ಶಿರಡಿ ಕೆ ಸಾಯಿಬಾಬಾ ಚಿತ್ರದ "ಸಾಯಿಬಾಬಾ" ಪಾತ್ರಧಾರಿ ನಟ - ಶ್ರೀ.ಸುಧೀರ್ ದಳವಿ- ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಸುಧೀರ್ ದಳವಿಯವರು ಪ್ರಖ್ಯಾತ ಚಿತ್ರನಟರು ಹಾಗೂ ಶಿರಡಿ ಸಾಯಿಬಾಬಾ ಭಕ್ತರು. ದಿವಂಗತ ರಮಾನಂದ ಸಾಗರ್ ರವರ ಖ್ಯಾತ ಹಿಂದಿ ಧಾರಾವಾಹಿಯಾದ "ರಾಮಾಯಣ್" ನಲ್ಲಿ "ಗುರು ವಶಿಷ್ಟ" ರ ಪಾತ್ರ ಮಾಡುವ ಮುಖಾಂತರ ಇವರು ಮೊದಲ ಬಾರಿಗೆ ಪ್ರಸಿದ್ಧಿಗೆ ಬಂದರಾದರೂ 1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಧಾರಿಯಾಗಿ ಪ್ರಪಂಚದಾದ್ಯಂತ ಮನೆಮಾತಾದರು.
ಇವರು 20ನೇ ಅಕ್ಟೋಬರ್ 1939 ರಂದು ಮಹಾರಾಷ್ಟ್ರದ ಥಾಣೆಯಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಇಂದುಪ್ರಭಾ ದಳವಿ ಮತ್ತು ತಂದೆ ದಿವಂಗತ ಪ್ರಭಾಕರ ದಳವಿ.
ಇವರು ವಾಸ್ತುಶಿಲ್ಪ ವಿಭಾಗದಲ್ಲಿ ಡಿಪ್ಲೊಮಾ ಹಾಗೂ ಪದವಿಯನ್ನು ಗಳಿಸಿ ಅನೇಕ ವರ್ಷಗಳ ಕಾಲ ಮುಂಬೈನ ಪ್ರಖ್ಯಾತ ವಾಸ್ತುಶಿಲ್ಪಿಗಳ ಹತ್ತಿರ ಆಂತರಿಕ ವಿನ್ಯಾಸಕರಾಗಿ ಕೆಲಸ ಮಾಡಿದ ನಂತರ ಚಲನಚಿತ್ರ ಮತ್ತು ಕಿರುತೆರೆಯಲ್ಲಿ ನಟರಾಗಿ ಅಭಿನಯಿಸಲು ಪ್ರಾರಂಭಿಸಿದರು. ಇವರು 1977 ರಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡರು.
ಇವರು ಶ್ರೀಮತಿ.ಸುಹಾಸ್ ರವರನ್ನು ಮದುವೆಯಾಗಿದ್ದು ಇವರಿಗೆ ರೋಹಿತ್ ಎಂಬ ಮಗನಿದ್ದಾನೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಮತ್ತು ಮಗನೊಂದಿಗೆ ತಮ್ಮ ಮುಂಬೈನ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ ಸುಧೀರ್ ದಳವಿಯವರ ಸಾಧನೆಯ ಹೆಜ್ಜೆ ಗುರುತುಗಳನ್ನು ಸಾಯಿ ಭಕ್ತರ ಅವಗಾಹನೆಗಾಗಿ ಈ ಕೆಳಗೆ ನೀಡಲಾಗಿದೆ:
ರಂಗಭೂಮಿ:
ಹವ್ಯಾಸಿ ರಂಗಭೂಮಿ ಕಲಾವಿದರಾಗಿ 1962 ರಿಂದ 1969 ರವರೆಗೆ ಮುಂಬೈನ Theatre Unit, Indian People’s Theatre Association ಮತ್ತು ಇನ್ನು ಹಲವಾರು ಪ್ರಖ್ಯಾತ ರಂಗಭೂಮಿ ತಂಡಗಳೊಂದಿಗೆ ಕೆಲಸ ಮಾಡಿದ್ದಾರೆ.
ವೃತ್ತಿಪರ ರಂಗಭೂಮಿ ಕಲಾವಿದರಾಗಿ 1970 ರಿಂದ 1979 ರವರೆಗೆ ಮುಂಬೈನ ಪ್ರಖ್ಯಾತ ರಂಗಭೂಮಿ ತಂಡಗಳೊಂದಿಗೆ ಕೆಲಸ ಮಾಡಿ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ.
ಚಲನಚಿತ್ರ:
ಇವರು 1972 ರಲ್ಲಿ ಪ್ರಪ್ರಥಮ ಬಾರಿಗೆ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು ಹಾಗೂ 1976 ರಿಂದ ನಿಯಮಿತವಾಗಿ ಚಲನಚಿತ್ರಗಳಲ್ಲಿ ನಟಿಸಲು ಪ್ರಾರಂಭಿಸಿದರು. ಇವರು “27 Down Kashi Express” ಚಿತ್ರದಲ್ಲಿ ಒಂದು ಸಣ್ಣ ಪಾತ್ರವನ್ನು ಮಾಡುವ ಮುಖಾಂತರ ಚಲನಚಿತ್ರ ರಂಗಕ್ಕೆ ಪಾದಾರ್ಪಣೆ ಮಾಡಿದರು.
ಇವರು 10 ಭಾರತೀಯ ಭಾಷೆಗಳಲ್ಲಿ 200 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮರಾಠಿ (38), ಹಿಂದಿ (200 ಕ್ಕೂ ಹೆಚ್ಚು), ಗುಜರಾತಿ (4), ಪಂಜಾಬಿ (2), ಅವಧಿ (1), ಬೆಂಗಾಳಿ (3), ಆಂಗ್ಲ (1), ಭೋಜಪುರಿ (3), ಮಾರವಾಡಿ ಹಾಗೂ ಉರ್ದು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಇವರು 1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಧಾರಿಯಾಗಿ ಪ್ರಪಂಚದಾದ್ಯಂತ ಮನೆಮಾತಾದರು.ಇವರ "ಸಾಯಿಬಾಬಾ" ಪಾತ್ರದ ಅಭಿನಯ ಮಾಧ್ಯಮ ಮತ್ತು ಪ್ರೇಕ್ಷಕರ ಮೆಚ್ಚಿಗೆಯನ್ನು ಪಡೆಯಿತಷ್ಟೇ ಅಲ್ಲದೆ ಇವರಿಗೆ “Best Character Actor” ಪ್ರಶಸ್ತಿಯನ್ನು ಕೂಡ ತಂದುಕೊಟ್ಟಿತು.
ಇವರು ನಟಿಸಿದ ಕೆಲವು ಪ್ರಮುಖ ಚಿತ್ರಗಳೆಂದರೆ: ಶಿರಡಿ ಕೆ ಸಾಯಿಬಾಬಾ, ಚಿರುತ, ಗೆಹರಾಯ್, ಪತಿತಪಾವನ್ ಮತ್ತು ಗುರು.
ಧಾರಾವಾಹಿಗಳು:
ಇವರು ಹಿಂದಿ, ಮರಾಠಿ, ಗುಜರಾತಿ ಮತ್ತು ಭೋಜಪುರಿ ಭಾಷೆಗಳ ಸುಮಾರು 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಇವರ ನಟನೆಯ ಧಾರಾವಾಹಿಗಳು ಎಲ್ಲಾ ಪ್ರಮುಖ ಟಿವಿ ಚಾನಲ್ ಗಳಲ್ಲೂ ಪ್ರಸಾರವಾಗುತ್ತಿವೆ.
ಇವರು ನಟಿಸಿರುವ ಕೆಲವು ಪ್ರಮುಖ ಧಾರಾವಾಹಿಗಳೆಂದರೆ: ದಿವಂಗತ ರಮಾನಂದ್ ಸಾಗರ್ ನಿರ್ದೇಶನದ “Ramayana”, ಶ್ಯಾಮ್ ಬೆನಗಲ್ ನಿರ್ದೇಶನದ “Bharat Ek Khoj”, ಪಂಡಿತ್ ಜವಾಹರ್ ಲಾಲ್ ನೆಹರು ರವರ “Discovery of India” ಆಧಾರಿತ ಹಾಗೂ ಪ್ರಖ್ಯಾತ ಉರ್ದು ಕವಿಯ ಜೀವನ ಆಧಾರಿತ “Mirza Galib”, ರಮೇಶ್ ಸಿಪ್ಪಿ ನಿರ್ದೇಶನದ “Buniyaad”, ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ “Chanakya”, ಶ್ರೀ.ಕಿಶನ್ ಸೇಥಿ ಮತ್ತು ರಮೇಶ್ ಮೆಹ್ತಾ ನಿರ್ದೇಶನದ “Junoon”, ಶ್ರೀ.ಕಿಶನ್ ಸೇಥಿ ನಿರ್ದೇಶನದ “Ghutan”, ಟಿ-ಸೀರಿಸ್ ನಿರ್ಮಿಸಿ ಬಾಬುಭಾಯ್ ಮಿಸ್ತ್ರಿ ನಿರ್ದೇಶನ ಮಾಡಿದ “Shiv Mahapuran”, ಧೀರಜ್ ಕುಮಾರ್ ನಿರ್ದೇಶನದ “Om Namah Shivay” , ಶ್ರೀ ರವಿ ಚೋಪ್ರಾ ನಿರ್ದೇಶನದ “Vishnu Puran”, ಸೋನಿ ಅಗ್ನಿಹೋತ್ರಿ ನಿರ್ದೇಶನದ “Yug” , ಸಂತೋಷ್ ಬೆಹಲ್ ನಿರ್ದೇಶನದ “Kyonki Saas Bhi Kabhi Bahu Thi” ಮತ್ತು ಶ್ರೀ.ಪವನ್ ಸಾಹು ಮತ್ತು ರವಿರಾಜ್ ನಿರ್ದೇಶನದ “Shraddha”.
ಟೆಲಿಚಿತ್ರಗಳು:
ಇವರು 4 ಟೆಲಿಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಜಾಹೀರಾತುಗಳು:
ಇವರು ವಿವಿಧ ಸಂಸ್ಥೆಗಳ ಉತ್ಪನ್ನಗಳ ಜಾಹೀರಾತುಗಳಲ್ಲಿ ಅಭಿನಯಿಸಿದ್ದಾರೆ.
ದೃಶ್ಯಶ್ರವ್ಯಗಳು:
ಇವರು ಸುಮಾರು 5 ದೃಶ್ಯಶ್ರವ್ಯಗಳಲ್ಲಿ ಅಭಿನಯಿಸಿದ್ದಾರೆ.
ಸಾಕ್ಷ್ಯಚಿತ್ರಗಳು:
ಇವರು ಅನೇಕ ಹಿಂದಿ ಮತ್ತು ಮರಾಠಿ ಸಾಕ್ಷ್ಯಚಿತ್ರಗಳಿಗೆ ವೀಕ್ಷಕ ವಿವರಣೆಯನ್ನು ನೀಡಿದ್ದಾರೆ.
ಪ್ರಶಸ್ತಿ / ಪುರಸ್ಕಾರಗಳು:
1977 ರಲ್ಲಿ ಮನೋಜ್ ಕುಮಾರ್ ಗೋಸ್ವಾಮಿ ನಟಿಸಿ ನಿರ್ದೇಶಿಸಿದ "ಶಿರಡಿ ಕೆ ಸಾಯಿಬಾಬಾ" ಚಿತ್ರದ "ಸಾಯಿಬಾಬಾ" ಪಾತ್ರಕ್ಕಾಗಿ ಇವರಿಗೆ “Film World” ಪತ್ರಿಕೆಯ ವತಿಯಿಂದ “Best Character Actor” ಪ್ರಶಸ್ತಿ ಲಭಿಸಿದೆ.
ವಿಳಾಸ:
C-703, ಗೋಕುಲ್ ರಿಜೆನ್ಸಿ II, ಠಾಕೂರ್ ಸಂಕೀರ್ಣ
ಕಂಡೀವಾಲಿ (ಪೂರ್ವ), ಮುಂಬೈ-400 101,
ಮಹಾರಾಷ್ಟ್ರ, ಭಾರತ.
ದೂರವಾಣಿ ಸಂಖ್ಯೆಗಳು:
+91 22 2854 1484/ +91 98200 53301
ಅಭಿನಯದ ವೀಡಿಯೋಗಳು:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment