Friday, August 31, 2012

ಹೊಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶಿರಡಿ ಸಾಯಿ ಮಂದಿರ, ಶ್ರೀ ಶಿರಡಿ ಸಾಯಿ ಮಂಗಳಮ್ ಟ್ರಸ್ಟ್ (ನೋಂದಣಿ), ನಂ.2/357,ರಾಯಕೋಟಾ ಮುಖ್ಯರಸ್ತೆ, ಗೋಕುಲನಗರ, ರಂಗೋಪೊಂಡಿಥ ಅಗ್ರಹಾರಂ, ಹೊಸೂರು-635 109, ಕೃಷ್ಣಗಿರಿ ಜಿಲ್ಲೆ, ತಮಿಳುನಾಡು, ಭಾರತ -  ಕೃಪೆ: ಸಾಯಿಅಮೃತಧಾರಾ.ಕಾಂ

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆಯ ಹೊಸೂರು ಪಟ್ಟಣದ ರಾಯಕೋಟಾ ಮುಖ್ಯರಸ್ತೆಯಲ್ಲಿರುವ   ರಂಗೋಪೊಂಡಿಥ ಅಗ್ರಹಾರಮ್ ನಲ್ಲಿರುವ ಗೋಕುಲನಗರದಲ್ಲಿ ಇರುತ್ತದೆ. ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ದೇವಾಲಯದ ಭೂಮಿಪೂಜೆಯನ್ನು 4 ನೇ ಏಪ್ರಿಲ್ 2006 ರಂದು ನೆರವೇರಿಸಲಾಯಿತು.

ದೇವಾಲಯವನ್ನು ಗುರೂಜಿ ಶ್ರೀ.ಚಂದ್ರಭಾನು ಸತ್ಪತಿಯವರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿಯಿಂದ ಖರೀದಿಸಿದ 2 ಎಕರೆ ಭೂಮಿಯಲ್ಲಿ  ಯಾರಿಂದಲೂ ದೇಣಿಗೆಯನ್ನು ಸ್ವೀಕರಿಸದೇ ನಿರ್ಮಾಣ ಮಾಡಲಾಗಿದೆ.

ದೇವಾಲಯದ ಉದ್ಘಾಟನೆಯನ್ನು 24ನೇ ಏಪ್ರಿಲ್ 2010 ರಂದು ಗುರೂಜಿ ಶ್ರೀ.ಚಂದ್ರಭಾನು ಸತ್ಪತಿಯವರು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ. ಖ್ಯಾತ ಸಾಯಿ ಭಕ್ತರಾದ ಶ್ರೀ.ಕೆ.ವಿ.ರಮಣಿ ಮತ್ತು ಶ್ರೀ.ಕೆ.ವಿ.ಭಾಸ್ಕರನ್ ರವರುಗಳು ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಶ್ರೀಮತಿ.ಎಂ.ಸುಗುಣರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷೆಯಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ  ಮಂಡಳಿಯವರು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ಧಿ ಕಾರ್ಯಗಳನ್ನು ಬಹಳ  ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ದೇವಾಲಯವನ್ನು ಮೊದಲನೇ ಮಹಡಿಯಲ್ಲಿ ನಿರ್ಮಿಸಲಾಗಿದ್ದು ಇಲ್ಲಿ  6 ಅಡಿ ಎತ್ತರದ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎಕ್ಕೆಲಗಳಲ್ಲಿ 2 ಅಡಿ ಎತ್ತರದ ಅಮೃತಶಿಲೆಯ ಗಣಪತಿ  ಹಾಗೂ  ಗಾಯತ್ರಿದೇವಿಯ ವಿಗ್ರಹಗಳನ್ನು ಸ್ಥಾಪನೆ ಮಾಡಲಾಗಿದೆ. ಅಮೃತಶಿಲೆಯ ಪಾದುಕೆಗಳನ್ನು 3 ವಿಗ್ರಹಗಳ ಮುಂದೆ ಸ್ಥಾಪಿಸಲಾಗಿದೆ. ಅಲ್ಲದೇ, ಪ್ರಖ್ಯಾತ ಸಂತರಾದ ಹಜರತ್ ತಾಜುದ್ದೀನ್ ಬಾಬಾರವರ ಆಳೆತ್ತರದ ಭಾವಚಿತ್ರವನ್ನು ಕೂಡ ದೇವಾಲಯದಲ್ಲಿ ನೋಡಬಹುದು.

ದೇವಾಲಯದ ಕೆಳಮಹಡಿಯಲ್ಲಿ ಕಲ್ಯಾಣ ಮಂಟಪವನ್ನು ನಿರ್ಮಿಸಲಾಗಿದೆ.

ಪವಿತ್ರ ಬೇವಿನ ಮರ ಹಾಗೂ ಅರಳಿ ಮರಗಳನ್ನು ದೇವಾಲಯದ ಆವರಣದಲ್ಲಿ ನೋಡಬಹುದು.













ದೇವಾಲಯದ ಕಾರ್ಯಚಟುವಟಿಕೆಗಳು:

ದಿನನಿತ್ಯದ ಕಾರ್ಯಕ್ರಮಗಳು:

ದೇವಾಲಯದ ಸಮಯ:

ಬೆಳಿಗ್ಗೆ : 6 ಗಂಟೆಯಿಂದ 12.30 ಗಂಟೆಯವರೆಗೆ.
ಸಂಜೆ:  5.00 ರಿಂದ 8:30 ರವರೆಗೆ.

ಆರತಿಯ ಸಮಯ:

ಕಾಕಡಾ ಆರತಿ : 6:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ     : 6:00 ಗಂಟೆ
ಶೇಜಾರತಿ      : 8:00 ಗಂಟೆ

ಪ್ರತಿ ಗುರುವಾರ ಬೆಳಿಗ್ಗೆ 6:30 ಕ್ಕೆ ಸಾಯಿಬಾಬಾರವರ ಅಮೃತಶಿಲೆಯ ವಿಗ್ರಹಕ್ಕೆ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 250/- ರೂಪಾಯಿಗಳು. ಪೂಜಾ ಸಾಮಗ್ರಿಗಳನ್ನು ಹಾಗೂ ಪ್ರಸಾದವನ್ನು ದೇವಾಲಯದ ವತಿಯಿಂದ ವಿತರಿಸಲಾಗುತ್ತದೆ.

ಪ್ರತಿ ತಿಂಗಳ ಹುಣ್ಣಿಮೆಯಂದು ಸತ್ಯನಾರಾಯಣ ಪೂಜೆ ಹಾಗೂ ಸಂಕಷ್ಟ ಚತುರ್ಥಿಯಂದು ಸಂಕಷ್ಟಹರ ಗಣಪತಿ ವ್ರತವನ್ನು ಸಂಜೆ 6:30 ಕ್ಕೆ ಆಚರಿಸಲಾಗುತ್ತದೆ.

ವಿಶೇಷ ಉತ್ಸವದ ದಿನಗಳು:

ಪ್ರತಿವರ್ಷ 24ನೇ ಏಪ್ರಿಲ್ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ಶ್ರೀರಾಮನವಮಿ.
ಗಾಯತ್ರಿ ಪ್ರತಿಪತ್.


ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:


ಸ್ಥಳ:
ದೇವಾಲಯವು ಹೊಸೂರು ಬಸ್ ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ.
.

ವಿಳಾಸ:
ಶಿರಡಿ ಸಾಯಿ ಮಂದಿರ,
ಶ್ರೀ ಶಿರಡಿ ಸಾಯಿ ಮಂಗಳಮ್ ಟ್ರಸ್ಟ್ (ನೋಂದಣಿ),
ನಂ.2/357,ರಾಯಕೋಟಾ ಮುಖ್ಯರಸ್ತೆ,
ಗೋಕುಲನಗರ, ರಂಗೋಪೊಂಡಿಥ ಅಗ್ರಹಾರಂ,
ಹೊಸೂರು-635 109, ಕೃಷ್ಣಗಿರಿ ಜಿಲ್ಲೆ,
ತಮಿಳುನಾಡು, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿ:
ಶ್ರೀಮತಿ.ಎಂ.ಸುಗುಣ - ಟ್ರಸ್ಟಿ

ದೂರವಾಣಿ ಸಂಖ್ಯೆಗಳು:
+ 91 90035 63623 / +91 4344 291253

ಇ ಮೇಲ್ ವಿಳಾಸ: 
pmiapuram@gmail.com


ಅಂತರ್ಜಾಲ ತಾಣ:
www.shirdisaimangalam.org


ಮಾರ್ಗಸೂಚಿ:
ಹೊಸೂರು ಬಸ್ ನಿಲ್ದಾಣದಲ್ಲಿ ಇಳಿಯುವುದು. ಅಲ್ಲಿಂದ ರಾಯಕೋಟಾ ಮುಖ್ಯರಸ್ತೆಗೆ ಹೋಗುವ ಯಾವುದೇ ಬಸ್ ನಲ್ಲಿ ಹತ್ತಿ ಪೆಟ್ರೋಲ್ ಬಂಕ್ ನ ಹತ್ತಿರ ಇಳಿಯುವುದು. ದೇವಾಲಯವು  ಹೊಸೂರು ಬಸ್  ನಿಲ್ದಾಣದಿಂದ ಕೇವಲ 3 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ದೇವಾಲಯವನ್ನು ತಲುಪಲು ಹೇರಳವಾಗಿ ಆಟೋಗಳ ಸೌಲಭ್ಯ ಕೂಡ ಇರುತ್ತದೆ. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment