ಆಂಧ್ರಪ್ರದೇಶದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಶ್ರೀ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್, ಪೇಸರಪಾಡು, ಅಂತ್ರಕುಡ್ದ ಅಂಚೆ, ಪಲಾಸ ಮಂಡಲ, ಶ್ರೀಕಾಕುಲಂ ಜಿಲ್ಲೆ-532 222, ಆಂಧ್ರ ಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಪಲಾಸ ಮಂಡಲದ ಪೇಸರಪಾಡು ಗ್ರಾಮದಲ್ಲಿರುತ್ತದೆ. ಕಾಶಿಬುಗ್ಗ ಪಲಾಸವರೆಗೂ ರೈಲು ಸೌಲಭ್ಯವಿರುತ್ತದೆ. ಅಲ್ಲದೆ, ವಿಶಾಖಪಟ್ಟಣದಿಂದ ಕಾಶಿಬುಗ್ಗ ಪಲಾಸವರೆಗೂ ಬಸ್ ಸೌಕರ್ಯ ಕೂಡ ಲಭ್ಯವಿರುತ್ತದೆ. ದೇವಾಲಯವು ಕಾಶಿಬುಗ್ಗ ಪಲಾಸ ನಗರಸಭಾ ಕಚೇರಿಯಿಂದ 3 ಕಿಲೋಮೀಟರ್ ದೂರದಲ್ಲೂ ಮತ್ತು ರಾಷ್ಟ್ರೀಯ ಹೆದ್ದಾರಿ 5 ರಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. ಕಾಶಿಬುಗ್ಗ ಪಲಾಸದಿಂದ ದೇವಾಲಯದವರೆಗೂ ಬರಲು ಅನೇಕ ಆಟೋರಿಕ್ಷಾಗಳು ಲಭ್ಯವಿರುತ್ತದೆ.
ಈ ದೇವಾಲಯದ ಭೂಮಿಪೂಜೆಯನ್ನು 15ನೇ ಅಕ್ಟೋಬರ್ 2002 ರ ಪವಿತ್ರ ವಿಜಯದಶಮಿಯಂದು ನೆರವೇರಿಸಲಾಯಿತು.
ದೇವಾಲಯದ ಉದ್ಘಾಟನೆಯನ್ನು 8ನೇ ಫೆಬ್ರವರಿ 2006 ರ ಪವಿತ್ರ ಭೀಷ್ಮ ಏಕಾದಶಿಯ ದಿನದಂದು ಶ್ರೀ.ಸದ್ಗುರು ಸದಾನಂದ ಮಹಾರಾಜ್ ರವರು ಮತ್ತು ಶ್ರೀ.ಜಗ್ಗಪ್ಪಾಚಾರ್ಯಲುರವರುಗಳು ಜಂಟಿಯಾಗಿ ನೆರವೇರಿಸಿದರು.
ಡಾ.ಕೇಶವ ರಾವ್ ರವರು ದೇವಾಲಯದ ಸಂಸ್ಥಾಪಕ ಅಧ್ಯಕ್ಷರಾಗಿದ್ದು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು ದೇವಾಲಯದ ಮೇಲ್ವಿಚಾರಣೆಯನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ದೇವಾಲಯವು ಪ್ರತಿದಿನ ಬೆಳಿಗ್ಗೆ 5:30 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:30 ಕ್ಕೆ ಶೇಜಾರತಿಯಾದ ನಂತರ ಮುಚ್ಚುತ್ತದೆ.
ದೇವಾಲಯದಲ್ಲಿ 4.5 ಅಡಿ ಎತ್ತರದ ಶಿರಡಿ ಸಾಯಿಬಾಬಾರವರ ಸುಂದರ ಅಮೃತ ಶಿಲೆಯ ವಿಗ್ರಹವು ರಾರಾಜಿಸುತ್ತಿದೆ. ಅಲ್ಲದೆ, ಸುಮಾರು 1 ಅಡಿ ಎತ್ತರದ ಸುಂದರ ಪಂಚಲೋಹದ ವಿಗ್ರಹವನ್ನು ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹದ ಕೆಳಗಡೆ ಇರಿಸಲಾಗಿದ್ದು ಅದನ್ನು ಉತ್ಸವ ವಿಗ್ರಹವಾಗಿ ಬಳಸಲಾಗುತ್ತಿದೆ.
ಸಾಯಿಬಾಬಾರವರ ವಿಗ್ರಹದ ಎದುರುಗಡೆ ಶಿರಡಿಯಲ್ಲಿ ಇರುವಂತೆ ಅಮೃತ ಶಿಲೆಯ ನಂದಿಯ ವಿಗ್ರಹವನ್ನು ಸ್ಥಾಪಿಸಲಾಗಿದೆ.
ಸಾಯಿಬಾಬಾ ಮಂದಿರದ ಹೊರಗಡೆಯ ಆವರಣದಲ್ಲಿ ಗುರುಸ್ಥಾನವನ್ನು ನಿರ್ಮಿಸಲಾಗಿದ್ದು ಇದರ ಒಳಗಡೆ ಸುಮಾರು ಎರಡು ಅಡಿ ಎತ್ತರದ ಅಮೃತ ಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. ಅಲ್ಲದೆ, ಸುಮಾರು ಒಂದೂವರೆ ಅಡಿ ಎತ್ತರದ ಅಮೃತ ಶಿಲೆಯ ದತ್ತಾತ್ರೇಯ ಮತ್ತು ಗಣಪತಿಯ ವಿಗ್ರಹವನ್ನು ಎರಡು ಸಣ್ಣದಾದ ಪ್ರತ್ಯೇಕ ದೇವಾಲಯಗಳಲ್ಲಿ ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಆವರಣದಲ್ಲಿ ಪವಿತ್ರ ಧುನಿಯನ್ನು ಕೂಡ ಸ್ಥಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ : ಪ್ರತಿದಿನ ಬೆಳಿಗ್ಗೆ 5:30 ಕ್ಕೆ.
ಮಧ್ಯಾನ್ಹ ಆರತಿ: ಮಧ್ಯಾನ್ಹ 12:15 ಕ್ಕೆ.
ಧೂಪಾರತಿ : ಸಾಯಂಕಾಲ 6:15 ಕ್ಕೆ.
ಶೇಜಾರತಿ: ರಾತ್ರಿ 8:30 ಕ್ಕೆ.
ದೇವಾಲಯದಲ್ಲಿ ಸಾಯಿಭಕ್ತರು ಇಚ್ಚಿಸಿದ ವರ್ಷದ ಯಾವುದಾದರೂ ಒಂದು ದಿವಸ ಮಹಾಪ್ರಸಾದ ಸಹಿತ ನಾಮ ಗೋತ್ರ ಪೂಜೆ ಅಥವಾ ಶಾಶ್ವತ ಪೂಜೆಗೆ ಅವಕಾಶವನ್ನು ಕಲ್ಪಿಸಲಾಗಿದೆ. ಸೇವಾ ಶುಲ್ಕ 1000/- ರುಪಾಯಿಗಳು.
ದೇವಾಲಯದ ವಾರ್ಷಿಕೋತ್ಸವದ ದಿವಸ ಸಹಸ್ರ ಕಲಶ ಅಭಿಷೇಕವನ್ನು ಮಾಡಲು ಸಾಯಿಭಕ್ತರಿಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಸೇವಾ ಶುಲ್ಕ 20/- ರುಪಾಯಿಗಳಾಗಿರುತ್ತದೆ.
ದೇವಾಲಯದಲ್ಲಿ ನಡೆಯುವ ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷದ ಪವಿತ್ರ ಭೀಷ್ಮ ಏಕಾದಶಿಯ ದಿನ - ವಾರ್ಷಿಕೋತ್ಸವವನ್ನು 3 ದಿನಗಳ ಕಾಲ ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಮೊದಲನೆಯ ದಿವಸ ಕಲಶ ಸ್ಥಾಪನೆಯನ್ನು ಮಾಡಲಾಗುತ್ತದೆ. ಎರಡನೆಯ ದಿವಸ ಸಹಸ್ರ ಕಳಶಾಭಿಷೇಕವನ್ನು ಮಾಡಲಾಗುತ್ತದೆ. ಕೊನೆಯ ದಿವಸ ಗಣಪತಿ ಹೋಮವನ್ನು ಮಾಡಲಾಗುತ್ತದೆ. ಎಲ್ಲಾ 3 ದಿನಗಳಲ್ಲೂ ದೇವಾಲಯಕ್ಕೆ ಬರುವ ಎಲ್ಲ ಭಕ್ತರಿಗೂ ಅನ್ನದಾನ ಮತ್ತು ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಕೂಡ ಏರ್ಪಡಿಸಲಾಗುತ್ತದೆ.
ಗುರುಪೂರ್ಣಿಮೆ.
ಶ್ರೀರಾಮನವಮಿ. ವಿಜಯದಶಮಿ.
ದತ್ತ ಜಯಂತಿ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಕಾಶಿಬುಗ್ಗ ಪಲಾಸ ನಗರಸಭಾ ಕಚೇರಿಯಿಂದ 3 ಕಿಲೋಮೀಟರ್ ಮತ್ತು ರಾಷ್ಟ್ರೀಯ ಹೆದ್ದಾರಿ 5 ರಿಂದ ಸುಮಾರು 1.5 ಕಿಲೋಮೀಟರ್.
ವಿಳಾಸ:
ಶ್ರೀ ಶ್ರೀ ಶ್ರೀ ಸದ್ಗುರು ಶಿರಡಿ ಸಾಯಿಬಾಬಾ ಸೇವಾ ಸಂಗಮ್,
ಪೇಸರಪಾಡು, ಅಂತ್ರಕುಡ್ದ ಅಂಚೆ, ಪಲಾಸ ಮಂಡಲ,
ಶ್ರೀಕಾಕುಲಂ ಜಿಲ್ಲೆ-532 222,
ಆಂಧ್ರ ಪ್ರದೇಶ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಡಾ.ಕೇಶವ ರಾವ್ - ಸಂಸ್ಥಾಪಕ ಅಧ್ಯಕ್ಷರು / ಶ್ರೀ.ಎಂ.ರಾಘವ ಶರ್ಮ / ಶ್ರೀ.ಆರ್.ಶಂಕರ ರಾವ್ / ಶ್ರೀ.ಎಸ್.ಜಯರಾಂ.
ದೂರವಾಣಿ ಸಂಖ್ಯೆಗಳು:
+ 91 94404 48277 / +91 89452 43974 / +91 92972 09408
ಮಾರ್ಗಸೂಚಿ:
ಕಾಶಿಬುಗ್ಗ ಪಲಾಸವರೆಗೂ ರೈಲು ಸೌಲಭ್ಯವಿರುತ್ತದೆ. ಅಲ್ಲದೆ, ವಿಶಾಖಪಟ್ಟಣದಿಂದ ಕಾಶಿಬುಗ್ಗ ಪಲಾಸವರೆಗೂ ಬಸ್ ಸೌಕರ್ಯ ಕೂಡ ಲಭ್ಯವಿರುತ್ತದೆ. ದೇವಾಲಯವು ಕಾಶಿಬುಗ್ಗ ಪಲಾಸ ನಗರಸಭಾ ಕಚೇರಿಯಿಂದ 3 ಕಿಲೋಮೀಟರ್ ದೂರದಲ್ಲೂ ಮತ್ತು ರಾಷ್ಟ್ರೀಯ ಹೆದ್ದಾರಿ 5 ರಿಂದ ಸುಮಾರು 1.5 ಕಿಲೋಮೀಟರ್ ದೂರದಲ್ಲೂ ಇರುತ್ತದೆ. ಕಾಶಿಬುಗ್ಗ ಪಲಾಸದಿಂದ ದೇವಾಲಯದವರೆಗೂ ಬರಲು ಅನೇಕ ಆಟೋರಿಕ್ಷಾಗಳು ಲಭ್ಯವಿರುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment