ಬಹುಮುಖ ಪ್ರತಿಭೆಯ ಸಾಯಿ ಭಜನ ಗಾಯಕ - ಶ್ರೀ.ಆರ್.ಕೆ.ಸಕ್ಸೇನಾ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಆರ್.ಕೆ.ಸಕ್ಸೇನಾ ಬಹುಮುಖ ಪ್ರತಿಭೆಯ ಸಾಯಿ ಭಜನ ಗಾಯಕರು. ಇವರು ಒಬ್ಬ ಅತ್ಯುತ್ತಮ ಸಾಯಿ ಭಜನ ಗಾಯಕರು, ಗೀತ ರಚನಕಾರರು, ಕಾರ್ಯಕ್ರಮ ನಿರೂಪಕರು, ನಾಟಕಕಾರರು ಹಾಗೂ ನಿರ್ದೇಶಕರು. ಇವರು 5ನೇ ಏಪ್ರಿಲ್ 1951 ರಂದು ಉತ್ತರಪ್ರದೇಶದ ರಾಮಪುರದಲ್ಲಿ ಜನಿಸಿದರು. ಇವರ ತಾಯಿ ದಿವಂಗತ ಶ್ರೀಮತಿ.ಚಂದಾ ದೇವಿ ಮತ್ತು ತಂದೆ ದಿವಂಗತ ಶ್ರೀ.ಕಿಷನ್ ಸ್ವರೂಪ ಸಕ್ಸೇನಾ. ಇವರು ವಿಜ್ಞಾನದಲ್ಲಿ ಪದವಿಯನ್ನು ಹಾಗೂ ಭಾರತೀಯ ನಾಗರಿಕ ಸೇವಾ ಖಾತೆಯಲ್ಲಿ ಪದವಿಯನ್ನು ಗಳಿಸಿದ್ದಾರೆ. ಇವರು 1998 ರಲ್ಲಿ ಶಿರಡಿ ಸಾಯಿಬಾಬಾರವರ ಭಕ್ತರಾದರು. ಇವರ ಧ್ವನಿಯು ಅತ್ಯಂತ ಮಧುರ ಹಾಗೂ ಹೃದಯಸ್ಪರ್ಶಿಯಾಗಿದ್ದು ಯಾವುದೇ ಪ್ರಕಾರದ ಗಾಯನಕ್ಕೂ ಸರಿಹೊಂದುತ್ತದೆ. ಇವರು ದೆಹಲಿಯ ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ ಕಲಾವಿದರು.
ಇವರು ಶ್ರೀಮತಿ.ಹಿಮಾಚಲ ಸಕ್ಸೇನಾರವರನ್ನು ವಿವಾಹವಾಗಿದ್ದಾರೆ ಮತ್ತು ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ. ಪ್ರಸ್ತುತ ಇವರು ತಮ್ಮ ಧರ್ಮಪತ್ನಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು, ನಾಲ್ವರು ಮೊಮ್ಮಕ್ಕಳೊಂದಿಗೆ ತಮ್ಮ ನವದೆಹಲಿಯ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.
ಇವರ ಸಾಧನೆಯ ಹೆಜ್ಜೆಗುರುತುಗಳನ್ನು ಸಾಯಿ ಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ಇವರು ದೆಹಲಿಯ ಕರೋಲ್ ಬಾಗ್ ನ ಅಪ್ಸರಾ ಜಾಹೀರಾತು ಸಂಸ್ಥೆಯವರು ಏರ್ಪಡಿಸಿದ್ದ ಫ್ಯಾಷನ್ ಶೋ ನ ನಿರ್ವಹಣೆಯನ್ನು ಮಾಡಿದ್ದಾರೆ.
ಇವರು ಹಲವಾರು ಸುಪ್ರಸಿದ್ಧ ಕಾರ್ಯಕ್ರಮಗಳ ಆಯೋಜನೆ ಮತ್ತು ನಿರ್ವಹಣೆಯನ್ನು ಮಾಡಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: Aao Mil Sur Deep Jalay, Kala Aur Kalakar, Gunjan Musical Evening, Lataji Ki Sur Latayen, Geet, Ghazal Aur Nriteya. ಈ ಕಾರ್ಯಕ್ರಮಗಳಲ್ಲಿ ಸುಪ್ರಸಿದ್ಧ ಗಾಯಕ/ಗಾಯಕಿಯರು, ಟಿವಿ ಕಲಾವಿದರು, ಗಜಲ್ ಗಾಯಕರು, ಕಥಕ್ ನೃತ್ಯಪಟುಗಳು ಭಾಗವಹಿಸಿದ್ದಾರೆ. ಅವರಲ್ಲಿ ಪ್ರಮುಖರಾದವರು: ನರೇಂದ್ರ ಚಂಚಲ್, ವಿನೋದ್ ರಾಥೋಡ್, ನಿಹಾರಿಕಾ, ಉರ್ಮಿಳಾ ನಗರ್, ಜೀತ ಸಿಂಗ್, ಶೋಭನಾ ನಾರಾಯಣ, ಭಾರತಿ ಗುಪ್ತಾ ಮತ್ತಿತರರು. ಈ ಕಾರ್ಯಕ್ರಮಗಳನ್ನು ಹೆಸರಾಂತ ಸಂಸ್ಥೆಗಳಾದ ARTISTS FORUM, CREATIVE ART SOCIETY, AKANKSHA CULTURAL SOCIETY, SUR-ARADHNA, SHAMA Groups ನವರು ಆಯೋಜಿಸಿದ್ದಾರೆ.
ಇವರು ಹಲವಾರು ವರ್ಷಗಳ ಕಾಲ ದೆಹಲಿ ಆಲ್ ಇಂಡಿಯಾ ರೇಡಿಯೋದಲ್ಲಿ ಬರುವ ಜನಪ್ರಿಯ ಚಲನಚಿತ್ರ ಗೀತೆಗಳ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದ್ದಾರೆ.
ಇವರು ಭಾರತದ ಹಲವಾರು ರಾಜ್ಯಗಳಲ್ಲಿ ತಮ್ಮ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅಲ್ಲದೇ, ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೆನಡಾ, ದುಬೈ, ಮಲೇಶಿಯಾ, ಸ್ವೀಡನ್ ಮತ್ತು ಸಿಂಗಪೂರ್ ಗಳಲ್ಲಿ ತಮ್ಮ ಸಾಯಿಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ಸಾಯಿಭಜನೆಗಳ ರಚನೆ ಹಾಗೂ ಸಂಗೀತ ಸಂಯೋಜನೆಯಲ್ಲಿ ಸಿದ್ಧಹಸ್ತರು.
ಇವರು ಶಾಬಾದ್ ಆಡಿಯೋ ಕ್ಯಾಸೆಟ್ ನ ವತಿಯಿಂದ ರಿಂಕಲ್ ಫಿಲಂಸ್ ನವರು ನಿರ್ಮಾಣ ಮಾಡಿ ಜಗಜಿತ್ ಸಿಂಗ್ ರವರು ಸಂಗೀತ ಸಂಯೋಜನೆ ಮಾಡಿರುವ “BHAKTA KI TEK TOON” ಕ್ಯಾಸೆಟ್ ಗೆ ವ್ಯಾಖ್ಯಾನವನ್ನು ಮಾಡಿದ್ದಾರೆ.
ಆಲ್ ಇಂಡಿಯಾ ರೇಡಿಯೋ ದೆಹಲಿ-ಎ ನಲ್ಲಿ ಪ್ರಸಾರವಾದ “Ajkar Kare Na Chakri” ಎಂಬ ರೇಡಿಯೋ ನಾಟಕದಲ್ಲಿ ಅಭಿನಯಿಸಿದ್ದಾರೆ.
ಇವರು ದೆಹಲಿಯ ಮಂಡಿ ಹೌಸ್ ನ ಅನೇಕ ಆಡಿಟೋರಿಯಂ ಗಳಲ್ಲಿ ನಡೆದ ಹಲವಾರು ರಂಗಭೂಮಿ ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಶ್ರೀ.ಕೆ.ಎಂ.ಗೋವಿಲ್ ರವರ ನಿರ್ಮಾಣ ಮತ್ತು ನಿರ್ದೇಶನದ Jab Hum Na Honge, ದೆಹಲಿ ದೂರದರ್ಶನಕ್ಕಾಗಿ ಶ್ರೀ.ರಾಜೇಶ್ ದುವಾರವರು ನಿರ್ಮಾಣ ಮತ್ತು ನಿರ್ದೇಶನ ಮಾಡಿದ Aina, Yogi, ಮತ್ತು Beauty Contest, ಶ್ರೀ.ಪವನ್ ದುವೇದಿಯವರ Marni Jugni, ಶ್ರೀ.ಧರ್ಮವೀರರವರ ಸಹಯೋಗದಲ್ಲಿ ನಿರ್ಮಿಸಿದ Sanjog, ಇವರ ರಚನೆ, ನಿರ್ಮಾಣ ಮತ್ತು ನಿರ್ದೇಶನದ Maan Gaye Ustad, Tees Saal Baad, Ek Vradh Ka Nirnay ಮತ್ತು Mere Bad Tumhara Kya Hoga.
ಇವರು ಪ್ರತಿ ತಿಂಗಳು ಬಿಡುಗಡೆಯಾಗುವ “Indradhanush” ವೀಡಿಯೋ ಮ್ಯಾಗಜೈನ್ ನ ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ.
ಇವರು ಬ್ರಿಟಿಷ್ ಏರ್ ವೇಸ್ ನ ಮಾಡೆಲಿಂಗ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
ಇವರು ಖ್ಯಾತ ನಿರ್ದೇಶಕರಾದ ಕೇತನ್ ಮೆಹತಾ ರವರ “Sardar Patel” ಚಿತ್ರದಲ್ಲಿ ನಟಿಸಿದ್ದಾರೆ.
ಇವರು 4 ನಾಟಕಗಳ ನಿರ್ಮಾಣ ಹಾಗೂ ನಿರ್ದೇಶವನ್ನು ಮಾಡಿದ್ದಾರೆ. ಅವುಗಳೆಂದರೆ: Maan Gaye Ustad, Yeh Kya Musibat Hai, Yahi TO Mera Kamaal Hai ಮತ್ತು Nehla Pe Dehla.
ಇವರು ಹಲವಾರು ಟೆಲಿಚಿತ್ರಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಮುಂಬೈನ ಸತ್ಯಭಾನು ಸಿನ್ಹಾ ನಿರ್ದೇಶನದ BIKTA HUA ADMI, ನವದೆಹಲಿಯ ಪೈಗಾಮ್ ಸಂಸ್ಧೆ ನಿರ್ಮಾಣದ PANCH FAISLA, ದೆಹಲಿ ದೂರದರ್ಶನ ಕೇಂದ್ರಕ್ಕಾಗಿ ರಾಜೇಶ್ ದುವಾರವರು ನಿರ್ದೇಶಿಸಿದ DARD ಮತ್ತು AINA, ಎನ್.ಕೆ.ಮಾಥುರ್ ನಿರ್ಮಾಣ ಮತ್ತು ನಿರ್ದೇಶನದ QATIL KAUN, ಮುಂಬೈನ ರತನ್ ಸಿಂಗ್ ನಿರ್ದೇಶನದ KSHITIJ KE US PAAR, ದೆಹಲಿ ದೂರದರ್ಶನ ಕೇಂದ್ರಕ್ಕಾಗಿ ಪರ್ವೀಜ್ ರವರು ರಚಿಸಿ ಅಶೋಕ್ ಗಂಗವಾನಿಯವರು ನಿರ್ದೇಶನ ಮಾಡಿದ LAATHI.
ಇವರು ಹಲವಾರು ಟಿವಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: ಅಶೋಕ್ ನಿಷೇಧ್ ನಿರ್ದೇಶನದ AUR KISAAN JAAG UTHA, ಲಕ್ಷ್ಯ ರಾಜ್ ಫಿಲಂಸ್ ನಿರ್ಮಿಸಿ ಆರ್.ಕೆ.ರಾಜ ನಿರ್ದೇಶನ ಮಾಡಿದ JAZWAT, ದೂರದರ್ಶನಕ್ಕಾಗಿ ಚಂದ್ರ ಚೋಪ್ರಾರವರು ನಿರ್ದೇಶನ ಮಾಡಿದ 52 ಕಂತುಗಳ ಧಾರಾವಾಹಿ COUNSEL KAMAL, ಸುಮನ್ ಗಂಗೂಲಿ ನಿರ್ದೇಶನದ KHILAADI, ಅಮರ್ ಜಿತ್ ನಿರ್ದೇಶನದ POLICE TIME ಮತ್ತು ಆರ್.ಡಿ.ಶರ್ಮ ನಿರ್ದೇಶನದ DHRAMRIT.
ಇವರು ಹಲವಾರು ಟಿವಿ ಧಾರಾವಾಹಿಗಳನ್ನು ಹಾಗೂ ಟೆಲಿಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವುಗಳು ಹೀಗಿವೆ: ಯೆಸ್ ವಾಹಿನಿಗಾಗಿ ನಿರ್ಮಾಣ ಮಾಡಿದ ಧಾರಾವಾಹಿ “Jazwat” , ಸತೀಶ್ ದೇ ರಚಿಸಿ Banwari Jhol, Naresh Chowdhary, Monica Patel ಮತ್ತು Vinod Kumar ನಟಿಸಿದ ಟೆಲಿಚಿತ್ರ “Daon-Painch”.
ಇವರು ಆಲ್ ಇಂಡಿಯಾ ರೇಡಿಯೋಗಾಗಿ ನಿರ್ಮಾಣ ಮಾಡಿದ 3 ಧಾರಾವಾಹಿಗಳ ಮತ್ತು 9 ನಾಟಕಗಳ ಸ್ಕ್ರಿಪ್ಟ್ ನ ರಚನೆಯನ್ನು ಮಾಡಿದ್ದಾರೆ.
ಇವರು 1 ವೀಡಿಯೋ ಸಿಡಿ ಹಾಗೂ 6 ಆಡಿಯೋ ಸಿಡಿಗಳನ್ನು ಹೊರತಂದಿದ್ದಾರೆ. ಅವುಗಳಲ್ಲಿ ಪ್ರಮುಖವಾದವು ಹೀಗಿವೆ: Sai Karange Bera Paar, Maine Pahen Liya Sai Chole, Sai Mera Tan Man Dhan, Sai Baba Aa Jao ಮತ್ತು Saiji Tumhein Yaad Karein.
ಇವರು ನವದೆಹಲಿಯ ಓಂ ಸಾಯಿನಾಥ್ ಪಬ್ಲಿಕೇಷನ್ ಗ್ರೂಪ್ ಹಾಗೂ ಕಾನ್ಪುರದ ಶ್ರೀ ಸಾಯಿ ಮಂಡಳದ ವತಿಯಿಂದ ನೀಡಿದ ಪ್ರಶಸ್ತಿಗಳಿಗೆ ಭಾಜನರಾಗಿರುತ್ತಾರೆ.
ವಿಳಾಸ:
ಫ್ಲಾಟ್ ಸಂಖ್ಯೆ: 355, 2ನೇ ಮಹಡಿ, ಡಿಡಿಎ,
ಎಸ್.ಎಫ್.ಎಸ್.,
ದ್ವಾರಕಾ, ಸೆಕ್ಟರ್-9,
ನವದೆಹಲಿ-110 075, ಭಾರತ.
ದೂರವಾಣಿ ಸಂಖ್ಯೆಗಳು:
+91 11 2808 2449 / +91 98111 26436 / +91 98113 13451
ಇ-ಮೈಲ್ ವಿಳಾಸ:
rajensai_saxena99@yahoo.co.in
ಫೇಸ್ ಬುಕ್ ಜೋಡಣೆ:
RK.SaxenaSaiBhajan SingerNewdelhi
ಅಂತರ್ಜಾಲ ತಾಣ:
http://www.rksaxena.com
ಭಜನೆಯ ವೀಡಿಯೋಗಳು:
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment