ಮೈಸೂರು ಜಿಲ್ಲೆಯ ಶಿರಡಿ ಸಾಯಿಬಾಬಾ ಮಂದಿರ - ಶ್ರೀ.ಸಾಯಿಬಾಬಾ ಮಂದಿರ, ಶ್ರೀ ಸಾಯಿ ಸೇವಾ ಶಕ್ತಿ ಟ್ರಸ್ಟ್ (ನೋಂದಣಿ), ಜೆಟ್ಟಿ ಹುಂಡಿ, ಇಲವಾಲ ಹೋಬಳಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ-570 026, ಕರ್ನಾಟಕ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಮೈಸೂರು ಜಿಲ್ಲೆಯ ಇಲವಾಲ ಹೋಬಳಿಯ ಬೋಗಾದಿ ಗದ್ದಿಗೆ ರಸ್ತೆಯಲ್ಲಿರುವ ಜೆಟ್ಟಿ ಹುಂಡಿ ಗ್ರಾಮದಲ್ಲಿರುತ್ತದೆ. ದೇವಾಲಯವು ಜೆಟ್ಟಿ ಹುಂಡಿ ಗ್ರಾಮದ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿರುತ್ತದೆ.
ಈ ದೇವಾಲಯದ ಟ್ರಸ್ಟ್ ನ ಉದ್ಘಾಟನೆಯನ್ನು 10ನೇ ಏಪ್ರಿಲ್ 2008 ರಂದು ಮಾಡಲಾಯಿತು.
ಈ ದೇವಾಲಯದ ಭೂಮಿಪೂಜೆಯನ್ನು 23ನೇ ನವೆಂಬರ್ 2009 ರಂದು ಬೆಳಿಗ್ಗೆ 8:45 ಕ್ಕೆ ಮಾಡಲಾಯಿತು.
ಈ ದೇವಾಲಯದ ಉದ್ಘಾಟನೆಯನ್ನು 19ನೇ ಜನವರಿ 2012 ರಂದು ವಿಧಾನಸಭಾ ಸದಸ್ಯರಾದ ಶ್ರೀ.ಜಿ.ಟಿ.ದೇವೇಗೌಡ ಮತ್ತು ಮೈಸೂರು ಜಿಲ್ಲೆಯ ಸತ್ಯಸಾಯಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ಎಂ.ಪ್ರಸಾದ್ ರವರು ನೆರವೇರಿಸಿರುತ್ತಾರೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಶ್ರೀ.ಎಂ.ಸತ್ಯನಾರಾಯಣರವರು ಕೂಡ ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಡಾ.ಸುಧಾರಾವ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷೆಯಾಗಿರುತ್ತಾರೆ. ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ಅಭಿವೃದ್ದಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯದಲ್ಲಿ ಸುಮಾರು 4 ಅಡಿ ಎತ್ತರದ ಸುಂದರವಾದ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಸಾಯಿಬಾಬಾರವರ ವಿಗ್ರಹದ ಎಡಭಾಗದಲ್ಲಿ ಕಪ್ಪು ಶಿಲೆಯ ಗಣೇಶ ಹಾಗೂ ಬಲಭಾಗದಲ್ಲಿ ಶ್ರೀ.ಸತ್ಯ ಸಾಯಿಬಾಬಾರವರ ಚಿತ್ರಪಟವನ್ನು ಕಾಣಬಹುದಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ: 6:30 ರಿಂದ 10:30 ರವರೆಗೆ.
ಸಂಜೆ: 5:00 ರಿಂದ 8:30 ರವರೆಗೆ.
ಆರತಿಯ ಸಮಯ:
ಬೆಳಿಗ್ಗೆ: 6:30 ರಿಂದ 7:30 ರವರೆಗೆ.
ಸಂಜೆ: 6:30 ಕ್ಕೆ.
ರಾತ್ರಿ: 8:30 ಕ್ಕೆ.
ತಿಂಗಳ ಪ್ರತಿ ಗುರುವಾರ, ಹುಣ್ಣಿಮೆಯ ದಿವಸ ಹಾಗೂ ಸಂಕಷ್ಟ ಚತುರ್ಥಿಯ ದಿವಸ ವಿಶೇಷ ಪೂಜೆಗಳು ನಡೆಯುತ್ತವೆ.
ವಿಶೇಷ ಉತ್ಸವದ ದಿನಗಳು:
ಪ್ರತಿ ವರ್ಷದ 19ನೇ ಜನವರಿ ದೇವಾಲಯದ ವಾರ್ಷಿಕೋತ್ಸವ.
ಗುರುಪೂರ್ಣಿಮೆ.
ವಿಜಯದಶಮಿ.
ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು:
ಪ್ರತಿ ವರ್ಷದ 21ನೇ ಡಿಸೆಂಬರ್ (ಸ್ಥಾಪನಾ ದಿವಸ) ಬಡ ಮಕ್ಕಳಿಗೆ ಉಚಿತ ವಸ್ತ್ರಗಳನ್ನು ನೀಡಲಾಗುತ್ತದೆ, ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತದೆ ಮತ್ತು ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೆ ಅನ್ನದಾನವನ್ನು ಮಾಡಲಾಗುತ್ತದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಬಸ್ ನಿಲ್ದಾಣದ ಹತ್ತಿರ, ಜೆಟ್ಟಿ ಹುಂಡಿ, ಇಲವಾಲ ಹೋಬಳಿ.
ವಿಳಾಸ:
ಶ್ರೀ.ಸಾಯಿಬಾಬಾ ಮಂದಿರ,
ಶ್ರೀ ಸಾಯಿ ಸೇವಾ ಶಕ್ತಿ ಟ್ರಸ್ಟ್ (ನೋಂದಣಿ),
ಜೆಟ್ಟಿ ಹುಂಡಿ, ಇಲವಾಲ ಹೋಬಳಿ,
ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ-570 026,
ಕರ್ನಾಟಕ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಂ.ಸಿದ್ದೇಗೌಡ - ಅಧ್ಯಕ್ಷರು / ಶ್ರೀ.ಸಿ.ಎನ್.ಗೋಪಾಲ್ - ಖಚಾಂಚಿ / ಶ್ರೀ.ಚೆಲುವರಾಜು - ಕಾರ್ಯದರ್ಶಿ / ಶ್ರೀ.ಪ್ರಸಾದ್ - ಸತ್ಯ ಸಾಯಿ ಸೇವಾ ಟ್ರಸ್ಟ್, ಮೈಸೂರು ಜಿಲ್ಲೆ.
ದೂರವಾಣಿ ಸಂಖ್ಯೆಗಳು:
+ 91 99805 56603 - ಎಂ.ಸಿದ್ದೇಗೌಡ / +91 99023 19834 - ಸಿ.ಎನ್.ಗೋಪಾಲ್ / +91 90361 61774 - ಚೆಲುವರಾಜು / +91 94829 57973 / +91 94498 57645 / +91 96113 22822
ಮಾರ್ಗಸೂಚಿ:
ಬೋಗಾದಿ ಗದ್ದಿಗೆ ರಸ್ತೆಯಲ್ಲಿರುವ ಜೆಟ್ಟಿ ಹುಂಡಿ ಬಸ್ ನಿಲ್ದಾಣದ ಬಳಿ ಇಳಿಯುವುದು. ಬಸ್ ಸಂಖ್ಯೆ: 250, 251, 252 ಮತ್ತು ಬೋಗಾದಿ ಗದ್ದಿಗೆಗೆ ಹೋಗುವ ಎಲ್ಲಾ ಬಸ್ ಗಳು ಜೆಟ್ಟಿ ಹುಂಡಿ ಬಸ್ ನಿಲ್ದಾಣದಲ್ಲಿ ನಿಲ್ಲುತ್ತವೆ. ದೇವಾಲಯವು ಜೆಟ್ಟಿ ಹುಂಡಿ ಗ್ರಾಮದ ಬಸ್ ನಿಲ್ದಾಣದಿಂದ ನಡಿಗೆಯ ಅಂತರದಲ್ಲಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment