ಮಂದಿರದ ವಿಶೇಷತೆಗಳು:
ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.
ಈ ಮಂದಿರವನ್ನು 2008ನೇ ಇಸವಿಯ ಅಕ್ಟೋಬರ್ ತಿಂಗಳಿನ ಪವಿತ್ರ ವಿಜಯದಶಮಿಯ ದಿನದಂದು ಹಿಮಾಲಯದ ಮೌನಿ ಬಾಬಾ ಮತ್ತು ಸಾಯಿ ಮಹಾಭಕ್ತ ನಾನಾ ಸಾಹೇಬ್ ನಿಮೋಣ್ಕರ್ ರವರ ಮರಿಮಗನಾದ ನಂದಕುಮಾರ್ ರೇವನ್ನಾಥ್ ದೇಶಪಾಂಡೆ ನಿಮೋಣ್ಕರ್ ರವರುಗಳು ಮಂದಿರದ ಟ್ರಸ್ಟ್ ನ ಸದಸ್ಯರುಗಳು ಹಾಗೂ ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ಈ ಮಂದಿರವನ್ನು ಶ್ರೀ. ವಿನಾಯಕ ರಸಾಲ್ ಎಂಬ ಸಾಯಿಭಕ್ತರು ಮಂದಿರದ ಟ್ರಸ್ಟ್ ಗೆ ದಾನವಾಗಿ ನೀಡಿರುವ ಅರ್ಧ ಎಕರೆಯಷ್ಟು ವಿಶಾಲವಾದ ಸ್ಥಳದಲ್ಲಿ ನಿರ್ಮಾಣ ಮಾಡಲಾಗಿರುತ್ತದೆ.
ಶ್ರೀ.ಶಿವಾಜಿ ಬೋರಾಡೆಯವರು ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿರುತ್ತಾರೆ. ಮಂದಿರದ ಟ್ರಸ್ಟ್ ನ ಸದಸ್ಯರುಗಳು ಮಂದಿರದ ದಿನ ನಿತ್ಯದ ಆಗುಹೋಗುಗಳನ್ನು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಮಂದಿರದಲ್ಲಿ ಆಳೆತ್ತರದ ದ್ವಾರಕಾಮಾಯಿ ಸಾಯಿಬಾಬಾರವರ ಭಾವಚಿತ್ರವನ್ನು ಸಾಯಿ ಭಕ್ತರು ನೋಡಬಹುದು. ಅಲ್ಲದೇ ಕಪ್ಪು ಶಿಲೆಯ ನಂದಿ ಹಾಗೂ ಪವಿತ್ರ ಧುನಿಯನ್ನು ಸಹ ಮಂದಿರದಲ್ಲಿ ಸ್ಥಾಪಿಸಲಾಗಿದೆ. ಈ ನಂದಿಯ ವಿಗ್ರಹದ ಪ್ರತಿಷ್ಟಾಪನೆಯ ಬಗ್ಗೆ ಒಂದು ಸ್ವಾರಸ್ಯಕರವಾದ ಕಥೆಯಿದ್ದು ಅದು ಈ ರೀತಿಯಿದೆ: ಶ್ರೀ ಸಾಯಿಬಾಬಾರವರು ತಾವು ಸಮಾಧಿಯಾಗುವುದಕ್ಕೆ ಕೆಲವು ದಿನಗಳ ಹಿಂದೆ ಮಹಾಭಕ್ತ ಭೀಮಾಜಿ ಪಾಟೀಲರಿಗೆ ನಿಜವಾದ ನಂದಿಯೊಂದನ್ನು ನೀಡಿದ್ದರು. ಈ ನಂದಿಯು ಕೆಲವು ವರ್ಷಗಳ ಬಳಿಕ ಮರಣ ಹೊಂದಿತು. ಈ ನಂದಿಯ ಸಮಾಧಿಯನ್ನು ದ್ವಾರಕಾಮಾಯಿ ಸಾಯಿಬಾಬಾ ಮಂದಿರದ ಆವರಣದಲ್ಲಿ ಮಾಡಲಾಗಿದೆ ಹಾಗೂ ಆ ಸಮಾಧಿಯ ಮೇಲೆ ಕಪ್ಪು ಶಿಲೆಯ ನಂದಿಯ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ಮಂದಿರದ ದಿನನಿತ್ಯದ ಕಾರ್ಯಕ್ರಮಗಳು
ಮಂದಿರದ ಸಮಯ:
ಮಂದಿರವನ್ನು ಪ್ರತಿದಿನ ಬೆಳಿಗ್ಗೆ 4:00 ರಿಂದ ಮಧ್ಯಾನ್ಹ 1:00 ಗಂಟೆಯವರೆಗೂ ಹಾಗೂ ಮಧ್ಯಾನ್ಹ 3:00 ರಿಂದ ರಾತ್ರಿ 11:00 ರವರೆಗೆ ಭಕ್ತರ ದರ್ಶನಕ್ಕಾಗಿ ತೆರೆದಿಡಲಾಗುತ್ತದೆ.
ಆರತಿಯ ಸಮಯ:
ಕಾಕಡಾ ಆರತಿ : 4:00 AM
ಮಧ್ಯಾನ್ಹ ಆರತಿ : 12:00
ಧೂಪಾರತಿ : 06:00 PM
ಶೇಜಾರತಿ : 10:30 PM
ವಿಶೇಷ ಉತ್ಸವದ ದಿನಗಳು:
1.ಶ್ರೀರಾಮನವಮಿ.
2.ಗುರುಪೂರ್ಣಿಮೆ.
3.ವಿಜಯದಶಮಿ - ಮಂದಿರದ ವಾರ್ಷಿಕೋತ್ಸವ.
ಮಂದಿರದ ಟ್ರಸ್ಟ್ ನ ಸಾಮಾಜಿಕ ಕಾರ್ಯಚಟುವಟಿಕೆಗಳು:
ಮಂದಿರದ ಟ್ರಸ್ಟ್ ನ ವತಿಯಿಂದ ನಾರಾಯಣಗಾವ್ ನ ಬಡವರಿಗೆ ಉಚಿತ ವೈದ್ಯಕೀಯ ನೆರವನ್ನು ನೀಡಲಾಗುತ್ತಿದೆ.
ಮಂದಿರದ ಟ್ರಸ್ಟ್ ನ ವತಿಯಿಂದ ಪುಣೆ ಮತ್ತು ಕೊಂಕಣ ಪ್ರದೇಶದಿಂದ ಶಿರಡಿಗೆ ಪಲ್ಲಕ್ಕಿಯನ್ನು ಹೊತ್ತುಕೊಂಡು ಬರುವ ಪಾದಯಾತ್ರಿಗಳಿಗೆ ಅನ್ನದಾನದ ವ್ಯವಸ್ಥೆಯನ್ನು ಹಮ್ಮಿಕೊಳ್ಳಲಾಗುತ್ತಿದೆ.
ಮಂದಿರದ ವಿಳಾಸ ಹಾಗೂ ಮಾರ್ಗಸೂಚಿ:
ಸ್ಥಳ:
ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4 ಕಿಲೋಮೀಟರ್ ದೂರದಲ್ಲಿ ಇರುತ್ತದೆ.
ವಿಳಾಸ:
ದ್ವಾರಕಾಮಾಯಿ ಸಾಯಿಬಾಬಾ ಮಂದಿರ,
ಸಾಯಿ ಭಕ್ತ ಮಂಡಲ ಟ್ರಸ್ಟ್ (ನೋಂದಣಿ),
ನಾರಾಯಣಗಾವ್ - 410 504,
ಜುನ್ನರ್ ತಾಲೂಕು,
ಪುಣೆ ಜಿಲ್ಲೆ,
ಮಹಾರಾಷ್ಟ್ರ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಶಿವಾಜಿ ಬೋರಾಡೆ/ಶ್ರೀ.ಕಿರಣ್ ಬಾವು/ಶ್ರೀ. ಹರಿ ಓಂ ಬ್ರಹ್ಮೆ
ದೂರವಾಣಿ ಸಂಖ್ಯೆ:
+91 98605 86582/|91 73878 51007/ +91 98603 89028/
ಮಾರ್ಗಸೂಚಿ:
ಈ ಶಿರಡಿ ಸಾಯಿಬಾಬಾ ಮಂದಿರವು ಮಹಾರಾಷ್ಟ್ರ ರಾಜ್ಯದ ಜುನ್ನರ್ ತಾಲೂಕು, ಪುಣೆ ಜಿಲ್ಲೆಯ ನಾರಾಯಣಗಾವ್ ಪಟ್ಟಣದ ಜಾನ್ಪೀರ್ ದರ್ಬಾರ್ ಹೋಟೆಲ್ ನ ಪಕ್ಕದಲ್ಲಿದೆ. ಮಂದಿರವು ನಾರಾಯಣಗಾವ್ ಬಸ್ ನಿಲ್ದಾಣದಿಂದ 4 ಕಿಲೋಮೀಟರ್ ದೂರದಲ್ಲಿ ಇರುತ್ತದೆ. ಪುಣೆ-ನಾಸಿಕ್ ಹೆದ್ದಾರಿಯಲ್ಲಿ ನೇರವಾಗಿ ಚಲಿಸಿ ನಾಸಿಕ್ ಫತಾಹ್ ನ ಬಳಿ ಬಲಭಾಗದ ರಸ್ತೆಗೆ ತಿರುಗಿ ನಂತರ ಅಲ್ಲಿಂದ ಸುಮಾರು 75 ಕಿಲೋಮೀಟರ್ ಕ್ರಮಿಸಿದರೆ ನಾರಾಯಣಗಾವ್ ಸಿಗುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ