Tuesday, February 12, 2013

ಮುಂಬೈನ ಅನಾಮಧೇಯ ಸಾಯಿ ಭಕ್ತರಿಂದ ಶಿರಡಿ ಸಾಯಿಬಾಬಾನಿಗೆ ಚಿನ್ನದ "ಚಿಲ್ಲಂ" ನ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ

ಮುಂಬೈನ ಅನಾಮಧೇಯ ಸಾಯಿ ಭಕ್ತರೊಬ್ಬರು ಇದೇ ತಿಂಗಳ 2ನೇ ಫೆಬ್ರವರಿ 2013, ಶನಿವಾರದಂದು ಶಿರಡಿ ಸಾಯಿಬಾಬಾನಿಗೆ  12.5 ಲಕ್ಷ ಬೆಲೆಬಾಳುವ ಚಿನ್ನದ "ಚಿಲ್ಲಂ" ಅನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಪಿಟಿಐ ಸುದ್ಧಿ ಸಂಸ್ಥೆ ವರದಿ ಮಾಡಿದೆ. 

ಈ ಚಿನ್ನದ ಚಿಲ್ಲಂ ಸುಮಾರು 475 ಗ್ರಾಂ ತೂಕವನ್ನು ಹೊಂದಿದೆ ಎಂದು ತಮ್ಮ ಹೆಸರನ್ನು ಗೋಪ್ಯವಾಗಿಡಲು ಬಯಸಿದ ಆ ಅನಾಮಧೇಯ ಭಕ್ತರು ಪಿಟಿಐ ಸುದ್ಧಿ ಸಂಸ್ಥೆಗೆ ತಿಳಿಸಿದರು.

"ನಾನು ಸಾಯಿಬಾಬಾರವರ ದರ್ಶನಕ್ಕೆ ಸುಮಾರು 35 ವರ್ಷಗಳಿಂದಲೂ ಶಿರಡಿಗೆ ಬರುತ್ತಿದ್ದೇನೆ. ಪ್ರತಿ ಗುರುವಾರದಂದು ಜಗತ್ಪ್ರಸಿದ್ಧ  ಚಾವಡಿ ಉತ್ಸವದ ಸಮಯದಲ್ಲಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಯಿಬಾಬಾರವರ ರಾಜೋಪಚಾರದ ಭಾವಚಿತ್ರವನ್ನು ಕೊಂಡೊಯ್ದ ಚಾವಡಿಯಲ್ಲಿ ಆ ಭಾವಚಿತ್ರಕ್ಕೆ ಆರತಿಯನ್ನು ಬೆಳಗಲಾಗುತ್ತದೆ. ಈ ಆರತಿಗೆ ಮುಂಚೆ ಬೆಳ್ಳಿಯ ಚಿಲ್ಲಂನಲ್ಲಿ ಹೊಗೆಸೊಪ್ಪನ್ನು ತುಂಬಿಸಿ ಅದನ್ನು ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರಕ್ಕೆ ತೋರಿಸುವ ಸಂಪ್ರದಾಯ ಬೆಳೆದುಬಂದಿದೆ. ಇನ್ನು ಮುಂದೆ ಬೆಳ್ಳಿಯ ಚಿಲ್ಲಂಗೆ ಬದಲಾಗಿ ಈ ಚಿನ್ನದ ಚಿಲ್ಲಂ ಅನ್ನು ಬಳಸಲಾಗುತ್ತದೆ" ಎಂದು ಆ ಸಾಯಿಭಕ್ತರು ಪಿಟಿಐ ಸುದ್ಧಿ ಸಂಸ್ಥೆಗೆ ತಿಳಿಸಿದರು.

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment