ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಮಾಹಿತಿ ಕೇಂದ್ರಗಳ ಪ್ರಾರಂಭ - ಕೃಪೆ: ಸಾಯಿಅಮೃತಧಾರಾ.ಕಾಂ
ಸಾಯಿ ಭಕ್ತರಿಗೊಂದು ಸಿಹಿ ಸುದ್ದಿ! ಶಿರಡಿ ಸಾಯಿಬಾಬಾ ಸಂಸ್ಥಾನವು ಸಾಯಿ ಭಕ್ತರ ಅನುಕೂಲಕ್ಕಾಗಿ ಮುಂಬೈ, ಚನ್ನೈ, ಬೆಂಗಳೂರು ಹಾಗೂ ಸಿಕಂದರಾಬಾದ್ ನಗರಗಳಲ್ಲಿ ಮಾಹಿತಿ ಕೇಂದ್ರಗಳನ್ನು ಸ್ಥಾಪಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸಾಯಿ ಭಕ್ತರು ಈ ಮಾಹಿತಿ ಕೇಂದ್ರಗಳ ಮೂಲಕ ಆರತಿ, ದರ್ಶನ ಮತ್ತು ವಸತಿಯನ್ನು ಆನ್ ಲೈನ್ ನ ಮುಖಾಂತರ ಕಾದಿರಿಸಬಹುದಾಗಿದೆ.
ಭಕ್ತರು ಸಾಯಿಬಾಬಾರವರಿಗೆ ತಮ್ಮ ಪ್ರಣಾಮಗಳನ್ನು ಸಲ್ಲಿಸಿ ಅವರ ಆಶೀರ್ವಾದವನ್ನು ಪಡೆಯುವ ಸಲುವಾಗಿ ಪ್ರಪಂಚದ ಎಲ್ಲಾ ಮೂಲೆಗಳಿಂದಲೂ ಶಿರಡಿಗೆ ಬರುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಶ್ರೀ ಸಾಯಿಬಾಬಾ ಸಂಸ್ಥಾನವು ಸಾಯಿ ನಿಕೇತನ, 803-13, ಡಾ.ಅಂಬೇಡ್ಕರ್ ರಸ್ತೆ, ದಾದರ್, ಮುಂಬೈ - 400 014 (022-24166556), ಕೃಷ್ಣನ್ ಕರಣೈ,ಪಟ್ಟಿಪುಲಮ್ ಅಂಚೆ, ಚನ್ನೈ, ತಮಿಳುನಾಡು - 603 104 (044-27444093), ಸಾಯಿ ಮಂಡಳಿ,14ನೇ ಅಡ್ಡರಸ್ತೆ, ಸಂಪಿಗೆ ರಸ್ತೆ,ಮಲ್ಲೇಶ್ವರಂ, ಬೆಂಗಳೂರು-560 003 (0944-9214114) ಮತ್ತು ಶ್ರೀ.ಎಸ್.ರಾಧಾಸ್ವಾಮಿ ಫೌಂಡೇಶನ್, ಘಟಕ ಸಂಖ್ಯೆ: 25, ನೆಲ ಅಂತಸ್ತು, ದೀಪ್ತಿ ಹೌಸ್, ವೈ.ಎಮ್.ಸಿ.ಎ ಸಂಕೀರ್ಣ, ಸರ್ದಾರ್ ಪಟೇಲ್ ರಸ್ತೆ, ಸಿಕಂದರಾಬಾದ್ (040-27808845) ಗಳಲ್ಲಿ ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿ ಈಗ ಭಕ್ತರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಿ ಸರಿಯಾದ ಮಾರ್ಗದರ್ಶನ ನೀಡಲು ಮಾಹಿತಿ ಕೇಂದ್ರಗಳನ್ನು ಪ್ರಾರಂಭಿಸಿದೆ.
ಸ್ಥಳೀಯ ಭಾಷೆಗಳಲ್ಲಿ ಶ್ರೀ ಸಾಯಿ ಸಚ್ಚರಿತ್ರೆ ಹಾಗೂ ಸಾಯಿಬಾಬಾ ಸಂಸ್ಥಾನದ ಎಲ್ಲಾ ಪ್ರಕಟಣೆಗಳು ಈ ಮಾಹಿತಿ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಅಲ್ಲದೇ, ಈ ಮಾಹಿತಿ ಕೇಂದ್ರಗಳಲ್ಲಿ ಸಾಯಿಭಕ್ತರು ಶಿರಡಿಗೆ ನೀಡಬೇಕೆಂದುಕೊಂಡಿರುವ ದೇಣಿಗೆಯನ್ನು ಕೂಡ ಸ್ವೀಕರಿಸಲಾಗುತ್ತದೆ. ಈ ಮಾಹಿತಿ ಕೇಂದ್ರಗಳ ನಿರ್ವಹಣೆಗಾಗಿ ಬೇಕಾದ ಸಿಬ್ಬಂದಿಗಳನ್ನು ಕೂಡ ಸಂಸ್ಥಾನವು ನಿಯೋಜಿಸಿರುತ್ತದೆ. ಆನ್ ಲೈನ್ ನಲ್ಲಿ ಸಿಗುವ ಸೌಲಭ್ಯಗಳ ಹೆಚ್ಚಿನ ಮಾಹಿತಿಗಾಗಿ ಸಾಯಿ ಭಕ್ತರು www.online.sai.org.in ಅಂತರ್ಜಾಲ ತಾಣಕ್ಕೆ ಭೇಟಿ ನೀಡಬಹುದು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment