Tuesday, February 12, 2013
ಮುಂಬೈನ ಅನಾಮಧೇಯ ಸಾಯಿ ಭಕ್ತರಿಂದ ಶಿರಡಿ ಸಾಯಿಬಾಬಾನಿಗೆ ಚಿನ್ನದ "ಚಿಲ್ಲಂ" ನ ಕಾಣಿಕೆ - ಕೃಪೆ: ಸಾಯಿಅಮೃತಧಾರಾ.ಕಾಂ
ಮುಂಬೈನ ಅನಾಮಧೇಯ ಸಾಯಿ ಭಕ್ತರೊಬ್ಬರು ಇದೇ ತಿಂಗಳ 2ನೇ ಫೆಬ್ರವರಿ 2013, ಶನಿವಾರದಂದು ಶಿರಡಿ ಸಾಯಿಬಾಬಾನಿಗೆ 12.5 ಲಕ್ಷ ಬೆಲೆಬಾಳುವ ಚಿನ್ನದ "ಚಿಲ್ಲಂ" ಅನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ಪಿಟಿಐ ಸುದ್ಧಿ ಸಂಸ್ಥೆ ವರದಿ ಮಾಡಿದೆ.
ಈ ಚಿನ್ನದ ಚಿಲ್ಲಂ ಸುಮಾರು 475 ಗ್ರಾಂ ತೂಕವನ್ನು ಹೊಂದಿದೆ ಎಂದು ತಮ್ಮ ಹೆಸರನ್ನು ಗೋಪ್ಯವಾಗಿಡಲು ಬಯಸಿದ ಆ ಅನಾಮಧೇಯ ಭಕ್ತರು ಪಿಟಿಐ ಸುದ್ಧಿ ಸಂಸ್ಥೆಗೆ ತಿಳಿಸಿದರು.
"ನಾನು ಸಾಯಿಬಾಬಾರವರ ದರ್ಶನಕ್ಕೆ ಸುಮಾರು 35 ವರ್ಷಗಳಿಂದಲೂ ಶಿರಡಿಗೆ ಬರುತ್ತಿದ್ದೇನೆ. ಪ್ರತಿ ಗುರುವಾರದಂದು ಜಗತ್ಪ್ರಸಿದ್ಧ ಚಾವಡಿ ಉತ್ಸವದ ಸಮಯದಲ್ಲಿ ಪಲ್ಲಕ್ಕಿ ಮೆರವಣಿಗೆಯಲ್ಲಿ ಸಾಯಿಬಾಬಾರವರ ರಾಜೋಪಚಾರದ ಭಾವಚಿತ್ರವನ್ನು ಕೊಂಡೊಯ್ದ ಚಾವಡಿಯಲ್ಲಿ ಆ ಭಾವಚಿತ್ರಕ್ಕೆ ಆರತಿಯನ್ನು ಬೆಳಗಲಾಗುತ್ತದೆ. ಈ ಆರತಿಗೆ ಮುಂಚೆ ಬೆಳ್ಳಿಯ ಚಿಲ್ಲಂನಲ್ಲಿ ಹೊಗೆಸೊಪ್ಪನ್ನು ತುಂಬಿಸಿ ಅದನ್ನು ಸಾಯಿಬಾಬಾರವರ ರಾಜೋಪಚಾರ ಭಾವಚಿತ್ರಕ್ಕೆ ತೋರಿಸುವ ಸಂಪ್ರದಾಯ ಬೆಳೆದುಬಂದಿದೆ. ಇನ್ನು ಮುಂದೆ ಬೆಳ್ಳಿಯ ಚಿಲ್ಲಂಗೆ ಬದಲಾಗಿ ಈ ಚಿನ್ನದ ಚಿಲ್ಲಂ ಅನ್ನು ಬಳಸಲಾಗುತ್ತದೆ" ಎಂದು ಆ ಸಾಯಿಭಕ್ತರು ಪಿಟಿಐ ಸುದ್ಧಿ ಸಂಸ್ಥೆಗೆ ತಿಳಿಸಿದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
Saturday, February 9, 2013
ಶ್ರೀ ಶಿರಡಿ ಸಾಯಿಬಾಬಾ ನವ ಪದ್ಯ ಮಾಲಿಕಾ (ಅರ್ಥ ಸಹಿತ )
||
NA ²æà ²gÀr¸Á¬Ä¨Á¨ÁAiÀÄ £ÀªÀÄB ||
|¥ÀzÀå£ÀªÀÄ£ÀªÀiï|
²gÀr¸Á¬Ä¨Á¨ÁRåUÀÄgÀÄgÀÆ¥ÉÃt
±ÉÆéüvÀªÀiï |
UÀÄgÀÄ¥ÁzÀ£ÀÄvÀA
PÀȵÀÚA ªÀAzÉúÀªÀiï DvÀðgÀPÀëPÀªÀiï || ¥À®è« ||
¸ÁºÀåPÀëgÉÃ
¥ÀgÁ±ÀPÉÛÃ: ¸ÀªÀðªÀiÁvÁæxÀð¨ÉÆÃzsÀPÉÃ|
¸Á¬ÄÃvÀåvÀæ
ªÀÄgÁoÁåA ZÀ vxÁ¬ÄÃvÀå¦ PÀxÀåvÉÃ||1||
»AzÀÆ-ªÀÄĹèA¥ÀæeÁªÀÄzsÀå¸ÀÜzÉéõÁVߥÀæ±ÁªÀÄPÀªÀiï
|
¥ÀæªÀȶÖA
vÁéªÀĺÀA ªÀAzÉà ²gÀr¸Á¬Ä¸ÀzÀÄÎgÉÆÃ
||2||
AiÀÄzÁ
eÁvÁ d£ÉõÀévÀæ ªÀÄ£ÀĵÀåzsÀªÀÄð«¸ÀäøwB |
vÀzÁ
vÀéªÀiÁUÀvÀ¸Áì¬Ä ! GzÀÞvÀÄðA w«ÄgÀ¹ÜvÁ£ï ||3||
ªÀĹӤߪÁ¸ÀPÉÆÃ
¨sÀÆvÁé ¤vÀåºÉÆêÀĸÀÄÛwµÀé¦ |
¤gÀvÁAiÀÄ
£ÀªÀĸÀÄÛ¨sÀåA ¸Á¬Ä¨Á¨Á! dUÀzÀÄÎgÉÆà ||4||
¦vÀgË
PË PÀÄvÀ¸ÀÛ÷éA ZÀ PÀzÁ PÀÄvÀæ ZÀ d£Àä vÉà |
£À
eÁ£Áw ªÀĺÀaÑvÀæA PÉÆÃs¥ÀåvÀæ ¸Á¬Ä±ÀAPÀgÀ ||5||
zÉúÀ¸ÀܸÀªÀðgÉÆÃUÁuÁA
£Á±ÀPÀB ¸Á¬Ä¸ÀzÀÄÎgÉÆà |
vÀxÁ
ZÀ ¨sÀªÀgÉÆÃUÀ¸Àå ±ÀgÀuÁUÀvÀgÀPÀëPÀ ||6||
CµÀÖ¹¢ÞAiÀÄÄvÉÆævÀéA
¥ÁZÀPÉÆà ©üPÀëÄPÀ¸ÀÛxÁ |
PÀªÀÄðAiÉÆÃVÃ
¥ÀgÁxÀðA » ¸Á¬Ä! °Ã¯Á vÀªÁzÀÄãvÁ ||7||
£ÀªÀUÀæºÉõÀÄ
¥Á¥Á£ÁA ±ÉÆÃzsÀPÀ¸Àé÷ÛA ±À¤UÀæºÀB |
¸ÀªÀÄvÁ¨sÁªÀPÉʪÀ®åzÀ:
¸Á¬Ä! ±À¤gÉêÀ vÀéªÀiï ||8||
ªÀÄAiÀiÁ¨sÀPÁÛöå
¸ÀÄÛvÉÆÃs¹ vÀéA vÀªÁ£ÀÄUÀæºÀPÁAQëuÁ|
¤eÁ£ÀAzÀ¤ªÀÄUÀßA
ªÀiÁA PÀÄgÀÄ ¸Á¬Ä! ªÀĺÁUÀÄgÉÆà ||9||
CxÀð
²gÀr ¸Á¬Ä¨Á¨ÁAiÉÄA§ UÀÄgÀÄgÀÆ¥À¢AzÀ
±ÉÆéü¥À£ÀÄ
²æÃPÀȵÀÚ£ÀªÀ£ÁvÀ UÀÄgÀÄ¥ÁzÀ£ÀÄvÀ£ÀÄ |
DvÀðgÀPÀëPÀ£ÀªÀ£ÀÄ ªÀAzÀ£ÉAiÀÄÄ CªÀUÉ
||¥À®è«||
¥ÀgÁ±ÀQÛAiÉÄÃ
¸ÀªÀðªÀiÁvÉAiÉÄAzÁUÀĪÀÅzÀÄ
¸Á»AiÉÄA¨ÉgÀqÀÄ ¸ÀA¸ÀÌøvÁPÀëgÀUÀ¼ÀxÀð
¸Á¬ÄAiÉÄAzɤ¥ÀªÀªÀÅ ªÀÄgÁpAiÀÄ°è; ¸Á»
D¬ÄAiÉÄAzÁUÀĪÀÅzÀÄ ªÀÄvÉÛ ªÀiÁvÁ
JA§xÀðzÀ°è ||1||
»AzÀÆ-ªÀÄĸÀ¯Áä£À¥ÀæeÉUÀ¼ÁªÀÄzsÀåzÀ°
GjAiÀÄÄwºÀ zÉéõÁVßAiÀÄ£ÀÄß £ÀA¢¸ÀĪÀ
§ºÀÄzÉÆqÀØ zÀȶÖAiÀĪÀ ²gÀr¸Á¬Ä¨Á¨Á
£ÀªÀÄ£ÀªÁvÀ¤UÉ ¸ÀzÀÄÎgÀÄ ¸Á¬Ä£ÁxÀ¤UÉ
||2||
zsÀªÀÄðzsÀªÀÄðUÀ¼À ªÀÄzsÉå
ªÀiÁ£ÀªÀzsÀªÀÄðªÀ£ÀÄß
d£ÀgÉ®è ªÀÄgÉvÁUÀ ¤Ã£ÀÄ §A¢gÀĪÉ
PÁUÀðvÀÛ°AzÀ d£ÀgÀ£ÀÄß ªÉÄïÉvÀÛ°PÉÌ
¸Á¬Ä¸ÀzÀÄÎgÀÄ«zÉÆà ¤£ÀUÉ £ÀªÀÄ£À ||3||
ªÀĹâAiÀÄ°èzÀÄÝ zsÀĤAiÉÄA§
CVßPÀÄAqÀzÀ° |
¤vÀå ºÉÆêÀĪÀ UÉÊzÀÄ
ªÀÄAvÀæ¸ÉÆÛÃvÀæUÀ¼À
MqÀ£ÀÄrAiÀÄÄvÀÛ ¤Ã¤zÉÝ ¸Á¬Ä¸ÀzÀÄÎgÀĪÉ
£ÀªÀÄ£À ¤£ÀVzÉÆà ¸Á¬Ä£ÁxÀ ºÉÃ
¥Àæ¨sÀÄªÉ ||4||
vÀAzÉ-vÁ¬ÄAiÀÄgÁgÀÄ AiÀiÁªÁUÀ J°è
d£Àä ¤£ÀßzÀÄ JAzÀÄ §®èªÀgÀÄ AiÀiÁgÀÄ ?
F J®èªÀzÀÄãvÀªÀÅ d£ÀUÀ½UÉ ¤d¢
¸Á¬ÄgÀÆ¥ÀzÀ ±ÀAPÀgÀ£É ¤£ÀUÉ £ÀªÀÄ£À
||5||
zÉúÀzÀ°ègÀĪÀ ¸ÀªÀðgÉÆÃUÀUÀ¼À
£Á±ÀPÀ£ÀÄ ¤Ã£ÀÄ
ºÁUÉAiÉÄà ¨sÀªÀgÉÆÃUÀ¤ªÁgÀPÀ£ÀÄ ¤Ã£ÀÄ
±ÀgÀtÄ §AzÀªÀgÀ£ÀÄß PÀmÉÖZÀÑgÀ¢
gÀQë¸ÀĪÀ
£ÀªÀÄ£À ¤£ÀVzÉÆà ¸Á¬Ä£ÁxÀ ¸ÀzÀÄÎgÀĪÉ
||6||
CtªÀiÁzÀåµÀÖ¹¢ÞUÀ¼É®è ªÀ±ÀzÀ°zÀÝgÀÄ
PÀÆqÀ
AiÉÆÃUÀªÀiÁUÀðzÀ°zÀÄÝ ©üPÉëAiÀÄrUÉ
ªÀÄwÛvÀgÀ PÀªÀÄðUÀ¼À
ªÀiÁqÀÄvÀÛ°gÀ¯Á QæAiÉÄUÀ¼ÀÄ
«ÄøÀ¯É®ègÉýUÉUÉ
¸Á¬Ä! ¤£ÀßAiÀÄ °Ã¯ÉAiÀÄzÀÄãvÀªÀÅ ¤d¢
||7||
£ÀªÀUÀæºÀUÀ¼À°è ±À¤AiÉÄA§ UÀæºÀªÀÅ
£ÉÆÃqÀÄ
¥Á¥ÀUÀ¼À ±ÉÆÃzsÀPÀªÀÅ ±À¤UÀæºÀªÀÅ ¸Á¬Ä
¸ÀªÀĨsÁªÀ-PÉʪÀ®åzÁAiÀÄPÀ UÀæºÀªÀÅ
±À¤AiÀÄÄ
CªÀ£É®è PÀgÀÄt¸ÀĪÀ ¸Á¬Ä ±À¤zÉêÀ
||8||
¸Á¬Ä! ¤£ÀߣÀÄUÀæºÀªÀ §AiÀĹ §A¢gÀĪÀ
£Á£ÀÄ ¤£ÀߣÀÄ ¨sÀQÛ¬ÄAzÀ ¸ÀÄÛw¸ÀĪɣÀÄ
¤eÁ£ÀAzÀzÀ° £À£ÀߣÀÄß ¤Ã ªÀÄUÀßUÉƽ¸ÀÄ
ªÀĺÁUÀÄgÀĪÀÅ ¤Ã¤gÀÄªÉ N
¸ÁAiÀĸÀzÀÄÎgÀÄªÉ ||9||
ರಚನೆ:
¥ÉÆæ|
UÀÄgÀÄ¥ÁzÀ PÉ. ºÉUÀqÉ
ªÉÆ:
8762320683
08-09-2012,
ªÉÄʸÀÆgÀÄ
Tuesday, February 5, 2013
ವಿಸ್ತೃತ ಕನ್ನಡ ಗದ್ಯರೂಪದ ಸಾಯಿ ಸಚ್ಚರಿತೆಯ ಅನುವಾದಕ ಶ್ರೀ.ಸಿ.ಎಸ್.ದಿನೇಶ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಸಿ.ಎಸ್.ದಿನೇಶ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ದಿವಂಗತ ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆ (ಓವಿ ಯಿಂದ ಓವಿ) ಯನ್ನು ಗದ್ಯರೂಪದಲ್ಲಿ ಕನ್ನಡಕ್ಕೆ ವಿಸ್ತೃತವಾಗಿ ಅನುವಾದ ಮಾಡಿರುವ "ಭಾವಾನುವಾದ ಶ್ರೀ ಸಾಯಿ ಸಚ್ಚರಿತ" ದ ಲೇಖಕರು.
ಶ್ರೀ.ಸಿ.ಎಸ್.ದಿನೇಶ್ ರವರು ರವರು ಮುಂಬೈ ನಿವಾಸಿಯಾದ "ವೀಣಾ ವಿದ್ವಾನ್" ದಿವಂಗತ ಶ್ರೀ.ಶಂಕರನಾರಾಯಣ ರಾವ್ ಮತ್ತು ಶ್ರೀಮತಿ.ಜಯಮ್ಮನವರ ದ್ವಿತೀಯ ಪುತ್ರನಾಗಿ 29ನೇ ಮೇ 1948 ರಂದು ಕರ್ನಾಟಕದ ಚಿಕ್ಕಮಗಳೂರು ಪಟ್ಟಣ ಹಾಗೂ ಜಿಲ್ಲೆಯಲ್ಲಿ ಜನಿಸಿರುತ್ತಾರೆ.
ಇವರ ಒಂದನೇ ತರಗತಿ ವ್ಯಾಸಂಗ ಮುಂಬೈನಲ್ಲಿ ಮಾಡಿಸಿದ ತಂದೆತಾಯಿ ಮುಂದಿನ ವ್ಯಾಸಂಗವನ್ನು ಚಿಕ್ಕಮಗಳೂರಿನಲ್ಲಿ ಅಜ್ಜಿ ತಾತನವರ ಆಶ್ರಯದಲ್ಲಿ ಮಾಡಿಸಲು ಕಳುಹಿಸಿಕೊಟ್ಟರು. ತಾತನ ಆಶ್ರಯದಲ್ಲಿ ಬೆಳೆದು ಡಿಪ್ಲೊಮಾ ಎಲೆಕ್ಟ್ರಿಕಲ್ ತನಕ ವ್ಯಾಸಂಗ ಮಾಡಿದರು. ತಾತನವರ ಆಶ್ರಯದಲ್ಲಿ ಒಳ್ಳೆಯ ನಡೆ-ನುಡಿ, ಆಚಾರ-ವಿಚಾರಗಳು ಇವರಿಗೆ ಪ್ರಾಪ್ತವಾದವು. ತಾತನವರ ಮನೆಯಲ್ಲಿ ಅನವರತವೂ ಬಡ ಮಕ್ಕಳಿಗೆ ಸಹಾಯ ಮಾಡುವುದು, ಪರ ಊರುಗಳಿಂದ ಓದಲು ಬಂದ ವಿದ್ಯಾರ್ಥಿಗಳಿಗೆ ವಾರಾನ್ನ ನೀಡುವುದು, ಸಂತರನ್ನು ಕರೆಯಿಸುವುದು, ಹಳೆಯದಾದ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸಹಾಯ ಮಾಡುವುದು, ಸಾಮೂಹಿಕ ಅನ್ನದಾನ ಮಾಡುವುದು, ನಿರಂತರ ವ್ರತಗಳ ಆಚರಣೆ, ನವರಾತ್ರಿ ಉತ್ಸವದ ಆಚರಣೆ, ಆಗಾಗ್ಗೆ ಸೂರ್ಯ ನಮಸ್ಕಾರವನ್ನು ಹಮ್ಮಿಕೊಳ್ಳುತ್ತಿದ್ದುದು - ಈ ಎಲ್ಲಾ ಧಾರ್ಮಿಕ ವಿಧಿ ವಿಧಾನಗಳು ಇವರ ಮನದಲ್ಲಿ ಪಾರಮಾರ್ಥಿಕದತ್ತ ಒಲವು ಮೂಡಿಸುವುದಲ್ಲಿ ಯಶಸ್ವಿಯಾದವೆಂದೇ ಹೇಳಬೇಕು.
ಇವರು ತಮ್ಮ ದೊಡ್ಡಪ್ಪನವರು 1959 ರಲ್ಲಿ ನಿರ್ದೇಶಿಸಿದ "ನಚಿಕೇತ" ನಾಟಕದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ನಂತರ ದೊಡ್ಡಪ್ಪನವರಿಗೆ "ಅಕ್ಕಮಹಾದೇವಿ" ಎಂಬ ಕನ್ನಡ ಚಿತ್ರದ ನಿರ್ಮಾಣ ಕಾರ್ಯದಲ್ಲಿ ಸಹಾಯಕರಾಗಿ ಕೆಲಸ ಮಾಡಿದರು. ಈ ಕಾರ್ಯಗಳೂ ಕೂಡ ಇವರನ್ನು ಪಾರಮಾರ್ಥಿಕ ವಿಚಾರಗಳತ್ತ ಬಲವಾಗಿ ಸೆಳೆದವು.
ವಿದ್ಯಾಭ್ಯಾಸ ಮುಗಿದ ನಂತರ ಕೆಲವು ವರ್ಷಗಳ ಕಾಲ ಮುಂಬೈನ ಪ್ರತಿಷ್ಟಿತ ಮಫತ್ ಲಾಲ್ ಕಂಪನಿಯಲ್ಲಿ ಕೆಲಸ ಮಾಡಿದರು. ನಂತರ 1976 ರಲ್ಲಿ ತಮ್ಮ ಮಿತ್ರರ ಸಹಾಯದಿಂದ ನೈಜೀರಿಯಾಕ್ಕೆ ತೆರಳಿ ಅಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರ ಮುಂಬೈಗೆ ಬಂದು ಶಾಶ್ವತವಾಗಿ ನೆಲೆಸಿದರು.
ನೈಜೀರಿಯಾದಲ್ಲಿ ತಂಗಿದ್ದಾಗ 1990 ನೇ ಇಸವಿಯಲ್ಲಿ ಲಾಗೋಸ್ ನ ಸಾಯಿಬಾಬಾ ಮಂದಿರದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅವಕಾಶ ದೊರೆಯಿತು ಮತ್ತು ಅಲ್ಲಿನ ಭಕ್ತರ ಜೊತೆಯಲ್ಲಿ ಭಜನೆ, ಸತ್ಯಂಗ, ಕೀರ್ತನೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು.
1995 ನೇ ಇಸವಿಯಿಂದ ಮುಂಬೈನ ಚೆಂಬೂರಿನಲ್ಲಿರುವ ಚಿನ್ಮಯ ಮಿಶನ್ ನ ಅಧ್ಯಯನ ವೃತ್ತದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ದೊರೆಯಿತು. ಆ ಸಮಯದಲ್ಲಿ ಹಲವಾರು ಸ್ವಾಮೀಜಿಗಳ ಪ್ರವಚನ, ಉಪನ್ಯಾಸಗಳ ಆನಂದವನ್ನು ಸವಿಯುವ ಅವಕಾಶ ಲಭಿಸಿತು. ಆ ಸಂದರ್ಭದಲ್ಲಿ ಚಿನ್ಮಯ ಮಿಶನ್ ನ ಶ್ರೀ.ಟಿ.ಜಿ.ರಾವ್ ಹಾಗೂ ಶ್ರೀ.ಆಚಾರ್ಯ ರವರುಗಳು ಇವರ ಆಧ್ಯಾತ್ಮಿಕ ಗುರುಗಳಾಗಿ ಇವರನ್ನು ಆಧ್ಯಾತ್ಮಿಕ ವಿಚಾರಗಳತ್ತ ಸೆಳೆದರು.
ಮುಂದೆ 2011 ನೇ ಇಸವಿಯಲ್ಲಿ ದಿವಂಗತ ಶ್ರೀ ಹೇಮಾಡಪಂತರ ಮೇರು ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯ ಮರಾಠಿ ಗದ್ಯಾನುವಾದವನ್ನು ಮಾಡಿ ಅದನ್ನು ಹೊರತಂದ ಪುಣೆಯ ಶ್ರೀ.ಪವಾರ್ ಕಾಕಾರವರ ಪರಿಚಯವಾಯಿತು. ಹೀಗೆ ಆ ಉದ್ಗ್ರಂಥವನ್ನು ಕನ್ನಡ ಭಾಷೆಗೆ ಅನುವಾದ ಮಾಡುವ ಅವಕಾಶ ದೊರೆಯಿತು. ಆ ಸಂದರ್ಭವನ್ನು ಬಹಳ ಉತ್ತಮವಾಗಿ ಬಳಸಿಕೊಂಡು ಆ ಮೇರುಕೃತಿಯನ್ನು ಕನ್ನಡಕ್ಕೆ ಅನುವಾದ ಮಾಡಿ ಸಾಯಿಬಾಬಾರವರ ಆಶೀರ್ವಾದದಿಂದ 31ನೇ ಜನವರಿ 2013 ರಂದು ಬೆಂಗಳೂರಿನ ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬಿಡುಗಡೆ ಮಾಡಿದರು.
ಪ್ರಸ್ತುತ ಇವರು ಸಾಯಿಬಾಬಾರವರ ಮೇಲೆ "ದೈನಂದಿಕ ಸಾಯಿ ಸ್ಮರಣೆ" ಎಂಬ ಮತ್ತೊಂದು ಪುಸ್ತಕದ ರಚನೆಯಲ್ಲಿ ತೊಡಗಿದ್ದು ಅತಿ ಶೀಘ್ರದಲ್ಲೇ ಅದನ್ನು ಬಿಡುಗಡೆ ಮಾಡುವ ಇಚ್ಛೆಯನ್ನು ಹೊಂದಿದ್ದಾರೆ. ಈ ಕೃತಿಯ ವಿಶೇಷತೆಯೇನೆಂದರೆ ದಿನಕ್ಕೊಂದರಂತೆ 365 ಸಾಯಿಬಾಬಾರವರ ಲೀಲೆಗಳನ್ನು ಇದರಲ್ಲಿ ಬರೆಯಲಾಗಿದೆ.
ಇವರಿಗೆ ಧರ್ಮಪತ್ನಿ, ಶ್ರೀ.ಶ್ರೀಹರ್ಷ ಮತ್ತು ಶ್ರೀ.ಶ್ರೀಧರ್ ಎಂಬ ಹೆಸರಿನ ಇಬ್ಬರು ಗಂಡು ಮಕ್ಕಳು ಹಾಗೂ ಶ್ರೀಮತಿ.ಸಂಗೀತ ಎಂಬ ಹೆಣ್ಣು ಮಗಳಿದ್ದಾರೆ.
ಪ್ರಸ್ತುತ ಇವರು ತಮ್ಮ ಧರ್ಮಪತ್ನಿಯ ಜೊತೆಗೆ ಮುಂಬೈನ ಚೆಂಬೂರಿನ ತಮ್ಮ ಸ್ವಗೃಹದಲ್ಲಿ ಸುಖೀ ಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ಸಿ.ಎಸ್.ದಿನೇಶ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಶ್ರೀ.ಸಿ.ಎಸ್.ದಿನೇಶ್
ನಂ.108, ಸುಕೃತ,
ಮೈಸೂರು ಕಾಲೋನಿ, ಮಹಲಾರ್ಡ್,
ಚೆಂಬೂರು,
ಮುಂಬೈ - 400 074,
ಮಹಾರಾಷ್ಟ್ರ, ಭಾರತ
ದೂರವಾಣಿ ಸಂಖ್ಯೆಗಳು:
+91 22 25543020 (ಮನೆ)/+91 98204 64489 (ಮೊಬೈಲ್)
ಇ-ಮೈಲ್ ವಿಳಾಸ:
dinesh1948@rediffmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
Monday, February 4, 2013
ಸಾಯಿಭಜನ ಗಾಯಕಿ - ಶ್ರೀಮತಿ.ತೆನ್ಮೋಳಿ - ಕೃಪೆ:ಸಾಯಿಅಮೃತಧಾರಾ.ಕಾಂ
ಶ್ರೀಮತಿ.ತೆನ್ಮೋಳಿಯವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತೆ ಮತ್ತು ಸಾಯಿ ಭಜನ ಗಾಯಕಿಯಾಗಿದ್ದಾರೆ.
ಶ್ರೀಮತಿ.ತೆನ್ಮೋಳಿಯವರು 19ನೇ ಜನವರಿ 1964 ರಂದು ತಮಿಳುನಾಡಿನ ಕೊಯಂಬತ್ತೂರು ನಗರದಲ್ಲಿ ಜನಿಸಿದರು.
ಇವರು ಕೊಯಂಬತ್ತೂರಿನ ನಾಗಸಾಯಿ ಮಂದಿರದಲ್ಲಿ ಸಾಯಿ ಭಜನೆಯ ಕಾರ್ಯಕ್ರಮವನ್ನು ನೀಡುತ್ತಿರುವುದಷ್ಟೇ ಅಲ್ಲದೇ ಇನ್ನೂ ಹಲವಾರು ಸಾಯಿ ಮಂದಿರಗಳಲ್ಲಿ ಹಾಗೂ ಸಾಯಿ ಭಕ್ತರ ಮನೆಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
ಪ್ರಸ್ತುತ ಇವರು ಕೊಯಂಬತ್ತೂರು ನಗರದ ಸ್ವಗೃಹದಲ್ಲಿ ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.
ಶ್ರೀಮತಿ.ತೆನ್ಮೋಳಿಯವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಶ್ರೀಮತಿ.ತೆನ್ಮೋಳಿ
ನಂ.291, ಅವರಾಮಪಾಳ್ಯಂ ರಸ್ತೆ,
ನ್ಯೂ ಸಿದ್ಧಪುದೂರು,
ಕೊಯಂಬತ್ತೂರು - 641 044,
ತಮಿಳುನಾಡು, ಭಾರತ
ಇ-ಮೈಲ್ ವಿಳಾಸ:
thenu2001in@yahoo.co.in
ಕನ್ನಡ ಅನುವಾದ: ಶ್ರೀಕಂಠ ಶರ್ಮ
Saturday, February 2, 2013
ಹೇಮಾಡಪಂತರ ಶ್ರೀ ಸಾಯಿ ಸಚ್ಚರಿತ್ರೆಯ ಕನ್ನಡ ಗದ್ಯರೂಪ "ಭಾವಾನುವಾದ - ಶ್ರೀ ಸಾಯಿ ಸಚ್ಚರಿತ" ದ ಲೋಕಾರ್ಪಣೆ ಸಮಾರಂಭದ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ
ದಿವಂಗತ ಶ್ರೀ ಹೇಮಾಡಪಂತರ ಮೇರು ಕೃತಿಯಾದ ಶ್ರೀ ಸಾಯಿ ಸಚ್ಚರಿತ್ರೆಯ ಮರಾಠಿ ಗದ್ಯಾನುವಾದವನ್ನು ಪುಣೆಯ ಶ್ರೀ.ಪವಾರ್ ಕಾಕಾರವರು ಬಹಳ ಸುಂದರವಾಗಿ ಮಾಡಿರುತ್ತಾರೆ. ಅದರ ಕನ್ನಡ ಅನುವಾದವನ್ನು ಮುಂಬೈನ ಶ್ರೀ.ಸಿ.ಎಸ್.ದಿನೇಶ್ ರವರು ಮಾಡಿದ್ದು ಅದರ ಲೋಕಾರ್ಪಣೆ ಸಮಾರಂಭವು ಇದೇ ತಿಂಗಳ 31ನೇ ಜನವರಿ 2013, ಗುರುವಾರದಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ.ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಿತು. ಬೆಂಗಳೂರಿನ ಚಿನ್ಮಯ ಮಿಷನ್ ನ ಪರಮ ಪೂಜ್ಯ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು ಈ ಮಹೋನ್ನತ ಕೃತಿಯನ್ನು ಬಿಡುಗಡೆ ಮಾಡಿದರು.
ಕನ್ನಡಕ್ಕೆ ಅನುವಾದ ಮಾಡಿರುವ ಈ ಉದ್ಗ್ರಂಥವು ಸುಮಾರು 970 ಪುಟಗಳಿಂದ ಕೂಡಿದ್ದು ಇದರ ಮೂಲ ಕೃತಿಯ ರಚನಕಾರರು ಅಪ್ರತಿಮ ಸಾಯಿ ಭಕ್ತರಾದ ದಿವಂಗತ ಶ್ರೀ ಹೇಮಾಡಪಂತರು.
ಮೂಲ ಕೃತಿಯಲ್ಲಿದ್ದ ಪದ್ಯಗಳ ಮರಾಠಿ ಗದ್ಯಾನುವಾದವನ್ನು ಪುಣೆಯ ಶ್ರೀ.ಪವಾರ್ ಕಾಕಾರವರು 2011 ರಲ್ಲಿ ಮಾಡಿದರು. ಅದರ ಕನ್ನಡಾನುವಾದವನ್ನು ಮುಂಬೈನ ಶ್ರೀ.ಸಿ.ಎಸ್.ದಿನೇಶ್ ರವರು ಮಾಡಿದ್ದು ಕೃತಿಯನ್ನು ಭಗವದ್ಗೀತೆ, ಭಜ ಗೋವಿಂದಂ ಮತ್ತು ಕನ್ನಡದ ಪ್ರಸಿದ್ಧ ಕವಿಗಳಾದ ದಿವಂಗತ ಡಾ.ಡಿ.ವಿ.ಗುಂಡಪ್ಪನವರ "ಮಂಕುತಿಮ್ಮನ ಕಗ್ಗ" ದ ವಿವರಣೆಗಳಿಂದ ಬಹಳ ಸುಂದರವಾಗಿ ಅಲಂಕರಿಸಿದ್ದಾರೆ.
ಕನ್ನಡ ಕೃತಿಯ ಬಿಡುಗಡೆಯು 31ನೇ ಜನವರಿ 2013, ಗುರುವಾರದಂದು ಬೆಂಗಳೂರಿನ ತ್ಯಾಗರಾಜನಗರದ ಶ್ರೀ.ಸಾಯಿ ಆಧ್ಯಾತ್ಮಿಕ ಕೇಂದ್ರದಲ್ಲಿ ಬೆಳಿಗ್ಗೆ 11:00 ಗಂಟೆಗೆ ನಡೆಯಿತು. ಗುರುವಾರವಾದ ಕಾರಣ 2000 ಕ್ಕೂ ಹೆಚ್ಚು ಸಾಯಿ ಭಕ್ತರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.
ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಪರಮ ಪೂಜ್ಯ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು 8 ರಿಂದ 14 ವರ್ಷದೊಳಗಿನ ಮಕ್ಕಳಲ್ಲಿ ಆಧ್ಯಾತ್ಮಿಕ ಪ್ರವೃತ್ತಿಯನ್ನು ಬೆಳೆಸಬೇಕಾದ ಅಗತ್ಯತೆ ಹಾಗೂ ಅವರ ವ್ಯಕ್ತಿತ್ವದ ಬೆಳವಣಿಗೆಯನ್ನು ಕುರಿತು ಬಹಳ ಸುಂದರವಾಗಿ ಮಾತನಾಡಿದರು. ಅಲ್ಲದೇ ಶಿರಡಿ ಸಾಯಿಬಾಬಾರವರಂತಹ ಅವಧೂತರ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುತ್ತಾ ಅವರುಗಳು ಯಾವುದೇ ಆಶ್ರಮ, ಗುರು ಅಥವಾ ಶಿಷ್ಯ ಪರಂಪರೆಯನ್ನಾಗಲಿ ಹೊಂದಿರುವುದಿಲ್ಲ ಎಂದು ಮನದಟ್ಟು ಮಾಡಿಕೊಟ್ಟರು.
ಜನರು ತಮಗೆ ಕಷ್ಟ ಬಂದಾಗ ಮಾತ್ರ ಅಥವಾ ತಮಗೆ ಜೀವನದಲ್ಲಿ ಏನಾದರೂ ಒಳಿತಾಗಬೇಕೆಂದಾಗ ಮಾತ್ರ "ಸಂಕಟ ಬಂದಾಗ ವೆಂಕಟರಮಣ" ಎಂಬ ನಾಣ್ಣುಡಿಯಂತೆ ದೇವರ ಮೊರೆ ಹೋಗುವುದನ್ನು ಖಂಡಿಸಿದ ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರು ನಮ್ಮ ಜೀವನದಲ್ಲಿ ಪ್ರತಿನಿತ್ಯವೂ ಸಂತರ ಜೀವನ ಚರಿತ್ರೆಗಳನ್ನು ಪಾರಾಯಣ ಮಾಡಬೇಕೆಂದು ಮತ್ತು ಅವರುಗಳು ಸಮಾಜದ ಒಳಿತಿಗಾಗಿ ಮಾಡಿದ ಕೆಲಸಗಳನ್ನು ಸ್ಮರಿಸಬೇಕೆಂದು ಸಲಹೆ ನೀಡಿದರು.
ಮೈಸೂರಿನ ಪ್ರಖ್ಯಾತ ವಿದ್ವಾಂಸರಾದ ಶ್ರೀ.ಗುರುಪಾದ ಕೆ.ಹೆಗಡೆಯವರು ಸಾಯಿಬಾಬಾರವರನ್ನು ಶನಿ ಭಗವಾನರಿಗೆ ಹೋಲಿಸುತ್ತಾ ಸಾಯಿಬಾಬಾ ಹಾಗೂ ಶನಿ ಭಗವಾನರಿಬ್ಬರಿಗೂ ಸಂಖ್ಯಾ ಶಾಸ್ತ್ರದ ಪ್ರಕಾರ ಎಂಟನೇ ಸಂಖ್ಯೆಯನ್ನು ನೀಡಲಾಗಿದ್ದು ಇವರಿಬ್ಬರೂ ಜನರ ಸಂಚಿತ ಪಾಪ ಕರ್ಮಗಳನ್ನು ನಿರ್ಮೂಲನೆ ಮಾಡಿ ಅವರನ್ನು ಪುನೀತರನ್ನಾಗಿ ಮಾಡುತ್ತಾರೆ ಎಂದು ನುಡಿದರು.
ಕಾರ್ಯಕ್ರಮವು ಶ್ರೀ.ಜ್ಯೋತಿ ರಾಘವನ್ ರವರ ಸ್ವಾಗತ ಭಾಷಣದೊಂದಿಗೆ ಆರಂಭವಾದವು. ಶ್ರೀ.ಬ್ರಹ್ಮಾನಂದ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತವನ್ನು ಹಾಗೂ ವೇದಘೋಷವನ್ನು ದೇವಾಲಯದ ಅರ್ಚಕರಾದ ಶ್ರೀ.ಕಾರ್ತೀಕ್ ರವರು ನೆರವೇರಿಸಿದರು. ಕಾರ್ಯಕ್ರಮದ ಆಗುಹೋಗುಗಳನ್ನು ಹಾಗೂ ಸಂಪೂರ್ಣ ಮೇಲ್ವಿಚಾರಣೆಯನ್ನು ಶ್ರೀ ಸಾಯಿ ಆಧ್ಯಾತ್ಮಿಕ ಕೇಂದ್ರದ ಅಧ್ಯಕ್ಷರಾದ ಶ್ರೀ.ಶೇಷಾದ್ರಿಯವರು ನೋಡಿಕೊಂಡರು. ದೇವಾಲಯದ ಸಾಯಿ ಭಜನ ಗಾಯಕರಾದ ಶ್ರೀ.ರಾಧಾಕೃಷ್ಣರವರು ಸುಶ್ರಾವ್ಯವಾಗಿ ಸಾಯಿ ಭಜನೆಯನ್ನು ಹಾಡುವ ಮುಖಾಂತರ ಆಮಂತ್ರಣ ಪ್ರಾರ್ಥನೆಯನ್ನು ನೆರವೇರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಯನ್ನು ಶ್ರೀ.ಜ್ಯೋತಿ ರಾಘವನ್ ರವರು ಮಾಡಿದರು. ಲೋಕಾರ್ಪಣೆಯ ಸಮಾರಂಭದ ದಿನದಂದು 120ಕ್ಕೂ ಹೆಚ್ಚು ಪುಸ್ತಕಗಳನ್ನು ಸಾಯಿ ಭಕ್ತರು ಖರೀದಿಸಿದರು.
ಪುಸ್ತಕವು ಸುಂದರವಾಗಿ ಹೊರಬರಲು ಕಾರಣರಾದ ಎಲ್ಲಾ ವ್ಯಕ್ತಿಗಳಿಗೂ ಈ ಸಂದರ್ಭದಲ್ಲಿ ಸನ್ಮಾನ ಮಾಡಲಾಯಿತು.
ಪುಸ್ತಕದ ಬೆಲೆಯು 380/- ರೂಪಾಯಿಗಳಾಗಿದ್ದು ಈ ಕೆಳಕಂಡ ಸ್ಥಳದಲ್ಲಿ ದೊರೆಯುತ್ತದೆ.
ಶ್ರೀ.ಸಾಯಿ ಅಧ್ಯಾತ್ಮಿಕ ಕೇಂದ್ರ
1ನೇ ಬ್ಲಾಕ್, ತ್ಯಾಗರಾಜನಗರ
ಬೆಂಗಳೂರು-560 028,
ಕರ್ನಾಟಕ, ಭಾರತ
ದೂರವಾಣಿ ಸಂಖ್ಯೆ: +91 80 2661 5507
ಇ-ಮೈಲ್ ವಿಳಾಸ: ssscsaipadananda@yahoo.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
Subscribe to:
Posts (Atom)