Sunday, January 18, 2015

ಮಹಾರಾಷ್ಟ್ರದ ಪುಣೆ ಜಿಲ್ಲೆಯ ನಾರಾಯಣಗಾವ್ ನ ಶಿರಡಿ ಸಾಯಿಬಾಬಾ ಮಂದಿರ - ದ್ವಾರಕಾಮಾಯಿ ಸಾಯಿಬಾಬಾ ಮಂದಿರ, ಸಾಯಿ ಭಕ್ತ ಮಂಡಲ ಟ್ರಸ್ಟ್ (ನೋಂದಣಿ), ನಾರಾಯಣಗಾವ್ - 410 504, ಜುನ್ನರ್ ತಾಲೂಕು, ಪುಣೆ ಜಿಲ್ಲೆ, ಮಹಾರಾಷ್ಟ್ರ, ಭಾರತ

ಮಂದಿರದ ವಿಶೇಷತೆಗಳು: 

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ಈ ಮಂದಿರವನ್ನು 2008ನೇ ಇಸವಿಯ ಅಕ್ಟೋಬರ್ ತಿಂಗಳಿನ ಪವಿತ್ರ ವಿಜಯದಶಮಿಯ ದಿನದಂದು ಹಿಮಾಲಯದ ಮೌನಿ ಬಾಬಾ ಮತ್ತು ಸಾಯಿ ಮಹಾಭಕ್ತ ನಾನಾ ಸಾಹೇಬ್ ನಿಮೋಣ್ಕರ್ ರವರ ಮರಿಮಗನಾದ ನಂದಕುಮಾರ್ ರೇವನ್ನಾಥ್ ದೇಶಪಾಂಡೆ ನಿಮೋಣ್ಕರ್ ರವರುಗಳು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.

ಈ ಮಂದಿರವನ್ನು ಶ್ರೀ. ವಿನಾಯಕ ರಸಾಲ್ ಎಂಬ ಸಾಯಿಭಕ್ತರು ಮಂದಿರದ ಟ್ರಸ್ಟ್ ಗೆ ದಾನವಾಗಿ ನೀಡಿರುವ  ಅರ್ಧ ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.

ಶ್ರೀ.ಶಿವಾಜಿ ಬೋರಾಡೆಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.

ಮಂದಿರದಲ್ಲಿ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ಸಾಯಿ ಭಕ್ತರು ನೋಡಬಹುದು. ಅಲ್ಲದೇ ಕಪ್ಪು ಶಿಲೆಯ ನಂದಿ ಹಾಗೂ ಪವಿತ್ರ ಧುನಿಯನ್ನು ಸಹ ಮಂದಿರದಲ್ಲಿ ಸ್ಥಾಪಿಸಲಾಗಿದೆ. ಈ ನಂದಿಯ ವಿಗ್ರಹದ ಪ್ರತಿಷ್ಟಾಪನೆಯ ಬಗ್ಗೆ ಒಂದು ಸ್ವಾರಸ್ಯಕರವಾದ ಕಥೆಯಿದ್ದು ಅದು ಈ ರೀತಿಯಿದೆ: ಶ್ರೀ ಸಾಯಿಬಾಬಾರವರು ತಾವು ಸಮಾಧಿಯಾಗುವುದಕ್ಕೆ ಕೆಲವು ದಿನಗಳ ಹಿಂದೆ ಮಹಾಭಕ್ತ ಭೀಮಾಜಿ ಪಾಟೀಲರಿಗೆ ನಿಜವಾದ ನಂದಿಯೊಂದನ್ನು ನೀಡಿದ್ದರು. ಈ ನಂದಿಯು ಕೆಲವು ವರ್ಷಗಳ ಬಳಿಕ ಮರಣ ಹೊಂದಿತು. ಈ ನಂದಿಯ ಸಮಾಧಿಯನ್ನು ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಾಡಲಾಗಿದೆ ಹಾಗೂ ಆ ಸಮಾಧಿಯ ಮೇಲೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ. 






ಮಂದಿರದ ದಿನನಿತ್ಯದ ಕಾರ್ಯಕ್ರಮಗಳು 

ಮಂದಿರದ ಸಮಯ:

ಮಂದಿರವನ್ನು  ಪ್ರತಿದಿನ ಬೆಳಿಗ್ಗೆ 4:00 ರಿಂದ ಮಧ್ಯಾನ್ಹ  1:00 ಗಂಟೆಯವರೆಗೂ ಹಾಗೂ ಮಧ್ಯಾನ್ಹ 3:00 ರಿಂದ ರಾತ್ರಿ 11:00 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.

ಆರತಿಯ ಸಮಯ:

ಕಾಕಡಾ ಆರತಿ   : 4:00 AM
ಮಧ್ಯಾನ್ಹ ಆರತಿ : 12:00 
ಧೂಪಾರತಿ       :  06:00 PM
ಶೇಜಾರತಿ        : 10:30 PM

ವಿಶೇಷ ಉತ್ಸವದ ದಿನಗಳು: 

1.ಶ್ರೀರಾಮನವಮಿ.
2.ಗುರುಪೂರ್ಣಿಮೆ.
3.ವಿಜಯದಶಮಿ - ಮಂದಿರದ ವಾರ್ಷಿಕೋತ್ಸವ. 

ಮಂದಿರದ ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು: 

ಮಂದಿರದ ಟ್ರಸ್ಟ್ ನ ವತಿಯಿಂದ ನಾರಾಯಣಗಾವ್ ನ ಬಡವರಿಗೆ ಉಚಿತ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ. 
ಮಂದಿರದ ಟ್ರಸ್ಟ್ ನ ವತಿಯಿಂದ ಪುಣೆ ಮತ್ತು ಕೊಂಕಣ ಪ್ರದೇಶದಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪಾದಯಾತ್ರಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು  ಹಮ್ಮಿಕೊಳ್ಳಲಾಗುತ್ತಿದೆ. 

ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ: 


ಸ್ಥಳ: 

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ.

ವಿಳಾಸ:

ದ್ವಾರಕಾಮಾಯಿ ಸಾಯಿಬಾಬಾ ಮಂದಿರ, 
ಸಾಯಿ ಭಕ್ತ ಮಂಡಲ ಟ್ರಸ್ಟ್ (ನೋಂದಣಿ), 
ನಾರಾಯಣಗಾವ್ - 410 504,  
ಜುನ್ನರ್ ತಾಲೂಕು, 
ಪುಣೆ  ಜಿಲ್ಲೆ, 
ಮಹಾರಾಷ್ಟ್ರ, ಭಾರತ

ಸಂಪರ್ಕಿಸಬೇಕಾದ ವ್ಯಕ್ತಿಗಳು: 

ಶ್ರೀ.ಶಿವಾಜಿ ಬೋರಾಡೆ/ಶ್ರೀ.ಕಿರಣ್ ಬಾವು/ಶ್ರೀ. ಹರಿ ಓಂ ಬ್ರಹ್ಮೆ

ದೂರವಾಣಿ ಸಂಖ್ಯೆ: 

+91 98605 86582/|91 73878 51007/ +91 98603 89028/

ಮಾರ್ಗಸೂಚಿ:

ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ  ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ  ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4  ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಪುಣೆ-ನಾಸಿಕ್ ಹೆದ್ದಾರಿಯಲ್ಲಿ  ನೇರವಾಗಿ ಚಲಿಸಿ ನಾಸಿಕ್  ಫತಾಹ್ ನ ಬಳಿ ಬಲಭಾಗದ ರಸ್ತೆಗೆ ತಿರುಗಿ ನಂತರ ಅಲ್ಲಿಂದ ಸುಮಾರು 75 ಕಿಲೋಮೀಟರ್ ಕ್ರಮಿಸಿದರೆ ನಾರಾಯಣಗಾವ್ ಸಿಗುತ್ತದೆ.

ಕನ್ನಡ ಅನುವಾದ: ಶ್ರೀಕಂಠ ಶರ್ಮ 

No comments:

Post a Comment