ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ವತಿಯಿಂದ ಗುರುಪೂರ್ಣಿಮಾ ಉತ್ಸವದ ಆಚರಣೆಯ ಒಂದು ವರದಿ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ದ್ವಾರಕಾಮಾಯಿ ಸೇವಾ ಟ್ರಸ್ಟ್, ರಾಜಾಜಿನಗರ, ಬೆಂಗಳೂರು ಇದೇ ತಿಂಗಳ 3ನೇ ಜುಲೈ 2012, ಮಂಗಳವಾರ ದಂದು ರಾಜಾಜಿನಗರದ 3ನೇ ಬ್ಲಾಕ್ ನಲ್ಲಿರುವ ಶ್ರೀರಾಮಮಂದಿರದಲ್ಲಿ ಗುರುಪೂರ್ಣಿಮಾ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿತು.
ಬೆಳಗಿನ ಕಾರ್ಯಕ್ರಮಗಳನ್ನು ರಾಜಾಜಿನಗರದ ರಾಮಮಂದಿರದಲ್ಲಿ ಆಯೋಜಿಸಲಾಗಿತ್ತು. ದಿನದ ಕಾರ್ಯಕ್ರಮಗಳು ಬೆಳಗಿನ ಜಾವ 6:30 ಕ್ಕೆ ಗಣಪತಿ ಹೋಮದೊಂದಿಗೆ ಪ್ರಾರಂಭವಾದವು. ನಂತರ 8:30 ರಿಂದ 9:00 ಗಂಟೆಯವರೆಗೆ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ಅದಾದ ನಂತರ 9:30 ರಿಂದ 1:30 ರವರೆಗೆ ಗಾನ ಕೋಕಿಲ ವಿದ್ವಾನ್ ಶ್ರೀ.ಎಸ್.ಆರ್.ಮಾರುತಿಪ್ರಸಾದ್ ಮತ್ತು ತಂಡದವರಿಂದ ಸುಶ್ರಾವ್ಯವಾದ ಭಜನೆ ಕಾರ್ಯಕ್ರಮ ನಡೆಯಿತು. ಬೆಳಗಿನ ಕಾರ್ಯಕ್ರಮದ ಮುಕ್ತಾಯದ ಅಂಗವಾಗಿ ಸಾಯಿಬಾಬಾರವರಿಗೆ ಮಧ್ಯಾನ್ಹದ ಆರತಿಯನ್ನು ಬೆಳಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಯಿತು.
ಸಂಜೆಯ ಕಾರ್ಯಕ್ರಮಗಳು ಸಂಜೆ 5:30 ಕ್ಕೆ ಟ್ರಸ್ಟ್ ನಿಂದ ಪಲ್ಲಕ್ಕಿ ಉತ್ಸವದೊಂದಿಗೆ ಪ್ರಾರಂಭವಾದವು. ಪಲ್ಲಕ್ಕಿಯನ್ನು ರಾಜಾಜಿನಗರದ ಟ್ರಸ್ಟ್ ನ ಸುತ್ತಮುತ್ತ ಇರುವ ಪ್ರದೇಶಗಳಲ್ಲಿ ಭವ್ಯವಾದ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ರಾತ್ರಿ 8:30 ಕ್ಕೆ ಪಲ್ಲಕ್ಕಿಯು ಟ್ರಸ್ಟ್ ನ ಆವರಣಕ್ಕೆ ಹಿಂತಿರುಗಿದ ನಂತರ ಸಾಯಿಬಾಬಾರವರಿಗೆ ಶೇಜಾರತಿಯನ್ನು ಬೆಳಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಸಾಯಿಭಕ್ತರಿಗೂ ಮಹಾಪ್ರಸಾದದ ವಿತರಣೆಯನ್ನು ಮಾಡಲಾಯಿತು.
ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲಿ ಸಾವಿರಾರು ಸಾಯಿ ಭಕ್ತರು ಭಾಗವಹಿಸಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment