ಇತ್ತೀಚಿನ ದಿನಗಳಲ್ಲಿ ಶ್ರೀ ಶಿರಡಿ ಸಾಯಿಬಾಬಾರವರ ಕೀರ್ತಿ ಮತ್ತು ವೈಭವ ಪ್ರಪಂಚದಾದ್ಯಂತ ಹರಡಿದೆ. ಅದಕ್ಕೆ ಶ್ರೀಲಂಕಾ ಕೂಡ ಹೊರತಾಗಿಲ್ಲ. ಶ್ರೀಲಂಕಾದ ಕೊಲಂಬೋ ನಗರದಲ್ಲಿರುವ ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರು ಇದೇ ತಿಂಗಳ 8ನೇ ಅಕ್ಟೋಬರ್ 2014, ಬುಧವಾರ ದಂದು ಶಿರಡಿಯಲ್ಲಿ ಮಾತನಾಡುತ್ತಾ ಶ್ರೀಲಂಕಾದಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳಿವೆ ಹಾಗೂ ಕೊಲಂಬೋ ನಗರದಲ್ಲಿ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಸಾಯಿಬಾಬಾ ಮಂದಿರ ತಲೆ ಎತ್ತುತ್ತಿದೆ ಎಂದು ಸುದ್ಧಿಗಾರರೊಂದಿಗೆ ತಿಳಿಸಿದರು.
ಶಿರಡಿ ಸಾಯಿ ಸೆಂಟರ್ ಆಫ್ ಶ್ರೀಲಂಕಾದ ಅಧ್ಯಕ್ಷರಾದ ಶ್ರೀ.ಎಸ್.ಎನ್.ಉದಯನಯಂರವರನ್ನು ಒಳಗೊಂಡ ಒಟ್ಟು 27 ಸಾಯಿ ಭಕ್ತರ ತಂಡವು ಶಿರಡಿಗೆ ಭೇಟಿ ನೀಡಿ ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ ಮೋಹನ್ ಯಾದವ್ ರವರು ತಂಡದ ಸದಸ್ಯರಿಗೆ ಸ್ವಾಗತವನ್ನು ಕೋರಿದರು. ಈ ಸಂದರ್ಭದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಶ್ರೀ.ಎಸ್.ಎನ್.ಉದಯನಯಂ ಮತ್ತು ಪ್ರತಿನಿಧಿಗಳಾದ ಶ್ರೀ.ಸೆಂಥಿಲ್ ರವರುಗಳು ಶ್ರೀಲಂಕಾದ ಜಾಫ್ನಾ, ಬಾಟಿಕುಲ, ಕ್ಯಾಂಡಿ ಮತ್ತು ಗೇಲೆ ಪ್ರಾಂತ್ಯಗಳಲ್ಲಿ ಸುಮಾರು 30 ಶಿರಡಿ ಸಾಯಿಬಾಬಾ ಮಂದಿರಗಳು ಈಗಾಗಲೇ ತಲೆ ಎತ್ತಿವೆ. ಈ ಮಂದಿರಗಳಿಗೆ ಭೇಟಿ ನೀಡುತ್ತಿರುವ ಸಾಯಿ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಈ ಎಲ್ಲಾ ಮಂದಿರಗಳಲ್ಲಿ ಶ್ರೀ ಸಾಯಿಬಾಬಾರವರ ದೈನಂದಿನ ಪೂಜಾ ವಿಧಿ ವಿಧಾನಗಳು ನಿಯಮಿತವಾಗಿ ನಡೆಯುತ್ತಲಿದೆ. ಅಲ್ಲದೇ, ಕೊಲಂಬೋ ನಗರವನ್ನು ಪ್ರತಿನಿಧಿಸುತ್ತಿರುವ ಮಂತ್ರಿಗಳಾದ ಶ್ರೀ.ಅರುಮುಂಗನ್ ರವರು ತಮ್ಮ ಸ್ವಂತ ಹಣದಿಂದ ಸುಮಾರು ಐದು ಎಕರೆ ವಿಸ್ತೀರ್ಣದಷ್ಟು ಬೃಹತ್ ಜಾಗವನ್ನು ಸಾಯಿ ಮಂದಿರದ ನಿರ್ಮಾಣಕ್ಕೋಸ್ಕರವಾಗಿ ತೆಗೆದುಕೊಂಡಿದ್ದಾರೆ. ಈ ಸಾಯಿಬಾಬಾ ಮಂದಿರವು ಕೊಲಂಬೋ ನಗರದಲ್ಲಿ ತಲೆ ಎತ್ತಲಿದ್ದು ಅತಿ ಶೀಘ್ರದಲ್ಲಿಯೇ ಪೂರ್ಣಗೊಳಿಸಿ ಸಾರ್ವಜನಿಕರ ದರ್ಶನಕ್ಕಾಗಿ ತೆರೆದಿಡಲಾಗುವುದು ಎಂದು ಅವರುಗಳು ಸುದ್ಧಿಗಾರರಿಗೆ ತಿಳಿಸಿದರು.
ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀ.ನಾಗರಾಜ್ ಅನ್ವೇಕರ್
ಆಂಗ್ಲ ಭಾಷೆಯಿಂದ ಕನ್ನಡಕೆ :ಶ್ರೀಕಂಠ ಶರ್ಮ
No comments:
Post a Comment