ಸುಪ್ರಸಿದ್ಧ ಶ್ರೀ ಸಾಯಿನಾಥ ಸ್ತವನ ಮಂಜರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ಶ್ರೀ.ಶ್ರೀನಿವಾಸ ಪ್ರಭಾಕರ ಕಶೇಲ್ಕರ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಶ್ರೀನಿವಾಸ ಪ್ರಭಾಕರ ಕಶೇಲ್ಕರ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ಪ್ರತಿನಿತ್ಯ ಶಿರಡಿ ಸಾಯಿಬಾಬಾ ಸಂಸ್ಥಾನದ ಬೆಳಗಿನ ಕಾಕಡಾ ಆರತಿಯ ನಂತರ ಶಿರಡಿ ನೇರಪ್ರಸಾರದಲ್ಲಿ ಬರುವ ಶ್ರೀ.ದಾಸಗಣು ಮಹರಾಜ್ ರವರ ಸುಪ್ರಸಿದ್ಧ "ಶ್ರೀ ಸಾಯಿನಾಥ ಸ್ತವನ ಮಂಜರಿ"ಯ ಗಾಯಕರು.ಇವರು ಖ್ಯಾತ ಸಾಯಿಭಜನ ಗಾಯಕರು ಹಾಗೂ ಸಂಗೀತ ನಿರ್ದೇಶಕರು.
ಇವರು 21ನೇ ಅಕ್ಟೋಬರ್ 1960 ರಂದು ಶ್ರೀಮತಿ.ಚಾರುಶೀಲ ಕಶೇಲ್ಕರ್ ಮತ್ತು ಶ್ರೀ.ಪ್ರಭಾಕರ ಕಶೇಲ್ಕರ್ ರವರ್ ಪುತ್ರನಾಗಿ ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿರುತ್ತಾರೆ. ಇವರ ತಾಯಿ ಶ್ರೀಮತಿ.ಚಾರುಶೀಲ ಕಶೇಲ್ಕರ್ ರವರು ಭಾರತೀಯ ರಿಸರ್ವ್ ಬ್ಯಾಂಕ್ ನ ಮಾನವ ಸಂಪನ್ಮೂಲ ವಿಭಾಗದಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಬಹಳ ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿರುತ್ತಾರೆ.
ಇವರು ಮುಂಬೈ ವಿಶ್ವವಿದ್ಯಾಲಯದಿಂದ ಬಿ.ಎ.(ಭೂಗೋಳ ಶಾಸ್ತ್ರ) ಪದವಿಯನ್ನು ಗಳಿಸಿರುತ್ತಾರೆ. ಅಲ್ಲದೇ, 8 ವರ್ಷಗಳ ಕಾಲ ತಬಲಾವಾದನ, 7 ವರ್ಷಗಳ ಕಾಲ ಪಾಶ್ಚಾತ್ಯ ಸಂಗೀತವನ್ನು ಮತ್ತು 2 ವರ್ಷಗಳ ಕಾಲ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ವಿವಿಧ ಗುರುಗಳ ಬಳಿ ಅಭ್ಯಾಸ ಮಾಡಿರುತ್ತಾರೆ. ಇವರ ಧ್ವನಿಯು ಬಹಳ ವೈವಿಧ್ಯಮಯವಾಗಿದ್ದು ಸಾಯಿಭಜನೆ, ಸ್ತೋತ್ರ ಮತ್ತು ಅಭಂಗ್ ಗಳಿಗೆ ಹೇಳಿ ಮಾಡಿಸಿದ ಧ್ವನಿಯಂತಿರುತ್ತದೆ.
ಇವರು ಮುಂಬೈನ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ನಲ್ಲಿ ಹಿರಿಯ ಅಧಿಕಾರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಸಾಯಿಭಜನ ಗಾಯಕರಾಗಿ ಇವರು ಭಾರತದ ಅನೇಕ ಕಡೆಗಳಲ್ಲಿ ಕಾರ್ಯಕ್ರಮಗಳನ್ನು ನೀಡಿರುವುದಷ್ಟೇ ಅಲ್ಲದೆ ಇತರ ದೇಶಗಳಾದ ಸಿಂಗಪೂರ, ಇಂಡೋನೇಶಿಯಾ, ಮಲೇಶಿಯಾ, ಕೀನ್ಯಾ, ಟಾನ್ಜೇನಿಯಾ, ದಕ್ಷಿಣ ಆಫ್ರಿಕಾ, ಬೆಲ್ಜಿಯಂ ಮತ್ತು ಅಮೇರಿಕಾ ದಲ್ಲಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.ಅಮೇರಿಕಾದಲ್ಲಿ ಐದು ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ ಹೆಗ್ಗಳಿಕೆ ಇವರದು.
ಇವರು ಶಿರಡಿ ಪಟ್ಟಣದ ಸಮೀಪದಲ್ಲಿರುವ ಸಾಯಿಬಾಬಾ ಮಂದಿರ, ಕೊರಾಳೆ ಯ ಸಹಕಾರದೊಂದಿಗೆ ರಾಥೋಡ್ ಕ್ಯಾಸೆಟ್ಸ್ ಪ್ರೈವೇಟ್ ಲಿಮಿಟೆಡ್ (ಆರ್ -ಸೀರೀಸ್) ನ ಮುಖಾಂತರ "ಶ್ರೀ ಸಾಯಿ ಸಚ್ಚರಿತ" ಎಂಬ ಆಡಿಯೋ ಎಂಪಿ3 ಡಿವಿಡಿಯನ್ನು ಹೊರತಂದಿದ್ದು ಈ 42 ಗಂಟೆ ಅವಧಿಯ ಡಿವಿಡಿಯಲ್ಲಿ ಸಂಪೂರ್ಣ ಶ್ರೀ ಸಾಯಿ ಸಚ್ಚರಿತ, ಶ್ರೀ ದಾಸಗಣು ಮಹರಾಜ್ ರವರ 4 ಅಧ್ಯಾಯಗಳು, ಶ್ರೀ ವಿಷ್ಣು ಸಹಸ್ರನಾಮ, ಶ್ರೀ ಸಾಯಿನಾಥ ಸ್ತವನಮಂಜರಿ ಹಾಗೂ ಸಾಯಿಬಾಬಾರವರ 4 ಆರತಿಗಳು ಅಡಕವಾಗಿವೆ.
ಇವರು ಶ್ರೀಮತಿ.ಉಮಾ ಅವರನ್ನು ವಿವಾಹವಾಗಿದ್ದು ಇವರಿಗೆ ಕುಮಾರಿ.ರೀಚಾ ಹಾಗೂ ಕುಮಾರಿ.ರೋಮಾ ಎಂಬ ಹೆಸರಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.
ಪ್ರಸ್ತುತ ಇವರು ತಮ್ಮ ತಾಯಿ, ಧರ್ಮಪತ್ನಿ ಹಾಗೂ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಮುಂಬೈನ ದಾದರ್ ನಲ್ಲಿರುವ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ಶ್ರೀನಿವಾಸ ಪ್ರಭಾಕರ ಕಶೇಲ್ಕರ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ಶ್ರೀ.ಶ್ರೀನಿವಾಸ ಪ್ರಭಾಕರ ಕಶೇಲ್ಕರ್
ನಂ.602, ತ್ರಿಶಲ ಅಪಾರ್ಟ್ ಮೆಂಟ್ಸ್,
ಜಿ.ಎಂ.ಲೇನ್, ಫಾಲ್ಕೆ ರಸ್ತೆ,
ದಾದರ್,
ಮುಂಬೈ - 400 014,
ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆ:
+91 98211 63741
ಇ-ಮೈಲ್ ವಿಳಾಸ:
shreenivas21@rediffmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment