Tuesday, May 18, 2010

ಸಾಯಿ ಭಜನ ಗಾಯಕರು - ಜಗಜಿತ್ ಸಿಂಗ್ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಜಗಜಿತ್ ಸಿಂಗ್ ರವರು ಹಿಂದೆ ಕೇವಲ ಶ್ರೀಮಂತರ ಸ್ವತ್ತಾಗಿದ್ದ ಸಂಗೀತದ ಮತ್ತೊಂದು ಪ್ರಭೇಧವಾದ ಘಜಲ್ ಗಾಯನವನ್ನು ಎಲ್ಲ ವರ್ಗದ ಜನರಿಗೆ ತಲುಪಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದಾರೆ. ಭಾರತೀಯ ಸಂಗೀತ ವಾದ್ಯಗಳೊಂದಿಗೆ ಪಾಶ್ಚಿಮಾತ್ಯ ವಾದ್ಯಗಳನ್ನು ಬಳಸಿ ಸಂಗೀತ ನಿರ್ದೇಶನ ಮಾಡುವುದು ಇವರ ಗಾಯನದ ವೈಶಿಷ್ಟ್ಯ. ಜಗಜಿತ್ ಸಿಂಗ್ ರವರು  ತಮ್ಮ ವಿಶಿಷ್ಟ ಘಜಲ್ ಗಾಯನದಿಂದ "ಘಜಲ್ ಜಿತ್ ಸಿಂಗ್" ಎಂದು ಪ್ರಸಿದ್ದರಾಗಿದ್ದರೆ.

ಹಿಂದಿ ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕರಾದ ಕುಮಾರ್ ಸಾನು, ಅಭಿಜಿತ್, ತಲತ್ ಅಜೀಜ್ ರವರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಜಗಜಿತ್ ಸಿಂಗ್ ರವರಿಗೆ ಸಲ್ಲುತ್ತದೆ.  ಇವರಲ್ಲದೆ, ಘನಶ್ಯಾಂ ವಾಸ್ವಾನಿ, ಅಶೋಕ್ ಖೊಸ್ಲ, ಸಿಜಾ ರಾಯ್, ವಿನೋದ್ ಸೆಹಗಲ್ ರವರುಗಳಿಗೂ ಕೂಡ ಮಾರ್ಗದರ್ಶನ ನೀಡಿದ್ದಾರೆ.

ಇವರು ಪಾಕಿಸ್ತಾನದ ಗಾಯಕರು ಭಾರತದಲ್ಲಿ ಹಾಡುವುದನ್ನು ತೀವ್ರವಾಗಿ ವಿರೋಧಿಸಿದರು. ಏಕೆಂದರೆ, ಪಾಕಿಸ್ತಾನವು ಈ ಹಿಂದೆ  ಭಾರತೀಯ ಗಾಯಕರನ್ನು ಪಾಕಿಸ್ತಾನದಲ್ಲಿ ಹಾಡಲು ಅವಕಾಶ ನೀಡುತ್ತಿರಲಿಲ್ಲ.

ಜಗಜಿತ್ ಸಿಂಗ್ ರವರು ಸಾರ್ವಜನಿಕರಿಗೆ ಸಹಾಯ ಹಸ್ತ ನೀಡುತ್ತಿರುವ ಸಂತ ಮೇರಿ ಗ್ರಂಥಾಲಯ (ಮುಂಬೈ), ಮುಂಬೈ ಹಾಸ್ಪಿಟಲ್, ಚೈಲ್ಡ್ ರಿಲೀಫ್ ಅಂಡ್ ಯು (CRY) , ALMA (ಅವಕಾಶ ವಂಚಿತ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರುಗಳಿಗೆ ವಿದ್ಯೆಯನ್ನು ಹಾಗೂ ಕೆಲಸವನ್ನು ಕೊಡಿಸುವುದರಲ್ಲಿ ಸಹಾಯ ಮಾಡುವ ಸಂಸ್ಥೆ) ಸಂಘ ಸಂಸ್ಥೆಗಳೊಂದಿಗೆ ಕೈಜೋಡಿಸಿ ತಮ್ಮ ಕಾರ್ಯಕ್ರಮಗಳನ್ನು ನೀಡುವುದರ ಮುಖಾಂತರ ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ.



ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ : ಶ್ರೀ.ಸಂಜಯ್ ತಯಾಲ್, ಎಮರಾಲ್ಡ್ ಇನ್ಫೋ ಕಾಂ  ಪ್ರೈವೇಟ್ ಲಿಮಿಟೆಡ್, ೧, ಅರಬಿಂದೋ ಸೊಸೈಟಿ, ವಸ್ತ್ರಪುರ್ ಕೆರೆಯ ಎದುರು, ವಸ್ತ್ರಾಪುರ್, ಅಹಮದಾಬಾದ್ - 380 015. ಗುಜರಾತ್.

ದೂರವಾಣಿ : 91-೯೮೨೪೦೨೫೯೭೩ /೯೧-೭೯-೨೬೭೫೦೫೫೫  / ೨೬೭೬೭೩೨೯   ಜಗಜಿತ್ ಸಿಂಗ್ ರವರ ಕಾರ್ಯಕ್ರಮವನ್ನು ಬುಕ್ ಮಾಡಲು ಸಂಪರ್ಕಿಸಿ : ಶ್ರೀ. ಕುಲದೀಪ್ ದೇಸಾಯಿ (+೯೧-೯೦೦೪೦೩೯೯೩೬)


ವೆಬ್ ಸೈಟ್ : http://www.jagjitchitrasingh.com/

ಆಲ್ಬಮ್ : ಓಂ ಸಾಯಿ ರಾಮ್ -ಭಾಗ ೧ ಮತ್ತು ೨ ಮತ್ತು ಇನ್ನು ಹಲವಾರು ಆಲ್ಬಮ್ ಗಳು.

ಇವರ ಭಜನೆಯನ್ನು youtube ನಲ್ಲಿ ವೀಕ್ಷಿಸಲು ಈ ಕೆಳಕಂಡ ಜೋಡಣೆಯನ್ನು ಕ್ಲಿಕ್ ಮಾಡಿ :

Sunday, May 16, 2010

ಸಾಯಿ ಭಜನ ಗಾಯಕರು - ಧಿಂಗ್ರ ಬ್ರದರ್ಸ್ (ರಾಜೇಶ್ ಧಿಂಗ್ರ ಮತ್ತು ಹರ್ಷ್ ಧಿಂಗ್ರ) - ಕೃಪೆ - ಸಾಯಿ ಅಮೃತಧಾರಾ.ಕಾಂ


ಧಿಂಗ್ರ ಬ್ರದರ್ಸ್ (ರಾಜೇಶ್ ಧಿಂಗ್ರ ಮತ್ತು ಹರ್ಷ್ ಧಿಂಗ್ರ) ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು ಹಾಗೂ ಭಜನ ಗಾಯಕರು. ಇವರು ತಮ್ಮ ಸಣ್ಣ ವಯಸ್ಸಿನಿಂದಲೇ ಸಾಯಿಬಾಬಾರವರ ಕೃಪೆಯಿಂದ ಭಜನೆಗಳನ್ನು ಹಾಡುತ್ತಿದ್ದಾರೆ, ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಇವರು ತಮ್ಮ ಸಂಗೀತಾಭ್ಯಾಸವನ್ನು ಪ್ರಸಿದ್ದ ಸಿತಾರ್ ವಾದಕ ಹಾಗೂ ಗಾಯಕರಾದ ಗುರುಜೀ ಶ್ರೀ ಪಂಚಾನನ್ ಸರ್ದಾರ್ಜಿ ಯವರ ಬಳಿ ಕಲಿತಿದ್ದಾರೆ.

ಧಿಂಗ್ರ ಬ್ರದರ್ಸ್ "ಸಾಯಿ ಭಜನ ಸಂಧ್ಯಾ" ಕಾರ್ಯಕ್ರಮವನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಸಮಾಧಿ ಮಂದಿರ, ದೆಹಲಿಯ ಲೋಧಿ ರಸ್ತೆಯ ಸಾಯಿಬಾಬಾ ಮಂದಿರ, ಗುರಗಾವ್ ನ ಸಾಯಿ ಕೆ ಆಂಗನ್ ಮತ್ತು ಭಾರತದ ಇನ್ನು ಹಲವು ಕಡೆ ಸೇರಿದಂತೆ ೩೦೦ ಕ್ಕೂ ಹೆಚ್ಚು ಕಡೆಗಳಲ್ಲಿ ನೀಡಿರುತ್ತಾರೆ.

ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇದೆ:

ವಿಳಾಸ : ವಿಕಾಸಪುರಿ, ನವದೆಹಲಿ-೧೧೦ ೦೧೮.

ದೂರವಾಣಿ : ರಾಜೇಶ್ ಧಿಂಗ್ರ - ೦೯೮೧೮೭೪೭೯೬೫ ಹರ್ಷ್ ಧಿಂಗ್ರ - ೦೯೮೧೧೨೪೦೩೦೧

ಇಮೇಲ್ : singer4_saibhajans@rediffmail.com

ವೆಬ್ ಸೈಟ್ : http://saibhajansandhya.com/

Saturday, May 15, 2010

ಸಾಯಿ ಭಜನ ಗಾಯಕ - ಶ್ರೀ. ದೀಪೇಂದರ್ ದತ್ತ (ದೀಪಕ್) ಶರ್ಮ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಶ್ರೀ ದೀಪೇಂದರ್ ದೀಪಕ್ ಶರ್ಮ ರವರು ದಿಲ್ಲಿಯ ಘರಾನಾ ಪರಂಪರೆಗೆ ಸೇರಿದ ಗಾಯಕರಾಗಿದ್ದಾರೆ. ಇವರು ತಮ್ಮ ಸಂಗೀತಭ್ಯಾಸವನ್ನು "ತಾನ ಸಾಮ್ರಾಟ್" ಎಂದು ಖ್ಯಾತರಾದ ಉಸ್ತಾದ್ ನಸೀರ್ ಅಹ್ಮದ್ ಖಾನ್ ಸಾಹೇಬ್ ರವರ ಮಾರ್ಗದರ್ಶನದಲ್ಲಿ ಕಲಿತರು. ಇವರು ೧೯೮೫ ರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತ ಬಂದಿರುತ್ತಾರೆ.

ಇವರು ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರೇಮಿಗಳನ್ನು ಸತತವಾಗಿ ಸಂತೋಷಪಡಿಸುತ್ತಿದ್ದಾರೆ. ಇವರು ಅನೇಕ ಭಜನೆಗಳನ್ನು ಸ್ವತಃ ರಚನೆ ಮಾಡಿರುತ್ತಾರೆ.  ಶ್ರೀಯುತ ಶರ್ಮರವರು ತು ಬಂಕ ತೇರಿ ಬಂಕಿ ನಜರಿಯ, ದಿವ್ಯ ಭಜನಾಮೃತ, ಬೃಂದಾವನ್ ಕೆ ರಾಧ ಶ್ಯಾಮ್, ಶ್ರೀ ಗೋವರ್ಧನ ಮಹಾರಾಜ, ಹೋರಿ ಖೇಲ್ ರಹೇ ನಂದಲಾಲ್, ರಾಗ್ ಔರ್ ತಾಲ್, ಆನಾ ರೇ ಮೋಹನ್ ಮೇರಿ ಗಲಿಯನ್ ಇನ್ನು ಹಲವಾರು ಭಜನೆಗಳ ಸಿಡಿಗಳನ್ನು ಹೊರತಂದಿದ್ದಾರೆ.

ಇವರ ಧರ್ಮಪತ್ನಿಯವರಾದ ಶ್ರೀಮತಿ. ಯುಕ್ತಿ ಶರ್ಮ ರವರು ಕೂಡ ಒಳ್ಳೆಯ ಗಾಯಕಿಯಾಗಿದ್ದು ಹಲವು ಕಾರ್ಯಕ್ರಮಗಳನ್ನು ನೀಡಿರುವುದಲ್ಲದೆ ತಮ್ಮ ಪತಿಯ ಕಾರ್ಯಕ್ರಮಗಳನ್ನು ನಿಯೋಜಿಸುವ ಹೊಣೆಯನ್ನು ಕೂಡ ಹೊತ್ತುಕೊಂಡಿದ್ದಾರೆ.

ಇವರ ಮಗಳಾದ ನೇಹಾ ಶರ್ಮ ಕೂಡ ತನ್ನ ಎಳೆಯ ವಯಸ್ಸಿನಿಂದ ಸಂಗೀತಾಭ್ಯಾಸವನ್ನು ತಂದೆಯವರ ಬಳಿ ಮಾಡುತ್ತ ಅನೇಕ ಕಾರ್ಯಕ್ರಮಗಳನ್ನು ಕೂಡ ನೀಡುತ್ತ ಬಂದಿದ್ದಾರೆ.

ಇವರ ಮಗನಾದ ಅನುಭವ ಶರ್ಮ ಒಳ್ಳೆಯ ತಬಲಾ ವಾದಕನಾಗಿದ್ದು ತನ್ನ ತಂದೆಯವರ ಜೊತೆ ತನ್ನ ಹತ್ತನೆಯ ವಯಸ್ಸಿನಿಂದ ಕಾರ್ಯಕ್ರಮಗಳನ್ನು ನೀಡುತ್ತ ಬಂದಿದ್ದಾರೆ.  

ಶ್ರೀಯುತ ಶರ್ಮ ರವರು "ದೇವಾಶ್ರಂ ಸಂಗೀತ ಮಹಾವಿದ್ಯಾಲಯ" ಎಂಬ ಪ್ರತಿಷ್ಟಿತ ಸಂಗೀತ ವಿದ್ಯಾಲಯವನ್ನು ದೆಹಲಿಯಲ್ಲಿ ೧೯೮೨ ರಿಂದ ನಡೆಸುತ್ತಾ ಅನೇಕ ಒಳ್ಳೆಯ ಗಾಯಕರನ್ನು ಸಮಾಜಕ್ಕೆ ನೀಡಿರುತ್ತಾರೆ.



ಇವರ ಸಂಪರ್ಕದ ವಿವರಗಳು ಕೆಳಕಂಡಂತೆ ಇವೆ:

ವಿಳಾಸ : ದೇವಾಶ್ರಂ ಸಂಗೀತ ಮಹಾವಿದ್ಯಾಲಯ, ೧/೬೩೮೪, ಬಲಬೀರ್ ನಗರ್ ಚೌಕಿ, ಶಹಧಾರ, ದೆಹಲಿ-೧೧೦ ೦೩೨.

ದೂರವಾಣಿ: ೯೧-೧೧-೨೨೩೨೦೨೪೮, ೯೧-೯೮೧೦೪೩೪೧೭೩

ವೆಬ್ ಸೈಟ್ : http://www.deependerdeepak.com/
ಸಾಯಿ ಭಜನ ಗಾಯಕಿ - ಶ್ರೀಮತಿ.ಭವತಾರಿಣಿ ಅನಂತರಾಮನ್ - ಕೃಪೆ - ಸಾಯಿ ಅಮೃತಧಾರಾ.ಕಾಂ 

ಶ್ರೀಮತಿ ಭವತಾರಿಣಿ ಅನಂತರಾಮನ್ ರವರು ಸಂಗೀತ ಕಲಾನಿಧಿ ಎಂದು ಹೆಸರು ಮಾಡಿರುವ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರ ಬಳಿ ೧೮ ವರ್ಷಗಳ ಕಾಲ ಸಂಗೀತಾಭ್ಯಾಸ ಮಾಡಿರುತ್ತಾರೆ. ಇವರು ಹೆಸರಾಂತ ವಾಗ್ಗೆಯಕಾರರಾದ ಶ್ರೀ. ಮಯುರಂ ವಿಶ್ವನಾಥ ಶಾಸ್ತ್ರಿಗಳ ವಂಶಸ್ಥರಾಗಿರುತ್ತಾರೆ. ಮನೆಯಲ್ಲಿ ಸಂಗೀತದ ವಾತಾವರಣವಿದ್ದುದರಿಂದ ಇವರಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತ ಬಹಳ ಬೇಗನೆ ಕಲಿಯಲು ಸಹಾಯವಾಯಿತು. ಆದರೆ ಭವತಾರಿಣಿಯವರು ಯಾವುದೇ ಸಾಂಪ್ರದಾಯಿಕ ಸಂಗೀತಾಭ್ಯಾಸ ಮಾಡದೇ ಕೇವಲ ತಮ್ಮ ಸ್ವಂತ ಪ್ರಯತ್ನದಿಂದಲೇ ಸಂಗೀತವನ್ನು ಕಲಿತರು.

ಭವತಾರಿಣಿಯವರು ಕೇವಲ ೫ ವರ್ಷದವರಿದ್ದಾಗ ಒಮ್ಮೆ ತಮ್ಮ ತಾಯಿ ಶ್ರೀಮತಿ.ನಳಿನಿಯವರ ಜೊತೆಯಲ್ಲಿ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರ ಸಂಗೀತ ಶಾಲೆಗೆ ಹೋಗಿದ್ದರು. ಆ ಎಳೆಯ ವಯಸ್ಸಿನಲ್ಲೇ  ಇವರ ಹಾಡುಗಾರಿಕೆಯನ್ನು ಕೇಳಿದ ಶ್ರೀಮತಿ ಡಿ.ಕೆ.ಪಟ್ಟಮ್ಮಾಳ್ ರವರು "ಈ ಮಗುವಿಗೆ ನಾನೇ ಗುರು" ಎಂದು ಹೇಳಿ ಭವತಾರಿಣಿಯವರನ್ನು ತಮ್ಮ ಶಿಷ್ಯಳಾಗಿ ಸ್ವೀಕರಿಸಿದರೆಂದು ಹೇಳಲಾಗುತ್ತದೆ.



ಇವರ ಸಂಪರ್ಕದ ವಿವರಗಳು ಈ ಕೆಳಕಂಡಂತೆ ಇವೆ:

ವಿಳಾಸ : ಎಇ-೧೩೨ (೮೦ ಡಿ), ೧ನೆ ಮಹಡಿ, ಶಾಂತಿ ಕಾಲೋನಿ, ಅಣ್ಣಾ ನಗರ್, ಚೆನ್ನೈ-೬೦೦ ೦೪೦.

ದೂರವಾಣಿ : ೯೧-೪೪-೨೬೨೦೨೨೮೯, ೦೯೮೪೧೫೦೪೦೯೯


ವೆಬ್ ಸೈಟ್ : http://bhavadhaarini.com/

ಆಲ್ಬಮ್ : ಸಾಯಿ ಸಮರ್ಪಣಂ, ಸಾಯಿ ವಂದನಂ, ಸಾಯಿ ಪೂಜಾ ವಿಧಾನಂ

Sunday, May 9, 2010

ಸಾಯಿ ಭಜನ ಗಾಯಕ - ಅನುಪ್ ಜಲೋಟ - ಕೃಪೆ - ಸಾಯಿ ಅಮೃತಧಾರಾ.ಕಾಂ 



ಅನುಪ್ ಜಲೋಟರವರು ತಮ್ಮ ಭಜನೆ ಹಾಗೂ ಘಜಲ್ ಗಳಿಗೆ ಪ್ರಪಂಚದಾದ್ಯಂತ ಮನೆಮಾತಾಗಿದ್ದಾರೆ. ಇವರು ತಮ್ಮ ಜೀವನವನ್ನೇ ಸಂಗೀತಕ್ಕಾಗಿ ಮೀಸಲಾಗಿಟ್ಟಿದ್ದಾರೆ. ಇವರ ತಂದೆಯವರಾದ ಶ್ರೀಯುತ ಪುರುಷೋತ್ತಮ್ ದಾಸ ಜಲೋಟರವರು ಕೂಡ ಒಳ್ಳೆಯ ಭಜನ ಗಾಯಕರಾಗಿದ್ದು ಇವರಿಗೆ ಮೊದಲ ಗುರುಗಳಾಗಿದ್ದರು. ಅನುಪ್ ಜಲೋಟರವರು ಹುಟ್ಟಿದ್ದು ನೈನಿಟಾಲ್ ನಲ್ಲಿ. ವ್ಯಾಸಂಗ ಮಾಡಿದ್ದು ಲಕ್ನೌ ನಲ್ಲಿ. ಇವರು ತಮ್ಮ ಸಂಗೀತ ಪಯಣವನ್ನು ಆಲ್ ಇಂಡಿಯಾ ರೇಡಿಯೋ ದಲ್ಲಿ ಗೋಷ್ಠಿ ಗಾಯಕರಾಗಿ ಪ್ರಾರಂಭಿಸಿದರು.

"ಭಾರತದ ಭಜನ್ ಸಾಮ್ರಾಟ್" ಎಂದು ಹೆಸರು ಪಡೆದಿರುವ ಅನುಪ್ ಜಲೋಟ ರವರು ತಮ್ಮ ದೈವಿಕ ಗಾಯನದಿಂದ ಎಲ್ಲ ಜನರನ್ನು ಹಾಗೂ ಭಕ್ತರನ್ನು ತಮ್ಮೆಡೆಗೆ ಸೆಳೆದಿದ್ದಾರೆ.

ಇವರ ಅನೇಕ ಸಂಗೀತದ ಆಲ್ಬಮ್ ಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ದಾಖಲೆಗಳನ್ನು ಸೃಷ್ಟಿಸಿ ಬಹಳ ಒಳ್ಳೆಯ ಹೆಸರನ್ನು ಗಳಿಸಿವೆ. ಇವರು ಹಿಂದಿ, ಗುಜರಾತಿ ಮತ್ತು ಬೆಂಗಾಲಿ ಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡಿರುತ್ತಾರೆ.

ವೈವಿಧ್ಯಮಯ ಸಂಗೀತಕ್ಕೆ ಹೆಸರಾದ ಅನುಪ್ ಜಲೋಟ ರವರು ಸದಾ ನಗುಮುಖದಿಂದ ಕೂಡಿದ್ದು ಪರೋಪಕಾರಿಗಳಾಗಿರುತ್ತಾರೆ. ಅನುಪ್ ಜಲೋಟರವರು  ಭಜನೆ ಹಾಗೂ ಘಜಲ್ ಗಳನ್ನು ಬಹಳ ಸುಲಲಿತವಾಗಿ ಹಾಗೂ ಸುಂದರವಾಗಿ ಹಾಡುತ್ತಾರೆ. ಇವರು ತಮ್ಮ ಮಧುರವಾದ ಹಾಗೂ ಶಕ್ತಿಯುತವಾದ ದನಿಯಿಂದ ಭಕ್ತರನ್ನು ಮತ್ತು ಜನರನ್ನು ತಮ್ಮೆಡೆ ಆಕರ್ಷಿಸಿದ್ದಾರೆ. ಇವರ ಭಜನ ಶೈಲಿಯನ್ನು ಕಂಡು ಜನರು ದಿಗ್ಮೂಡರಾಗಿದ್ದಾರೆ. ಇವರ ಮಧುರ ಧ್ವನಿಯು ಜನರ ಮನಸ್ಸಿಗೆ ಆಹ್ಲಾದವನ್ನು ಉಂಟು ಮಾಡುತ್ತದೆ.

ವಿಳಾಸ : ಮೋಹನ್ ನಿವಾಸ, ೫೬, ಕೇಲುಸ್ಕರ್ ರಸ್ತೆ, ಶಿವಾಜಿ ಪಾರ್ಕ್, ಮುಂಬೈ- ೪೦೦ ೦೨೮. ಮಹಾರಾಷ್ಟ್ರ.

ದೂರವಾಣಿ: ೯೧-೦೨೨-೨೪೪೫೩೨೩೨/೨೪೪೬೧೬೩೮,  ಶ್ರೀಯುತ ಭರತ್ ಓಜಾ - ಕಾರ್ಯದರ್ಶಿ - ೯೧-೯೭೦೨೨ ೮೮೩೭೭, ೯೧-೯೮೨೦೧ ೦೧೧೫೯ / ೦೯೮೨೧೦ ೬೯೮೦೯


ವೆಬ್ ಸೈಟ್ : http://www.anupjalota.in/

ಆಲ್ಬಮ್ : ಜೀವನ ನಯ್ಯ ಸಾಯಿ ಖಿವಯ್ಯ, ಮೇರೆ ಸಾಯಿ, ಸಾಯಿ ಪಾಲನ್ಹಾರ, ಸಾಯಿ ಸುಮಿರನ್, ಸಾಯಿ ಮಿಲನ್ ಕೀ ಆಶ್, ಶಿರಡಿ ಮೇ ಚಾರೋ ಧಾಮ್, ಜೀವನ ನಯ್ಯ ಸಾಯಿ ಕಿವಯ್ಯ, ಸಾಯಿ ಕೆ ಧರ್ ಪೆ, ಸಾಯಿ ರಾಮ್ (ಧುನ್) ಮತ್ತು ಇನ್ನು ಹಲವಾರು ಆಲ್ಬಮ್ ಗಳು.

ಸಾಯಿ ಭಜನೆ ಲಿಂಕ್ ಗಳು:  


ಕನ್ನಡ ಅನುವಾದ : ಶ್ರೀಕಂಠ ಶರ್ಮ