ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ಕೃತಕ ಸಂಧಿ ಜೋಡಣೆ ಶಿಬಿರದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ
ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ ತಿಂಗಳ 16ನೇ ಅಕ್ಟೋಬರ್ 2011, ಭಾನುವಾರದಂದು ದೇವಾಲಯದ ಆವರಣದಲ್ಲಿ ಉಚಿತ ಕೃತಕ ಸಂಧಿ ಜೋಡಣೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿರಡಿಯ ಸಾಯಿಬಾಬಾ ಆಸ್ಪತ್ರೆಯ ಅಸ್ಥಿ ಶಸ್ತ್ರಚಿಕಿತ್ಸಾ ತಜ್ಞರುಗಳಾದ ಡಾ.ಪ್ರೀತಂ ಜಪೆ ಮತ್ತು ಡಾ.ರಾಮರಾವ್ ಅವರುಗಳು ರೋಗಿಗಳ ತಪಾಸಣೆ ಮಾಡಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳಾದ ಡಾ.ಏಕನಾಥ್ ಗೊಂಡ್ಕರ್, ಶ್ರೀ.ಅಶೋಕ್ ಕಂಬೇಕರ್, ಕಾರ್ಯಕಾರಿ ಅಧಿಕಾರಿ ಶ್ರೀ.ಕಿಶೋರ್ ಮೋರೆ ಮತ್ತು ಡಾ.ಮಸ್ಕೆಯವರುಗಳು ಕೂಡ ಉಪಸ್ಥಿತರಿದ್ದರು.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment