ಶಿರಡಿ ಸಾಯಿಬಾಬಾ ಸಂಸ್ಥಾನ ವತಿಯಿಂದ ಶ್ರೀ ರಾಮನವಮಿ ಉತ್ಸವದ ಆಚರಣೆ - ಎರಡನೇ ದಿನದ ವರದಿ -1ನೇ ಏಪ್ರಿಲ್ 2012 , ಭಾನುವಾರ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಅಖಂಡ ಶ್ರೀ ಸಾಯಿ ಸಚ್ಚರಿತ್ರೆಯ ಪಾರಾಯಣ ಮುಕ್ತಾಯವಾದ ನಂತರ ಸಾಯಿಬಾಬಾರವರ ವಿಗ್ರಹ, ವೀಣೆ ಮತ್ತು ಪವಿತ್ರ ಶ್ರೀ ಸಾಯಿ ಸಚ್ಚರಿತ್ರೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ, ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ, ಉಪ ಕಾರ್ಯಕಾರಿ ಅಧಿಕಾರಿ ಡಾ.ಯಶವಂತ್ ರಾವ್ ಮಾನೆ ಮತ್ತು ಶ್ರೀ ಸಾಯಿಬಾಬಾ ಸಂಸ್ಥಾನದ ಪುರೋಹಿತರುಗಳಾದ ಶ್ರೀ.ನಾರಾಯಣ್ ಭಿಷೆ ಹಾಗೂ ಶ್ರೀ.ವಿಲಾಸ್ ಜೋಷಿಯವರುಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿಯವರು ಗೋಧಿಯ ಚೀಲದ ಪೂಜೆಯನ್ನು ನೆರವೇರಿಸಿದರು.
ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಜಿಲ್ಲಾ ನ್ಯಾಯಾಧೀಶರು ಹಾಗೂ ತ್ರಿಸದಸ್ಯ ಸಮಿತಿಯ ಅಧ್ಯಕ್ಷರಾದ ಶ್ರೀ.ಜಯಂತ್ ಕುಲಕರ್ಣಿ ಮತ್ತು ಅವರ ಧರ್ಮಪತ್ನಿ ಶ್ರೀಮತಿ.ಅನುರಾಧಾ ಕುಲಕರ್ಣಿಯವರು ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು. ಆ ಸಂದರ್ಭದಲ್ಲಿ ಶ್ರೀ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಕಿಶೋರ್ ಮೋರೆ, ಅವರ ಧರ್ಮಪತ್ನಿ ಶ್ರೀಮತಿ.ಮಂಜುಶ್ರೀ ಮೋರೆ, ಉಪ ಕಾರ್ಯಕಾರಿ ಅಧಿಕಾರಿಗಳಾದ ಡಾ.ಯಶವಂತ್ ರಾವ್ ಮಾನೆಯವರುಗಳು ಕೂಡ ಉಪಸ್ಥಿತರಿದ್ದರು.
ಶ್ರೀ ರಾಮನವಮಿ ಉತ್ಸವದ ಎರಡನೇ ಹಾಗೂ ಮುಖ್ಯ ದಿನದ ಅಂಗವಾಗಿ ಸಮಾಧಿ ಮಂದಿರದಲ್ಲಿ ನಡೆದ ಸಮಾರಂಭದಲ್ಲಿ ಮಹಾರಾಷ್ಟ್ರ ಸರ್ಕಾರದ ಕೃಷಿ ಸಚಿವರಾದ ಶ್ರೀ.ರಾಧಾಕೃಷ್ಣ ವಿಕ್ಹೇ ಪಾಟೀಲ್ ಮತ್ತು ಶ್ರೀಮತಿ.ಶಾಲಿನಿ ತಾಯಿ ವಿಕ್ಹೇ ಪಾಟೀಲ್ ರವರು ಸಾಯಿಬಾಬಾರವರ ಸಮಾಧಿ ಹಾಗೂ ಪವಿತ್ರ ಪಾದುಕೆಗಳ ಪೂಜೆಯನ್ನು ನೆರವೇರಿಸಿದರು.
ಶ್ರೀ ರಾಮನವಮಿ ಉತ್ಸವದ ಅಂಗವಾಗಿ ಶಿರಡಿಗೆ ಲಕ್ಷಾಂತರ ಸಾಯಿ ಭಕ್ತರು ಬಂದಿಳಿದು ಸಾಯಿ ದರ್ಶನಕ್ಕಾಗಿ ಜಮಾಯಿಸಿದ್ದರು. ಅದರ ಒಂದು ಪಕ್ಷಿ ನೋಟ ಈ ಕೆಳಗೆ ನೀಡಲಾಗಿದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment