ಸಾಯಿ ಭಜನ ಗಾಯಕಿ - ಶ್ರೀಮತಿ.ಭವತಾರಿಣಿ ಅನಂತರಾಮನ್ - ಕೃಪೆ - ಸಾಯಿ ಅಮೃತಧಾರಾ.ಕಾಂ
ಶ್ರೀಮತಿ ಭವತಾರಿಣಿ ಅನಂತರಾಮನ್ ರವರು ಸಂಗೀತ ಕಲಾನಿಧಿ ಎಂದು ಹೆಸರು ಮಾಡಿರುವ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರ ಬಳಿ ೧೮ ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿರುತ್ತಾರೆ. ಇವರು ಹೆಸರಾಂತ ವಾಗ್ಗೆಯಕಾರರಾದ ಶ್ರೀ. ಮಯುರಂ ವಿಶ್ವನಾಥ ಶಾಸ್ತ್ರಿಗಳ ವಂಶಸ್ಥರಾಗಿರುತ್ತಾರೆ. ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ ಇವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಬಹಳ ಬೇಗನೆ ಕಲಿಯಲು ಸಹಾಯವಾಯಿತು. ಆದರೆ ಭವತಾರಿಣಿಯವರು ಯಾವುದೇ ಸಾಂಪ್ರದಾಯಿಕ ಸಂಗೀತಾಭ್ಯಾಸ ಮಾಡದೇ ಕೇವಲ ತಮ್ಮ ಸ್ವಂತ ಪ್ರಯತ್ನದಿಂದಲೇ ಸಂಗೀತವನ್ನು ಕಲಿತರು.
ಭವತಾರಿಣಿಯವರು ಕೇವಲ ೫ ವರ್ಷದವರಿದ್ದಾಗ ಒಮ್ಮೆ ತಮ್ಮ ತಾಯಿ ಶ್ರೀಮತಿ.ನಳಿನಿಯವರ ಜೊತೆಯಲ್ಲಿ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರ ಸಂಗೀತ ಶಾಲೆಗೆ ಹೋಗಿದ್ದರು. ಆ ಎಳೆಯ ವಯಸ್ಸಿನಲ್ಲೇ ಇವರ ಹಾಡುಗಾರಿಕೆಯನ್ನು ಕೇಳಿದ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರು "ಈ ಮಗುವಿಗೆ ನಾನೇ ಗುರು" ಎಂದು ಹೇಳಿ ಭವತಾರಿಣಿಯವರನ್ನು ತಮ್ಮ ಶಿಷ್ಯಳಾಗಿ ಸ್ವೀಕರಿಸಿದರೆಂದು ಹೇಳಲಾಗುತ್ತದೆ.
ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:
ವಿಳಾಸ : ಎಇ-೧೩೨ (೮೦ ಡಿ), ೧ನೆ ಮಹಡಿ, ಶಾಂತಿ ಕಾಲೋನಿ, ಅಣ್ಣಾ ನಗರ್, ಚೆನ್ನೈ-೬೦೦ ೦೪೦.
ದೂರವಾಣಿ : ೯೧-೪೪-೨೬೨೦೨೨೮೯, ೦೯೮೪೧೫೦೪೦೯೯
ವೆಬ್ ಸೈಟ್ : http://bhavadhaarini.com/
ಆಲ್ಬಮ್ : ಸಾಯಿ ಸಮರ್ಪಣಂ, ಸಾಯಿ ವಂದನಂ, ಸಾಯಿ ಪೂಜಾ ವಿಧಾನಂ
No comments:
Post a Comment