ಬೆಂಗಳೂರಿನ ಸಾಯಿ ಭಕ್ತ ವೃಂದದಿಂದ "ಜಯಶ್ರೀ ಅಮ್ಮ" ಎಂದೇ ಕರೆಸಿಕೊಳ್ಳುವ ಶ್ರೀಮತಿ.ಎಂ.ಬಿ.ಜಯಶ್ರೀಯವರು ಒಬ್ಬ ಅಪ್ರತಿಮ ಸಾಯಿ ಭಜನ ಗಾಯಕಿ, ಗೀತ ರಚನಕಾರ್ತಿ ಹಾಗೂ ಸಂಗೀತ ಸಂಯೋಜಕಿ. ಇವರು ಕರ್ನಾಟಕದ ಬೆಂಗಳೂರಿನ ಹಲವಾರು ಸಾಯಿಭಕ್ತರ ಮನೆಗಳಲ್ಲಿ ತಮ್ಮ ಸುಮಧುರ ಸಾಯಿ ಭಜನ ಗಾಯನದಿಂದ ಮನೆ ಮಾತಾಗಿದ್ದಾರೆ. ಇವರು 27ನೇ ಜುಲೈ 1954 ರಂದು ಕರ್ನಾಟಕದ ಮೈಸೂರಿನಲ್ಲಿ ದಿವಂಗತ ಶ್ರೀಮತಿ.ಲಕ್ಷ್ಮೀದೇವಮ್ಮ ಮತ್ತು ದಿವಂಗತ ಶ್ರೀ.ಬಾಲಕೃಷ್ಣ ರವರ ಮಗಳಾಗಿ ಜನಿಸಿದರು.
ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿ.ಎ. ಪದವಿಯನ್ನು ಗಳಿಸಿದ್ದಾರೆ. ಅಲ್ಲದೇ, ಮೈಸೂರು ವಿಶ್ವವಿದ್ಯಾಲಯದಿಂದ ಕರ್ನಾಟಕ ಸಂಗೀತ ಜ್ಯೂನಿಯರ್ ಅನ್ನು ಮುಗಿಸಿದ್ದಾರೆ.
ಇವರು 2003 ನೇ ಇಸವಿಯಲ್ಲಿ ಸಾಯಿ ಭಕ್ತೆಯಾಗಿ ರೂಪುಗೊಂಡರು. ಇವರು "ಶ್ರೀ ಸಾಯಿ ಚೈತನ್ಯ ಭಜನ ಮಂಡಳಿ" ಯನ್ನು ಸ್ಥಾಪಿಸಿ ಮಂಡಳಿಯ ಸದಸ್ಯರೊಂದಿಗೆ ಕರ್ನಾಟಕದ ಅನೇಕ ಸಾಯಿ ಮಂದಿರಗಳಲ್ಲಿ ಹಾಗೂ ಭಕ್ತರ ಮನೆಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಕರ್ನಾಟಕದ ಬೆಂಗಳೂರು, ಮೈಸೂರು, ಕೋಲಾರ, ಘಾಟಿ,ಚಿತ್ರದುರ್ಗ, ತಮಿಳುನಾಡು ರಾಜ್ಯದ ವೆಲ್ಲೂರು ಮಹಾಲಕ್ಷ್ಮೀ ದೇವಸ್ಥಾನ ಹಾಗೂ ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ಸಂಸ್ಥಾನವನ್ನು ಒಳಗೊಂಡಂತೆ ಇಲ್ಲಿಯವರೆಗೂ 1008ಕ್ಕೂ ಹೆಚ್ಚು ಸಾಯಿ ಭಜನೆಯ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನೀಡಿದ್ದಾರೆ.
ಇವರು ಪ್ರತಿ ವರ್ಷ 3 ಬಾರಿ ಸಾಯಿ ಭಕ್ತರನ್ನು ಶಿರಡಿ ಯಾತ್ರೆಗೆ ಕರೆದುಕೊಂಡು ಹೋಗುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.
ಇವರು "ಶ್ರೀ ಸಾಯಿ ನಿವೇದನಾ" ಮತ್ತು "ಶ್ರೀ ಸಾಯಿ ಸಮರ್ಪಣಾ" ಎಂಬ ಎರಡು MP3 ಸಾಯಿಭಜನ ಧ್ವನಿಸುರಳಿಗಳನ್ನು ಕನ್ನಡದಲ್ಲಿ ಹೊರತಂದಿದ್ದಾರೆ. ಈ ಎರಡೂ MP3 ಸಾಯಿಭಜನ ಧ್ವನಿಸುರಳಿಗಳಿಗೆ ಗೀತ ರಚನೆ ಹಾಗೂ ಸಂಗೀತ ಸಂಯೋಜನೆಯನ್ನು ಮಾಡಿ ಭಜನೆಗಳನ್ನು ಕೂಡ ಅವರೇ ಹಾಡಿದ್ದಾರೆ.
ಇವರು "ಶ್ರೀ ಸಾಯಿ ಭಕ್ತಿ ಸುಧಾ" ಎಂಬ ಸಾಯಿಭಜನೆಗಳನ್ನು ಒಳಗೊಂಡ ಪುಸ್ತಕವನ್ನು ಕನ್ನಡದಲ್ಲಿ ಹೊರತಂದಿದ್ದಾರೆ.
ಅಷ್ಟೇ ಅಲ್ಲದೇ, ಬೆಂಗಳೂರಿನ ಹುಳಿಮಾವು ಬಡಾವಣೆಯಲ್ಲಿ 2013 ನೇ ಮೇ ತಿಂಗಳಿನಲ್ಲಿ ಸಾಯಿಬಾಬಾ ಮಂದಿರವನ್ನು ಪ್ರಾರಂಭಿಸಿ ಅದರ ಸಂಪೂರ್ಣ ಉಸ್ತುವಾರಿಯನ್ನು ಅವರೇ ಅತ್ಯಂತ ಮುತುವರ್ಜಿವಹಿಸಿ ನೋಡಿಕೊಳ್ಳುತ್ತಿದ್ದಾರೆ.
ಇವರಿಗೆ ಶ್ರೀಮತಿ.ಕೆ.ದಿವ್ಯಶ್ರೀ ಎಂಬ ಮಗಳು ಹಾಗೂ ಕುಮಾರಿ.ಧೃತಿ ರಾವ್ ಎಂಬ ಹೆಸರಿನ ಮುದ್ದಾದ ಮೊಮ್ಮಗಳಿದ್ದಾಳೆ.
ಶ್ರೀಮತಿ.ಎಂ.ಬಿ.ಜಯಶ್ರೀಯವರ ಸಂಪರ್ಕದ ವಿವರಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಶ್ರೀಮತಿ.ಎಂ.ಬಿ.ಜಯಶ್ರೀ
ಶ್ರೀ ಚೌಡೇಶ್ವರಿ ನಿಲಯ,
1093/6, 10ನೇ ಅಡ್ಡರಸ್ತೆ,
ಮುತ್ತುರಾಯಸ್ವಾಮಿ ಲೇ ಔಟ್,
ಹುಳಿಮಾವು, ಬನ್ನೇರುಘಟ್ಟ ರಸ್ತೆ,
ಬೆಂಗಳೂರು - 560 076,
ಕರ್ನಾಟಕ, ಭಾರತ
ದೂರವಾಣಿ ಸಂಖ್ಯೆಗಳು:
+91 98861 24547/ +91 97386 88731
ಇ-ಮೈಲ್ ವಿಳಾಸ:
natarajnagaraj.nn@gmail.com
ಧ್ವನಿಸುರಳಿಗಳು:
"ಶ್ರೀ ಸಾಯಿ ನಿವೇದನಾ" ಮತ್ತು "ಶ್ರೀ ಸಾಯಿ ಸಮರ್ಪಣಾ"
ಪುಸ್ತಕಗಳು:
ಶ್ರೀ ಸಾಯಿ ಭಕ್ತಿ ಸುಧಾ
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment