Tuesday, December 6, 2011

ಮೈಸೂರಿನ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶಿರಡಿ ಸಾಯಿಬಾಬಾ ಮಂದಿರ, 278, 17ನೇ  ಮುಖ್ಯರಸ್ತೆ , ಇ  ಬ್ಲಾಕ್, 2ನೇ ಹಂತ, 6ನೇ ಅಡ್ಡರಸ್ತೆ, ಜೆ.ಪಿ.ನಗರ, ಮೈಸೂರು, ಕರ್ನಾಟಕ - ಕೃಪೆ: ಸಾಯಿಅಮೃತಧಾರಾ.ಕಾಂ  

ದೇವಾಲಯದ ವಿಶೇಷತೆಗಳು:

ಈ ದೇವಾಲಯವು ಮೈಸೂರಿನ ಜೆ.ಪಿ.ನಗರದ ಗೊಬ್ಲಿಮರ ವೃತ್ತದ ಬಳಿ ಇರುತ್ತದೆ. 

ಈ ದೇವಾಲಯದ ಭೂಮಿಪೂಜೆಯನ್ನು 1ನೇ ಅಕ್ಟೋಬರ್ 2007 ರಂದು ನೆರವೇರಿಸಲಾಯಿತು. 

ಈ ದೇವಾಲಯವನ್ನು 18ನೇ ಅಕ್ಟೋಬರ್ 2007 ರಂದು ಮಾಜಿ ಡಿ.ಎಲ್.ಡಿ.ಬಿ.ಅಧ್ಯಕ್ಷರಾದ ಶ್ರೀ.ಕೆ.ಆರ್.ಮೋಹನ್ ರವರು ಸಾವಿರಾರು ಸ್ಥಳೀಯ ಸಾಯಿಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು. 

ದೇವಾಲಯದಲ್ಲಿ ಸುಮಾರು 3 ಅಡಿ ಎತ್ತರದ ಸುಂದರ ಅಮೃತ ಶಿಲೆಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 



ದೇವಾಲಯದ ಕಾರ್ಯಚಟುವಟಿಕೆಗಳು: 

ದೈನಂದಿನ ಕಾರ್ಯಕ್ರಮಗಳು: 

ಆರತಿಯ ಸಮಯ: 

ಪ್ರತಿನಿತ್ಯ ಬೆಳಿಗ್ಗೆ 7:15 ಕ್ಕೆ 
ಗುರುವಾರ : ರಾತ್ರಿ 8 ಘಂಟೆಗೆ

ಪ್ರತಿನಿತ್ಯ ದೇವಾಲಯದಲ್ಲಿ ಪಂಚಾಮೃತ ಅಭಿಷೇಕವನ್ನು ಮಾಡಲಾಗುತ್ತದೆ. ಸೇವಾ ಶುಲ್ಕ 101/- ರುಪಾಯಿಗಳು. 

ವಿಶೇಷ ಉತ್ಸವದ ದಿನಗಳು: 

1.ಪ್ರತಿವರ್ಷದ 18ನೇ ಅಕ್ಟೋಬರ್ ದೇವಾಲಯದ ವಾರ್ಷಿಕೋತ್ಸವ. 
2.ಪ್ರತಿವರ್ಷದ ಆಷಾಢ ಮಾಸದ ಹುಣ್ಣಿಮೆಯ ದಿವಸ. 

ದೇವಾಲಯದ ಸಾಮಾಜಿಕ ಕಾರ್ಯಚಟುವಟಿಕೆಗಳು: 

ದೇವಾಲಯದ ಟ್ರಸ್ಟ್ ನ ವತಿಯಿಂದ ಪ್ರತಿವರ್ಷ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸೇವೆಯನ್ನು ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಸನ್ಮಾನ ಮಾಡುವ ಪರಿಪಾಠವನ್ನು ಇಟ್ಟುಕೊಂಡಿದ್ದಾರೆ.  

ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ: 

ಸ್ಥಳ: 

ಗೊಬ್ಲಿಮರ ವೃತ್ತ, ಜೆ.ಪಿ.ನಗರ, ಮೈಸೂರು.


ವಿಳಾಸ: 

ಶ್ರೀ ಶಿರಡಿ ಸಾಯಿಬಾಬಾ ಮಂದಿರ
278, 17ನೇ  ಮುಖ್ಯರಸ್ತೆ , ಇ  ಬ್ಲಾಕ್,
2ನೇ ಹಂತ, 6ನೇ ಅಡ್ಡರಸ್ತೆ, ಜೆ.ಪಿ.ನಗರ,
ಮೈಸೂರು, ಕರ್ನಾಟಕ.

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ವೆಂಕಟರಮಣ ಭಟ್ - ಪ್ರಧಾನ ಅರ್ಚಕರು.

ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ: 

+91 99167 32335 

ಮಾರ್ಗಸೂಚಿ:

ಮೈಸೂರಿನ ಜೆ.ಪಿ.ನಗರದ ಗೊಬ್ಲಿಮರ ವೃತ್ತದ ಬಳಿ ಇಳಿಯುವುದು. ದೇವಾಲಯವು ಗೊಬ್ಲಿಮರ ವೃತ್ತದಿಂದ ನಡಿಗೆಯ ಅಂತರದಲ್ಲಿರುತ್ತದೆ. ನಗರ ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 44, 14, 13, 15, 11 ಮತ್ತು 17

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment