ಸಾಯಿ ಭಜನ ಗಾಯಕ - ಅನುಪ್ ಜಲೋಟ - ಕೃಪೆ - ಸಾಯಿ ಅಮೃತಧಾರಾ.ಕಾಂ
ಅನುಪ್ ಜಲೋಟರವರು ತಮ್ಮ ಭಜನೆ ಹಾಗೂ ಘಜಲ್ ಗಳಿಗೆ ಪ್ರಪಂಚದಾದ್ಯಂತ ಮನೆಮಾತಾಗಿದ್ದಾರೆ. ಇವರು ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಇವರ ತಂದೆಯವರಾದ ಶ್ರೀಯುತ ಪುರುಷೋತ್ತಮ್ ದಾಸ ಜಲೋಟರವರು ಕೂಡ ಒಳ್ಳೆಯ ಭಜನ ಗಾಯಕರಾಗಿದ್ದು ಇವರಿಗೆ ಮೊದಲ ಗುರುಗಳಾಗಿದ್ದರು. ಅನುಪ್ ಜಲೋಟರವರು ಹುಟ್ಟಿದ್ದು ನೈನಿಟಾಲ್ ನಲ್ಲಿ. ವ್ಯಾಸಂಗ ಮಾಡಿದ್ದು ಲಕ್ನೌ ನಲ್ಲಿ. ಇವರು ತಮ್ಮ ಸಂಗೀತ ಪಯಣವನ್ನು ಆಲ್ ಇಂಡಿಯಾ ರೇಡಿಯೋ ದಲ್ಲಿ ಗೋಷ್ಠಿ ಗಾಯಕರಾಗಿ ಪ್ರಾರಂಭಿಸಿದರು.
"ಭಾರತದ ಭಜನ್ ಸಾಮ್ರಾಟ್" ಎಂದು ಹೆಸರು ಪಡೆದಿರುವ ಅನುಪ್ ಜಲೋಟ ರವರು ತಮ್ಮ ದೈವಿಕ ಗಾಯನದಿಂದ ಎಲ್ಲ ಜನರನ್ನು ಹಾಗೂ ಭಕ್ತರನ್ನು ತಮ್ಮೆಡೆಗೆ ಸೆಳೆದಿದ್ದಾರೆ.
ಇವರ ಅನೇಕ ಸಂಗೀತದ ಆಲ್ಬಮ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಬಹಳ ಒಳ್ಳೆಯ ಹೆಸರನ್ನು ಗಳಿಸಿವೆ. ಇವರು ಹಿಂದಿ, ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ.
ವೈವಿಧ್ಯಮಯ ಸಂಗೀತಕ್ಕೆ ಹೆಸರಾದ ಅನುಪ್ ಜಲೋಟ ರವರು ಸದಾ ನಗುಮುಖದಿಂದ ಕೂಡಿದ್ದು ಪರೋಪಕಾರಿಗಳಾಗಿರುತ್ತಾರೆ. ಅನುಪ್ ಜಲೋಟರವರು ಭಜನೆ ಹಾಗೂ ಘಜಲ್ ಗಳನ್ನು ಬಹಳ ಸುಲಲಿತವಾಗಿ ಹಾಗೂ ಸುಂದರವಾಗಿ ಹಾಡುತ್ತಾರೆ. ಇವರು ತಮ್ಮ ಮಧುರವಾದ ಹಾಗೂ ಶಕ್ತಿಯುತವಾದ ದನಿಯಿಂದ ಭಕ್ತರನ್ನು ಮತ್ತು ಜನರನ್ನು ತಮ್ಮೆಡೆ ಆಕರ್ಷಿಸಿದ್ದಾರೆ. ಇವರ ಭಜನ ಶೈಲಿಯನ್ನು ಕಂಡು ಜನರು ದಿಗ್ಮೂಡರಾಗಿದ್ದಾರೆ. ಇವರ ಮಧುರ ಧ್ವನಿಯು ಜನರ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ.
ವಿಳಾಸ : ಮೋಹನ್ ನಿವಾಸ, ೫೬, ಕೇಲುಸ್ಕರ್ ರಸ್ತೆ, ಶಿವಾಜಿ ಪಾರ್ಕ್, ಮುಂಬೈ- ೪೦೦ ೦೨೮. ಮಹಾರಾಷ್ಟ್ರ.
ದೂರವಾಣಿ: ೯೧-೦೨೨-೨೪೪೫೩೨೩೨/೨೪೪೬೧೬೩೮, ಶ್ರೀಯುತ ಭರತ್ ಓಜಾ - ಕಾರ್ಯದರ್ಶಿ - ೯೧-೯೭೦೨೨ ೮೮೩೭೭, ೯೧-೯೮೨೦೧ ೦೧೧೫೯ / ೦೯೮೨೧೦ ೬೯೮೦೯
ವೆಬ್ ಸೈಟ್ : http://www.anupjalota.in/
ಆಲ್ಬಮ್ : ಜೀವನ ನಯ್ಯ ಸಾಯಿ ಖಿವಯ್ಯ, ಮೇರೆ ಸಾಯಿ, ಸಾಯಿ ಪಾಲನ್ಹಾರ, ಸಾಯಿ ಸುಮಿರನ್, ಸಾಯಿ ಮಿಲನ್ ಕೀ ಆಶ್, ಶಿರಡಿ ಮೇ ಚಾರೋ ಧಾಮ್, ಜೀವನ ನಯ್ಯ ಸಾಯಿ ಕಿವಯ್ಯ, ಸಾಯಿ ಕೆ ಧರ್ ಪೆ, ಸಾಯಿ ರಾಮ್ (ಧುನ್) ಮತ್ತು ಇನ್ನು ಹಲವಾರು ಆಲ್ಬಮ್ ಗಳು.
ಸಾಯಿ ಭಜನೆ ಲಿಂಕ್ ಗಳು:
ಕನ್ನಡ ಅನುವಾದ : ಶ್ರೀಕಂಠ ಶರ್ಮ
No comments:
Post a Comment