ವಿಶಾಖಪಟ್ಟಣದ ಶಿರಡಿ ಸಾಯಿಬಾಬಾ ಮಂದಿರ - ಶ್ರೀ ಸಾಯಿ ಸಂಸ್ಥಾನ ಚಾರಿಟಬಲ್ ಟ್ರಸ್ಟ್, ಈಸ್ಟ್ ಶಿರಡಿ, ಚಿನ್ನ ವಾಲ್ಟೈರ್, ವಿಶಾಖಪಟ್ಟಣ-530 017, ಆಂಧ್ರಪ್ರದೇಶ, ಭಾರತ - ಕೃಪೆ: ಸಾಯಿಅಮೃತಧಾರಾ.ಕಾಂ
ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಆಂಧ್ರಪ್ರದೇಶದ ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿರುವ ಚಿನ್ನ ವಾಲ್ಟೈರ್ ನ ಈಸ್ಟ್ ಪಾಯಿಂಟ್ ಕಾಲೋನಿಯಲ್ಲಿರುವ ಉಡಾ ಉದ್ಯಾನವನದ ಹತ್ತಿರದಲ್ಲಿರುತ್ತದೆ.
ಈ ದೇವಾಲಯದ ಭೂಮಿಪೂಜೆಯನ್ನು 19ನೇ ಫೆಬ್ರವರಿ 1977 ರಂದು ನೆರವೇರಿಸಲಾಯಿತು.
ಈ ದೇವಾಲಯವನ್ನು 18ನೇ ಮಾರ್ಚ್ 1993 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸಾಯಿ ಭಕ್ತರ ಸಮ್ಮುಖದಲ್ಲಿ ಉದ್ಘಾಟಿಸಿದರು.
ದೇವಾಲಯವು ಪ್ರತಿದಿನ ಬೆಳಿಗ್ಗೆ 5:15 ಕ್ಕೆ ಕಾಕಡಾ ಆರತಿಯೊಂದಿಗೆ ತೆರೆಯುತ್ತದೆ ಮತ್ತು ರಾತ್ರಿ 8:30 ಕ್ಕೆ ಶೇಜಾರತಿಯಾದ ನಂತರ ಮುಚ್ಚುತ್ತದೆ.
ದೇವಾಲಯದ ಸಂಕೀರ್ಣದಲ್ಲಿ ಸಾಯಿಬಾಬಾರವರ ಅಮೃತ ಶಿಲೆಯ ವಿಗ್ರಹ, ವಿಷಕೇಶ್ವರ (ಶಿವ), ಪಾರ್ವತಿ ದೇವಿ, ಶನೀಶ್ವರ, ಸೂರ್ಯನಾರಾಯಣ ಸ್ವಾಮಿ, ಶ್ರೀರಾಮ, ಹನುಮಾನ್, ಗಣಪತಿ, ಅಯ್ಯಪ್ಪ, ಕುಮಾರಸ್ವಾಮಿ, ದತ್ತಾತ್ರೇಯ, ಪವಿತ್ರ ಧುನಿ ಮತ್ತು ದ್ವಾರಕಾಮಾಯಿಯನ್ನು ಸಾಯಿಭಕ್ತರು ನೋಡಬಹುದು.
ದೇವಾಲಯದ ನಿತ್ಯ ಕಾರ್ಯ ಚಟುವಟಿಕೆಗಳು:
ದೈನಂದಿನ ಕಾರ್ಯಕ್ರಮಗಳು:
ಆರತಿಯ ಸಮಯ:
ಕಾಕಡಾ ಆರತಿ: ಬೆಳಿಗ್ಗೆ 5:15 ಕ್ಕೆ
ಮಧ್ಯಾನ್ಹ ಆರತಿ: ಮಧ್ಯಾನ್ಹ 12 ಘಂಟೆಗೆ
ಧೂಪಾರತಿ: ಸಂಜೆ 6:15 ಕ್ಕೆ
ಶೇಜಾರತಿ: ರಾತ್ರಿ 8:30 ಕ್ಕೆ
ದೇವಾಲಯದಲ್ಲಿ ನಿತ್ಯ ಅನ್ನದಾನ ಸೇವೆ ಮಾಡಲು ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಸೇವಾಶುಲ್ಕ ಪ್ರತಿನಿತ್ಯ 200/- ರುಪಾಯಿಗಳಾಗಿರುತ್ತದೆ ಮತ್ತು ಗುರುವಾರದಂದು ಮಾತ್ರ ಸೇವಾಶುಲ್ಕ 500/- ರುಪಾಯಿಗಳಾಗಿರುತ್ತದೆ.
ದೇವಾಲಯದಲ್ಲಿ ಶಾಶ್ವತ ಪೂಜೆಗೆ ಅವಕಾಶವನ್ನು ಕಲ್ಪಿಸಲಾಗಿದ್ದು ಇದರ ಸೇವಾಶುಲ್ಕ 2100/- ರುಪಾಯಿಗಳಾಗಿರುತ್ತದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಉಡಾ ಉದ್ಯಾನವನದ ಹತ್ತಿರ, ಬೀಚ್ ರಸ್ತೆ, ಚಿನ್ನ ವಾಲ್ಟೈರ್, ಈಸ್ಟ್ ಪಾಯಿಂಟ್ ಕಾಲೋನಿ
ವಿಳಾಸ:
ಶ್ರೀ ಸಾಯಿ ಸಂಸ್ಥಾನ ಚಾರಿಟಬಲ್ ಟ್ರಸ್ಟ್,
ಈಸ್ಟ್ ಶಿರಡಿ, ಚಿನ್ನ ವಾಲ್ಟೈರ್,
ವಿಶಾಖಪಟ್ಟಣ-530 017,
ಆಂಧ್ರಪ್ರದೇಶ, ಭಾರತ.
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಜೀ.ವಿ.ಆರ್.ರೆಡ್ಡಿ (ಕಾರ್ಯದರ್ಶಿ)/ ಶ್ರೀ.ಎಂ.ವೀ.ಆರ್.ಮಣಿಧರ್ (ಟ್ರಸ್ಟಿ) / ಶ್ರೀಮತಿ.ಡಿ.ಶಿರೀಷ (ಆಡಳಿತಾಧಿಕಾರಿ)
ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
+91 891 2552099 / + 91 98663 35527 / +91 98661 60155 / +91 96182 55515
ಈ ಮೇಲ್ ವಿಳಾಸ:
sirisha@eastshiridi.org / sirisha_mukesh@yahoo.com
ಅಂತರ್ಜಾಲ ತಾಣ:
http://www.eastshiridi.org
ಮಾರ್ಗಸೂಚಿ:
ವಿಶಾಖಪಟ್ಟಣದ ಬೀಚ್ ರಸ್ತೆಯಲ್ಲಿರುವ ಚಿನ್ನ ವಾಲ್ಟೈರ್ ನ ಈಸ್ಟ್ ಪಾಯಿಂಟ್ ಕಾಲೋನಿಯಲ್ಲಿರುವ ಉಡಾ ಉದ್ಯಾನವನದ ಬಸ್ ನಿಲ್ದಾಣದ ಬಳಿ ಇಳಿಯುವುದು. ದೇವಾಲಯವು ಬಸ್ ನಿಲ್ದಾಣದಿಂದ 5 ನಿಮಿಷದ ನಡಿಗೆಯ ಅಂತರದಲ್ಲಿರುತ್ತದೆ. ಬಸ್ ನಿಲ್ದಾಣದಿಂದ ಬಸ್ ಸಂಖ್ಯೆಗಳು: 14 ಮತ್ತು 210.
ಕನ್ನಡ ಅನುವಾದ:ಶ್ರೀಕಂಠ ಶರ್ಮ