Tuesday, December 6, 2011

ಮೈಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿನಾಥ ಕನ್ಯಕಾ ಪರಮೇಶ್ವರಿ ದೇವಸ್ಥಾನ, ಶ್ರೀ ವಾಸವಿ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್, I/V, 1ನೇ ಬ್ಲಾಕ್, ಕುವೆಂಪುನಗರ, ಮೈಸೂರು-570 023, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ 


ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಮೈಸೂರಿನ ಕುವೆಂಪು ನಗರದ ಚಿಕ್ಕಮ್ಮ ನಿಕೇತನ ಛತ್ರದ ಹಿಂಭಾಗದಲ್ಲಿ ಇರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 29ನೇ ನವೆಂಬರ್ 1992 ರಂದು ನೆರವೇರಿಸಲಾಯಿತು. 
 
ಈ ದೇವಾಲಯದ ಟ್ರಸ್ಟ್ ನ ಉದ್ಘಾಟನೆಯನ್ನು 1993 ನೇ ಇಸವಿಯಲ್ಲಿ ನೆರವೇರಿಸಲಾಯಿತು.

ಈ ದೇವಾಲಯವನ್ನು 1999 ನೇ ಇಸವಿಯಲ್ಲಿ ದೇವಾಲಯದ ಟ್ರಸ್ಟ್ ನ ಅಧ್ಯಕ್ಷರಾದ ಶ್ರೀ.ಎಂ.ವಿ.ಸತ್ಯನಾರಾಯಣ ಶೆಟ್ಟಿಯವರು ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು. 

ದೇವಾಲಯದಲ್ಲಿ ಸುಮಾರು 4 ಅಡಿ ಎತ್ತರದ ಸಾಯಿಬಾಬಾರವರ ಸುಂದರ ಕಪ್ಪು ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೇ, ಗಣೇಶ, ಕನ್ಯಕಾ ಪರಮೇಶ್ವರಿ, ಶ್ರೀನಿವಾಸ ಮತ್ತು ಈಶ್ವರ ದೇವರುಗಳ ವಿಗ್ರಹಗಳನ್ನು ಕೂಡ ಪ್ರತಿಷ್ಟಾಪಿಸಲಾಗಿದೆ.  







ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು: 

ಆರತಿಯ ಸಮಯ: 

ಪ್ರತಿನಿತ್ಯ ಬೆಳಿಗ್ಗೆ 9:00 ಕ್ಕೆ ಮತ್ತು ರಾತ್ರಿ 7:30 ಕ್ಕೆ ಎಲ್ಲಾ ದೇವರುಗಳಿಗೆ ಆರತಿಯನ್ನು ಮಾಡಲಾಗುತ್ತದೆ. ಅಲ್ಲದೇ, ಪ್ರತಿದಿನ ಬೆಳಿಗ್ಗೆ 7:30 ಕ್ಕೆ ಮತ್ತು ಸಂಜೆ 7 ಘಂಟೆಗೆ ಸಾಯಿಬಾಬಾರವರ ವಿಗ್ರಹಕ್ಕೆ ವಿಶೇಷ ಆರತಿಯನ್ನು ಮಾಡಲಾಗುತ್ತದೆ. 

ದೇವಾಲಯದಲ್ಲಿ ನಡೆಯುವ ಸೇವೆಗಳು ಮತ್ತು ಅದರ ಸೇವಾ ಶುಲ್ಕದ ವಿವರಗಳನ್ನು ಈ ಕೆಳಗೆ ನೀಡಲಾಗಿದೆ: 

1. ಪಂಚಾಮೃತ ಅಭಿಷೇಕ  - 60/- ರುಪಾಯಿಗಳು. 
2. ಕ್ಷೀರಾಭಿಷೇಕ - 30/- ರುಪಾಯಿಗಳು.
3. ಸಹಸ್ರನಾಮಾರ್ಚನೆ - 25/- ರುಪಾಯಿಗಳು. 
4. ಸಾಮುಹಿಕ ಸತ್ಯನಾರಾಯಣ ಪೂಜೆ ಪ್ರತಿ ತಿಂಗಳ ಹುಣ್ಣಿಮೆಯ ದಿವಸ - 20/- ರುಪಾಯಿಗಳು.  
5. ಸಾಮುಹಿಕ ಸಂಕಷ್ಟಹರ ಗಣಪತಿ ವ್ರತ ಪ್ರತಿ ತಿಂಗಳ ಕೃಷ್ಣ ಚತುರ್ಥಿ ದಿವಸ - 15/- ರುಪಾಯಿಗಳು.   
6. ತೋಮಾಲ ಸೇವೆ - 200/- ರುಪಾಯಿಗಳು. 
7. ವಾಹನ ಪೂಜೆ - 10/- ರುಪಾಯಿಗಳು. 
8. ಅಷ್ಟೋತ್ತರ (ಪ್ರತಿ ದೇವರಿಗೆ) - 5/- ರುಪಾಯಿಗಳು. 
9. ಮದುವೆ ದಿಬ್ಬಣದ ವಿಶೇಷ ಪೂಜೆ - 201/- ರುಪಾಯಿಗಳು. 
10. ರುದ್ರಾಭಿಷೇಕ - 251/- ರುಪಾಯಿಗಳು. 
11. ಸಾಯಿಬಾಬಾರವರಿಗೆ ಪ್ರತಿ ಗುರುವಾರ ವಿಶೇಷ ಕ್ಷೀರಾಭಿಷೇಕ - 101/- ರುಪಾಯಿಗಳು. 
 
ವಿಶೇಷ ಉತ್ಸವದ ದಿನಗಳು: 
 
1.ಕನ್ಯಕಾ ಪರಮೇಶ್ವರಿ ವಿಶ್ವರೂಪ ದರ್ಶನ. 
2.ವಾಸವಿ ಜಯಂತಿ. 
3. ವೈಕುಂಠ ಏಕಾದಶಿ. 
4. ಗುರು ಪೂರ್ಣಿಮೆ. 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 
 
ದೇವಾಲಯದ ಟ್ರಸ್ಟ್ ನ ವತಿಯಿಂದ "ವಾಸವಿ ವಿದ್ಯಾನಿಕೇತನ" ಎಂಬ ಶಾಲೆಯನ್ನು ನಡೆಸುತ್ತಿದ್ದು ಇಲ್ಲಿ LKG ಇಂದ 10ನೇ ತರಗತಿಯವರೆಗೆ ಸ್ಥಳೀಯ ಬಡ ವರ್ಗದ ಜನರಿಗಾಗಿ ಅತ್ಯಂತ ಕಡಿಮೆ ಶುಲ್ಕವನ್ನು ಪಡೆದು ಬಹಳ ಉತ್ತಮವಾಗಿ ಶಾಲೆಯನ್ನು ನಡೆಸಲಾಗುತ್ತಿದೆ.    
 
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 


ಚಿಕ್ಕಮ್ಮ ನಿಕೇತನ ಛತ್ರದ ಹಿಂಭಾಗ, ಕುವೆಂಪುನಗರ, ಮೈಸೂರು.


ವಿಳಾಸ: 

ಶ್ರೀ ಸಾಯಿನಾಥ ಕನ್ಯಕಾ ಪರಮೇಶ್ವರಿ ದೇವಸ್ಥಾನ
ಶ್ರೀ ವಾಸವಿ ಸೇವಾ ಸಮಿತಿ ಚಾರಿಟಬಲ್ ಟ್ರಸ್ಟ್,
I/V, 1ನೇ ಬ್ಲಾಕ್, ಕುವೆಂಪುನಗರ,
ಮೈಸೂರು-570 023, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಎಂ.ವಿ.ಸತ್ಯನಾರಾಯಣ ಶೆಟ್ಟಿ - ಅಧ್ಯಕ್ಷರು.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 

+91 821 242 1576 - ದೇವಸ್ಥಾನ / +91 96110 70665 - ಕಾರ್ಯದರ್ಶಿ.

ಮಾರ್ಗಸೂಚಿ:

ಮೈಸೂರಿನ 1ನೇ ಬ್ಲಾಕ್, ಕುವೆಂಪುನಗರದ ಬಸ್ ನಿಲ್ದಾಣದಲ್ಲಿ ಇಳಿಯುವುದು. ದೇವಾಲಯವು ಚಿಕ್ಕಮ್ಮ ನಿಕೇತನ ಛತ್ರದ ಹಿಂಭಾಗದಲ್ಲಿರುತ್ತದೆ. ನಗರ ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 80, 82.
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment