ಶಿರಡಿ ಸಾಯಿಬಾಬಾ ಸಂಸ್ಥಾನ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಮೊದಲನೇ ದಿನದ ವರದಿ - 31ನೇ ಮಾರ್ಚ್ 2012 , ಶನಿವಾರ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಸಾಯಿಬಾಬಾರವರ ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಪುರೋಹಿತರುಗಳಾದ ಶ್ರೀ.ನಾರಾಯಣ್ ಭಿಷೆ ಹಾಗೂ ಶ್ರೀ.ವಿಲಾಸ್ ಜೋಷಿಯವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಏರ್ಪಡಿಸಿದ್ದ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣವನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆಯವರು ಉದ್ಘಾಟಿಸಿದರು.
ಶ್ರೀ ರಾಮನವಮಿ ಉತ್ಸವದ ಮೊದಲನೆಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ಶ್ರೀ ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆಯವರು ನೆರವೇರಿಸಿದರು.
ಶ್ರೀ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸದಾಗಿ ನಿಯೋಜಿಸಲಾಗಿರುವ ತ್ರಿಸದಸ್ಯ ಸಮಿತಿಯ ಸದಸ್ಯರುಗಳು. ಎಡದಿಂದ ಬಲಕ್ಕೆ: ಶ್ರೀ.ಕಿಶೋರ್ ಮೋರೆ (ಸಮಿತಿ ಸದಸ್ಯರು), ಶ್ರೀ.ಜಯಂತ್ ಕುಲಕರ್ಣಿ (ಜಿಲ್ಲಾ ನ್ಯಾಯಾಧೀಶರು ಮತ್ತು ಸಮಿತಿಯ ಅಧ್ಯಕ್ಷರು) ಮತ್ತು ಡಾ.ಸಂಜೀವ್ ಕುಮಾರ್ (ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಸಮಿತಿ ಸದಸ್ಯರು).
ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಸಾಯಿ ಭಕ್ತೆ ಶ್ರೀಮತಿ.ರಿಂಪಲ್ ಲೋಹಿಯಾ ರವರು ಸಮಾಧಿ ಮಂದಿರ ಸುತ್ತಮುತ್ತಲಿನ ಪರಿಸರವನ್ನು ಹೂವುಗಳಿಂದ ಸುಂದರವಾಗಿ ಅಲಂಕರಿಸಿದ್ದರು.
ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಶಿರಡಿ ಸಾಯಿಬಾಬಾ ಸಂಸ್ಥಾನದ ಆವರಣದಲ್ಲಿ ದಿಲ್ವಾರಾ ದೇವಾಲಯದ ವಾಸ್ತುಶಿಲ್ಪದ ಪ್ರತಿರೂಪವನ್ನು ಬಹಳ ಸುಂದರವಾಗಿ ಪುನರ್ ಸೃಷ್ಟಿ ಮಾಡಲಾಗಿತ್ತು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment