ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (ಶಿರಡಿ) ಅಗ್ನಿ ಸುರಕ್ಷತಾ ಸಪ್ತಾಹದ ಅಂಗವಾಗಿ ಇದೇ ತಿಂಗಳ 14ನೇ ಏಪ್ರಿಲ್ 2014, ಸೋಮವಾರ ದಂದು ತನ್ನ ಎಲ್ಲಾ ಉದ್ಯೋಗಿಗಳಿಗೆ ಅಗ್ನಿಶಾಮಕ ತರಬೇತಿ ಶಿಬಿರವನ್ನು ಆಯೋಜಿಸಿತ್ತು.
ಶ್ರೀ ಸಾಯಿಬಾಬಾ ಸಂಸ್ಥಾನವು 14ನೇ ಏಪ್ರಿಲ್ 2014 ರಿಂದ 20ನೇ ಏಪ್ರಿಲ್ 2014 ರವರೆಗೆ ಅಗ್ನಿ ಸುರಕ್ಷತಾ ಸಪ್ತಾಹವನ್ನಾಗಿ ಆಚರಿಸುತ್ತಿರುವ ಪ್ರಯುಕ್ತ ಸಂಸ್ಥಾನದ ಸುರಕ್ಷತಾ ವಿಭಾಗವು ಅಗ್ನಿ ಮತ್ತು ಸುರಕ್ಷತಾ ಇಲಾಖೆಯ ಸಹಯೋಗದೊಂದಿಗೆ ವಿವಿಧ ಬಗೆಯ ಬೆಂಕಿಯನ್ನು ನಂದಿಸುವ ಉಪಕರಣಗಳನ್ನು ತನ್ನ ಎಲ್ಲಾ ವಿಭಾಗಗಳಲ್ಲಿ ಅಳವಡಿಸಿತು.
ಈ ಬೆಂಕಿಯನ್ನು ನಂದಿಸುವ ಉಪಕರಣಗಳನ್ನು ಉಪಯೋಗಿಸುವ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುವ ನಿಟ್ಟಿನಲ್ಲಿ ಸಂಸ್ಥಾನವು ಮೊದಲ ಹಂತದ ತರಬೇತಿ ಶಿಬಿರವನ್ನು 10,
12, 14 ಮತ್ತು 17ನೇ ಫೆಬ್ರವರಿ 2014 ರಂದು ತನ್ನ ಉದ್ಯೋಗಿಗಳಿಗೆ ಹಮ್ಮಿಕೊಂಡಿತ್ತು. ಅದೇ ರೀತಿ ಮೊದಲನೇ ಶಿಬಿರದಲ್ಲಿ ಪಾಲ್ಗೊಳ್ಳಲು ಆಗದಿದ್ದ ಉದ್ಯೋಗಿಗಳಿಗಾಗಿ ಎರಡನೇ ಸುತ್ತಿನ ತರಬೇತಿ ಶಿಬಿರವನ್ನು 13 ಮತ್ತು 14ನೇ ಏಪ್ರಿಲ್ 2014 ರಂದು ಎರಡು ಅಧಿವೇಶನಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಶಿರಡಿ ನಗರ ಪಾಲಿಕೆಯ ಅಗ್ನಿ ಮತ್ತು ಸುರಕ್ಷತಾ ಅಧಿಕಾರಿ ಶ್ರೀ.ಸಾಂಭಾಜಿ ಕಾರ್ಲೆಯವರು ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಉದ್ಯೋಗಿಗಳಿಗೂ ನೀಡಿದ ಮಾರ್ಗದರ್ಶನ ಎಲ್ಲರಿಗೂ ಬಹಳ ಉಪಯೋಗವಾಯಿತೆಂದು ಹೇಳಬಹುದು. ಶ್ರೀ.ಕಾರ್ಲೆಯವರು ಈ ಶಿಬಿರವನ್ನು ಹಾಸ್ಯಮಿಶ್ರಿತ ಮನರಂಜನೆಯೊಂದಿಗೆ ನಡೆಸಿಕೊಟ್ಟರು. ಅಗ್ನಿಶಾಮಕ ದಳದ ಸಿಬ್ಬಂದಿಗಳು ವಿವಿಧ ಉಪಕರಣಗಳನ್ನು ಬಳಸುವ ರೀತಿಯನ್ನು ಪ್ರದರ್ಶಿಸಿದರು. ಶಿಬಿರದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಸುಮಾರು 3000 ಸಿಬ್ಬಂದಿಗಳು ಭಾಗವಹಿಸಿ ಅದರ ಪ್ರಯೋಜನವನ್ನು ಪಡೆದರು.
ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿಗಳಾದ ಶ್ರೀ.ಅಜಯ್ ಮೋರೆ,ಉಪ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಪ್ಪಾ ಸಾಹೇಬ್ ಶಿಂಧೆ ಮತ್ತು ಎಲ್ಲಾ ಆಡಳಿತಾಧಿಕಾರಿಗಳು ಈ ತರಬೇತಿ ಶಿಬಿರವು ಯಶಸ್ವಿಯಾಗಳು ತಮ್ಮದೇ ಆದ ರೀತಿಯಲ್ಲಿ ಸಹಕಾರ ನೀಡಿದರು. ಅಲ್ಲದೆ, ಶ್ರೀ ಸಾಯಿಬಾಬಾ ಸಂಸ್ಥಾನದ ಸುರಕ್ಷತಾ ಅಧಿಕಾರಿಗಳಾದ ಶ್ರೀ.ಎಸ್.ಆರ್.ಜಾಧವ್, ಸುರಕ್ಷತಾ ವಿಭಾಗದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರು ಮತ್ತು ಅಗ್ನಿ ಮತ್ತು ಸುರಕ್ಷತಾ ಇಲಾಖೆಯ ಶ್ರೀ.ಪ್ರತಾಪ್ ಕೋತೆಯವರುಗಳು ಈ ಶಿಬಿರವು ಅತ್ಯಂತ ಯಶಸ್ವಿಯಾಗಲು ಬಹಳ ಶ್ರಮವಹಿಸಿದರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ.ಅಭಯ್ ದುನಾಕೆಯವರು ವಹಿಸಿಕೊಂಡಿದ್ದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ
No comments:
Post a Comment