ಶಿರಡಿಗೆ ಬರಲು ಕಾರಣಕರ್ತರು ಶ್ರೀ. ರೇಗೆ ಮತ್ತು ರಾಧಾಕೃಷ್ಣ ಮಾಯಿಯವರು. ರಾಧಾಕೃಷ್ಣ ಮಾಯಿಯವರಿಗೆ ಅನೇಕ ಪ್ರಸಿದ್ದ ವ್ಯಕ್ತಿಗಳು ಬಂದು ಸಾಯಿಬಾಬಾರವರ ಪಾದ ದರ್ಶನ ಮಾಡಿ ಹೋಗಬೇಕೆಂಬ ಬಯಕೆ ಇತ್ತು. ಅದಕ್ಕಾಗಿ ಅವರು ಬಹಳ ಶ್ರಮಿಸಿದರು.

ಒಮ್ಮೆ ಸಾಯಿಬಾಬಾರವರು ಮಸೀದಿಯಲ್ಲಿ ಒಬ್ಬರೇ ಇದ್ದಾಗ ರೇಗೆಯವರಿಗೆ ಬರ ಹೇಳಿದರು. ರೇಗೆಯವರು ಬಂದ ಕೂಡಲೇ ಅವರ ಕೈಲಿ ಮಸೀದಿಯ ತಿಜೋರಿಯ ಕೀಲಿ ಕೈಯನ್ನು ಇರಿಸಿ "ನಿನ್ನ ಕೈಯಲ್ಲಿ ಮಸೀದಿಯ ತಿಜೋರಿಯ ಬೀಗದ ಕೈಯನ್ನು ನೀಡಿದ್ದೇನೆ. ನಿನಗೆಷ್ಟು ಬೇಕೋ ಅಷ್ಟು ತೆಗೆದುಕೋ" ಎಂದು ಹೇಳಲು ರೇಗೆಯವರು ನಿರಾಕರಿಸಿ ತಾನು ಕೇಳಿದ್ದನ್ನು ನೀಡುವುದಾಗಿ ಭರವಸೆ ನೀಡಿದರೆ ಮಾತ್ರ ಕೇಳುವುದಾಗಿ ಹೇಳಿದರು. ಸಾಯಿಯವರು ರೇಗೆಯವರ ಕನ್ನೆಯನ್ನು ಮೃದುವಾಗಿ ಸವರಿ ತಮ್ಮ ಒಪ್ಪಿಗೆ ಸೂಚಿಸಿದರು. ಆಗ ರೇಗೆಯವರು ತಮ್ಮ ಈಗಿನ ಜನ್ಮದಲ್ಲಿಯೇ ಆಲ್ಲದೇ ಮುಂದಿನ ಎಲ್ಲಾ ಜನ್ಮಗಳಲ್ಲೂ ತಮ್ಮ ಜೊತೆಯೇ ಇರಬೇಕು ಮತ್ತು ತಮ್ಮನ್ನು ರಕ್ಷಿಸಬೇಕೆಂದು ಕೇಳಿಕೊಂಡರು. ರೇಗೆಯವರ ಮಾತುಗಳನ್ನು ಕೇಳಿ ಸಾಯಿಬಾಬಾರವರಿಗೆ ತುಂಬಾ ಸಂತೋಷವಾಗಿ ರೇಗೆಯವರನ್ನು ಬೆನ್ನನ್ನು ಮೃದುವಾಗಿ ತಟ್ಟುತ್ತಾ ತಾವು ಅನವರತವೂ ರೇಗೆಯವರ ಜೊತೆಯಲ್ಲೇ ಇರುವುದಾಗಿ ಭರವಸೆ ನೀಡಿದರು.

ಕ್ರಿ.ಶ.೧೯೧೪ ರಲ್ಲಿ ರೇಗೆಯವರು ತಮ್ಮ ಗರ್ಭಿಣಿ ಪತ್ನಿಯೊಂದಿಗೆ ಶಿರಡಿಗೆ ಹೋಗಿ ಸಾಯಿಬಾಬಾರವರ ದರ್ಶನ ಮಾಡಿದಾಗ ಸಾಯಿಯವರು "ನನ್ನ ಒಂದು ವಸ್ತು ನಿಮ್ಮ ಬಳಿಯೇ ಇದೆ" ಎಂದು ಮಾರ್ಮಿಕವಾಗಿ ಹೇಳಿದರು. ಕೆಲವು ತಿಂಗಳ ಬಳಿಕ ಮಗುವಿನೊಂದಿಗೆ ಶಿರಡಿಗೆ ತೆರಳಿದಾಗ ಸಾಯಿಯವರು "ರೇಗೆ, ಈ ಮಗು ನಿನ್ನದೋ ಅಥವಾ ನನ್ನದೋ" ಎಂದು ಕೇಳಿದರು. ಆಗ ರೇಗೆಯವರು "ನಿಮ್ಮದೇ ಬಾಬಾ" ಎಂದು ಉತ್ತರಿಸಲು ಸಾಯಿಬಾಬಾರವರು "ಈ ಮಗುವನ್ನು ನನ್ನ ಪ್ರತಿರೂಪವಾಗಿ ನಿನ್ನ ಬಳಿಯೇ ಇಟ್ಟುಕೊಂಡಿರು" ಎಂದು ಹೇಳಿದರು. ಸಾಯಿಯವರಿಗೆ ಮಗುವಿನ ಮುಂದಿನ ಭವಿಷ್ಯ ಮೊದಲೇ ತಿಳಿದಿತ್ತು. ಆದುದರಿಂದ ಹಾಗೆ ಹೇಳಿದರು. ಹಾಗೆ ಹೇಳಿ ಒಂದೂವರೆ ವರ್ಷದ ಬಳಿಕ ಮಗುವಿಗೆ ನ್ಯುಮೋನಿಯಾ ಖಾಯಿಲೆ ಬಂದು ದಿನೇ ದಿನೇ ಕೃಶವಾಗುತ್ತ ಬಂದಿತು. ರೇಗೆಯವರು ಮಗುವಿನೊಂದಿಗೆ ತಮ್ಮ ಮನೆಯ ಪೂಜಾ ಕೋಣೆಗೆ ಹೋಗಿ " ಬಾಬಾ, ಈ ಮಗು ನಿಮ್ಮದು. ಇದನ್ನು ನಿಮ್ಮ ಬಳಿಗೆ ಕರೆದುಕೊಂಡು ಸದ್ಗತಿ ನೀಡಿ. ಅದರ ಕರ್ಮವನ್ನು ನಾನು ಭರಿಸುತ್ತೇನೆ" ಎಂದು ಸಾಯಿಯವರನ್ನು ಪ್ರಾರ್ಥಿಸಿದರು. ಹಾಗೆ ಹೇಳುತ್ತಾ ತಮ್ಮ ಕೈಯನ್ನು ಮಗುವಿನ ಹಣೆಯ ಮೇಲಿಟ್ಟರು. ಆ ಮಗುವು ಇವರನ್ನು ನೋಡಿ ನಗುತ್ತ ಯೋಗಿಗಳ ಹಾಗೆ ಮಗುವಿನ ಬ್ರಹ್ಮ ರಂಧ್ರದ ಮುಖೇನ ಪ್ರಾಣ ಹೋಯಿತು. ಕೆಲವು ದಿನಗಳ ಬಳಿಕ ರೇಗೆಯವರು ಶಿರಡಿಗೆ ಹೋದಾಗ ಸಾಯಿಬಾಬಾರವರು ತಮ್ಮ ಮಾತುಗಳಿಂದ ಮಗುವಿಗೆ ಸದ್ಗತಿ ನೀಡಿರುವ ವಿಷಯವನ್ನು ಧೃಡಪಡಿಸಿದರು. ಇದನ್ನು ಸಾಯಿಸಹಸ್ರನಾಮದಲ್ಲಿ ಉಲ್ಲೇಖಿಸಲಾಗಿದೆ.

ರೇಗೆಯವರು ಯಾವಾಗಲೂ ಸಾಯಿಯವರನ್ನು ಪ್ರಾಪಂಚಿಕ ಸುಖಗಳಿಗಾಗಿ ಪ್ರಾರ್ಥಿಸಲಿಲ್ಲ. ಅವರು ತಮ್ಮ ಬಳಿ ಇದ್ದುದರಲ್ಲೇ ತೃಪ್ತಿಯನ್ನು ಹೊಂದಿದ್ದರು. ಸಾಯಿಯವರು ರೇಗೆಯವರಿಗೆ ಅವಸ್ಥಾತ್ರಯಗಳಾದ ಜಾಗ್ರತ್, ಸ್ವಪ್ನ, ಸುಷುಪ್ತಿ ಸ್ಥಿತಿಗಳಲ್ಲಿ ತಮ್ಮ ಇರುವಿಕೆಯನ್ನು ಧೃಡಪಡಿಸಿದರು ಮತ್ತು ಅನೇಕ ರೀತಿಯಲ್ಲಿ ಆಧ್ಯಾತ್ಮಿಕ ಅನುಭವಗಳನ್ನು ರೇಗೆಯವರಿಗೆ ನೀಡಿದರು. ರೇಗೆಯವರು ತಮ್ಮ ತನು ಮನ ಧನಗಳನ್ನು ಸಾಯಿಯವರಿಗೆ ಅರ್ಪಿಸಿ ಅವರಿಗೆ ಸಂಪೂರ್ಣ ಶರಣಾಗಿದ್ದರು ಮತ್ತು ಸಾಯಿ ಕೃಪೆ ಬೇಡುವ ಎಲ್ಲಾ ಭಕ್ತರಿಗೂ ಕೂಡ ಹಾಗೆಯೇ ಮಾಡಬೇಕೆಂದು ಹೇಳುತ್ತಾರೆ.

Tuesday, August 10, 2010

ಸಾಯಿ ಮಹಾ ಭಕ್ತೆ  - ಶ್ರೀಮತಿ ತಾರಾಭಾಯಿ ಸದಾಶಿವ ತಾರ್ಕಡ್ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಲೈಫ್ ಆಫ್ ಸಾಯಿಬಾಬಾ

ಶ್ರೀಮತಿ ತಾರಾಭಾಯಿ ಸದಾಶಿವ ತಾರ್ಕಡ್ ರವರು ಪುಣೆಯಲ್ಲಿದ್ದಾಗ ತಮ್ಮ ಮುಂಬೈ ನಲ್ಲಿದ್ದ ತಮ್ಮ ಭಾವನವರಾದ ಶ್ರೀ.ಆರ್.ತಾರ್ಕಡ್ ರವರಿಂದ ಸಾಯಿಬಾಬಾರವರ ಬಗ್ಗೆ ಮೊದಲ ಬಾರಿಗೆ ತಿಳಿದುಕೊಂಡರು. ಅವರ ಭಾವನವರು ಸಾಯಿಯವರ ಲೀಲೆಗಳನ್ನು ಹಾಡಿ ಹೊಗಳಿದಾಗ ಸ್ವಾಭಾವಿಕವಾಗಿ ತಾರಾಭಾಯಿಯವರ ಮನಸ್ಸು ಕೂಡ ಅವರ ಬಗ್ಗೆ ಆಸಕ್ತಿಯನ್ನು ತಳೆಯಿತು. ಏಕೆಂದರೆ ತಾರಾಭಾಯಿಯವರ ೧೫ ತಿಂಗಳ ಮಗು ನಳಿನಿ ಬಹಳ ಖಾಯಿಲೆಯಿಂದ ಬಳಲುತ್ತಿದ್ದಳು. ಅವರ ಭಾವನವರ ಮಾತನ್ನು ಆಲಿಸಿದ ತಾರಾಭಾಯಿ ಸಾಯಿಬಾಬಾರವರು ತಮ್ಮ ಮಗಳ ಖಾಯಿಲೆಯನ್ನು ಗುಣ ಮಾಡಿದರೆ ಆ ಕ್ಷಣವೇ ಶಿರಡಿಗೆ ತನ್ನ ಮನೆಯವರೊಂದಿಗೆ ತೆರಳುತ್ತೇನೆ ಎಂದು ಹರಸಿಕೊಂಡರು. ಆಶ್ಚರ್ಯವೆಂಬಂತೆ ಮಗಳ ಖಾಯಿಲೆ ಸಂಪೂರ್ಣ ಕಡಿಮೆಯಾಯಿತು. ಆಗ ತಾರಾಭಾಯಿ ತಮ್ಮ ಗಂಡ ಮತ್ತು ಮಗಳೊಡನೆ ಶಿರಡಿಗೆ ತೆರಳಿದರು.

ತಾರಾಭಾಯಿಯವರು ಸಾಯಿಬಾಬಾರವರಲ್ಲಿ ಸಂಪೂರ್ಣ ಶರಣಾಗತರಾಗಿ ಸಾಯಿಯವರ ಅಂಕಿತ ಭಕ್ತರಾಗಿದ್ದರು. ಇವರು ಮೊದಲ ಬಾರಿಗೆ ಶಿರಡಿಗೆ ಹೋದಾಗ ಶಿರಡಿಯಲ್ಲಿ ಯಾವುದೇ ಬೀದಿ ದೀಪಗಳಾಗಲಿ ಅಥವಾ ಶಿರಡಿ ಗ್ರಾಮವನ್ನು ನೋಡಿಕೊಳ್ಳಲು ಯಾವುದೇ ಒಂದು ಗ್ರಾಮದ ಸಂಸ್ಥೆಯಾಗಲಿ ಇರಲಿಲ್ಲ. ರಾತ್ರಿಯ ಕತ್ತಲಿನಲ್ಲಿ ತಾರಭಾಯಿಯವರು ನಡೆಯುತ್ತಿದ್ದರು. ಆಗ ಅವರಿಗೆ ಒಂದು ಸ್ಥಳದಲ್ಲಿ ನಿಲ್ಲಬೇಕೆಂದು ಅನಿಸಿತು. ಅಲ್ಲಿಂದ ಮುಂದೆ ಕಾಲಿರಿಸದೆ ಅಲ್ಲೇ ನಿಂತರು. ಯಾರೋ ದೀಪವನ್ನು ತಂದು ಇವರ ಬಳಿ ಹಿಡಿದರು. ದೀಪದ ಬೆಳಕಿನಲ್ಲಿ ನೋಡಲಾಗಿ ಇವರ ಮುಂದೆಯೇ ಒಂದು ದೊಡ್ಡ ಸರ್ಪ ಸುರುಳಿ ಸುತ್ತಿಕೊಂಡು ಕುಳಿತಿತ್ತು. ಇನ್ನೊಂದು ಹೆಜ್ಜೆ ಮುಂದೆ ಇಟ್ಟಿದ್ದರೆ ಇವರು ಸರ್ಪದ ಮೇಲೆ ಕಾಲಿಡುತ್ತಿದ್ದರು. ಅವರು ಯಾಕೆ ತಮ್ಮ ಕಾಲನ್ನು ಮುಂದೆ ಇಡಲಿಲ್ಲ. ಅದೇ ಸಮಯದಲ್ಲಿ ದೀಪವು ಅಲ್ಲಿಗೆ ಹೇಗೆ ಬಂದಿತು ಎಂದು ಅವರಿಗೆ ತಿಳಿಯಲಿಲ್ಲ. ಸಾಯಿಬಾಬಾರವರು ತಮ್ಮ ಭಕ್ತರನ್ನು ಈ ರೀತಿ ಸಾದಾ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿಕೊಳ್ಳುತ್ತಿದ್ದರು.

ಒಮ್ಮೆ ತಾರಾಭಾಯಿಯವರು ತಮ್ಮ ಜೊತೆಯಲ್ಲಿ ತಮ್ಮ ಮನೆಯ ಕೆಲಸದವನನ್ನು ಕೂಡ ಶಿರಡಿಗೆ ಕರೆದುಕೊಂಡು ಹೋಗಿದ್ದರು. ಅವನು ಅತೀವ ಸೊಂಟದ ನೋವಿನಿಂದ ಬಳಲುತ್ತಿದ್ದನು. ಆಗ ಶಿರಡಿಯಲ್ಲಿ ಯಾವುದೇ ಆಸ್ಪತ್ರೆಯಾಗಲಿ ಇರಲಿಲ್ಲ. ತಾರಭಾಯಿಯವರ ಗಂಡ ಸಾಯಿಬಾಬಾರವರ ಬಳಿಗೆ ಬಂದು ಅವರನ್ನು ಪ್ರಾರ್ಥಿಸಲು ಸಾಯಿಬಾಬಾರವರು ಲೇಂಡಿ ಉದ್ಯಾನವನದ ಬಳಿ ಕೋರ್ ಪಡ್ ಎಲೆಗಳಿದ್ದು ಅದನ್ನು ತಂದು ಎರಡು ಭಾಗವನ್ನಾಗಿ ಸೀಳಿ ಬೆಂಕಿಯಲ್ಲಿ ಅದನ್ನು ಚೆನ್ನಾಗಿ ಬೇಯಿಸಿ ಅದನ್ನು ನೋವಿರುವ ಜಾಗಕ್ಕೆ ಹಚ್ಚಿದರೆ ನೋವು ಕಡಿಮೆಯಾಗುವುದೆಂದು ಹೇಳಿದರು. ಸಾಯಿಯವರ ಆದೇಶದಂತೆ ಮಾಡಲಾಗಿ ರೋಗಿಗೆ ಸಂಪೂರ್ಣ ಗುಣವಾಯಿತು.

ಒಮ್ಮೆ ತಾರಾಭಾಯಿ ಕಣ್ಣು ಬೇನೆಯಿಂದ ಬಳಲುತ್ತಿದ್ದರು. ಅವರು ಹೋಗಿ ಸಾಯಿಬಾಬಾರವರ ಮುಂದೆ ಕುಳಿತರು. ಎರಡು ಕಣ್ಣುಗಳು ಬಹಳ ನೋಯುತ್ತಿತ್ತು ಮತ್ತು ನೀರು ಸುರಿಯುತ್ತಿತ್ತು. ಸಾಯಿಬಾಬಾರವರು ತಾರಭಾಯಿಯನ್ನು ದೃಷ್ಟಿಸಿ ನೋಡಿದರು. ಕೂಡಲೇ ಅವರ ಕಣ್ಣು ಬೇನೆ ಮತ್ತು ನೀರು ಸುರಿಯುವುದು ನಿಂತಿತು. ಆದರೆ ಸಾಯಿಬಾಬಾರವರ ಕಣ್ಣುಗಳಿಂದ ನೀರು ಒಂದೇ ಸಮನೆ ಸುರಿಯುತ್ತಿತ್ತು. ತಮ್ಮ ಬಳಿಗೆ ಬಂದ ಯಾವುದೇ ಭಕ್ತರ ತೊಂದರೆಗಳಿಗೆ ಸಾಯಿಬಾಬಾರವರು ಕ್ಷಣಮಾತ್ರದಲ್ಲಿ ಪರಿಹಾರವನ್ನು ಸೂಚಿಸುತ್ತಿದ್ದರು. ತಮ್ಮ ಭಕ್ತರ ಕಾಯಿಲೆ ಯನ್ನು ತಾವು ತೆಗೆದುಕೊಂಡು ಅವರ ತೊಂದರೆಯನ್ನು ಹೇಗೆ ಪರಿಹರಿಸುತ್ತಿದ್ದರೆಂದು ಯಾವ ಭಕ್ತರಿಗೂ ಕೂಡ ತಿಳಿಯುತ್ತಿರಲಿಲ್ಲ.

ಕ್ರಿ.ಶ.೧೯೧೫ ರಲ್ಲಿ ತಾರಾಭಾಯಿ ಅತೀವ ತಲೆನೋವಿನಿಂದ ನೆರಳುತ್ತಿದ್ದರು. ತಮ್ಮ ತಲೆ ಸಿಡಿದು ಹೋಗುವುದೇನೋ ಎಂಬುವಷ್ಟು ಯಾತನೆಯಾಗಿ ಅವರು ಶಿರಡಿಗೆ ಹೋಗಿ ಸಾಯಿಯವರ ಬಳಿ ತಮ್ಮ ಪ್ರಾಣವನ್ನು ಬಿಡಬೇಕೆಂದು ನಿಶ್ಚಯಿಸಿ ತಮ್ಮ ಪತಿಯೊಡನೆ ಶಿರಡಿಗೆ ಹೊರಟರು. ಕೋಪರ್ ಗಾವ್ ನಲ್ಲಿ ಗೋದಾವರಿ ನದಿಯನ್ನು ದಾಟುವಾಗ ಇವರ ಮನಸ್ಸಿನಲ್ಲಿ ನದಿಯಲ್ಲಿ ಸ್ನಾನ ಮಾಡಬೇಕೆಂದು ಅನಿಸಿತು. ಕೂಡಲೇ ಗೋದಾವರಿ ನದಿಯ ಕೊರೆಯುವ ನೀರಿನಲ್ಲಿ ಸ್ನಾನ ಮಾಡಿದರು. ಸಾಮಾನ್ಯವಾಗಿ ತಲೆನೋವಿದ್ದಾಗ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ತಲೆನೋವು ಹೆಚ್ಚಾಗುತ್ತದೆ. ಆದರೆ ಇವರ ತಲೆನೋವು ಮಂಗ ಮಾಯವಾಯಿತು. ಅಷ್ಟೇ ಅಲ್ಲಾ, ಮುಂದೆ ಎಂದಿಗೂ ತಲೆ ನೋವು ಪುನಃ ಬರಲೇ ಇಲ್ಲ.

ಕ್ರಿ.ಶ.೧೯೨೭ ರಲ್ಲಿ ಸಾಯಿಯವರ ಮಹಾಸಮಾಧಿಯಾಗಿ ೯ ವರ್ಷಗಳ ನಂತರ ತಾರ್ಕಡ್ ಕುಟುಂಬ ಶಿರಡಿಗೆ ಹೊರಟಿತು. ಆಗ ತಾರಾಭಾಯಿ ತುಂಬು ಗರ್ಭಿಣಿಯಾಗಿದ್ದರು. ಆದರೂ ಧೈರ್ಯ ಮಾಡಿ ಶಿರಡಿಗೆ ಹೊರಟರು. ಶಿರಡಿಯಲ್ಲಿ ಅವರಿಗೆ ಗರ್ಭಪಾತವಾಗಿ ಮಗು ಹೊಟ್ಟೆಯಲ್ಲೇ ಸತ್ತು ಹೋಯಿತು. ಆಲ್ಲದೇ, ಅವರ ದೇಹವೆಲ್ಲ ನೀಲಿಗಟ್ಟಿ, ರಕ್ತವೆಲ್ಲ ವಿಷವಾಗಹತ್ತಿತು. ಅಲ್ಲಿ ಆಗ ತಕ್ಷಣಕ್ಕೆ ಯಾವುದೇ ವೈದ್ಯರಿರಲಿಲ್ಲ. ಹತ್ತಿರದ ಅಹಮದ್ ನಗರದಿಂದ ಔಷಧಿಗಳನ್ನು ತಂದು ಕೊಡಲಾಯಿತಾದರೂ ಯಾವುದೇ ಗುಣ ಕಾಣದೆ ಪರಿಸ್ಥಿತಿ ಹದಗೆಡಲು ಆರಂಭವಾಯಿತು. ಆಗ ತಾರಾಭಾಯಿಯವರ ಪತಿ ಶ್ರೀ.ಸದಾಶಿವ ತಾರ್ಕಡ್ ಸಾಕೋರಿ ಆಶ್ರಮಕ್ಕೆ ತೆರಳಿ ಉಪಾಸಿನಿ ಬಾಬಾರವರನ್ನು ಪ್ರಾರ್ಥನೆ ಮಾಡಲು ಉಪಾಸಿನಿ ಬಾಬಾರವರು "ನೀನು ಇಲ್ಲಿಗೆ ಏಕೆ ಬಂದೆ. ಶಿರಡಿಯಲ್ಲೇ ಒಳ್ಳೆಯ ವೈದ್ಯರು ಹಾಗೂ ನರ್ಸುಗಳು ಇದ್ದರೆ. ನೀನು ಅಲ್ಲಿಗೆ ಹೋಗು" ಎಂದು ಹೇಳಿ ಕಳುಹಿಸಿದರು. ತಾರಾಭಾಯಿ ಪ್ರಜ್ಞೆ ತಪ್ಪಿದರು. ಆದರೆ ಆ ಅರೆ ಪ್ರಜ್ಞಾವಸ್ಥೆ ಸ್ಥಿತಿಯಲ್ಲಿಯೇ ಅವರು ತಮ್ಮ ಬಳಿಯಿದ್ದವರಿಗೆ ಏನು ಮಾಡಬೇಕೆಂದು ನಿರ್ದೇಶನ ಮಾಡುತ್ತಿದ್ದರು, ಆಲ್ಲದೇ ಅವರಿಗೆ ಸಾಯಿಯವರ ಪವಿತ್ರ ಉಧಿ ಮತ್ತು ತೀರ್ಥವನ್ನು ಕೊಡಲಾಯಿತು. ಆಶ್ಚರ್ಯವೆಂಬಂತೆ ಹೊಟ್ಟೆಯಲ್ಲಿದ್ದ ಭ್ರೂಣವು ಹೊರಬಂದಿತು. ಅನೇಕ ವಾರಗಳು ಅರೆ ಪ್ರಜ್ಞಾವಸ್ಥೆಯಲ್ಲೇ ಇದ್ದು ತಾರಭಾಯಿಯವರು ಸಂಪೂರ್ಣ ಗುಣ ಹೊಂದಿದರು. ಇದು ಸಾಯಿಬಾಬಾರವರ ಲೀಲೆಯಲ್ಲದೆ ಮತ್ತೇನು?

ಇದೇ ರೀತಿಯಲ್ಲಿ ಸಾಯಿಬಾಬಾರವರು ತಾರಾಭಾಯಿಯವರ ಗಂಡನನ್ನು ಕೂಡ ಆಶೀರ್ವದಿಸಿದರು. ಶ್ರೀ.ಸದಾಶಿವ ತಾರ್ಕಡ್ ರು ಒಂದು ಗಿರಣಿಯಲ್ಲಿ  ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಆ ಕೆಲಸದಿಂದ ಅವರನ್ನು ಯಾವುದೋ ಕಾರಣಕ್ಕಾಗಿ ವಜಾ ಮಾಡಿದರು. ಯಾವುದೇ ಕೆಲಸವಿಲ್ಲದೇ ಅನೇಕ ದಿನಗಳನ್ನು ಕಳೆದರು. ಆ ಸಮಯದಲ್ಲಿ ಸಾಯಿಬಾಬಾರವರನ್ನು ಕಾಣಲು ಶಿರಡಿಗೆ ತೆರಳಿದರು. ಸಾಯಿಯವರು ಅವರಿಗೆ ಕೆಲಸ ಕೊಡಿಸುವುದನ್ನು ಬಿಟ್ಟು ತಾತ್ಯಾ ಪಾಟೀಲ್ ಮತ್ತಿತರರ ಜೊತೆ  ಅಹಮದ್ ನಗರದಲ್ಲಿ ನಡೆಯುತ್ತಿದ್ದ ಸಿನಿಮಾಗೆ ಹೋಗಿ ನಂತರ ಅಲ್ಲಿಂದಲೇ ಪುಣೆಗೆ ಹೋಗುವಂತೆ ಸೂಚಿಸಿದರು. ಸದಾಶಿವ ಅವರಿಗೆ ಬಾಬಾರವರ ಮಾತುಗಳನ್ನು ಕೇಳಿ ಕೆಲಸ ಕೇಳಲು ಬಂದರೆ ಸಿನಿಮಾಗೆ ಹೋಗಿ ಮೋಜು ಮಾಡಲು ಹೇಳುತ್ತಾರೆಂದು ಸ್ವಲ್ಪ ಬೇಜಾರಾಯಿತು. ಆದರೆ ಸಾಯಿಬಾಬರವರ ಮಾತನ್ನು ಮೀರುವ ಹಾಗಿರಲಿಲ್ಲ. ಆದ್ದರಿಂದ ತಾತ್ಯಾ ಮತ್ತಿತರರೊಂದಿಗೆ ಅಹಮದ್ ನಗರಕ್ಕೆ ಸಿನಿಮಾಗೆ ತೆರಳಿ ಅಲ್ಲಿಂದ ಪುಣೆಗೆ ಹೊರಟರು. ಪುಣೆಗೆ ಬಂದು ನೋಡಿದಾಗ ತಮ್ಮ ಗಿರಣಿಯಲ್ಲಿ ಕೆಲಸಗಾರರು ಮುಷ್ಕರ ನಡೆಸುತ್ತಿದ್ದುದರಿಂದ ಕೆಲಸ ನಿಂತು ಹೋಗಿ ಸದಾಶಿವ ರವರು ಒಳ್ಳೆಯ ಮ್ಯಾನೇಜರ್ ಆಗಿದ್ದು ಅವರು ಕೆಲಸಗಾರರನ್ನು ಚೆನ್ನಾಗಿ ನೋಡಿಕೊಳ್ಳುವ ಕಲೆ ಇದೆ ಎಂದು ಮನಗಂಡು ತಮ್ಮ ತಪ್ಪನ್ನು ಅರಿತುಕೊಂಡು ಇವರ ಗಿರಣಿಯ ಮಾಲೀಕರು ಇವರಿಗೋಸ್ಕರ ಎಲ್ಲಾ ಕಡೆ ತಂತಿಯನ್ನು ಕಳುಹಿಸಿದ್ದುದು ಗೊತ್ತಾಯಿತು. ಇದನ್ನು ಮೊದಲೇ ತಮ್ಮ ಅಂತರ್ ದೃಷ್ಟಿಯಿಂದ ತಿಳಿದ ಸಾಯಿಬಾಬಾರವರು ಇವರನ್ನು ವಾಪಸ್ ಪುಣೆಗೆ ಹೋಗುವಂತೆ ಆದೇಶ ನೀಡಿದ್ದರು. ಹೀಗೆ ಸಾಯಿಬಾಬಾರವರು ಸದಾಶಿವ ತಾರ್ಕಡ್ ರವರನ್ನು ಕೂಡ ಕಷ್ಟಗಳಿಂದ ಪಾರುಮಾಡಿ ಅವರ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದರು.

ಕ್ರಿ.ಶ.೧೯೧೫ ರಲ್ಲಿ ತಾರಾಭಾಯಿ ತಮ್ಮ ಪತಿಯೊಡನೆ ಶಿರಡಿಗೆ ತೆರಳಿದಾಗ ಸಾಯಿಯವರು ಇವರನ್ನು ರಾಧಾಕೃಷ್ಣ ಮಾಯಿಯವರ ಜೊತೆಯಲ್ಲಿರುವಂತೆ ಆದೇಶವಿತ್ತರು. ರಾಧಾಕೃಷ್ಣ ಮಾಯಿಯವರು ಒಬ್ಬ ಬ್ರಾಹ್ಮಣ ವಿಧವೆಯಾಗಿದ್ದರು ಮತ್ತು ಅನನ್ಯ ಸಾಯಿಭಕ್ತೆಯಾಗಿದ್ದರು. ಅವರು ಮಸೀದಿಯ ಎಲ್ಲಾ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದರು. ಆದರೆ ಅವರ ನಾಲಿಗೆ ತುಂಬಾ ಹರಿತವಾಗಿತ್ತು. ಸರಿಯಾಗಿ ಕೆಲಸ ಮಾಡದಿದ್ದರೆ ಚೆನ್ನಾಗಿ ಬಯುತ್ತಿದ್ದರು ಮತ್ತು ತೆಗಳುತ್ತಿದ್ದರು. ಇದರಿಂದ ತಾರಭಾಯಿಯವರು ತಮಗೆ ಸಾಯಿಬಾಬಾ ಈ ರೂಪದಲ್ಲಿ ಶಿಕ್ಷೆಯನ್ನು ನೀಡುತ್ತಿದ್ದಾರೆ ಎಂದು ಭಾವಿಸಿದ್ದರು. ರಾಧಾಕೃಷ್ಣ ಮಾಯಿಯವರು ಸಾಯಿಯವರ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದ್ದರು ಮತ್ತು ಸಾಯಿಬಾಬಾ ಸಂಸ್ಥಾನಕ್ಕೆ ಬಹಳ ಉತ್ತಮವಾದ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರ ಜೀವನವನ್ನೇ ಸಾಯಿಬಾಬಾರವರ ಸೇವೆಗೆ ಮುಡುಪಾಗಿ ಇಟ್ಟಿದ್ದರು. ಆದುದರಿಂದ ರಾಧಾಕೃಷ್ಣ ಮಾಯಿಯವರ ಜೊತೆ ತಾರಭಾಯಿಯವರು ಇದ್ದುದರಿಂದ  ಅವರಿಗೆ ಸಾಯಿಬಾಬಾರವರ ಬಗ್ಗೆ ಇನ್ನು ಹೆಚ್ಚು ಮಾಹಿತಿ ತಿಳಿದುಕೊಳ್ಳಲು ಸಾಧ್ಯವಾಯಿತು ಮತ್ತು ಸಾಯಿ ಸೇವೆಯ ಮಹತ್ವ ಚೆನ್ನಾಗಿ ಅರಿವಾಯಿತು.
ಸಾಯಿ ಮಹಾಭಕ್ತ - ದತ್ತಾತ್ರೇಯ ದಾಮೋದರ ರಾಸನೆ ಅಲಿಯಾಸ್ ನಾನಾಸಾಹೇಬ್ ರಾಸನೆ- ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು

ದತ್ತಾತ್ರೇಯ ದಾಮೋದರ ರಾಸನೆ

ದತ್ತಾತ್ರೇಯ ರಾಸನೆಯವರು ದಾಮೋದರ ಸಾವಲ್ ರಾಮ್ ರಾಸನೆಯವರ ಮೊದಲನೇ ಪುತ್ರ. ಕ್ರಿ.ಶ.೧೯೦೦ ರಲ್ಲಿ ಇವರ ೫ ನೇ ವರ್ಷದಲ್ಲಿ ಇವರ ಚೌಲ ಕಾರ್ಯ ಮಾಡಿಸಲು ಮತ್ತು ಅಕ್ಷರಾಭ್ಯಾಸ ಮಾಡಿಸಲು ಇವರ ತಂದೆಯವರು ಇವರನ್ನು ಶಿರಡಿಗೆ ಕರೆದುಕೊಂಡು ಹೋದರು. ಸಾಯಿಬಾಬಾರವರು ಇವರ ಕೈಹಿಡಿದು ಅಕ್ಷರಾಭ್ಯಾಸ ಮಾಡಿಸಿದರು. ಇವರನ್ನು ನಂತರ ಶಿರಡಿಯಲ್ಲಿನ ಶಾಲೆಗೆ ಸೇರಿಸಲಾಯಿತು. ದತ್ತಾತ್ರೇಯರ ಮದುವೆಯ ಸಮಯದಲ್ಲಿ ಇವರಿಗೆ ೪ ಹೆಣ್ಣುಗಳ ಜಾತಕಗಳು ಬಂದವು. ಇವರ ತಂದೆಯವರು ಸಾಯಿಬಾಬಾರವರ ಅನುಮತಿ ಇಲ್ಲದೆ ಯಾವ ಕೆಲಸವನ್ನು ಮಾಡುತ್ತಿರಲಿಲ್ಲ. ಆದ್ದರಿಂದ ೪ ಜಾತಕಗಳನ್ನು ಹಿಡಿದುಕೊಂಡು ಸಾಯಿಬಾಬಾರವರ ಬಳಿಗೆ ಹೋದರು. ಒಂದು ಹೆಣ್ಣಿನ ಕಡೆಯವರು ೨೫೦೦ ರಿಂದ ೩೦೦೦ ರುಪಾಯಿಗಳ ವರದಕ್ಷಿಣೆಯನ್ನು ಕೂಡ ನೀಡುತ್ತೇವೆಂದು ಹೇಳಿದ್ದರು. ಆದರೆ ಸಾಯಿಯವರು ಒಂದು ಬಡ ಹೆಣ್ಣಿನ ಜಾತಕವನ್ನು ತೋರಿಸಿ ಅದೇ ಹೆಣ್ಣನ್ನು ಕೊಟ್ಟು ಮದುವೆ ಮಾಡುವಂತೆ ದತ್ತಾತ್ರೇಯ ರಾಸನೆಯವರ ತಂದೆಯವರಿಗೆ ಸೂಚಿಸಿದರು. ಅದೇ ಹೆಣ್ಣನ್ನು ದತ್ತಾತ್ರೇಯ ರಾಸನೆಯವರಿಗೆ ಕೊಟ್ಟು ಮದುವೆ ಮಾಡಲಾಯಿತು. ಮದುವೆಯು ಪಂಡರಾಪುರದಲ್ಲಿ ನಡೆಯುವಂತೆ ನಿಶ್ಚಯಿಸಲಾಗಿತ್ತು. ಮದುವೆಗೆ ಸಾಯಿಯವರನ್ನು ಬರುವಂತೆ ದತ್ತಾತ್ರೇಯ ರಾಸನೆಯವರ ತಂದೆ ತುಂಬಾ ಒತ್ತಾಯ ಮಾಡಿದಾಗ ಸಾಯಿಬಾಬಾರವರು "ನಾನು ನಿನ್ನೊಂದಿಗೆ ಸದಾ ಇರುತ್ತೇನೆ. ನನ್ನನ್ನು ನೆನಪು ಮಾಡಿಕೊಂಡಾಗಳೆಲ್ಲ ನಾನು ನಿನ್ನ ಬಳಿ ಬರುತ್ತೇನೆ. ದೇವರ ಅನುಮತಿ ಇಲ್ಲದೆ ನಾನು ಎಲ್ಲಿಯು ಬರಲು ಆಗುವುದಿಲ್ಲ. ನನ್ನ ಬದಲು ಶ್ಯಾಮನನ್ನು ಕಳುಹಿಸುತ್ತೇನೆ" ಎಂದರು. ಅದರಂತೆ, ಶ್ಯಾಮ ಅವರು ಮದುವೆಗೆ ಪಂಡರಾಪುರಕ್ಕೆ ಹೋಗಿಬಂದರು. ದತ್ತಾತ್ರೇಯ ರಾಸನೆಯವರ ತಮ್ಮನಿಗೆ ಕೂಡ ಸಾಯಿಬಾಬಾರವರ ನಿರ್ದೇಶನದಂತೆ ಹಸರು ಇಡಲಾಯಿತು.

ದತ್ತಾತ್ರೇಯ ರಾಸನೆಯವರಿಗೆ ಎರಡು ಹೆಣ್ಣು ಮಕ್ಕಳು ಮತ್ತು ಒಬ್ಬ ಗಂಡು ಮಗನಿದ್ದನು. ಆದರೆ, ಆ ಮಕ್ಕಳೆಲ್ಲ ಅಪಸ್ಮಾರ ಖಾಯಿಲೆ ಬಂದು ಹುಟ್ಟಿದ ಕೆಲವೇ ದಿನಗಳಲ್ಲಿ ಸತ್ತು ಹೋದರು. ಗಂಡು ಮಗ ಕ್ರಿ.ಶ.೧೯೨೬ ರಲ್ಲಿ ಮರಣ ಹೊಂದಿದನು. ಇವರ ಹೆಂಡತಿ ಬಹಳ ಖಾಯಿಲೆಯಿಂದ ನೆರಳುತ್ತಿದ್ದರು ಮತ್ತು ಇವರಿಗೆ ದಿಕ್ಕೇ ತೋಚದಂತಾಗಿತ್ತು. ಆಗ ಇವರು ಸಯಿಯವರನ್ನು ಮನಸಾರೆ ಪ್ರಾರ್ಥಿಸಿದರು. ಇವರು ಶಿರಡಿಯಲ್ಲಿ ಒಂದು ದಿನ ರಾತ್ರಿಯವೇಳೆ ಮಲಗಿರುವಾಗ ಕನಸಿನಲ್ಲಿ ಸಾಯಿಬಾಬಾರವರು ಬಂದು ಇವರ ಮಗನು ದುಷ್ಟ ನಕ್ಷತ್ರದಲ್ಲಿ ಜನಿಸಿದ್ದರಿಂದ ತಂದೆ ತಾಯಿಗಳಿಗೆ ಅಪಾಯವಿತ್ತೆಂದು, ಆದ್ದರಿಂದ ಆ ಮಗುವನ್ನು ತಾವೇ ತಮ್ಮ ಬಳಿಗೆ ಕರೆದುಕೊಂಡೆ ಎಂದು ಹೇಳಿ, ಅದರ ಬದಲು ಮತ್ತೊಬ್ಬ ಮಗನು ಹುಟ್ಟುವನೆಂದು ಅಭಯವನ್ನಿತ್ತರು. ಅದರಂತೆ ೧೫ ತಿಂಗಳ ಒಳಗಾಗಿ ಅವರಿಗೆ ಮತ್ತೊಬ್ಬ ಮಗನು ಹುಟ್ಟಿದನು. 

ಕ್ರಿ.ಶ.೧೯೨೭ ರಲ್ಲಿ ಖೇಡ್ ಗಾವ್ ಪೇಟ್ ನ ಶ್ರೀ. ನಾರಾಯಣ ಮಹಾರಾಜರವರ ಬಳಿಗೆ ಹೋಗಿ ಅವರಿಗೆ ವಂದಿಸಿದಾಗ ಅವರು "ನಿನ್ನ ಗುರುಗಳು ಶಿರಡಿ ಸಾಯಿಬಾಬಾ. ನೀನು ಒಳ್ಳೆಯ ಗುರುವನ್ನೇ ಆಶ್ರಯಿಸಿದ್ದಿಯೇ. ಇಲ್ಲಿಗೆ ಬರುವ ಅವಶ್ಯಕತೆಯಿರಲಿಲ್ಲ. ನೀನು ಅಲ್ಲಿಗೆ ಹೋಗಿ ನಿನ್ನ ಗುರುಗಳನ್ನು ಪೂಜಿಸು" ಎಂದು ಅಪ್ಪಣೆಯಿತ್ತರು. 

ಕ್ರಿ.ಶ.೧೯೨೭ ರಲ್ಲಿ ಇನ್ನೊಬ್ಬ ಸಾಧು ಸಂತರಾದ ಜಾನಕೀದಾಸ ಎಂಬುವರನ್ನು ಭೇಟಿ ಮಾಡಿ ಅವರಿಗೆ ಸಾಯಿಬಾಬಾರವರ ಹೆಸರನ್ನು ಹೇಳಿಕೊಂಡು ನಮಸ್ಕರಿಸಿದಾಗ ಅವರು ಕೂಡ "ನಿನ್ನ ಗುರುಗಳು ಶಿರಡಿ ಸಾಯಿಬಾಬಾ. ನೀನು ಒಳ್ಳೆಯ ಗುರುವನ್ನೇ ಆಶ್ರಯಿಸಿದ್ದಿಯೇ. ಇಲ್ಲಿಗೆ ಬರುವ ಅವಶ್ಯಕತೆಯಿರಲಿಲ್ಲ. ನೀನು ಅಲ್ಲಿಗೆ ಹೋಗಿ ನಿನ್ನ ಗುರುಗಳನ್ನು ಪೂಜಿಸು" ಎಂದು ಅಪ್ಪಣೆಯಿತ್ತರು. 

ಕ್ರಿ.ಶ.೧೯೨೭ ರಲ್ಲಿ ಇವರು ಖಾಯಿಲೆಯಿಂದ ನೆರಳುತ್ತಿದ್ದಾಗ ಪ್ರತಿ ಭಾನುವಾರ ಜುನ್ನೆರ್ ನಿಂದ ೨ ಮೈಲು ದೂರದಲ್ಲಿದ್ದ ಶಿವನ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುತ್ತಿದ್ದರು. ಒಂದು ದಿನ ಆ ದೇವರ ಪ್ರತಿಮೆಯಲ್ಲಿ ಶಿವನ ಬದಲು ಸಾಯಿಬಾಬಾರವರೇ ಕುಳಿತಿರುವಂತೆ ಕಂಡು ಭಕ್ತಿಯಿಂದ ನಮಸ್ಕರಿಸಿದರು. ಅಂದಿನಿಂದ ಅವರ ಖಾಯಿಲೆ ಗುಣವಾಯಿತು.

ಕ್ರಿ.ಶ.೧೯೨೮ ರಲ್ಲಿ ದತ್ತಾತ್ರೇಯ ಅವರಿಗೆ ಒಬ್ಬ ಮಗನು ಇವರು ಪಂಡರಾಪುರದಲ್ಲಿದ್ದಾಗ ಹುಟ್ಟಿದನು. ೧೫ ತಿಂಗಳ ನಂತರ ಇವರು ತಮ್ಮ ತಂದೆಯವರೊಂದಿಗೆ ಶಿರಡಿಗೆ ಹೋದಾಗ ಇವರ ತಂದೆಯವರು ಇವರಿಗೆ ಇನ್ನೊಂದು ಮಗನು ಹುಟ್ಟುವಂತೆ ಆಶೀರ್ವಾದ ಮಾಡಲು ಸಾಯಿಬಾಬಾರವರನ್ನು ಪ್ರಾರ್ಥಿಸಿದರು.

ಕ್ರಿ.ಶ.೧೯೩೧ ರಲ್ಲಿ ದತ್ತಾತ್ರೇಯರಿಗೆ ಮತ್ತೊಬ್ಬ ಮಗನು ಹುಟ್ಟಿದನು. ಅವನಿಗೆ ಸಾಯಿದಾಸ ಎಂದು ಹೆಸರಿಟ್ಟರು. ಅವನು ಹುಟ್ಟಿದ ಎರಡನೇ ದಿನವೇ ಅವನಿಗೆ ವಿಪರೀತ ಜ್ವರ ಕಾಣಿಸಿಕೊಂಡಿತು. ಆ ಮಗುವಿಗೆ ಸಾಯಿಬಾಬಾರವರ ಉಧಿ ಮತ್ತು ತೀರ್ಥವನ್ನು ನೀಡಲಾಯಿತು. ಆಲ್ಲದೇ, ಸಾಯಿಬಾಬಾರವರ ಬಟ್ಟೆಯ ಚೂರುಗಳನ್ನು ತಾಯಿತದಲ್ಲಿ ಸೇರಿಸಿ ಮಗುವಿಗೆ ಕಟ್ಟಲಾಯಿತು. ಮಗುವು ಸ್ವಲ್ಪ ದಿನಗಳಲ್ಲಿ ಹುಷಾರಾಯಿತು. ಮಗುವಿಗೆ ಒಂದು ವರ್ಷವಾದ ನಂತರ ಮಗುವಿನೊಂದಿಗೆ ಶಿರಡಿಗೆ ತೆರಳಿದರು. ಸಾಯಿಬಾಬಾರವರಿಗೆ ಅಭಿಷೇಕವನ್ನು ಮಾಡಿಸಿ, ಸಮಾಧಿಗೆ ಶೇಷವಸ್ತ್ರವನ್ನು ಹೊದಿಸಿ, ಅನೇಕ ಬ್ರಾಹ್ಮಣರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

ಕ್ರಿ.ಶ.೧೯೩೧ ರಲ್ಲಿ ದತ್ತಾತ್ರೇಯ ಅವರನ್ನು ಬಳೆಗಳ ವ್ಯಾಪಾರ ಮಾಡಲು ಅವರ ತಂದೆಯವರು ನೇಮಿಸಿದರು. ದತ್ತಾತ್ರೇಯ ಅವರು ಅಂಗಡಿಯ ಹೆಸರಿನಲ್ಲಿ ಸಾಯಿಬಾಬಾರವರ ಹೆಸರು ಇರಬೇಕೆಂದು ಪಟ್ಟು ಹಿಡಿದರು. ಸಾಯಿಬಾಬಾರವರ ಪಟದ ಮುಂದೆ ಅನೇಕ ಹೆಸರುಗಳನ್ನು ಬರೆದು ಚೀಟಿಯನ್ನು ಹಾಕಿ ಅವರ ಅನುಮತಿ ಪಡೆದು ಅಂಗಡಿಗೆ "ಶ್ರೀ ಸಮರ್ಥ ಸಾಯಿನಾಥ್ ಅಂಡ್ ಕಂಪನಿ" ಎಂದು ಹೆಸರಿಟ್ಟರು. ಅಂಗಡಿಯಲ್ಲಿ ವ್ಯಾಪಾರವನ್ನು ಯಾವುದೇ ಮೋಸವಿಲ್ಲದೆ ಸಾಯಿಯವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುತ್ತಾ ನಿಯತ್ತಿನಿಂದ ವ್ಯಾಪಾರ ಮಾಡುತ್ತಿದ್ದರು. 

೧ ನೇ ಸೆಪ್ಟೆಂಬರ್ ೧೯೩೨ ರಂದು ಮಥುರಾ ಯಾತ್ರೆ ಮಾಡುತ್ತಿದ್ದಾಗ ದತ್ತಾತ್ರೇಯರು ಕಾಲರಾದಿಂದ ಬಳಲುತ್ತಿದ್ದರು ಮತ್ತು ಸಾಯುವ ಸ್ಥಿತಿಗೆ ಬಂದಿದ್ದರು. ಇವರ ತಂದೆಯವರು ಇವರ ಕೊನೆಯ ಆಸೆ ಏನೆಂದು ಕೇಳಿದರು. ದತ್ತಾತ್ರೇಯರು ತಮ್ಮನ್ನು ಶಿರಡಿಗೆ ಕೂಡಲೇ ಕರೆದುಕೊಂಡು ಹೋಗಬೇಕೆಂದು, ತಾವು ಒಂದು ವೇಳೆ ಮರಣ ಹೊಂದಿದರೆ ಶಿರಡಿಯಲ್ಲೇ ತಮ್ಮ ಅಂತ್ಯಕ್ರಿಯೆ ಮಾಡಬೇಕೆಂದು ಮತ್ತು ಸಾಯಿಬಾಬಾರವರೇ ತಮ್ಮ ಕೃಷ್ಣ ಎಂದು ಹೇಳಿದರು. ಆದರೆ ದತ್ತಾತ್ರೇಯ ಅವರ ಮಂಚದ ಹಿಂಭಾಗದಲ್ಲಿ ಸಾಯಿಬಾಬಾರವರ ಫೋಟೋವನ್ನು ಇಟ್ಟು ಅದಕ್ಕೆ ಊದುಬತ್ತಿಯನ್ನು ಹಚ್ಚಿ ಮತ್ತು ದತ್ತಾತ್ರೇಯ ಅವರಿಗೆ ಆಗಾಗ ಉಧಿ ಮತ್ತು ಸಾಯಿಬಾಬಾರವರ ತೀರ್ಥವನ್ನು ಕೊಡುತ್ತಾ ಇದ್ದುದರಿಂದ ಮಥುರದಲ್ಲಿಯೇ ಆರೋಗ್ಯದಲ್ಲಿ ಹೇಗೋ ಸ್ವಲ್ಪ ಸುಧಾರಣೆ ಆಯಿತು. ಒಂದು ಮಧ್ಯರಾತ್ರಿಯಲ್ಲಿ ದತ್ತಾತ್ರೇಯರ ನಾದಿನಿ ಸುಭದ್ರಾ ಭಾಯಿಗೆ ಮೈಮೇಲೆ ಪ್ರಸಿದ್ದ ಮುಸ್ಲಿಂ ಸಂತರಾದ ಮೀರಾದಾತಾರ್ ಬಂದು " ನೀವು ಸಾಯಿಬಾಬಾರವರನ್ನು ಕರೆಯುತ್ತಿದ್ದೀರಿ. ದತ್ತಾತ್ರೇಯರಿಗೆ ವಯಸ್ಸಾಗಿದೆ. ಎಲ್ಲಿಗೂ ಹೋಗಲು ಸಾಧ್ಯವಿಲ್ಲ. ಅದಕ್ಕೆ ನನ್ನ ದೊಡ್ಡಪ್ಪ (ಸಾಯಿಬಾಬಾ) ನನ್ನನ್ನು ನಿಮ್ಮ ಬಳಿಗೆ ಕಳುಹಿಸಿದ್ದಾರೆ. ಆದುದರಿಂದ ನಾನು ಇಲ್ಲಿಗೆ ಬಂದಿದ್ದೇನೆ. ಹೆದರಬೇಡಿ. ಯಾವುದೇ ಭಯವಿಲ್ಲ. ನಾಳೆ ಬೆಳಗ್ಗೆಯ ಹೊತ್ತಿಗೆ ದತ್ತಾತ್ರೇಯ ಎದ್ದು ಓಡಾಡಲು ಶುರು ಮಾಡುತ್ತಾರೆ. ದತ್ತಾತ್ರೇಯನಿಗೆ ಕುಡಿಯಲು ಕಾಫಿಯನ್ನು ಕೊಡಿ" ಎಂದು ಹೇಳಿದರು.  ಅದರಂತೆ ಕಾಫಿಯನ್ನು ಮಾಡಿ ಅದರಲ್ಲಿ ಸ್ವಲ್ಪ ಉಧಿಯನ್ನು ಬೆರೆಸಿ ಕುಡಿಯಲು ಕೊಡಲಾಯಿತು. ದತ್ತಾತ್ರೇಯರ ಜ್ವರ ಸ್ವಲ್ಪ ಹೊತ್ತಿನಲ್ಲೇ ಕಡಿಮೆ ಆಗಿ ವಿರೋಚನ ಕೂಡ ಕಡಿಮೆಯಾಯಿತು. ಮರುದಿನ ವೈದ್ಯರನ್ನು ಕಾಣಲು ಹೋದಾಗ ಅವರಿಗೆ ಆಶ್ಚರ್ಯವಾಯಿತು. ಅವರು ದತ್ತಾತ್ರೇಯ ಅವರನ್ನು ಈ ಬಗ್ಗೆ ವಿಚಾರಿಸಿದಾಗ ಅವರು ಸಾಯಿಬಾಬಾರವರು ಡಾಕ್ಟರ್ ಗಳಿಗೆ ಡಾಕ್ಟರ್ ಆಗಿದ್ದು ಅವರ ಉಧಿಯಿಂದ ತಾನು ಗುಣ ಹೊಂದಿದೆ ಎಂದು ತಿಳಿಸಿದರು. ಈ ಮಾತನ್ನು ಕೇಳಿ ಡಾಕ್ಟರ್ ಗೆ ಆಶ್ಚರ್ಯವಾಯಿತು.

ಒಮ್ಮೆ ದತ್ತಾತ್ರೇಯರಿಗೆ ೭ ವರ್ಷವಾಗಿದ್ದಾಗ ಅವರು ಶಿರಡಿಗೆ ಹೋಗಿದ್ದರು. ಮಸೀದಿಯಲ್ಲಿ ಸಾಯಿಬಾಬಾರವರ ಕಾಲನ್ನು ಒತ್ತುತ್ತಾ ಕುಳಿತಿದ್ದರು. ಆಗ ಸಾಯಿಬಾಬಾರವರು ತಮ್ಮ ಕೈನಿಂದ ಅಲ್ಲಿ ನೆರೆದಿದ್ದ ಎಲ್ಲಾ ಮಕ್ಕಳಿಗೂ ಸಿಹಿತಿಂಡಿಯನ್ನು ಹಂಚುತ್ತಿದ್ದರು. ಅದನ್ನು ನೋಡಿದ ದತ್ತಾತ್ರೇಯರಿಗೂ ಕೂಡ ಗಮನ ಸಿಹಿತಿಂಡಿಯ ಕಡೆ ಹೋಯಿತು. ಆದುದರಿಂದ ಅವರು ಸಾಯಿಯವರ ಪಾದವನ್ನು ಸರಿಯಾಗಿ ಒತ್ತುತ್ತಿರಲಿಲ್ಲ. ಆಗ ಪಕ್ಕದಲ್ಲೇ ಇದ್ದ ಅವರ ತಾಯಿ ದತ್ತಾತ್ರೇಯರಿಗೆ ಹೊಡೆದು "ನಿನ್ನ ಗಮನ ಸಿಹಿತಿಂಡಿಯ ಕಡೆ ಹರಿದು ನೀನು ಸಾಯಿಬಾಬಾರವರ ಸೇವೆಯನ್ನು ಸರಿಯಾಗಿ ಮಾಡುತ್ತಿಲ್ಲ" ಎಂದು ಜೋರಾಗಿ ಗದರಿಸಿದರು. ಕೂಡಲೇ ಸಾಯಿಬಾಬಾರವರು ಉಗ್ರರಾಗಿ ದತ್ತಾತ್ರೇಯರ ತಾಯಿಯನ್ನು "ಏ ಮುದುಕಿ, ಆ ಮಗುವನ್ನು ಏಕೆ ಹೊಡೆಯುತ್ತೀಯ" ಎಂದು ಜೋರಾಗಿ ಗದರಿಸಿದರು. ದತ್ತಾತ್ರೇಯ ಅವರ ತಾಯಿಯವರು ಸಾಯಿಯವರನ್ನು ತಮ್ಮ ಮಗನಿಗೆ ಸಾಯಿಯವರ ಸೇವೆ ಮಾಡುವ ಮನಸ್ಸನ್ನು ಕೊಡುವಂತೆ ಪ್ರಾರ್ಥಿಸಿದರು. ಆಗ ಸಾಯಿಯವರು "ಇವನು ನನ್ನ ಸೇವೆಯನ್ನು ಚೆನ್ನಾಗಿ ಮಾಡುತ್ತಾನೆ. ದೇವರು ಇವನಿಗೆ ಒಳ್ಳೆಯದನ್ನೇ ಬಯಸುವಂತೆ ಮಾಡುತ್ತಾನೆ. ನೀನೇನು ಹೆದರಬೇಡ ಮತ್ತು ಇವನನ್ನು ಹೊಡೆಯಬೇಡ" ಎಂದು ಬುದ್ದಿ ಹೇಳಿದರು.

ಒಮ್ಮೆ ದತ್ತಾತ್ರೇಯರು ೧೨ ವರ್ಷದವರಾಗಿದ್ದಾಗ ಅವರ ಸಹೋದರನೊಂದಿಗೆ ಶಿರಡಿಗೆ ಹೋಗಿದ್ದರು. ಆಗ ಅವರ ಬಳಿ ೧೦೦ ರೂಪಾಯಿಗಳು ಮಾತ್ರ ಇತ್ತು. ಸಾಯಿಬಾಬಾರವರು ಅವರಿಂದ ಒಮ್ಮೆ ಹತ್ತು ರುಪಾಯಿಯನ್ನು, ಮತ್ತೊಮ್ಮೆ ೧೫ ರುಪಾಯಿಯನ್ನು, ಹೀಗೆ ದಕ್ಷಿಣೆ ಕೇಳುತ್ತಲೇ ಇದ್ದರು. ಕಡೆಗೆ ಅವರ ಬಳಿ ಕೇವಲ ೨೫ ರೂಪಾಯಿಗಳು ಉಳಿಯಿತು. ಆಗ ದತ್ತಾತ್ರೇಯರ ಸಹೋದರನು ಅಹಮದ್ ನಗರದಲ್ಲಿದ್ದ ತಮ್ಮ ಮನೆಗೆ ಪತ್ರ ಬರೆದು ಸಾಯಿಬಾಬಾರವರಿಗೆ ಕೊಡಲು ಮತ್ತು ತಾವಿಬ್ಬರು ವಾಪಸಾಗಲು ಹಣವನ್ನು ಕಳುಹಿಸುವಂತೆ ಕೇಳಿದರು. ಅದೇ ದಿನ ಸಂಜೆ ಸಾಯಿಬಾಬಾರವರು ೨೫ ರುಪಾಯಿಗಳ ದಕ್ಷಿಣೆಯನ್ನು ಇವರಿಂದ ಕೇಳಿದರು. ಆಗ ಇವರು ತಮ್ಮ ಬಳಿಯಿದ್ದ ಎಲ್ಲಾ ಹಣವು ಮುಗಿದು ಹೋಗಿದ್ದು ವಾಪಸ್ ತೆರಳಲು ಹಣವಿಲ್ಲ ಎಂದು ಹೇಳಿದರು. ಕೂಡಲೇ ಸಾಯಿಬಾಬಾರವರು "ಏಕೆ ಸುಳ್ಳು ಹೇಳುತ್ತೀರಿ. ನಿಮ್ಮ ಬಳಿ ೨೫ ರುಪಾಯಿಗಳಿದೆ. ಆಲ್ಲದೇ ನೀವು ಮನೆಗೆ ಪತ್ರವನ್ನು ಬರೆದಿದ್ದೀರ. ಆ ಹಣವು ನಿಮಗೆ ಬಂದು ನಾಳೆ ತಲುಪಲಿದೆ. ನೀವುಗಳು ಹೆದರುವ ಅವಶ್ಯಕತೆಯಿಲ್ಲ" ಎಂದು ಹೇಳಿದರು. ಕೂಡಲೇ ಅವರು ತಮ್ಮ ಬಳಿಯಿದ್ದ ೨೫ ರುಪಾಯಿಗಳನ್ನು ಸಾಯಿಬಾಬಾರವರಿಗೆ ಅರ್ಪಿಸಿದರು.


Friday, August 6, 2010

ಸಾಯಿ ಮಹಾಭಕ್ತ - ದಾಮೋದರ ಸಾವಲ್ ರಾಮ್ ರಾಸನೆ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು


ದಾಮೋದರ್ ಸಾವಲ್ ರಾಮ್ ರಾಸನೆ

ದಾಮೋದರ್ ರಾಸನೆ ಸಾಯಿಬಾಬಾರವರನ್ನು ಮೊದಲು ಭೇಟಿಯಾದಾಗ ಇವರಿಗೆ ಇಬ್ಬರು ಹೆಂಡತಿಯರಿದ್ದರು ಮತ್ತು ಇಬ್ಬರು ಜೀವಂತರಾಗಿದ್ದರು. ಇವರು ಅನೇಕ ಜ್ಯೋತಿಷಿಗಳನ್ನು ಭೇಟಿ ಮಾಡಿ ವಿಚಾರಿಸಿದಾಗ ಇವರ ಜಾತಕದಲ್ಲಿ ಕೇತು ೫ ನೇ ಮನೆಯಲ್ಲಿ ಇರುವುದರಿಂದ ಸಂತಾನವಾಗುವುದು ಕಷ್ಟ ಎಂದು ಹೇಳಿದ್ದರು. ಆದರೆ ಸಂತ ಶಿರೋಮಣಿಯಾದ ಸಾಯಿಬಾಬಾರವರ ಆಶೀರ್ವಾದದಿಂದ ಇವರಿಗೆ ಸಂತಾನ ಫಲಿಸಿತು. ದಾಮೋದರ್ ರಾಸನೆ ಇನ್ನು ಕೋಪರ್ ಗಾವ್ ನ ಬಳಿ ಇರುವಾಗಲೇ ಇದನ್ನು ತಮ್ಮ ದಿವ್ಯ ದೃಷ್ಟಿಯಿಂದ ಇದನ್ನು ತಿಳಿದ ಸಾಯಿಬಾಬಾರವರು ಇವರಿಗೋಸ್ಕರ ಮಾವಿನ ಹಣ್ಣುಗಳನ್ನು ತರಿಸಿ ಅದರಲ್ಲಿ ೪ ಮಾವಿನ ಹಣ್ಣುಗಳನ್ನು ಬೇರೆ ತೆಗೆದಿಟ್ಟರು. ದಾಮೋದರ್ ರಾಸನೆ ಬಂದು ಸಾಯಿಬಾಬಾರವರಿಗೆ ನಮಸ್ಕರಿಸಿದ ನಂತರ ಸಾಯಿಯವರು ಆ ೪ ಹಣ್ಣುಗಳನ್ನು ಅವರಿಗೆ ಆಶೀರ್ವಾದ ಪೂರ್ವಕವಾಗಿ ಕೊಟ್ಟು ಅದನ್ನು ಚಿಕ್ಕ ಹೆಂಡತಿಗೆ ಕೊಡಬೇಕೆಂದು ಮತ್ತು ಮೊದಲಿಗೆ ೨ ಗಂಡು ಮಕ್ಕಳು ಹುಟ್ಟುವರೆಂದು ನಂತರ ಇನ್ನು ೬ ಮಕ್ಕಳು ಹುಟ್ಟುವರೆಂದು ತಿಳಿಸಿದರು. ಸಾಯಿಬಾಬಾರವರ ನಿರ್ದೇಶನದಂತೆ ರಾಸನೆಯವರ ಚಿಕ್ಕ ಹೆಂಡತಿ ಆ ಮಾವಿನ ಹಣ್ಣುಗಳನ್ನು ತಿಂದರು. ೧೫ ತಿಂಗಳ ಒಳಗಾಗಿ ಮೊದಲನೇ ಗಂಡು ಮಗ ಹುಟ್ಟಿದನು. ನಂತರ ಪುನಃ ೧ ವರ್ಷದ ಒಳಗಾಗಿ ಮತ್ತೊಬ್ಬ ಗಂಡು ಮಗ ಹುಟ್ಟಿದನು. ಇಬ್ಬರು ಮಕ್ಕಳಿಗೆ ಸಾಯಿಬಾಬಾರವರು ಮೊದಲೇ ಹೆಸರನ್ನು ಕೂಡ ಇಟ್ಟಿದ್ದರು. ಸಾಯಿಯವರು ಹೇಳಿದ ಹೆಸರುಗಳನ್ನು ಒಂದು ಡೈರಿಯಲ್ಲಿ ಬರೆದುಕೊಂಡು ರಾಸನೆ ಅದೇ ಹೆಸರುಗಳನ್ನು ತನ್ನ ಮಕ್ಕಳಿಗೆ ಇಟ್ಟರು.

ರಾಸನೆ ಮೊದಲು ಶಿರಡಿಗೆ ಸಾಯಿಯವರನ್ನು ದರ್ಶಿಸಲು ಹೋದಾಗ ನೇವಾಸ ಗ್ರಾಮದ ಬಾಳಾ ಪಟೇಲ್ ಮಸೀದಿಯನ್ನು ಗುಡಿಸುತ್ತಿದ್ದುದನ್ನು ಮತ್ತು ಸಾಯಿಬಾಬಾರವರ ಸೇವೆಯನ್ನು ಮಾಡುತ್ತಿರುವುದನ್ನು ರಾಸನೆ ನೋಡಿದರು.

ರಾಸನೆಯವರು ಯಾವಾಗಲೂ ಸಾಯಿಬಾಬಾರವರನ್ನು ಭೇಟಿ ಮಾಡಿ ಅವರೊಡನೆ ವಿಷಯಗಳನ್ನು ಚರ್ಚಿಸಿ ಅವರ ಆದೇಶದಂತೆ ನಡೆಯುತ್ತಿದ್ದರು. ಒಮ್ಮೆ ರಾಸನೆ ಯಾವುದೋ ಅಪೀಲ್ ಗೋಸ್ಕರ ಮುಂಬೈ ಹೈಕೋರ್ಟ್ ಗೆ ಹೋಗಬೇಕಾಗಿತ್ತು. ಆದರೆ ಸಾಯಿಬಾಬಾರವರು ಅವರನ್ನು ಮುಂಬೈಗೆ ಹೋಗುವುದರಿಂದ ತಡೆದರು. ಆದರೆ ಕೋರ್ಟ್ ನ ಫಲಿತಾಂಶ ರಾಸನೆಯವರ ಪರವಾಗಿಯೇ ಆಯಿತು.

ಒಮ್ಮೆ ನಾನಾ ಸಾಹೇಬ್ ಡೆಂಗಳೆ ಒಂದು ಬೆಳ್ಳಿಯ ತಟ್ಟೆಯಲ್ಲಿ ಅನೇಕ ವಿಧವಾದ ಭಕ್ಷ್ಯಗಳನ್ನು ತಂದು ಸಾಯಿಯವರ ಮುಂದೆ ಇರಿಸಿದರು. ಸಾಯಿಯವರು ಕೂಡಲೇ ಒಂದು ನಾಯಿಯನ್ನು ಕರೆದರು. ಅದು ಕೂಡಲೇ ಓಡಿ ಬಂದು ಸ್ವಲ್ಪ ತಿಂದು ಹೊರಟುಹೋಯಿತು. ಇದನ್ನು ನೋಡುತ್ತಿದ್ದ ನಾನಾ ಸಾಹೇಬ್ ಗೆ ತುಂಬಾ ಬೇಸರವಾಯಿತು. ಒಂದು ನಾಯಿ ತಿನ್ನುವುದಕೊಸ್ಕರ ತಾನು ಇಷ್ಟು ಕಷ್ಟ ಯಾಕೆ ಪಡಬೇಕಿತ್ತೆ ಎಂದು ಮನದಲ್ಲೇ ಅಂದುಕೊಂಡರು. ಸಾಯಿಯವರು ಇದನ್ನು ಅರಿತು ಕೂಡಲೇ ಉಗ್ರರಾಗಿ ಬೆಳ್ಳಿ ತಟ್ಟೆಯನ್ನು ನಾನಾ ಸಾಹೇಬ್ ಕಡೆಗೆ ಎಸೆದು ತೆಗೆದುಕೊಂಡು ಹೋಗುವಂತೆ ಜೋರಾಗಿ ಗರ್ಜಿಸಿದರು. ಆ ಸಮಯದಲ್ಲಿ ರಾಸನೆಯವರು ಮಸೀದಿಯಲ್ಲೇ ಇದ್ದರು.

ಸಾಯಿಬಾಬಾರವರು ಪ್ರಾಣಿಗಳಿಗೆ ಮತ್ತು ಸಮಾಜದ ಹಿಂದುಳಿದ ಮತ್ತು ಬಡ ಜನರಿಗೆ ತೋರಿಸುತ್ತಿದ್ದ ಪ್ರೀತಿಯನ್ನು ರಾಸನೆಯವರು ಚೆನ್ನಾಗಿ ತಿಳಿದಿದ್ದರು. ಒಮ್ಮೆ ದಾಮೋದರ್ ರಾಸನೆ ಬಾಬಾ ಬಳಿಗೆ ಹೋಗಿ ಬಾಳಾ ಪಟೇಲ್ ರನ್ನು ತಮ್ಮ ಮನೆಗೆ ಊಟಕ್ಕೆ ಕಳುಹಿಸಲು ಕೋರಿಕೊಂಡರು. ಸಾಯಿಬಾಬಾರವರು ಬಾಳಾ ಹಿಂದುಳಿದ ವರ್ಗಕ್ಕೆ ಸೇರಿದವರೆಂದು ಅವರನ್ನು ಮನೆಯ ಹೊರಗಡೆ ಊಟಕ್ಕೆ ಕೂರಿಸಬಾರದೆಂದು, ಬದಲು ತಮ್ಮ ಜೊತೆಯಲ್ಲೇ ಊಟಕ್ಕೆ ಕೂರಿಸಿಕೊಂಡರೆ ಮಾತ್ರ ಕಳುಹಿಸುವೆನೆಂದು ಷರತ್ತು ವಿಧಿಸಿದರು. ರಾಸನೆಯವರು ಅದಕ್ಕೆ ತಮ್ಮ ಒಪ್ಪಿಗೆ ಸೂಚಿಸಿದರು. ಸಾಯಿಯವರು ತಮ್ಮ ಅಭ್ಯಂತರ ಇಲ್ಲವೆಂದು ಒಪ್ಪಿಗೆ ನೀಡಿದರು. ಅಡಿಗೆ ಎಲ್ಲಾ ಸಿದ್ದವಾದ ಮೇಲೆ ರಾಸನೆ ಒಂದು ತಟ್ಟೆ ತುಂಬಾ ಭಕ್ಷ್ಯಗಳನ್ನು ಸಾಯಿಬಾಬಾರವರ ಪಟದ ಮುಂದೆ ಇಟ್ಟು ಸಾಯಿಬಾಬಾರವರನ್ನು ಸ್ವೀಕರಿಸುವಂತೆ ಜೋರಾಗಿ ಕೂಗಿದರು. ಆಗ ಒಂದು ಕರಿ ನಾಯಿಯು ಓಡಿ ಬಂದು ತಟ್ಟೆಯಲ್ಲಿದ್ದ ಸ್ವಲ್ಪ ಊಟವನ್ನು ತಿಂದು ಹೋಯಿತು. ರಾಸನೆಯವರು ಆ ನಾಯಿಯು ತನ್ನ ಊಟವನ್ನು ಮುಗಿಸುವ ತನಕ ಕಾದಿದ್ದು, ನಂತರ ಬೇರೆ ಎಲ್ಲರಿಗೂ ಊಟಕ್ಕೆ ಬಡಿಸಿ ನಂತರ ತಾವು ಕೂಡ ಪ್ರಸಾದವನ್ನು ತೆಗೆದುಕೊಂಡರು. ಸಾಯಿಯವರ ಆದೇಶದಂತೆ ರಾಸನೆಯವರು ಬಾಳಾರನ್ನು ಹೊರಕ್ಕೆ ಕೂಡಿಸದೆ ತಮ್ಮ ಪಕ್ಕದಲ್ಲೇ ಊಟಕ್ಕೆ ಕೂಡಿಸಿಕೊಂಡರು.

ಕೆಲವೊಮ್ಮೆ ಸಾಯಿಬಾಬಾರವರು ರಾಸನೆಯವರನ್ನು ಚೆನ್ನಾಗಿ ಬೈದು ಮತ್ತು ಹೊಡೆದು ಮಾಡುತ್ತಿದ್ದರು. ರಾಸನೆಯವರು ಅಕ್ಕಲಕೋಟೆ ಮಹಾರಾಜರಂತೆ ಸಾಯಿಯವರು ಕೂಡ ಬೈದು ಮತ್ತು ಹೊಡೆದು ಮಾಡುವುದು ಮುಂದೆ ಒಳ್ಳೆಯದಾಗುವುದರ ಸೂಚನೆ ಎಂದು ಚೆನ್ನಾಗಿ ಅರಿತಿದ್ದರು. ಆದ್ದರಿಂದ ರಾಸನೆಯವರು ಒಂದು ಬಾರಿಯಾದರೂ ಸಾಯಿಬಾಬಾರವರ ಮೇಲೆ ಬೇಜಾರಾಗಲಿ ಅಥವಾ ಕೋಪವನ್ನಾಗಲಿ ಮಾಡಿಕೊಳ್ಳುತ್ತಿರಲಿಲ್ಲ. ಆಲ್ಲದೇ, ಸಾಯಿಯವರೊಂದಿಗೆ ತಮ್ಮ ಸಂಬಂಧವನ್ನು ಹಾಗೆಯೇ ಮುಂದುವರಿಸಿದರು.

ರಾಸನೆಯವರು ಮೊದಲ ಬಾರಿಗೆ ಕ್ರಿ.ಶ.೧೮೯೫ ರಲ್ಲಿ ಸಾಯಿಬಾಬಾರವರನ್ನು ಭೇಟಿಯಾದರು. ಅದರ ಮುಂದಿನ ವರ್ಷದಿಂದ ಶಿರಡಿಯಲ್ಲಿ ಶ್ರೀರಾಮ ನವಮಿ ಉತ್ಸವ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಕೂಡ ರಾಸನೆ ವಂಶಸ್ಥರು ಪ್ರತಿ ವರ್ಷ ರಾಮನವಮಿ ಸಂದರ್ಭದಲ್ಲಿ ಒಂದು ಆಭರಣವನ್ನು ನೀಡುತ್ತಾ ಬಂದಿದ್ದಾರೆ.

ಒಮ್ಮೆ ರಾಸನೆಯವರು ಒಂದು ಹತ್ತಿ ವ್ಯಾಪಾರವನ್ನು ಪಾಲುಗಾರಿಕೆಯಲ್ಲಿ ಮಾಡಲು ಇಚ್ಚಿಸಿ ಸಾಯಿಯವರ ಅನುಮತಿ ಬೇಡಲು ಶಿರಡಿಗೆ ಬಂದರು. ಆಗ ಅಲ್ಲಿ ಸಾಯಿಬಾಬಾ ಮತ್ತು ಮಹಳಸಾಪತಿ ಬಿಟ್ಟರೆ ಬೇರೆ ಯಾರು ಇರಲಿಲ್ಲ. ರಾಸನೆಯವರು ಸಾಯಿಯವರ ಪಾದಗಳನ್ನು ಒತ್ತುತ್ತಾ ಮನದಲ್ಲೇ ಹತ್ತಿಯ ವ್ಯಾಪಾರದಲ್ಲಿ ತಮಗೆ ಲಾಭವಾದರೆ ಅದರ ಒಂದು ಪಾಲನ್ನು ಸಾಯಿಯವರಿಗೆ ನೀಡುವುದಾಗಿ ಅಂದುಕೊಂಡರು. ಇದನ್ನು ತಿಳಿದ ಸರ್ವಾಂತರ್ಯಾಮಿ ಸಾಯಿಬಾಬಾರವರು ತಾವು ಲಾಭದ ಹಂಚಿಕೆಯಲ್ಲಿ ಸಿಕ್ಕಳು ಇಚ್ಚಿಸುವುದಿಲ್ಲ ಎಂದು ತಿಳಿಸಿದುದೇ ಆಲ್ಲದೇ ಆ ವ್ಯಾಪಾರವನ್ನು ಮಾಡಿದರೆ ರಾಸನೆಯವರಿಗೆ ನಷ್ಟವಾಗುವುದೆಂದು ತಿಳಿಸಿದರು. ಸಾಯಿಬಾಬಾರವರ ಆದೇಶದಂತೆ ರಾಸನೆ ಹತ್ತಿ ವ್ಯಾಪಾರದ ಯೋಚನೆಯನ್ನು ಕೈಬಿಟ್ಟರು.

ಇನ್ನೊಂದು ಸಂದರ್ಭದಲ್ಲಿ ರಾಸನೆಯವರು ಅಕ್ಕಿ, ಗೋಧಿ ಮತ್ತು ಬೇಳೆ ಕಾಳುಗಳ ವ್ಯಾಪಾರ ಮಾಡಲು ಇಚ್ಚಿಸಿ ಸಾಯಿಯವರ ಅನುಮತಿ ಬೇಡಿದರು. ಆಗಲೂ ಕೂಡ ಸಾಯಿಯವರು ತಮ್ಮ ಅಂತರ್ ದೃಷ್ಟಿಯಿಂದ ಕಿರಾಣಿ ವ್ಯಾಪಾರದಲ್ಲಿ ನಷ್ಟವಾಗುವುದೆಂದು ತಾನು ಕೊಂಡಿದ್ದಕ್ಕಿಂತ ಕಡಿಮೆ ಬೆಲೆಗೆ ಪದಾರ್ಥಗಳನ್ನು ಮಾರಬೇಕಾಗುವುದೆಂದು ತಮ್ಮ ಅಸಮ್ಮತಿಯನ್ನು ಸೂಚಿಸಿದರು. ರಾಸನೆ ಆ ವ್ಯಾಪಾರವನ್ನು ಕೂಡ ಸಾಯಿಯವರ ಆದೇಶದಂತೆ ಕೈಬಿಟ್ಟರು. ಸ್ವಲ್ಪ ದಿನಗಳು ಎಲ್ಲಾ ಪದಾರ್ಥಗಳ ಬೆಲೆ ಹೆಚ್ಚಾಗುತ್ತಲೇ ಹೋಯಿತು. ರಾಸನೆಯವರ ಮಿತ್ರರು ಇದನ್ನು ಅವರಿಗೆ ತೋರಿಸಿ ಅವರನ್ನು ಮತ್ತು ಬಾಬಾರವರನ್ನು ತೆಗಳಿದರು ಮತ್ತು ಬಾಬಾರವರ ಭವಿಷ್ಯ ಸುಳ್ಳಾಯಿತು ಎಂದು ಲೇವಡಿ ಮಾಡಿದರು. ಆದರೆ ಶ್ರಾವಣ ಮಾಸದಲ್ಲಿ ಅಕಾಲಿಕ ಮಳೆಯಿಂದ ವರ್ತಕರು ಶೇಖರಿಸಿ ಇಟ್ಟಿದ್ದ ಧಾನ್ಯವೆಲ್ಲ ಹಾಳಾಗಿ ಹೋಯಿತು. ಬೆಳೆಗಳು ಇಳಿದು ಹೋಗಿ, ವರ್ತಕರಿಗೆಲ್ಲ ಭಾರಿ ನಷ್ಟವಾಯಿತು. ಆದರೆ ರಾಸನೆಯವರು ಅಂತಹ ತೊಂದರೆಯಿಂದ ಪಾರಾದರು.

ರಾಸನೆಯವರು ಸಾಯಿಯವರ ಒಪ್ಪಿಗೆ ಇಲ್ಲದೆ ಯಾವುದೇ ಕೆಲಸ ಮಾಡುತ್ತಿರಲಿಲ್ಲ. ಸಾಯಿಯವರು ಜೀವಂತರಾಗಿದ್ದಾಗ ಅವರನ್ನು ಮುಖತಃ ಭೇಟಿ ಮಾಡಿ ವಿಚಾರಿಸುತ್ತಿದ್ದರು. ಕ್ರಿ.ಶ.೧೯೧೮ ರಲ್ಲಿ ಸಾಯಿಯವರ ಸಮಾಧಿಯಾದ  ನಂತರ ಸಾಯಿಯವರ ಪಟದ ಮುಂದೆ ಚೀಟಿ ಹಾಕಿ ಅದರಲ್ಲಿದ್ದಂತೆ ನಡೆಯುತ್ತಿದ್ದರು. ಅದೇ ರೀತಿ ಸಾಯಿಬಾಬಾರವರೂ ಕೂಡ ಇವರಿಗೆ ಮಾರ್ಗದರ್ಶನ ನೀಡುತ್ತಿದ್ದರು.

ಕ್ರಿ.ಶ.೧೯೧೦-೧೯೧೧ ರಲ್ಲಿ ರಾಸನೆಯವರ ಸಹೋದರರು ಇವರಿಂದ ಬೇರೆಯಾದರು. ಇವರ ಸಹೋದರಿಯು ಮರಣ ಹೊಂದಿದರು ಮತ್ತು ಇವರ ಮನೆಯಲ್ಲಿ ಕಳ್ಳತನವಾಯಿತು. ಹೀಗೆ ಒಮ್ಮೆಲೇ ಎಲ್ಲಾ ಆಘಾತಗಳು ಬಂದು ರಾಸನೆಯವರು ತುಂಬಾ ಕಷ್ಟ ಅನುಭವಿಸಿದರು. ಮನದಲ್ಲಿ ತೀವ್ರವಾದ ನೋವನ್ನು ಅನುಭವಿಸುತ್ತಿದ್ದರು. ಜೀವನದಲ್ಲಿ ಜಿಗುಪ್ಸೆ ಹುಟ್ಟಿತ್ತು. ಈ ಮನಸ್ಥಿತಿಯಲ್ಲಿ ರಾಸನೆಯವರು ಸಾಯಿಬಾಬಾರವರನ್ನು ಭೇಟಿ ಮಾಡಿದಾಗ ಸಾಯಿಬಾಬಾರವರು ಇವರನ್ನು ಸಂತೈಸಿ ಇವರಿಗೆ ಉಪದೇಶ ನೀಡಿ ಇವರು ಚಂದನದಿಂದ ತಮ್ಮ ಪೂಜೆಯನ್ನು ಮಾಡುವಂತೆ ಹೇಳಿ ಅಪ್ಪ ಕುಲಕರ್ಣಿಯವರ ಮನೆಯಲ್ಲಿ ಹಬ್ಬದ ಊಟ ಮಾಡಲು ಆದೇಶಿಸಿದರು.

ರಾಸನೆಯವರ ಮನೆಯಲ್ಲಿ ಒಮ್ಮೆ ಕಳ್ಳತನವಾಯಿತು. ೩೦ ವರ್ಷಗಳಿಂದ ರಾಸನೆಯವರ ಸ್ನೇಹಿತನಾಗಿದ್ದ ಒಬ್ಬ ಇವರ ಹೆಂಡತಿಯ ಎಲ್ಲಾ ಒಡವೆಗಳನ್ನು ಮತ್ತು ಮಂಗಳಸೂತ್ರವನ್ನು ಕೂಡ ಕದ್ದುಕೊಂಡು ಓಡಿಹೋದನು. ರಾಸನೆಯವರು ಬಾಬಾರವರ ಫೋಟೋದ ಮುಂದೆ ಕಣ್ಣೀರಿಟ್ಟು ತಮ್ಮ ವೇದನೆಯನ್ನು ತೋಡಿಕೊಂಡರು. ಮಾರನೇ ದಿನವೇ ಓಡಿಹೋಗಿದ್ದ ರಾಸನೆಯವರ ಮಿತ್ರ ವಾಪಸ್ ಬಂದು ಇವರ ಹೆಂಡತಿಯ ಒಡವೆಗಳನ್ನು ಹಿತಿರುಗಿಸಿ ತನ್ನ ತಪ್ಪನ್ನು ಒಪ್ಪಿಕೊಂಡು ರಾಸನೆಯವರ ಕ್ಷಮೆ ಬೇಡಿದನು.
ಸಾಯಿ ಮಹಾಭಕ್ತ - ಶಾಂತಾರಾಮ್ ಬಲವಂತ್ ನಾಚ್ನೆ ದಹಾನುಕರ್ - ಆಧಾರ - ಪೂಜ್ಯ ಶ್ರೀ.ನರಸಿಂಹ ಸ್ವಾಮೀಜಿಯವರ ಸಾಯಿಬಾಬಾ ಭಕ್ತರ ಅನುಭವಗಳು


ಶಾಂತಾರಾಮ್ ಬಲವಂತ್ ನಾಚ್ನೆ ದಹಾನುಕರ್


ಕ್ರಿ.ಶ.೧೯೦೯ ರಲ್ಲಿ ನಾಚ್ನೆಯವರ ದೊಡ್ಡ ಅಣ್ಣನವರು ಮುಂಬೈನ ಬಜೆಕರ್'ಸ್ ಆಸ್ಪತ್ರೆಯಲ್ಲಿ ಗಂಟಲಿನ ಶಸ್ತ್ರಚಿಕಿತ್ಸೆಗಾಗಿ ದಾಖಲಾಗಿದ್ದರು. ನಾಚ್ನೆಕರ್ ರವರ ಇಡೀ ಕುಟುಂಬದವರು ಆಸ್ಪತ್ರೆಯಲ್ಲಿ ಸೇರಿದ್ದರು ಮತ್ತು ಎಲ್ಲರೂ ಬಹಳ ವ್ಯಾಕುಲರಾಗಿದ್ದರು. ಆ ಸಮಯದಲ್ಲಿ ನಾಚ್ನೆಯವರು ದಹಾನುವಿನಲ್ಲಿದ್ದರು. ಆಗ ಒಬ್ಬ ಸಾಧುವು ಇವರ ಮನೆಗೆ ಬಂದು ರೊಟ್ಟಿಯನ್ನು ಭಿಕ್ಷೆ ನೀಡುವಂತೆ ಕೇಳಿಕೊಂಡನು. ನಾಚ್ನೆ ಮನೆಯವರು ಆ ಸಾಧುವನ್ನು ಮನೆಯೊಳಗೇ ಕರೆದು ಭೋಜನವನ್ನು ನೀಡಿದರು. ಆ ಸಾಧುವು ಅವರನ್ನೆಲ್ಲ ಆಶೀರ್ವದಿಸಿದ್ದು ಮಾತ್ರವಲ್ಲದೆ ಮುಂಬೈನಲ್ಲಿ ನಡೆಯುತ್ತಿರುವ ಶಸ್ತ್ರಚಿಕಿತ್ಸೆ ಸಂಪೂರ್ಣ ಯಶಸ್ವಿಯಾಗಿದೆ ಎಂದು ಹೇಳಿದನು. ಅದೇ ದಿನ ನಾಚ್ನೆ ಯವರ ಸ್ನೇಹಿತರಾದ ಹರಿಭಾವು ಮೋರೆಶ್ವರ್ ಪಾನಸೆಯವರು ಸಾಯಿಬಾಬಾರವರ ಆಶೀರ್ವಾದದಿಂದ ಶಸ್ತ್ರಚಿಕಿತ್ಸೆ ಯಶಸ್ವಿಯಾಗುವುದೆಂಬ ನಂಬಿಕೆ ತಮಗಿದೆ ಎಂದು ನಾಚ್ನೆಯವರ ಬಳಿ ಹೇಳಿದ್ದರು. ಆಗಲೇ ಮೊದಲ ಬಾರಿ ನಾಚ್ನೆಯವರು ಸಾಯಿಬಾಬಾರವರ ಹೆಸರನ್ನು ತಮ್ಮ ಜೀವನದಲ್ಲಿ ಕೇಳಿದುದು. ಅದೇ ದಿನ ಸಂಜೆ ನಾಚ್ನೆಯವರ ತಂದೆ ಆಸ್ಪತ್ರೆಯಿಂದ ಹಿಂತಿರುಗಿ ಬಂದು ಶಸ್ತ್ರಚಿಕಿತ್ಸೆ ಯಾವುದೇ ತೊಂದರೆ ಇಲ್ಲದೆ ನೆರವೇರಿದುದಾಗಿಯು ಮತ್ತು ನಾಚ್ನೆಯವರ ಅಣ್ಣನವರು ಅಪಾಯದಿಂದ ಪಾರಾಗಿರುವರೆಂದು ಶುಭ ಸಮಾಚಾರವನ್ನು ಅರುಹಿದರು. ಅಲ್ಲದೇ, ಶಸ್ತ್ರಚಿಕಿತ್ಸೆಯಾದ ಬಳಿಕ ಯಾರೋ ಒಬ್ಬ ಸಾಧುವು ನಾಚ್ನೆಯವರ ಅಣ್ಣನವರ ಬಳಿಗೆ ಬಂದು ಅವರಿಗೆ ಶಸ್ತ್ರಚಿಕಿತ್ಸೆಯಾದ ಭಾಗದ ಮೇಲೆ ಕೈಯಾಡಿಸಿ ಎಲ್ಲಾ ಒಳ್ಳೆಯದಾಗುವುದೆಂದು ನುಡಿದು ಹೊರಟು ಹೋದನೆಂದು ಕೂಡ ತಿಳಿಸಿದರು. ಆ ಸಾಧುವು ತಿಳಿಸಿದಂತೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಾಚ್ನೆಯವರ ಅಣ್ಣನವರು ಸಂಪೂರ್ಣ ಗುಣಮುಖರಾದರು.

ಕ್ರಿ.ಶ.೧೯೧೨ ರಲ್ಲಿ ನಾಚ್ನೆಯವರು ಮೊದಲ ಬಾರಿಗೆ ಶಿರಡಿಗೆ ಭೇಟಿ ನೀಡಿದರು. ನಾಚ್ನೆಯವರು ಕಂದಾಯ ಇಲಾಖೆಯ ಪರೀಕ್ಷೆಗೆ ಕುಳಿತಿದ್ದರು ಮತ್ತು ಅದರ ಫಲಿತಾಂಶ ಬರುವ ಮೊದಲು ಶಿರಡಿಗೆ ತಮ್ಮ ಇಬ್ಬರು ಸ್ನೇಹಿತರಾದ ಶ್ರೀ.ಶಂಕರ ಬಾಲಕೃಷ್ಣ ವೈದ್ಯ ಮತ್ತು ಅಚ್ಯುತ ಡಾಟೇಯವರೊಂದಿಗೆ ಭೇಟಿ ನೀಡಿ ಸಾಯಿಯವರ ಆಶೀರ್ವಾದವನ್ನು ಪಡೆದರು. ಸಾಯಿಬಾಬಾರವರ ಆಶೀರ್ವಾದದಿಂದ ನಾಚ್ನೆಯವರು ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಕ್ರಿ.ಶ.೧೯೧೪ ರಲ್ಲಿ ನಾಚ್ನೆಯವರು ದಾಹುನುವಿನಲ್ಲಿ ಖಜಾನೆಯಲ್ಲಿ ಕೆಲ್ಸಸ ನಿರ್ವಹಿಸುತ್ತಿದ್ದರು. ಆಗ ಒಬ್ಬ ಬುದ್ಧಿಮಾಂದ್ಯ ವ್ಯಕ್ತಿ ರಾಮಕೃಷ್ಣ ಬಲವಂತ್ ಪಾನಸೆ ಎಂಬುವರು ಇವರನ್ನು ಕೊಲ್ಲಲು ಬಂದಾಗ ಇವರನ್ನು ಸಾಯಿಬಾಬಾರವರು ಕಾಪಾಡಿದರು.

ಕ್ರಿ.ಶ.೧೯೧೫ ರಲ್ಲಿ ಸಾಯಿಬಾಬಾರವರು ನಾಚ್ನೆಯವರು ಕೇಳದೆಯೇ ಅವರಿಗೆ ಆಶೀರ್ವದಿಸಿದರು. ಆಗ ನಾಚ್ನೆಯವರು ಥಾಣೆ ಜಿಲ್ಲೆಯ ದಾಹನುವಿನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

೩೧ ನೇ ಮಾರ್ಚ್ ೧೯೧೫ ರಂದು ರಾತ್ರಿಯ ವೇಳೆ ನಾಚ್ನೆ, ಶಾಂತಾರಾಮ್ ಮೋರೆಶ್ವರ್ ಪಾನಸೆ ಮತ್ತು ಇನ್ನು ಕೆಲವು ಮಂದಿ ಎತ್ತಿನ ಗಾಡಿಯಲ್ಲಿ ಎಲ್ಲಿಗೋ ಪ್ರಯಾಣ ಮಾಡುತ್ತಿದ್ದರು. ಮಾರ್ಗ ಮಧ್ಯೆ ಒಂದು ದಟ್ಟ ಅರಣ್ಯ ಪ್ರದೇಶವನ್ನು ದಾಟಿ ಹೋಗಬೇಕಾಗಿತ್ತು.  ಆ ಸ್ಥಳವನ್ನು ರನ್ ಶೇಟ್ ಪಾಸ್ ಎಂದು ಕರೆಯುತ್ತಿದ್ದರು. ಆ ಪ್ರದೇಶವು ಹುಲಿಗಳಿಗೆ ಹೆಸರುವಾಸಿಯಾಗಿತ್ತು. ಇದ್ದಕ್ಕಿದ್ದಂತೆ ಇವರ ಎತ್ತಿನ ಗಾಡಿಯ ಮುಂದೆ ಹುಲಿಯೊಂದು ಪ್ರತ್ಯಕ್ಷವಾಯಿತು. ಗಾಡಿಯಲ್ಲಿದ್ದವರೆಲ್ಲ ಭಯಭೀತರಾದರು. ಅವರೆಲ್ಲರೂ ಸೇರಿ ಸಾಯಿಬಾಬಾರವರನ್ನು ಭಕ್ತಿಯಿಂದ ಮನದಲ್ಲೇ ಪ್ರಾರ್ಥಿಸಿದರು. ಸಾಯಿಯವರು ಅವರನ್ನೆಲ್ಲ ಹುಲಿಯ ದವಡೆಯಿಂದ ಪಾರು ಮಾಡಿದರು.

ಕ್ರಿ.ಶ. ೧೯೧೮ ರಲ್ಲಿ ಸಾಯಿಬಾಬಾರವರ ಆಶೀರ್ವಾದದಿಂದ ನಾಚ್ನೆಯವರಿಗೆ ದಹಾನುವಿನಿಂದ ಮುಂಬೈನ ಬಾಂದ್ರಾಕ್ಕೆ ವರ್ಗವಾಯಿತು.

ಒಮ್ಮೆ ನಾಚ್ನೆಯವರು ಶಿರಡಿಗೆ ಬಂದಾಗ ಅಲ್ಲಿ ಶಂಕರ ರಾವ್ (ಬಾಲಕೃಷ್ಣ ವೈದ್ಯ) ಕೂಡ ಬಂದಿದ್ದರು. ಸಾಯಿಬಾಬಾ ಅವರನ್ನು ೬೪ ರುಪಾಯಿ ದಕ್ಷಿಣೆ ಕೇಳಿದರು. ಆಗ ಅವರು ತಮ್ಮ ಬಳಿ ಇಲ್ಲವೆಂದು ಹೇಳಿದರು. ಆಗ ಸಾಯಿಬಾಬಾರವರು ಚಂದಾ ವಸೂಲಿ ಮಾಡಿ ಕೊಡುವಂತೆ ಹೇಳಿದರು. ಸಾಯಿಯವರ ಮಾತುಗಳು ನಿಜವಾಯಿತು. ಏಕೆಂದರೆ ಮುಂದೆ ಒಂದು ದಿನ ಸಾಯಿಯವರು ಹುಷಾರಿಲ್ಲದೆ ಇದ್ದಾಗ ಒಂದು ಸಪ್ತಾಹ ಕಾರ್ಯಕ್ರಮವನ್ನು ಭಕ್ತರೆಲ್ಲ ಸೇರಿ ನಡೆಸಿದರು. ಆ ಸಪ್ತಾಹ ಕಾರ್ಯಕ್ರಮ ಮುಗಿದ ನಂತರ ಬಂದವರಿಗೆಲ್ಲ ಭೋಜನ ವ್ಯವಸ್ಥೆ ಮಾಡಲು ಹಣ ಬೇಕಾಗಿದ್ದಿತು. ಆ ಕಾರ್ಯಕ್ಕಾಗಿ ನಾಚ್ನೆ ಮತ್ತು ಶಂಕರ ರಾವ್ ಎಲ್ಲರ ಬಳಿ ಚಂದಾ ಎತ್ತಲು ಶುರು ಮಾಡಿದರು. ಚಂದಾ ಎತ್ತಿದ ಹಣವನ್ನು ಲೆಕ್ಕ ಮಾಡಲಾಗಿ ಅದು ಸರಿಯಾಗಿ ೬೪ ರುಪಾಯಿಗಳಾಗಿತ್ತು ಮತ್ತು ಅದನ್ನು ಸಾಯಿಬಾಬಾರವರ ಬಳಿಗೆ ಕೊಟ್ಟು ಕಳುಹಿಸಿದರು.

ಒಮ್ಮೆ ರಾವ್ಜಿ ಸಖಾರಾಮ ವೈದ್ಯ ಅವರ ಮಗಳು "ಮೊರು" ಪ್ಲೇಗ್ ಮಹಾಮಾರಿಯಿಂದ ಬಳಲುತ್ತಿದ್ದಳು. ನಾಚ್ನೆಯವರು ವೈದ್ಯರವರಿಗೆ ಸಾಯಿಬಾಬಾರವರ ಉಧಿಯನ್ನು ನೀಡಿ ಅವಳಿಗೆ ಕೊಡಲು ಹೇಳಿದರು. ಸಾಯಿಯವರ ಆಶೀರ್ವಾದದಿಂದ ಅವಳಿಗೆ ಗುಣವಾಯಿತು. ಕ್ರಿ.ಶ.೧೯೧೬ ರಲ್ಲಿ ಒಂದು ದೊಡ್ಡ ಅಪಾಯದಿಂದ ನಾಚ್ನೆಯವರನ್ನು ಸಾಯಿಬಾಬಾರವರು ಪಾರು ಮಾಡಿದರು.ನಾಚ್ನೆಯವರನ್ನು ಸಾಯಿಬಾಬಾರವರು ನದಿಯಲ್ಲಿ ಮುಳುಗಿ ಸಾಯುವುದರಿಂದ ತಪ್ಪಿಸಿದರು. ಪ್ರತಿದಿನ ನಾಚ್ನೆಯವರು ಮನೆಯಿಂದ ಆಫೀಸಿಗೆ ದೋಣಿಯ ಸಹಾಯದಿಂದ ನದಿಯ ದಡವನ್ನು ದಾಟಿ ಹೋಗಬೇಕಾಗುತ್ತಿತ್ತು. ಒಂದು ದಿನ ಆಫೀಸಿನಿಂದ ಹೊರಡುವುದು ತಡವಾಯಿತು. ನದಿಯ ದಡಕ್ಕೆ ಬಂದು ನೋಡಿದಾಗ ಯಾವ ದೋಣಿಯವರೂ ಇರಲಿಲ್ಲ. ಆಗ ಅಲ್ಲೇ ಒಂದು ಸಣ್ಣ ತೆಪ್ಪ ಮತ್ತು ಸಣ್ಣ ಹುಡುಗನೊಬ್ಬನು ಇದ್ದನು. ಅವನ ಸಹಾಯವನ್ನು ಪಡೆದು ತೆಪ್ಪ ತೆಗೆದುಕೊಂಡು ಹೊರಟರು. ನದಿಯ ಮಧ್ಯಭಾಗಕ್ಕೆ ಬಂದಾಗ ತೆಪ್ಪವು ತಲೆಕೆಳಗಾಯಿತು. ತೆಪ್ಪವು ಮುಳುಗುತ್ತಿದ್ದಾಗ ನಾಚ್ನೆಯವರು ಸಾಯಿಬಾಬಾರವರನ್ನು ಮನದಲ್ಲಿ ಪ್ರಾರ್ಥನೆ ಮಾಡಿದರು. ಸಾಯಿಯವರು ನಾಚ್ನೆಯವರ ಭಕ್ತಿಗೆ ಓಗೊಟ್ಟು ಅವರನ್ನು ಅಪಾಯದಿಂದ ಪಾರು ಮಾಡಿದರು.

ಕ್ರಿ.ಶ.೧೯೧೯ ರಲ್ಲಿ ಸಾಯಿಬಾಬಾರವರು ನಾಚ್ನೆ ಮತ್ತು ಅವರ ಪತ್ನಿಯವರಿಗೆ ತೆಂಗಿನಕಾಯಿಯೊಂದನ್ನು ಪ್ರಸಾದವಾಗಿ ನೀಡುತ್ತಾ ಅವರಿಗೆ ಮಗನೊಬ್ಬನು ಹುಟ್ಟುವನೆಂದು ತಿಳಿಸಿದರು. ಆದರೆ ಆಗ ಸಾಯಿಬಾಬಾರವರು ಕಣ್ಣೀರು ಹಾಕಿದರು. ಸಾಯಿಬಾಬಾ ಹೇಳಿದಂತೆ ಅವರಿಗೆ ಗಂಡು ಮಗ ಹುಟ್ಟಿದನು. ಅವನಿಗೆ ನಾಚ್ನೆ ದಂಪತಿಗಳು ಕಾಲೂರಾಮ್  ಎಂದು ಹೆಸರಿಟ್ಟರು. ನಾಚ್ನೆಯವರ ಮಗನು ಕೇವಲ ೮ ವರ್ಷಗಳು ಮಾತ್ರ ಬದುಕುತ್ತಾನೆ ಎಂದು ಸಾಯಿಬಾಬಾರವರಿಗೆ ಮೊದಲೇ ಗೊತ್ತಾಗಿತ್ತು. ಆದ್ದರಿಂದ ಸಾಯಿಬಾಬಾರವರು ಕಾಲೂರಾಮ್ ಹುಟ್ಟಿದಾಗ ಕಣ್ಣೀರು ಹಾಕಿದರು.

ಕ್ರಿ.ಶ.೧೯೨೨ ರಲ್ಲಿ ನಾಚ್ನೆಯವರಿಗೆ ಎರಡನೇ ಮದುವೆ ಮಾಡುವ ಯೋಚನೆಯನ್ನು ಅವರ ತಂದೆ ತಾಯಿಗಳು ಮಾಡಿದರು. ಏಕೆಂದರೆ ಕ್ರಿ.ಶ.೧೯೨೧ ರಲ್ಲಿ ನಾಚ್ನೆಯವರ ಮೊದಲನೇ ಹೆಂಡತಿ ತೀರಿಕೊಂಡರು. ಆಗ ಒಬ್ಬ ಶ್ರೀಮಂತ ಹುಡುಗಿ ಮತ್ತು ಒಂದು ಬಡ ಮನೆತನದ ಹುಡುಗಿಯನ್ನು ನಾಚ್ನೆ ತಂದೆ ತಾಯಿಗಳು ನೋಡಿಕೊಂಡು ಬಂದಿದ್ದರು. ಅವರಲ್ಲಿ ಯಾರನ್ನು ಮನೆಗೆ ತಂದು ಕೊಳ್ಳುವುದು ಎಂಬ ಯೋಚನೆಗೆ ಬಿದ್ದರು. ಆಗ ಸಾಯಿಬಾಬಾರವರು ನಾಚ್ನೆಯವರ ತಾಯಿಯ ಕನಸಿನಲ್ಲಿ ಬಂದು ಬಡ ಮನೆತನದ ಹುಡುಗಿಯನ್ನೇ ಮನೆ ತುಂಬಿಸಿಕೊಳ್ಳುವಂತೆ ಆಜ್ಞಾಪಿಸಿದರು. ಸಾಯಿಯವರ ಆದೇಶದಂತೆ ಕ್ರಿ.ಶ.೧೯೨೨ ರಲ್ಲಿ ಬಡ ಮನೆತನದ ಹುಡುಗಿಯನ್ನೇ ಮನೆ ತುಂಬಿಸಿಕೊಂಡರು. ಅವರಿಗೆ ಅನೇಕ ಮಕ್ಕಳಾಗಿ ಅವರ ಮನೆತನದವರೆಲ್ಲ ಈಗಲೂ ಕೂಡ ಸುಖವಾಗಿದ್ದಾರೆ.

ಕ್ರಿ.ಶ.೧೯೨೬ ರಲ್ಲಿ ನಾಚ್ನೆಯವರ ಮಕ್ಕಳಾದ ಸಾಯಿನಾಥ ಆಲಿಯಾಸ್ ಹರೇಶ್ವರ್ ಮತ್ತು ಕಾಲೂರಾಮ್ ಪಟಾಕಿಗಳು ಮತ್ತು ಬೆಂಕಿ ಪೆಟ್ಟಿಗೆಯನ್ನು ಇಟ್ಟುಕೊಂಡು ಮನೆಯೊಳಗೆ ಆಟವಾಡುತ್ತಿದ್ದರು. ಆಗ ಹುಡುಗನೊಬ್ಬ ಬೆಂಕಿ ಕಡ್ಡಿ ಗೀರಿ ಎಸೆದನು. ಆಗ ಅದು ಸಾಯಿನಾಥ್ ಮೇಲೆ ಬಿದ್ದು ಅವನ ಬಟ್ಟೆಯು ಹತ್ತಿಕೊಂಡಿತು. ನಾಚ್ನೆಯ ಹೆಂಡತಿ ಆಗ ಮನೆಯ ಹೊರಗಡೆ ಇದ್ದರು. ಅದೇ ಸಮಯದಲ್ಲಿ ಒಬ್ಬ ಫಕೀರ್ ಇವರ ಮುಂದೆ ಪ್ರತ್ಯಕ್ಷನಾಗಿ ಮನೆಯೊಳಗೆ ತನ್ನ ಕೈಗಳನ್ನು ತೋರಿಸುತ್ತಾ ಅಲ್ಲೇನು ನಡೆಯುತ್ತಿದೆ ನೋಡಲು ಹೇಳಿದನು. ನಾಚ್ನೆಯವರ ಹೆಂಡತಿ ಕೂಡಲೇ ಮನೆಯ ಒಳಗಡೆ ಹೋಗಿ ಸಾಯಿನಾಥನ ಬಟ್ಟೆಗಳಿಗೆ ಹತ್ತಿದ್ದ ಬೆಂಕಿಯನ್ನು ಆರಿಸಿದರು. ಈ ರೀತಿಯಲ್ಲಿ ಸಾಯಿನಾಥ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾದನು. ಅದೇ ಕ್ಷಣದಲ್ಲಿ ಫಕೀರ್ ಕೂಡ ಮಾಯವಾದನು. ನಾಚ್ನೆಯವರ ಹೆಂಡತಿ ಮನೆಯ ಹೊರಗಡೆ ಬಂದು ನೋಡಿದಾಗ ಅಲ್ಲಿ ಈ ಫಕೀರ್ ನ ಸುಳಿವೇ ಇರಲಿಲ್ಲ. ಈ ಲೀಲೆಯನ್ನು ಸಾಯಿಬಾಬಾರವರಲ್ಲದೆ ಮತ್ತೆ ಇನ್ಯಾರು ಮಾಡಲು ಸಾಧ್ಯ?

ಕ್ರಿ.ಶ.೧೯೨೮ ರಲ್ಲಿ ಒಂದು ದಿನ ಸಾಯಿನಾಥ ಆಟವಾಡುತ್ತ ಮಹಡಿಯ ಮೇಲಿನಿಂದ ಬಿದ್ದು ಬಿಟ್ಟನು. ಅದನ್ನು ನೋಡಿದ ನಾಚ್ನೆಯವರು ಭೀತರಾಗಿ ಓಡಿಬಂದರು. ಆದರೆ ಕೆಳಗೆ ಬಿದ್ದ ಸಾಯಿನಾಥನ ಮೈ ಮೇಲೆ ಯಾವುದೇ ಗಾಯಗಳಾಗದೆ ನಗುತ್ತ ನಿಂತಿದ್ದನು. ಅವನು ಸಾಯಿಬಾಬಾ ತನ್ನನ್ನು ಕೆಳಕ್ಕೆ ಬೀಳದಂತೆ ಮೇಲಕ್ಕೆ ಎತ್ತಿ ಹಿಡಿದರು ಎಂದು ಹೇಳಿದನು.

ಕ್ರಿ.ಶ.೧೯೩೨ ರಲ್ಲಿ ಸಾಯಿನಾಥ ತನ್ನ ತಮ್ಮ ವಾಸುದೇವನಿಗೆ ಒಂದು ಉಂಗುರವನ್ನು ಕೊಟ್ಟನು. ವಾಸುದೇವನು ಗೊತ್ತಿಲ್ಲದೇ ಅದನ್ನು ಬಾಯಿಗೆ ಹಾಕಿಕೊಂದನು. ಅದು ಹೋಗಿ ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡಿತು. ನಾಚ್ನೆಯವರು ಸಾಯಿಯವರ ಉಧಿಯನ್ನು ವಾಸುದೇವನ ಬಾಯಿಯೊಳಗೆ ಹಾಕಿ ತಮ್ಮ ಬೆರಳುಗಳನ್ನು ಗಂಟಲಿನ ಒಳಗೆ ಹಾಕಿದಾಗ ಉಂಗುರ ಅವರ ಕೈಗೆ ಸಿಕ್ಕಿ ಅದನ್ನು ಅವರು ಹೊರಗೆಳೆದರು.

ಕ್ರಿ.ಶ.೧೯೩೪ ರಲ್ಲಿ ವಾಸುದೇವನಿಗೆ ಸಿಡುಬು, ನ್ಯುಮೊನಿಯ ಮತ್ತು ದೇಹದ ಎದೆಯ ಭಾಗದಲ್ಲಿ ಹುಣ್ಣುಗಳು ಕಾಣಿಸಿಕೊಂಡಿತು. ಆಗ ನಾಚ್ನೆ ಎಂದಿನಂತೆ ಸಾಯಿಯವರ ಸಹಾಯವನ್ನು ಬೇಡಿ ಉಧಿಯನ್ನು ವ್ರಣದ ಜಾಗಕ್ಕೆ ಸವರಿದರು. ಮಾರನೇ ದಿನ ಬೆಳಗ್ಗೆ ಗಾಯಗಳೆಲ್ಲ ವಾಸಿಯಾಗಿದ್ದವು. ಇದನ್ನು ನೋಡಿ ನಾಚ್ನೆಯವರ ಸ್ನೇಹಿತ ಜಾಧವ್ ರವರಿಗೆ ಆಶ್ಚರ್ಯವಾಯಿತು ಮತ್ತು ಅವರು ಕೂಡ ನ್ಯುಮೊನಿಯದಿಂದ ಬಳಲುತ್ತಿದ್ದ ತಮ್ಮ ನಾಲ್ಕುವರೆ ವರ್ಷದ ಮಗನಿಗೆ ಸಾಯಿಯವರ ಉಧಿ ನೀಡುವಂತೆ ಕೇಳಿಕೊಂಡರು. ನಾಚ್ನೆಯವರು ಉಧಿಯನ್ನು ಜಾಧವ್ ರವರ ಮಗನಿಗೆ ಜ್ವರ ಬಂದ ಆರನೆಯ ದಿನ ನೀಡಿದರು. ಮಾರನೆಯ ದಿನವೇ ಜ್ವರ ಕಡಿಮೆಯಾಯಿತು. ಇದಕ್ಕೆ ಮುಂಚೆ ಔಷಧಿ ನೀಡುತ್ತಿದ್ದ ಡಾಕ್ಟರ್ ೯ ದಿನಗಳಿಗೆ ಮುಂಚೆ ಜ್ವರ ವಾಸಿಯಾಗುವುದಿಲ್ಲವೆಂದು ಜಾಧವ್ ಗೆ ತಿಳಿಸಿದ್ದರು. ಜಾಧವ್ ರವರು ೭ ರೂಪಾಯಿಗಳ ಕಾಣಿಕೆಯನ್ನು ಸಾಯಿಬಾಬಾ ಸಂಸ್ಥಾನಕ್ಕೆ ತಮ್ಮ ಕೃತಜ್ಞತೆಯನ್ನು ತೋರಿಸುವ ಸಲುವಾಗಿ ಕಳುಹಿಸಿದರು.

ಕ್ರಿ.ಶ.೧೯೩೫ ರಲ್ಲಿ ಸಾಯಿಯವರು ನಾಚ್ನೆಯವರ ೨ ವರ್ಷದ ಮಗ ಆನಂದನನ್ನು ಕುದಿಯುತ್ತಿದ್ದ ಹಾಲು ಮೈಮೇಲೆ ಬೀಳುವುದನ್ನು ತಪ್ಪಿಸಿ ಕಾಪಾಡಿದರು.

ಕ್ರಿ.ಶ.೧೯೩೬ ರಲ್ಲಿ ನಾಚ್ನೆಯವರ ಮಗ ವಾಸುದೇವ ಮತ್ತು ಅವನ ಕಡೆಯ ತಮ್ಮ ಮನೆಯೊಳಗಿನ ಬೀರುವಿನಲ್ಲಿದ್ದ ಪೆಟ್ಟಿಗೆಯೊಂದಿಗೆ ಆಟವಾಡುತ್ತಿದ್ದರು. ಅದರೊಳಗಿದ್ದ ಸಣ್ಣ ಸಣ್ಣ ಗುಳಿಗೆಗಳನ್ನು ಕಂಡು ಅವುಗಳು ಪೆಪ್ಪೆರ್ ಮೆಂಟ್ ಎಂದು ತಿಳಿದು ಇಬ್ಬರು ಅದನ್ನು ಬಾಯಿಗೆ ಹಾಕಿಕೊಂಡರು. ಆದರೆ ಅದು "ಹಾವಿನ ಮಾತ್ರೆ" ಎಂದು ನಾವು ಕರೆಯುವ ಪಟಾಕಿಯಾಗಿತ್ತು. ಆಗ ನಾಚ್ನೆಯವರು ಸಾಯಿಬಾಬಾರವರ ಉಧಿ ಮತ್ತು ತೀರ್ಥವನ್ನು ಇಬ್ಬರಿಗೂ ಕುಡಿಸಿದರು. ಕೂಡಲೇ ಇಬ್ಬರಿಗೂ ವಾಂತಿಯಾಗಿ ಎಲ್ಲಾ ವಿಷವು ಹೊರಗೆ ಬಂದು ಪ್ರಾಣಾಪಾಯದಿಂದ ಪಾರಾದರು.

ನಾಚ್ನೆಯವರ ತಂದೆ ತಾಯಿಗಳು ಅನನ್ಯ ಸಾಯಿ ಭಕ್ತರಾಗಿದ್ದರು. ನಾಚ್ನೆ ಯವರ ತಾಯಿಯವರು ಸದಾಕಾಲ ಸಾಯಿಬಾಬಾರವರ ಫೋಟೋವನ್ನು ತಮ್ಮ ಪಕ್ಕದಲ್ಲೇ ಇಟ್ಟುಕೊಂಡಿರುತ್ತಿದ್ದರು. ಅವರಿಗೆ ತಮಗೆ ಸಾವು ಹತ್ತಿರವಾಗುತ್ತಿದೆ ಎಂದು ತಿಳಿದಾಗ ನಾಚ್ನೆಯವರಿಗೆ ವಿಷ್ಣು ಸಹಸ್ರನಾಮವನ್ನು ತಮ್ಮ ಪಕ್ಕದಲ್ಲಿ ಕುಳಿತು ಉಚ್ಚರಿಸಲು ಹೇಳಿದರು. ನಾಚ್ನೆಯವರು ಪೂರ್ತಿ ವಿಷ್ಣುಸಹಸ್ರನಾಮವನ್ನು ಉಚ್ಚರಿಸಿದರು. ಕಡೆಗೆ "ರಾಮ, ರಾಮ" ಎಂದು ಸ್ಮರಣೆ ಮಾಡುತ್ತಾ ೧೯೨೬ ರಲ್ಲಿ ತಮ್ಮ ದೇಹವನ್ನು ತ್ಯಜಿಸಿ ಕಾಲವಾದರು.

ನಾಚ್ನೆಯವರ ಎರಡನೇ ಹೆಂಡತಿ ಕ್ರಿ.ಶ.೧೯೨೯ ರಲ್ಲಿ ಕಾಲವಾದರು. ಆಗ ಅವರು ಹೆಂಡತಿಗೆ ಸರಿಯಾದ ರೀತಿಯಲ್ಲಿ ಅಂತ್ಯಕ್ರಿಯೆಗಳನ್ನು ಮಾಡಿ ಅವರಿಗೆ ಸದ್ಗತಿ ನೀಡಬೇಕೆಂದು ಹಂಬಲಿಸಿದರು. ಆದರೆ ಮನೆಯಲ್ಲಿ ೩ ವರ್ಷದ ಸಣ್ಣ ಮಗನಿದ್ದನು. ಅವರ ತಂದೆಯವರು ಹುಷಾರಿಲ್ಲದೆ ನೆರಳುತ್ತಿದ್ದರು. ಆಲ್ಲದೇ ಅವರ ಬಳಿ ಆಗ ಕೇವಲ ೮೦ ರುಪಾಯಿಗಳಿದ್ದವು. ಅಷ್ಟು ಕಡಿಮೆ ಹಣದಲ್ಲಿ ನಾಸಿಕ್ ಗೆ ತೆರಳಿ ಅಂತ್ಯಕ್ರಿಯೆ ಮಾಡಲು ಸಾಲುತ್ತಿರಲಿಲ್ಲ. ಆದರೂ ಧೈರ್ಯ ಮಾಡಿ ಸಾಯಿಬಾಬಾರವರ ಮೇಲೆ ಭಾರ ಹಾಕಿ ನಾಸಿಕ್ ಗೆ ಹೊರಟರು. ರೈಲಿನಲ್ಲಿ ಸಾಯಿಬಾಬಾರವರು ಒಬ್ಬ ಸಹಪ್ರಯಾಣಿಕನ ರೂಪದಲ್ಲಿ ಬಂದು ನಾಚ್ನೆಯವರಿಗೆ ಹಣ ಸಹಾಯ ಮಾಡಿ ಅವರ ಹೆಂಡತಿಯ ಅಂತ್ಯಕ್ರಿಯೆ ಮಾಡಲು ಸಹಾಯ ಮಾಡಿದರು.

೩ ನೇ ಡಿಸೆಂಬರ್ ೧೯೨೩ ರಂದು ನಾಚ್ನೆಯವರು ಅಂಧೆರಿಯಲ್ಲಿನ ತಮ್ಮ ಮನೆಯ ಮುಂದೆ ರಸ್ತೆಯಲ್ಲಿ ಆಡುತ್ತಿದ್ದ ಮಕ್ಕಳನ್ನು ನೋಡುತ್ತಾ ಕುಳಿತಿದ್ದರು. ಆಗ ಶ್ರೀ. ನೋಯಲ್ ಎಂಬುವರು ರಸ್ತೆಯಲ್ಲಿ ಕಾರು ಓಡಿಸುತ್ತಾ ಬಂದರು. ಆಗ ರಸ್ತೆಯಲ್ಲಿ ಆಟವಾಡುತ್ತಿದ್ದ ವಿಠಲ್ ಎಂಬುವರ ಮಗಳಿಗೆ ಕಾರಿನ ಬ್ರೇಕ್ ಕೆಟ್ಟು ಹೋಗಿ ಡಿಕ್ಕಿ ಹೊಡೆಯಿತು. ಆಗ ನಾಚ್ನೆಯವರು ಸಾಯಿಬಾಬಾರವರನ್ನು ಮಗುವನ್ನು ರಕ್ಷಿಸುವಂತೆ ಬೇಡಿಕೊಂಡರು. ನಾಚ್ನೆ ಕೂಡಲೇ ಕಾರಿನ ಬಳಿಗೆ ಹೋಗಿ ಕೆಳಕ್ಕೆ ಬಿದ್ದಿದ್ದ ಮಗುವನ್ನು ಕೈಗೆತ್ತಿಕೊಂಡರು ಮತ್ತು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸೇರಿಸಿದರು. ಮಗುವಿಗೆ ಬಹಳ ಪೆಟ್ಟು ಬಿದ್ದಿದ್ದರಿಂದ ಮಗುವು ಬದುಕುವುದೋ ಇಲ್ಲವೋ ಎಂದು ಡಾಕ್ಟರ್ ಗೆ ಸಂದೇಹವಾಯಿತು. ಆಗ ನಾಚ್ನೆಯವರು ಡಾಕ್ಟರ್ ಗೆ ಸಾಯಿಬಾಬಾರವರು ಮಗುವನ್ನು ಖಂಡಿತವಾಗಿ ಉಳಿಸುತ್ತಾರೆ ಎಂದು ಹೇಳಿದರು. ಮಗುವು ೧೫ ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಹೊಂದಿತು. ಆಮೇಲೆ ಕಾರಿನ ಮಾಲೀಕರನ್ನು ವಿಚಾರಿಸಲಾಗಿ ತಾನು ಕಾರಿನ ಬ್ರೇಕ್ ಆ ಸಮಯದಲ್ಲಿ ಹಾಕಿರಲಿಲ್ಲ ಎಂದು,  ಆದರೆ ಕಾರಿನ ಗೇರ್ ನ ಮಧ್ಯದಲ್ಲಿ ಒಂದು ದೊಡ್ಡ ಕಲ್ಲು ಹೇಗೋ ಸಿಕ್ಕಿಕೊಂಡು ಕಾರು ನಿಂತುಕೊಂಡಿತು ಎಂದು ವಿಷಯ ತಿಳಿಯಿತು. ಆ ದೊಡ್ಡ ಕಲ್ಲು ಅಲ್ಲಿ ಹೇಗೆ ಸೇರಿಕೊಂಡಿತು ಎಂದು ಯಾ ರಿಗೂ ಅರ್ಥವಾಗಲಿಲ್ಲ. ಮಗುವೇನೋ ಬದುಕಿ ಉಳಿಯಿತು. ಆದರೆ ತಾನು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಿತ್ತು. ಹೀಗೆ ಒಂಬತ್ತು ತಿಂಗಳವರೆಗೆ ಮಾತನಾಡಲೇ ಇಲ್ಲ. ಆಗ ಒಂದು ದಿನ ದಾಸಗಣು ಅಲ್ಲಿಗೆ ಆಗಮಿಸಿದರು. ನಾಚ್ನೆಯವರಿಂದ ಮಗುವಿನ ವಿಷಯ ತಿಳಿದ ಅವರು ಮಗುವಿಗೆ ಸಾಯಿಬಾಬಾರವರ ಉಧಿಯನ್ನು ನೀಡುವಂತೆ ಸಲಹೆ ನೀಡಿದರು. ಅದರಂತೆ  ಮಗುವಿಗೆ ಉಧಿಯನ್ನು ನೀಡಲಾಯಿತು. ಉಧಿ ನೀಡಿದ ಮರುದಿನದಿಂದಲೇ ಮಗುವು ಮಾತನಾಡಲು ಪ್ರಾರಂಭ ಮಾಡಿತು. ಇದು ಸಾಯಿಯವರ ಅತ್ಯಾಶ್ಚರ್ಯಕರ ಲೀಲೆಯೆಂದರೆ ತಪ್ಪಾಗಲಾರದು.

Tuesday, August 3, 2010

ಚಿತ್ತೂರಿನ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ವಿಶ್ವಸಾಯಿ ಚಾರಿಟಬಲ್ ಟ್ರಸ್ಟ್ (ರಿ), ಕಟ್ಟಮಂಚಿ, ಚಿತ್ತೂರು, ಆಂಧ್ರಪ್ರದೇಶ - ಕೃಪೆ - ಶ್ರೀ.ನಾರಾಯಣ ರೆಡ್ಡಿ

ದೇವಾಲಯದ ವಿಶೇಷತೆಗಳು:

  • ಈ ದೇವಾಲಯದ ಶಂಕುಸ್ಥಾಪನೆಯನ್ನು ೨೫ ನೇ ಸೆಪ್ಟೆಂಬರ್ ೧೯೯೧ ರಂದು ದಿವಂಗತ ಎಂ.ಚೆನ್ನಾರೆಡ್ಡಿ ಯವರು ನೆರವೇರಿಸಿದರು.
  • ಈ ದೇವಾಲಯವು ೭ ನೇ ಅಕ್ಟೋಬರ್ ೨೦೦೦ ದಂದು ದಿವಂಗತ ಡಾ.ರಾಜಶೇಖರ ರೆಡ್ಡಿಯವರಿಂದ ಉದ್ಘಾಟನೆಗೊಂಡಿತು.
  • ದೇವಾಲಯದ ರಾಜಗೊಪುರದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರೈಸ್ತ ಮತಗಳ ಗುರುತನ್ನು ಕೆತ್ತಲಾಗಿದ್ದು ವಿಶೇಷ ರೀತಿಯಲ್ಲಿ ನಿರ್ಮಿಸಲಾಗಿದೆ. ಈ ರೀತಿಯ ರಾಜಗೋಪುರವು ಸಾಮಾನ್ಯವಾಗಿ ಬೇರೆ ಯಾವುದೇ ಸಾಯಿಬಾಬಾ ಮಂದಿರದಲ್ಲಿ ನಮಗೆ ಕಾಣುವುದಿಲ್ಲ.
  • ದೇವಾಲಯದ ಸಂಪೂರ್ಣ ಹವಾ ನಿಯಂತ್ರಿತ ಧ್ಯಾನಮಂದಿರವನ್ನು ೭ ನೇ ಅಕ್ಟೋಬರ್ ೨೦೦೬ ರಂದು ದಿವಂಗತ ಡಾ.ರಾಜಶೇಖರ ರೆಡ್ಡಿಯವರು ಉದ್ಘಾಟಿಸಿದರು.
  • ಗುರುಸ್ಥಾನವು ದೇವಾಲಯದ ಎಡಭಾಗದಲ್ಲಿದೆ.
  • ದೇವಾಲಯದ ಸುತ್ತಲೂ ವಿಷ್ಣುವಿನ ದಶಾವತಾರದ ಚಿತ್ರಗಳನ್ನು ಆಕರ್ಷಕವಾಗಿ ಕೆತ್ತಲಾಗಿದೆ.
  • ಸಾಯಿಬಾಬಾ ಮಂದಿರದ ಹೊರಗಡೆ ನಂದಿಯನ್ನು ಶಿರಡಿಯಲ್ಲಿರುವಂತೆ ಪ್ರತಿಷ್ಟಾಪಿಸಲಾಗಿದೆ.
  • ದ್ವಾರಕಾಮಾಯಿಯು ಸಾಯಿಮಂದಿರದ ಎಡಭಾಗದಲ್ಲಿದ್ದು ಇಲ್ಲಿ ಧುನಿಯನ್ನು ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಸ್ಥಾಪಿಸಲಾಗಿದೆ.
ದೇವಾಲಯದ ಹೊರನೋಟ


ಗುರುಸ್ಥಾನ

ಪವಿತ್ರ ಧುನಿ ಮಾ

ಪಲ್ಲಕ್ಕಿ ಉತ್ಸವ


ಉಚಿತ ವೈದ್ಯಕೀಯ ಶಿಬಿರದ ದೃಶ್ಯ


ವಿವಿಧ ಸ್ಪರ್ಧೆಗಳಲ್ಲಿ ಗೆದ್ದ ಸರ್ಕಾರಿ ಶಾಲಾ ಮಕ್ಕಳಿಗೆ ಬಹುಮಾನ ವಿತರಣೆ ಮಾಡುವ ದೃಶ್ಯ

ದತ್ತ ಜಯಂತಿ ಉತ್ಸವದ ಅಂಗವಾಗಿ ಭಿಕ್ಷಾಟನೆ ಕಾರ್ಯಕ್ರಮ

ದೇವಾಲಯದ ಕಾರ್ಯಚಟುವಟಿಕೆಗಳು

ದೇವಾಲಯದ ದೈನಂದಿನ ಕಾರ್ಯಕ್ರಮಗಳು

ಆರತಿ ಸಮಯ

ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೦೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೮:೦೦ ಘಂಟೆಗೆ
ಮಧ್ಯಾನ್ಹ ಆರತಿ - ಪ್ರತಿದಿನ ಮಧ್ಯಾನ್ಹ ೧೨:೦೦ ಘಂಟೆಗೆ
ಧೂಪಾರತಿ - ಪ್ರತಿದಿನ ಸಂಜೆ ೬:೦೦ ಘಂಟೆಗೆ ಮತ್ತು ಗುರುವಾರದಂದು ೬:೧೫ ಕ್ಕೆ
ಶೇಜಾರತಿ - ಪ್ರತಿದಿನ ರಾತ್ರಿ ೮:೦೦ ಘಂಟೆಗೆ ಮತ್ತು ಗುರುವಾರದಂದು ೯:೦೦ ಘಂಟೆಗೆ

ವಿಶೇಷ ಕಾರ್ಯಕ್ರಮಗಳು

ಪ್ರತಿದಿನ ಬೆಳಗ್ಗೆ ೭:೦೦ ಘಂಟೆಗೆ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಎಲ್ಲಾ ಭಕ್ತರಿಂದ ಅಭಿಷೇಕ ಮಾಡಲು ಅವಕಾಶ ಮಾಡಿಕೊಡಲಾಗಿದೆ.

ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಪ್ರತಿದಿನ ೭:೩೦ ಕ್ಕೆ ಅಭಿಷೇಕ ಮಾಡಲಾಗುತ್ತದೆ. ಸೇವೆಯಲ್ಲಿ ಭಾಗವಹಿಸಲು ಇಚ್ಚಿಸುವ ಸಾಯಿಭಕ್ತರು ೧೨೫/- ರುಪಾಯಿಗಳನ್ನು ಮುಂಗಡವಾಗಿ ಕೊಟ್ಟು ರಶೀದಿಯನ್ನು ಪಡೆಯಬಹುದು. ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆ ಇಲ್ಲ.

ಧುನಿ ಪೂಜೆಯನ್ನು ಪ್ರತಿದಿನ ಬೆಳಗ್ಗೆ ೮:೦೦ ರಿಂದ ೧೦:೦೦ ಘಂಟೆಯವರೆಗೆ ಮತ್ತು ಸಂಜೆ ೫:೦೦ ದಿಂದ ೭:೦೦ ಘಂಟೆಯವರೆಗೆ ಮಾಡಲಾಗುತ್ತದೆ.

ಪ್ರತಿ ಗುರುವಾರ ಮತ್ತು ವಿಶೇಷ ಉತ್ಸವದ ದಿನಗಳಲ್ಲಿ ಪಲ್ಲಕ್ಕಿ ಸೇವೆಯನ್ನು ಸಂಜೆ ೭:೩೦ ರಿಂದ ೮:೩೦ ರ ವರೆಗೆ ನಡೆಸಲಾಗುತ್ತದೆ.

ಪ್ರತಿದಿನ ಚಾಮರ ಸೇವೆಯನ್ನು ನಡೆಸಲಾಗುತ್ತದೆ.

ಪ್ರತಿ ಸೋಮವಾರದಂದು ಮಧ್ಯಾನ್ಹ ೨:೩೦ ರಿಂದ ೪:೩೦ ರ ವರೆಗೆ ಸತ್ಸಂಗವನ್ನು ನಡೆಸಲಾಗುತ್ತದೆ.

ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು

  • ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆ).
  • ಪ್ರತಿ ವರ್ಷದ ಗುರುಪೂರ್ಣಿಮೆ ಮತ್ತು ದತ್ತ ಜಯಂತಿಯಂದು ಬೆಳಗ್ಗೆ ೬:೦೦ ರಿಂದ ಸಂಜೆ ೬:೦೦ ಘಂಟೆಯವರೆಗೆ ಶ್ರೀ ಸಾಯಿ ನಾಮ ಜಪವನ್ನು ಮಾಡಲಾಗುತ್ತದೆ.
  • ಶ್ರೀ ರಾಮನವಮಿ ( ಬೆಳಗ್ಗೆ ಚಂದನದ ಮೆರವಣಿಗೆ ಮತ್ತು ಸಂಜೆ ರಥೋತ್ಸವ)
  • ಗುರುಪೂರ್ಣಿಮೆ ಉತ್ಸವ (೨ ದಿನಗಳ ವಿಶೇಷ ಉತ್ಸವ. ೧೦೮ ದ್ರವ್ಯಗಳಿಂದ ಪೂಜೆಯನ್ನು ವಿಶೇಷವಾಗಿ ಶ್ರೀ.ವಿಶ್ವ ಚೈತನ್ಯ, ಶ್ರೀ. ರಮಾನಂದ ಮಹರ್ಷಿ, ಶ್ರೀ. ಶಿವ ಸಾಯಿಬಾಬಾ ಮತ್ತು ಶ್ರೀ.ರಾಜೇಂದ್ರ ಪ್ರಸಾದ ಸ್ವಾಮೀಜಿ ಯವರ ದಿವ್ಯ ಸಾನಿಧ್ಯದಲ್ಲಿ ನಡೆಸಲಾಗುತ್ತದೆ).
  • ವಿಜಯದಶಮಿ (ಸಾಯಿಬಾಬಾರವರ ಮಹಾಸಮಾಧಿ ಮತ್ತು ವಾರ್ಷಿಕೋತ್ಸವ) - ೯ ದಿನಗಳ ಉತ್ಸವವನ್ನಾಗಿ ಬಹಳ ವೈಭವದಿಂದ ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಪ್ರತಿ ದಿನ ಸಂಜೆ ಗರುಡ, ಹಂಸ, ನಂದಿ, ಅಶ್ವ, ಮುಷಿಕ, ತಾಮರ, ಮತ್ಸ್ಯ ಮತ್ತು ಗಜ ಉತ್ಸವಗಳನ್ನು ನಡೆಸಲಾಗುತ್ತದೆ. ಪ್ರತಿದಿನ ಸಂಜೆ ನವದುರ್ಗ ಅಲಂಕಾರ ಸಹಿತ ರಥದಲ್ಲಿ ಸಾಯಿಬಾಬಾರವರ ಸುಂದರ ವಿಗ್ರಹವನ್ನು ಮುಂದಿಟ್ಟು ರಥೋತ್ಸವ ನಡೆಸಲಾಗುತ್ತದೆ. ವಿಜಯದಶಮಿಯಂದು ಲಲಿತ ಸಹಸ್ರನಾಮ, ಕನ್ಯಾಕುಮಾರಿ ಪೂಜೆ, ಸುಮಂಗಲಿ ಪೂಜೆ ಮತ್ತು ಸುವಾಸಿನಿ ಪೂಜೆಯನ್ನು ನಡೆಸಲಾಗುತ್ತದೆ.
  • ದತ್ತ ಜಯಂತಿ - ಮಧುಕರಿ ಅಥವಾ ಭಿಕ್ಷಾಟನೆ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷದ ನವೆಂಬರ್ ತಿಂಗಳಿನಲ್ಲಿ ಸಾಯಿ ನಾಮ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ವರ್ಷದ ಶಿವರಾತ್ರಿಯಂದು ಗಿರಿಜಾ ಕಲ್ಯಾಣವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷ ಶ್ರೀ ವೆಂಕಟೇಶ್ವರ ಕಲ್ಯಾಣೋತ್ಸವವನ್ನು ನಡೆಸಲಾಗುತ್ತದೆ.
  • ಪ್ರತಿ ವರ್ಷದ ೧೫ ನೇ ಅಕ್ಟೋಬರ್ ನಂದು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹಕ್ಕೆ ಹಾಲಿನ ಅಭಿಷೇಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ.
  • ವರ್ಷದ ಎಲ್ಲಾ ವಿಶೇಷ ಉತ್ಸವದ ದಿನಗಳಂದು ವಿಶೇಷ ಭಜನೆ ಕಾರ್ಯಕ್ರಮಗಳಿರುತ್ತವೆ. ಆಲ್ಲದೇ, ದೇವಾಲಯಕ್ಕೆ ದರ್ಶನಕ್ಕೆ ಬರುವ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದವನ್ನು ನೀಡಲಾಗುತ್ತದೆ.
ದೇವಾಲಯದ ಸಾಮಾಜಿಕ ಕಾರ್ಯಕ್ರಮಗಳು

  • ಪ್ರತಿ ಗುರುವಾರ ಅನ್ನದಾನ ಮತ್ತು ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುತ್ತದೆ.
  • ಆರು ತಿಂಗಳಿಗೆ ಒಮ್ಮೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ಆರು ತಿಂಗಳಿಗೆ ಒಮ್ಮೆ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಲಾಗುತ್ತದೆ. ಈ ಶಿಬಿರದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿದ ಎಲ್ಲಾ ವಿಭಾಗದ ವೈದ್ಯಕೀಯ ನಿಪುಣರು ಭಾಗವಹಿಸಿ ಉಚಿತ ತಪಾಸಣೆ ಮತ್ತು ಔಷಧಿಯನ್ನು ನೀಡುತ್ತಾರೆ.
  • ಪ್ರತಿ ೩ ತಿಂಗಳಿಗೊಮ್ಮೆ ಬಡವರಿಗೆ ಉಚಿತವಾಗಿ ಸೀರೆಗಳು, ಶಾಲುಗಳು ಮತ್ತು ಹೊದಿಕೆಗಳನ್ನು ನೀಡಲಾಗುತ್ತದೆ.
  • ಪ್ರತಿ ವರ್ಷ ರೋಜ್ ಶಾಲೆಯ ಮಕ್ಕಳಿಗೆ ಕ್ರೀಡೆಗಳನ್ನು ನಡೆಸಿ ಬಹುಮಾನವನ್ನು ವಿತರಿಸಲಾಗುತ್ತದೆ. ಆಲ್ಲದೇ ಈ ಸಂದರ್ಭದಲ್ಲಿ ಉಚಿತ ವೈದ್ಯಕೀಯ ಸಲಹೆ ಮತ್ತು ಅನ್ನದಾನ ಕಾರ್ಯಕ್ರಮವನ್ನು ಕೂಡ ನಡೆಸಲಾಗುತ್ತದೆ.
  • ಪ್ರತಿ ಕಾರ್ತಿಕ ಮಾಸದ ಹುಣ್ಣಿಮೆಯಂದು ಶಿವಲಿಂಗಕ್ಕೆ ಲಕ್ಷ ದೀಪೋತ್ಸವವನ್ನು ನೀಡಲಾಗುತ್ತದೆ. ಈ ಸಂದರ್ಭದಲ್ಲಿ ಮರಳಿನ ಲಿಂಗ, ಹಿಮದ ಲಿಂಗ, ನವಧಾನ್ಯದಿಂದ ಮಾಡಿದ ಲಿಂಗ ಮತ್ತು ಇನ್ನು ಮುಂತಾದ ಅಲಂಕಾರಗಳನ್ನು ಮಾಡಲಾಗುತ್ತದೆ.
  • ಪ್ರತಿ ವರ್ಷದ ಸ್ವಾತಂತ್ರ್ಯ ದಿನಾಚರಣೆ, ಗಾಂಧಿ ಜಯಂತಿ ಮತ್ತು ಗಣರಾಜ್ಯೋತ್ಸವ ಸಂದರ್ಭಗಳಲ್ಲಿ ಚಿತ್ತೂರಿನ ೯ ಸರ್ಕಾರಿ ಶಾಲೆಗಳಲ್ಲಿ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಬಹುಮಾನಗಳನ್ನು ವಿತರಿಸಲಾಗುತ್ತದೆ.
  • ೩ ತಿಂಗಳಿಗೆ ಒಮ್ಮೆ ದೇವಾಲಯದ ಪ್ರಾಂಗಣದಲ್ಲಿ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಕೈಬರವಣಿಗೆಯ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
  • ಸರ್ಕಾರಿ ಶಾಲೆಗಳಲ್ಲಿ ಓದುವ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಕಾರ್ಯಕ್ರಮ ಮತ್ತು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ೧೦೧೬/- ರುಪಾಯಿಗಳನ್ನು ನೀಡುವ ಕಾರ್ಯಕ್ರಮವನ್ನು ವರ್ಷಕ್ಕೊಮ್ಮೆ ಹಮ್ಮಿಕೊಳ್ಳಲಾಗುತ್ತದೆ.
  • ಪ್ರತಿ ವರ್ಷದ ೯ ನೇ ಫೆಬ್ರವರಿ ಯಂದು ಮಹಿಳೆಯರಿಗೆ ವಿಶೇಷವಾಗಿ ವೈದ್ಯಕೀಯ ಶಿಬಿರವನ್ನು ನಡೆಸಿ ಉಚಿತ ತಪಾಸಣೆ ಮತ್ತು ಔಷಧಿಯನ್ನು ನೀಡಲಾಗುತ್ತದೆ.
ದೇವಾಲಯದ ಸಂಪರ್ಕದ ವಿವರಗಳು ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ. ಶಿರಡಿ ವಿಶ್ವ ಸಾಯಿ ಚಾರಿಟಬಲ್ ಟ್ರಸ್ಟ್ (ರಿ)
ಕಟ್ಟಮಂಚಿ, ಚಿತ್ತೂರು-೫೧೭ ೦೦೧.
ಆಂಧ್ರಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿ:

ಶ್ರೀ. ನಾರಾಯಣ ರೆಡ್ಡಿ - ದೇವಾಲಯದ ಮ್ಯಾನೇಜರ್

ದೂರವಾಣಿ ಸಂಖ್ಯೆ:

೦೯೮೮೫೦ ೩೦೪೦೫

ಮಾರ್ಗಸೂಚಿ:

ಚಿತ್ತೂರು ಮುಖ್ಯ ಬಸ್ ನಿಲ್ಧಾಣದಿಂದ ತಿರುಪತಿಗೆ ಹೋಗುವ ದಾರಿಯಲ್ಲಿ ೫ ನಿಮಿಷ ನಡೆದರೆ ಸಾಯಿಮಂದಿರ ಸಿಗುತ್ತದೆ.

Monday, August 2, 2010

ಚಿತ್ತೂರಿನ ಸಾಯಿಮಂದಿರ - ಶ್ರೀ ಶಿರಡಿ ಸಾಯಿಬಾಬಾ ಅಭ್ಯುದಯ ಆಶ್ರಮ, ಶಿರ್ಡಿಪುರಂ, ಪುಲ್ಲುರ್ ಕ್ರಾಸ್, ಎಸ್.ಆರ್.ಪುರಂ ಮಂಡಳ - ಕೃಪೆ - ಶ್ರೀ. ಶೇಖರ ರಾಜು

ದೇವಾಲಯದ ವಿಶೇಷತೆಗಳು



  • ಗುರುಸ್ಥಾನವು ಏಪ್ರಿಲ್ ೨೦೦೭ ರಲ್ಲಿ ಮೊದಲು ಉದ್ಘಾಟನೆಗೊಂಡಿತು.


  • ಸಾಯಿಮಂದಿರವು ೨೧ ನೇ ಜೂನ್ ೨೦೦೭ ರಂದು ಅಮ್ಮುಲ ಸಾಂಭಶಿವರಾವ್ ರವರಿಂದ ಉದ್ಘಾಟನೆಗೊಂಡಿತು.


  • ಈ ದೇವಾಲಯವನ್ನು ಶ್ರೀಯುತ ಸಿ.ದಿಲೀಪ್ ರಾಜು ರವರು ಶ್ರೀಯುತ ಶೇಖರ ರಾಜುರವರೊಂದಿಗೆ ಸೇರಿ ಮತ್ತು ಸಾಯಿಭಕ್ತರ ಸಹಕಾರದೊಂದಿಗೆ ನಿರ್ಮಿಸಿದರು ಮತ್ತು ಕಾಲಾನಂತರದಲ್ಲಿ ಮಂದಿರವನ್ನು ಶ್ರೀ. ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ) ಗೆ ದಾನವಾಗಿ ನೀಡಿದ್ದಾರೆ.


  • ಗುರುಸ್ಥಾನದಲ್ಲಿ ವಿನಾಯಕ, ದತ್ತಾತ್ರೇಯ ಮತ್ತು ಸುಬ್ರಮಣ್ಯ ದೇವರ ವಿಗ್ರಹಗಳಿವೆ.


  • ನಂದಿಯ ವಿಗ್ರಹವನ್ನು ಸಾಯಿಬಾಬಾ ದೇವಾಲಯದ ಹೊರಗಡೆ ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ.


  • ಸಾಯಿಬಾಬಾ ದೇವಾಲಯದ ಮುಂದುಗಡೆ ಶ್ರೀ ಸಾಯಿ ಕೋಟಿ ಸ್ಥೂಪವನ್ನು ನಿರ್ಮಿಸಲಾಗಿದೆ.


  • ದ್ವಾರಕಾಮಾಯಿಯನ್ನು ಸಾಯಿಬಾಬಾ ದೇವಾಲಯದ ಮುಂದುಗಡೆಯಲ್ಲಿ ಸ್ಥಾಪಿಸಲಾಗಿದ್ದು,ಇದರ ಒಳಗಡೆ ಬೆಂಗಳೂರಿನ ಬಿ.ಟಿ.ಎಂ.ಸಾಯಿಬಾಬಾ ಮಂದಿರದಿಂದ ತಂದ ಪವಿತ್ರ ಅಗ್ನಿಯಿಂದ ಧುನಿಯನ್ನು ಸ್ಥಾಪಿಸಲಾಗಿದೆ.


  • ಗುರುಸ್ಥಾನದ ಪಕ್ಕದಲ್ಲಿ ನವಗ್ರಹ ದೇವರುಗಳ ದೇವಸ್ಥಾನವನ್ನು ಕಟ್ಟಲಾಗಿದೆ.


  • ನವಗ್ರಹ ದೇವಸ್ಥಾನದ ಪಕ್ಕದಲ್ಲಿ ನಾಗ ದೇವರ ದೇವಾಲಯವನ್ನು ಕಟ್ಟಲಾಗಿದೆ.
ಸಾಯಿಬಾಬಾರವರ ವಿಗ್ರಹ

ವಿನಾಯಕ, ದತ್ತಾತ್ರೇಯ ಹಾಗೂ ಸುಬ್ರಮಣ್ಯ ದೇವರ ವಿಗ್ರಹಗಳು

ಪವಿತ್ರ ಧುನಿ ಮಾ

ಶ್ರೀ ಸಾಯಿ ಕೋಟಿ ಸ್ಥೂಪ

ನವಗ್ರಹಗಳು

ನಾಗ ದೇವರುಗಳು

ದೇವಾಲಯದ ಕಾರ್ಯಚಟುವಟಿಕೆಗಳು

ದಿನನಿತ್ಯದ ಕಾರ್ಯಕ್ರಮಗಳು

ಆರತಿ ಸಮಯ

ಕಾಕಡ ಆರತಿ - ಪ್ರತಿದಿನ ಬೆಳಗ್ಗೆ ೬:೩೦ ಘಂಟೆಗೆ
ಛೋಟಾ ಆರತಿ - ಪ್ರತಿದಿನ ಬೆಳಗ್ಗೆ ೮:೩೦ ಘಂಟೆಗೆ
ಮಧ್ಯಾನ್ಹ ಆರತಿ - ಮಧ್ಯಾನ್ಹ ೧೨:೦೦ ಘಂಟೆಗೆ
ಧೂಪಾರತಿ - ಸಂಜೆ ೬:೦೦ ಘಂಟೆಗೆ
ಶೇಜಾರತಿ - ರಾತ್ರಿ ೮:೦೦ ಘಂಟೆಗೆ



  • ಗುರುಸ್ಥಾನದಲ್ಲಿ ಪ್ರತಿದಿನ ಬೆಳಗ್ಗೆ ೭ ರಿಂದ ೯ ಘಂಟೆಯವರೆಗೆ ಅಭಿಷೇಕ ನಡೆಸಲಾಗುತ್ತದೆ. ಇದರ ಸೇವಾ ಶುಲ್ಕ ೧೦೧/- ರೂಪಾಯಿಗಳು.


  • ಪ್ರತಿದಿನ ಬೆಳಗ್ಗೆ ೯ ರಿಂದ ೧೦:೩೦ ರವರೆಗೆ ಸಾಯಿಬಾಬಾರವರ ಪಂಚಲೋಹ ವಿಗ್ರಹಕ್ಕೆ ಅಭಿಷೇಕ ನಡೆಸಲಾಗುತ್ತದೆ. ಇದರ ಸೇವಾ ಶುಲ್ಕ ೧೦೧/- ರುಪಾಯಿಗಳಾಗಿದ್ದು ಸೇವೆ ಮಾಡಿಸಲು ಇಚ್ಚಿಸುವ ಸಾಯಿಭಕ್ತರು ಮುಂಚಿತವಾಗಿ ಹಣವನ್ನು ಕೊಟ್ಟು ರಶೀದಿಯನ್ನು ಪಡೆಯತಕ್ಕದ್ದು.ಸಾಯಿಭಕ್ತರು ಯಾವುದೇ ಪೂಜಾ ಸಾಮಗ್ರಿಗಳನ್ನು ತರುವ ಅವಶ್ಯಕತೆಯಿಲ್ಲ.


  • ಪ್ರತಿದಿನ ಧುನಿ ಪೂಜೆಯನ್ನು ಬೆಳಗ್ಗೆ ೧೧:೪೫ ಕ್ಕೆ , ಸಂಜೆ ೫:೪೫ ಕ್ಕೆ ಮತ್ತು ರಾತ್ರಿ ೭:೪೫ ಕ್ಕೆ ಮಾಡಲಾಗುತ್ತದೆ.


  • ಪ್ರತಿ ಗುರುವಾರ ಪಲ್ಲಕ್ಕಿ ಸೇವೆಯನ್ನು ಸಂಜೆ ೭:೧೫ ಕ್ಕೆ ನಡೆಸಲಾಗುತ್ತದೆ.


  • ಪ್ರತಿ ಗುರುವಾರ ಚಾಮರ ಸೇವೆಯನ್ನು ಸಂಜೆ ೭:೧೫ ಕ್ಕೆ ನಡೆಸಲಾಗುತ್ತದೆ.
ವಿಶೇಷ ಉತ್ಸವ ಮತ್ತು ಹಬ್ಬದ ದಿನಗಳು

೧. ಹೊಸ ವರ್ಷದ ಆಚರಣೆ (ಹೂವಿನ ಅಲಂಕಾರ ಮತ್ತು ಭಜನೆಯ ಕಾರ್ಯಕ್ರಮ)
೨. ಪ್ರತಿ ವರ್ಷದ ೨ ನೇ ಮೇ ಬೆಳಗ್ಗೆ ೮:೦೦ ರಿಂದ ರಾತ್ರಿ ೮:೦೦ ರ ವರೆಗೆ ಅಖಂಡ ಸಾಯಿ ನಾಮ ಜಪ ಹಮ್ಮಿಕೊಳ್ಳಲಾಗುತ್ತದೆ.
೩. ಶ್ರೀ ರಾಮನವಮಿ.
೪. ಗುರುಪೂರ್ಣಿಮೆ.
೫. ಪ್ರತಿ ವರ್ಷದ ೨೮ ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
೬. ವಿಜಯದಶಮಿ ( ಸಾಯಿಬಾಬಾ ಸಮಾಧಿ ದಿವಸ).
೭. ದತ್ತ ಜಯಂತಿ.

ಮೇಲೆ ತಿಳಿಸಿದ ಎಲ್ಲಾ ವಿಶೇಷ ಉತ್ಸವದ ದಿನಗಳಲ್ಲಿ ವಿವಿಧ ಭಜನ ಗಾಯಕರಿಂದ ಭಜನೆಯನ್ನು ಮತ್ತು ಸಾಯಿ ಮಹಾಪ್ರಸಾದ ವಿತರಣೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ.

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು

  • ಬಡ ಜನರ ವೈದ್ಯಕೀಯ ಖರ್ಚಿನ ಸ್ವಲ್ಪ ಭಾಗವನ್ನು ದೇವಾಲಯದವರು ಟ್ರಸ್ಟ ನವರ ಆದೇಶದಂತೆ ನೀಡುತ್ತಾರೆ.
  • ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ ವಿತರಣೆ ಮಾಡುವುದು.
  • ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಮಾಡುವುದು.
  • ಸಮಾಜದಲ್ಲಿನ ಬಡ ಮತ್ತು ಹಿಂದುಳಿದ ವರ್ಗದ ಜನರಿಗೆ ಉಚಿತವಾಗಿ ಸೀರೆ, ಶಾಲುಗಳು ಮತ್ತು ಹೊದಿಕೆಗಳನ್ನು ವಿತರಣೆ ಮಾಡುವುದು.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ

ವಿಳಾಸ :

ಶ್ರೀ.ಶಿರಡಿ ಸಾಯಿಬಾಬಾ ಅಭ್ಯುದಯ ಆಶ್ರಮ
ಶ್ರೀ ಸದ್ಗುರು ಸಾಯಿನಾಥ ಸೇವಾ ಸಮಿತಿ (ರಿ)
ಶಿರ್ಡಿಪುರಂ, ಪುಲ್ಲುರ್ ಕ್ರಾಸ್, ಎಸ್.ಆರ್. ಮಂಡಲ
ಚಿತ್ತೂರು ಜಿಲ್ಲೆ, ಆಂಧ್ರಪ್ರದೇಶ.

ಸಂಪರ್ಕಿಸಬೇಕಾದ ವ್ಯಕ್ತಿಗಳು :  

ದೇವಾಲಯದ ಮ್ಯಾನೇಜರ್ / ಶ್ರೀ. ದಿಲೀಪ್ ರಾಜು / ಶ್ರೀ. ಸುರೇಶ / ಶ್ರೀ. ಶೇಖರ ರಾಜು / ಶ್ರೀ. ಕೃಷ್ಣ ಕುಮಾರ್

ದೂರವಾಣಿ ಸಂಖ್ಯೆಗಳು:

೦೯೪೪೧೭೭೪೩೯೧ / ೯೯೦೦೮ ೫೬೧೧೬ / ೯೮೪೫೦ ೪೯೪೬೮ / ೯೯೦೦೦ ೦೦೦೭೨ / ೯೪೪೯೦ ೨೯೩೯೩

ಈ ಮೇಲ್ ವಿಳಾಸ :

 
ಮಾರ್ಗಸೂಚಿ :

ಚಿತ್ತೂರು ಮತ್ತು ಪುತ್ತೂರು ಮುಖ್ಯ ಹೆದ್ದಾರಿಯಲ್ಲಿ ೩೨ ನೇ ಮೈಲಿಗಲ್ಲಿನ ಬಳಿ ದೇವಾಲಯವಿದೆ. 

Sunday, August 1, 2010

ಹುಬ್ಬಳ್ಳಿಯ ಸಾಯಿ ಮಂದಿರ - ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ), ಕೋರ್ಟ್ ಹತ್ತಿರ, ಕ್ಲಬ್ ರಸ್ತೆ, ಹುಬ್ಬಳ್ಳಿ - ಕೃಪೆ - ಶ್ರೀ. ಅಶೋಕ್ ಕೆ.ಕವ್ಲೆಕರ್

ದೇವಾಲಯದ ವಿಶೇಷತೆಗಳು



  • ದೇವಾಲಯದ ಭೂಮಿಪೂಜೆಯನ್ನು ೯ ನೇ ಏಪ್ರಿಲ್ ೧೯೯೫ ರಂದು ನೆರವೇರಿಸಲಾಯಿತು.


  • ದೇವಾಲಯವು ೨೯ ನೇ ಏಪ್ರಿಲ್ ೧೯೯೮ ರಂದು ಪರಮ ಪೂಜ್ಯ ಶ್ರೀ. ಸ್ವಾಮಿ ಪ್ರದ್ಯೋದಾನಂದಜಿ ಯವರಿಂದ ಉದ್ಘಾಟನೆಗೊಂಡಿತು. ಶಿರಡಿ ಸಾಯಿ ಟ್ರಸ್ಟ್, ಚೆನ್ನೈ ನ ಶ್ರೀ.ಕೆ.ವಿ.ರಮಣಿ, ಅಖಂಡ ಸಾಯಿ ನಾಮ ಸಪ್ತಾಹ ಟ್ರಸ್ಟ್ ನ ಶ್ರೀ. ವಿ.ಎಸ್.ಕುಬೇರ ಚೆನ್ನೈ ನಗರದ ಸಾಯಿಮಹಾಭಕ್ತ ದಿವಂಗತ ಶ್ರೀ.ರಾಧಾಕೃಷ್ಣ ಅಯ್ಯರ್, ವಿಜಯ ಕರ್ನಾಟಕ ಪತ್ರಿಕೆಯ ಸಂಪಾದಕರಾದ ಶ್ರೀ.ವಿಜಯ್ ಸಂಕೇಶ್ವರ್ ರವರು ಕೂಡ ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  • ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ಮಂದಿರದಲ್ಲಿ ರಾರಾಜಿಸುತ್ತಿದೆ.


  • ಸಾಯಿಮಂದಿರದ ಆವರಣದ ಹೊರಗಡೆ ನಂದಿಯ ವಿಗ್ರಹವನ್ನು ಶಿರಡಿಯಲ್ಲಿರುವಂತೆ ಸ್ಥಾಪಿಸಲಾಗಿದೆ.


  • ದೇವಾಲಯದ ಬಲಭಾಗದಲ್ಲಿ ಗಣೇಶನ ಮಂದಿರವಿದೆ.


  • ಗಣೇಶ ಮಂದಿರದ ಪಕ್ಕದಲ್ಲಿ ದತ್ತಾತ್ರೇಯನ ಮಂದಿರವಿದೆ. ದತ್ತಾತ್ರೇಯ ವಿಗ್ರಹದ ಹಿಂಭಾಗದಲ್ಲಿ ಬೃಹತ್ ಔದುಂಬರ ವೃಕ್ಷವಿದೆ.


  • ದ್ವಾರಕಾಮಾಯಿಯು ದೇವಾಲಯದ ಬಲಭಾಗದಲ್ಲಿದೆ. ದ್ವಾರಕಾಮಾಯಿಯಲ್ಲಿ ಸಾಯಿಬಾಬಾರವರ ಆಳೆತ್ತರದ ಭಾವಚಿತ್ರವನ್ನು ಇಡಲಾಗಿದೆ. ಶಿರಡಿಯಿಂದ ತಂದ ಪವಿತ್ರ ಅಗ್ನಿಯಿಂದ ಧುನಿಯನ್ನು ದ್ವಾರಕಾಮಾಯಿಯ ಒಳಗಡೆ ಸ್ಥಾಪಿಸಲಾಗಿದೆ.


  • ದ್ವಾರಕಾಮಾಯಿಯ ಪಕ್ಕದಲ್ಲಿ ಒಂದು ದೊಡ್ಡ ಸಭಾಂಗಣವಿದೆ. ಈ ಸಭಾಂಗಣವನ್ನು ಪ್ರತಿ ಗುರುವಾರದ ಮಹಾಪ್ರಸಾದ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲಾಗುತ್ತದೆ.


  • ಗುರುಸ್ಥಾನವನ್ನು ಸಾಯಿ ಮಂದಿರದ ದ್ವಾರದ ಆವರಣದಲ್ಲಿ ಬಲಭಾಗದ ಕೊನೆಯಲ್ಲಿ ಸ್ಥಾಪಿಸಲಾಗಿದೆ. ಗುರುಸ್ಥಾನದ ಹೊರಗಡೆ ಒಂದು ಬೃಹತ್ ಬೇವಿನ ಮರವನ್ನು ಸ್ಥಾಪಿಸಲಾಗಿದೆ.


  • ದೇವಾಲಯದ ಆವರಣದ ಬಲಭಾಗದಲ್ಲಿ ಶಿವ ಮತ್ತು ನವಗ್ರಹ ದೇವಾಲಯವಿದೆ.


  • ಸಾಯಿ ಸಚ್ಚರಿತೆ ಪಾರಾಯಣವನ್ನು ಪ್ರತಿ ಉತ್ಸವ ಮತ್ತು ಹಬ್ಬದ ಸಮಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ.


  • ಪವಿತ್ರ ಧ್ವಜಗಳ ಮೆರವಣಿಗೆಯನ್ನು ಪ್ರತಿ ಉತ್ಸವ ಮತ್ತು ಹಬ್ಬದ ಸಮಯದಲ್ಲಿ ಹಮ್ಮಿಕೊಳ್ಳಲಾಗುತ್ತದೆ.


  • ಪ್ರತಿ ಗುರುವಾರದಂದು ಬೆಳ್ಳಿಯ ಸಾಯಿಬಾಬಾ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಇರಿಸಿ ಪಲ್ಲಕ್ಕಿಯನ್ನು ದೇವಾಲಯದ ಆವರಣದ ಸುತ್ತಾ ಪ್ರದಕ್ಷಿಣೆ ತೆಗೆದುಕೊಂಡು ಹೋಗಲಾಗುತ್ತದೆ. 


  • ತಿಂಗಳ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯ ಕಾರ್ಯಕ್ರಮವಿರುತ್ತದೆ. 

ಸಾಯಿಬಾಬಾರವರ ವಿಗ್ರಹ

ದ್ವಾರಕಾಮಾಯಿ ಮತ್ತು ಪವಿತ್ರ ಧುನಿ ಮಾ

ದ್ವಾರಕಾಮಾಯಿಯಲ್ಲಿರುವ ಸಾಯಿಯವರ ಚಿತ್ರಪಟ

ಉತ್ಸವದ ದಿನಗಳಲ್ಲಿ ಧ್ವಜದ ಮೆರವಣಿಗೆಯ ದೃಶ್ಯ

ಸಾಯಿ ಸಚ್ಚರಿತೆ ಪಾರಾಯಣ

ಸತ್ಯನಾರಾಯಣ ಪೂಜೆಯ ದೃಶ್ಯ

ದೇವಾಲಯದ ಕಾರ್ಯಚಟುವಟಿಕೆಗಳು  

ದಿನನಿತ್ಯದ ಕಾರ್ಯಕ್ರಮಗಳು

ಆರತಿಯ ಸಮಯ

ಕಾಕಡ ಆರತಿ - ಬೆಳಗ್ಗೆ ೬:೧೫ ಕ್ಕೆ
ಮಧ್ಯಾನ್ಹ ಆರತಿ - ಮಧ್ಯಾನ್ಹ ೧೨:೩೦ ಕ್ಕೆ
ಧೂಪಾರತಿ - ಸಂಜೆ ೬:೩೦ ಕ್ಕೆ
ಶೇಜಾರತಿ - ರಾತ್ರಿ ೧೦:೦೦ ಘಂಟೆಗೆ

ವಿಶೇಷ ಕಾರ್ಯಕ್ರಮಗಳು

೧. ಶಾಲಾ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ರಾಮನಗರ, ಗದಗ ರಸ್ತೆ, ಹುಬ್ಬಳ್ಳಿಯ ಬಳಿ ಶಾಲೆಯೊಂದನ್ನು ಸ್ಥಾಪಿಸಲಾಗಿದೆ.
೨. ಪ್ರತಿ ವಾರದ ಬುಧವಾರ ಮತ್ತು ಭಾನುವಾರ ಬಡ ಜನರಿಗೆ ಉಚಿತ ವೈದ್ಯಕೀಯ ತಪಾಸಣೆ ಮತ್ತು ಔಷಧ ವಿತರಣೆ.
೩. ಪ್ರತಿ ಗುರುವಾರದಂದು ಬಂದ ಎಲ್ಲಾ ಸಾಯಿಭಕ್ತರಿಗೆ ಮಹಾಪ್ರಸಾದ ವಿತರಣೆ.
೪. ಹುಬ್ಬಳ್ಳಿಯ ಕೊರ್ವಿನಕೊಪ್ಪ ದಲ್ಲಿ ಗೋಶಾಲೆಯ ಸ್ಥಾಪನೆ.
೫. ಹುಬ್ಬಳ್ಳಿಯ ಬಳಿ ಅನಾಥಾಶ್ರಮ ಮತ್ತು ಬೋರ್ಡಿಂಗ್ ಶಾಲೆಯನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ.

ವಿಶೇಷ ಉತ್ಸವದ ದಿನಗಳು

೧. ಪ್ರತಿ ವರ್ಷದ ೨೯ ನೇ ಏಪ್ರಿಲ್ ರಂದು ದೇವಾಲಯದ ವಾರ್ಷಿಕೋತ್ಸವ.
೨. ಶ್ರೀ ರಾಮನವಮಿ.
೩. ಗುರು ಪೂರ್ಣಿಮೆ.
೪. ವಿಜಯದಶಮಿ (ಸಾಯಿಬಾಬಾ ಮಹಾಸಮಾಧಿ ದಿವಸ).

ದೇವಾಲಯದ ಸಂಪರ್ಕದ ವಿವರಗಳು ಮತ್ತು ಮಾರ್ಗಸೂಚಿ

ವಿಳಾಸ:

ಶ್ರೀ ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ),
ಕೋರ್ಟ್ ಹತ್ತಿರ, ಕ್ಲಬ್ ರಸ್ತೆ, ಹುಬ್ಬಳ್ಳಿ-೫೮೦ ೦೨೯.

ಸಂಪರ್ಕಿಸಬೇಕಾದ ವ್ಯಕ್ತಿ :

ಶ್ರೀ. ಅಶೋಕ್ ಕೆ. ಕವ್ಲೆಕರ್, ಚೇರ್ಮೆನ್, ಶ್ರೀ. ಶಿರಡಿ ಸಾಯಿ ಸದ್ಭಕ್ತ ಮಂಡಳಿ (ರಿ)

ದೂರವಾಣಿ ಸಂಖ್ಯೆಗಳು:

೯೪೪೮೨ ೭೦೩೦೨ / ೮೩೬-೨೩೬೨೩೭೮ / ೮೩೬-೨೩೦೪೬೬೧

ಮಾರ್ಗಸೂಚಿ:

ಕೋರ್ಟ್ ವೃತ್ತದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಕೋರ್ಟ್ ನ ಪಕ್ಕದಲ್ಲಿ ಇದೆ.