Saturday, May 15, 2010

ಸಾಯಿ ಭಜನ ಗಾಯಕ - ಶ್ರೀ. ದೀಪೇಂದರ್ ದತ್ತ (ದೀಪಕ್) ಶರ್ಮ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಶ್ರೀ ದೀಪೇಂದರ್ ದೀಪಕ್ ಶರ್ಮ ರವರು ದಿಲ್ಲಿಯ ಘರಾನಾ ಪರಂಪರೆಗೆ ಸೇರಿದ ಗಾಯಕರಾಗಿದ್ದಾರೆ. ಇವರು ತಮ್ಮ ಸಂಗೀತಭ್ಯಾಸವನ್ನು "ತಾನ ಸಾಮ್ರಾಟ್" ಎಂದು ಖ್ಯಾತರಾದ ಉಸ್ತಾದ್ ನಸೀರ್ ಅಹ್ಮದ್ ಖಾನ್ ಸಾಹೇಬ್ ರವರ ಮಾರ್ಗದರ್ಶನದಲ್ಲಿ ಕಲಿತರು. ಇವರು ೧೯೮೫ ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುತ್ತಾರೆ.

ಇವರು ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರೇಮಿಗಳನ್ನು ಸತತವಾಗಿ ಸಂತೋಷಪಡಿಸುತ್ತಿದ್ದಾರೆ. ಇವರು ಅನೇಕ ಭಜನೆಗಳನ್ನು ಸ್ವತಃ ರಚನೆ ಮಾಡಿರುತ್ತಾರೆ.  ಶ್ರೀಯುತ ಶರ್ಮರವರು ತು ಬಂಕ ತೇರಿ ಬಂಕಿ ನಜರಿಯ, ದಿವ್ಯ ಭಜನಾಮೃತ, ಬೃಂದಾವನ್ ಕೆ ರಾಧ ಶ್ಯಾಮ್, ಶ್ರೀ ಗೋವರ್ಧನ ಮಹಾರಾಜ, ಹೋರಿ ಖೇಲ್ ರಹೇ ನಂದಲಾಲ್, ರಾಗ್ ಔರ್ ತಾಲ್, ಆನಾ ರೇ ಮೋಹನ್ ಮೇರಿ ಗಲಿಯನ್ ಇನ್ನು ಹಲವಾರು ಭಜನೆಗಳ ಸಿಡಿಗಳನ್ನು ಹೊರತಂದಿದ್ದಾರೆ.

ಇವರ ಧರ್ಮಪತ್ನಿಯವರಾದ ಶ್ರೀಮತಿ. ಯುಕ್ತಿ ಶರ್ಮ ರವರು ಕೂಡ ಒಳ್ಳೆಯ ಗಾಯಕಿಯಾಗಿದ್ದು ಹಲವು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ತಮ್ಮ ಪತಿಯ ಕಾರ್ಯಕ್ರಮಗಳನ್ನು ನಿಯೋಜಿಸುವ ಹೊಣೆಯನ್ನು ಕೂಡ ಹೊತ್ತುಕೊಂಡಿದ್ದಾರೆ.

ಇವರ ಮಗಳಾದ ನೇಹಾ ಶರ್ಮ ಕೂಡ ತನ್ನ ಎಳೆಯ ವಯಸ್ಸಿನಿಂದ ಸಂಗೀತಾಭ್ಯಾಸವನ್ನು ತಂದೆಯವರ ಬಳಿ ಮಾಡುತ್ತ ಅನೇಕ ಕಾರ್ಯಕ್ರಮಗಳನ್ನು ಕೂಡ ನೀಡುತ್ತ ಬಂದಿದ್ದಾರೆ.

ಇವರ ಮಗನಾದ ಅನುಭವ ಶರ್ಮ ಒಳ್ಳೆಯ ತಬಲಾ ವಾದಕನಾಗಿದ್ದು ತನ್ನ ತಂದೆಯವರ ಜೊತೆ ತನ್ನ ಹತ್ತನೆಯ ವಯಸ್ಸಿನಿಂದ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.  

ಶ್ರೀಯುತ ಶರ್ಮ ರವರು "ದೇವಾಶ್ರಂ ಸಂಗೀತ ಮಹಾವಿದ್ಯಾಲಯ" ಎಂಬ ಪ್ರತಿಷ್ಟಿತ ಸಂಗೀತ ವಿದ್ಯಾಲಯವನ್ನು ದೆಹಲಿಯಲ್ಲಿ ೧೯೮೨ ರಿಂದ ನಡೆಸುತ್ತಾ ಅನೇಕ ಒಳ್ಳೆಯ ಗಾಯಕರನ್ನು ಸಮಾಜಕ್ಕೆ ನೀಡಿರುತ್ತಾರೆ.



ಇವರ ಸಂಪರ್ಕದ ವಿವರಗಳು ಕೆಳಕಂಡಂತೆ ಇವೆ:

ವಿಳಾಸ : ದೇವಾಶ್ರಂ ಸಂಗೀತ ಮಹಾವಿದ್ಯಾಲಯ, ೧/೬೩೮೪, ಬಲಬೀರ್ ನಗರ್ ಚೌಕಿ, ಶಹಧಾರ, ದೆಹಲಿ-೧೧೦ ೦೩೨.

ದೂರವಾಣಿ: ೯೧-೧೧-೨೨೩೨೦೨೪೮, ೯೧-೯೮೧೦೪೩೪೧೭೩

ವೆಬ್ ಸೈಟ್ : http://www.deependerdeepak.com/

No comments:

Post a Comment