Saturday, September 1, 2012

ಕೋಲಾರ ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ (ನೋಂದಣಿ), ಸಂತೆ ಮೈದಾನ, ಮುಳಬಾಗಿಲು - 563 131, ಕೋಲಾರ ಜಿಲ್ಲೆ, ಕರ್ನಾಟಕ, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಸೋಮೇಶ್ವರ ವೃತ್ತದ ಬಳಿಯಿರುವ ಹೊಸ ಸರ್ಕಾರಿ ಶಾಲೆಯ ಹಿಂಭಾಗದಲ್ಲಿದೆ. ದೇವಾಲಯವು ಸೋಮೇಶ್ವರ ವೃತ್ತದಿಂದ ನಡಿಗೆಯ ಅಂತರದಲ್ಲಿದೆ.

ದೇವಾಲಯದ ಭೂಮಿಪೂಜೆಯನ್ನು 2004 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ದೇವಾಲಯವನ್ನು ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 50 x 60 ಚದರ ಅಡಿ ಭೂಮಿಯಲ್ಲಿ ಸ್ಥಳೀಯ  ಸಾಯಿಭಕ್ತರಿಂದ ದೇಣಿಗೆಯನ್ನು ಸ್ವೀಕರಿಸಿ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 8ನೇ ಜೂನ್ 2012 ರಂದು ಮೈಸೂರು ವೇದ ಪಾಠಶಾಲೆಯ ವೇದ ವಿದ್ವಾಂಸರಾದ ಶ್ರೀ.ಸುರೇಶ ದೀಕ್ಷಿತ್ ರವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಶ್ರೀ.ಕೆ.ಸತೀಶ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯದಲ್ಲಿ  6 ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಸ್ಥಾಪಿಸಲಾಗಿದೆ. ಅಮೃತಶಿಲೆಯ ನಂದಿಯ ವಿಗ್ರಹವನ್ನು ದೇವಾಲಯದ ಪ್ರವೇಶದ್ವಾರದಲ್ಲಿ ಸಾಯಿಬಾಬಾರವರ ಎದುರುಗಡೆ ಇರುವಂತೆ ಸ್ಥಾಪಿಸಲಾಗಿದೆ.

ದೇವಾಲಯದ ಹೊರ ಆವರಣದಲ್ಲಿ ದ್ವಾರಕಾಮಾಯಿಯನ್ನು ನಿರ್ಮಾಣ ಮಾಡಲಾಗಿದ್ದು ಇಲ್ಲಿ ಪವಿತ್ರ ಧುನಿಯನ್ನು ಸ್ಥಾಪಿಸಲಾಗಿದೆ.

ದೇವಾಲಯದಲ್ಲಿ ಸುಮಾರು 3 ಅಡಿ ಎತ್ತರದ ಜರ್ಮನ್ ಬೆಳ್ಳಿಯಲ್ಲಿ ಮಾಡಿದ ಸಾಯಿಬಾಬಾರವರ ವಿಗ್ರಹವಿದ್ದು ಇದನ್ನು ಪ್ರತಿ ಗುರುವಾರದ ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಬಳಸಲಾಗುತ್ತಿದೆ. 













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 5.30 ರಿಂದ 12.30.
ಸಂಜೆ : 4.30 ರಿಂದ 8:30.

ಆರತಿಯ ಸಮಯ:

ಕಾಕಡಾ ಆರತಿ : 06.00 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 06:00 ಗಂಟೆ
ಶೇಜಾರತಿ      : 08:00 ಗಂಟೆ

ಪ್ರತಿ ಗುರುವಾರ ಶೇಜಾರತಿಯನ್ನು ರಾತ್ರಿ 9.00 ಗಂಟೆಗೆ ನೆರವೇರಿಸಲಾಗುತ್ತದೆ.

ಪ್ರತಿ ಗುರುವಾರ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಜಲಾಭಿಷೇಕ ಹಾಗೂ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 500/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ಹಾಗೂ ಪ್ರಸಾದವನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ದಿನ ಧುನಿ ಪೂಜೆಯನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 40/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ಗುರುವಾರ ಸಂಜೆ 7:30 ರಿಂದ 9:00 ಗಂಟೆಯವರೆಗೆ ಸಾಯಿಬಾಬಾರವರ ಜರ್ಮನ್ ಬೆಳ್ಳಿಯ ವಿಗ್ರಹವನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಉತ್ಸವ ಆಚರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆಯನ್ನು ಬೆಳಿಗ್ಗೆ 10:00 ಕ್ಕೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 8ನೇ ಜೂನ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಶ್ರೀರಾಮನವಮಿ.
ದತ್ತ ಜಯಂತಿ.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ಹೊಸ ಸರ್ಕಾರಿ ಶಾಲೆಯ ಹಿಂಭಾಗ, ಸಂತೇ ಮೈದಾನ, ಸೋಮೇಶ್ವರ ವೃತ್ತದ ಬಳಿ, ಮುಳಬಾಗಿಲು.
.

ವಿಳಾಸ:
ಶ್ರೀ ಶಿರಡಿ ಸಾಯಿ ಮಂದಿರ
ಶ್ರೀ ಶಿರಡಿ ಸಾಯಿ ಶಕ್ತಿ ಸನ್ನಿಧಿ (ನೋಂದಣಿ),
ಸಂತೆ ಮೈದಾನ, ಮುಳಬಾಗಿಲು - 563 131,
ಕೋಲಾರ ಜಿಲ್ಲೆ, ಕರ್ನಾಟಕ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಕೆ.ಸತೀಶ - ಅಧ್ಯಕ್ಷರು / ಶ್ರೀ.ಎಸ್.ವಿ.ಶ್ರೀನಾಥ - ಅರ್ಚಕರು.

ದೂರವಾಣಿ ಸಂಖ್ಯೆಗಳು:
+91 90609 94666 / +91 88928 77575



ಮಾರ್ಗಸೂಚಿ:
ಸೋಮೇಶ್ವರ ವೃತ್ತ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಹೊಸ ಸರ್ಕಾರಿ ಶಾಲೆಯ ಹಿಂಭಾಗದಲ್ಲಿ ಮತ್ತು ಸೋಮೇಶ್ವರ ವೃತ್ತದಿಂದ ನಡಿಗೆಯ ಅಂತರದಲ್ಲಿರುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment