Monday, December 23, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಹೊಸ ವರ್ಷದ ಆಚರಣೆ - ಪತ್ರಿಕಾ ಪ್ರಕಟಣೆ - ಕೃಪೆ: ಸಾಯಿಅಮೃತಧಾರಾ.ಕಾಂ



ವರ್ಷದ ಕೊನೆಯ ರಜಾ ದಿನಗಳ ಪ್ರಯುಕ್ತ ಹಾಗೂ ಹೊಸ ವರ್ಷದ ಆಚರಣೆಯ ಅಂಗವಾಗಿ  31ನೇ ಡಿಸೆಂಬರ್ 2013, ಮಂಗಳವಾರ ದಂದು ರಾತ್ರಿಯಿಡಿ ಸಮಾಧಿ ಮಂದಿರವನ್ನು ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ ಕಾರಣ, 25ನೇ ಡಿಸೆಂಬರ್ 2013 ರಿಂದ  1ನೇ ಜನವರಿ 2014 ರವರೆಗೆ ವಿಐಪಿ ಹಾಗೂ ವಿವಿಐಪಿ ಪಾಸ್ ಗಳನ್ನು ನೀಡಲಾಗುವುದಿಲ್ಲ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸುದ್ದಿಗಾರರಿಗೆ ತಿಳಿಸಿದರು. 

ಪ್ರತಿವರ್ಷ  ಹೊಸ ವರ್ಷದ ಪ್ರಾರಂಭದಲ್ಲಿ ಸಾಯಿಬಾಬಾರವರ ದರ್ಶನವನ್ನು ಪಡೆಯಲು ಶಿರಡಿಗೆ ಬರುವ ಭಕ್ತರ ಸಂಖ್ಯೆ ಬಹಳ ಹೆಚ್ಚಾಗಿರುತ್ತದೆ. ಹಾಗೆ ಬರುವ ಎಲ್ಲಾ ಭಕ್ತರಿಗೆ ದರ್ಶನದ ಸೌಲಭ್ಯ ದೊರಕಿಸಿಕೊಡಲು ಹಾಗೂ ಭಕ್ತರ ಜನದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ 31ನೇ ಡಿಸೆಂಬರ್ 2013, ಮಂಗಳವಾರ ದಂದು ರಾತ್ರಿಯಿಡಿ ಸಮಾಧಿ ಮಂದಿರವನ್ನು ದರ್ಶನಕ್ಕಾಗಿ ತೆರೆದಿಡಲಾಗುತ್ತದೆ. ಆದ್ದರಿಂದ 31ನೇ ಡಿಸೆಂಬರ್ 2013 ರಂದು ರಾತ್ರಿ ಶೇಜಾರತಿ ಹಾಗೂ  1ನೇ ಜನವರಿ 2014 ರಂದು ಬೆಳಗ್ಗೆ  ಕಾಕಡಾ ಆರತಿ ಕಾರ್ಯಕ್ರಮವಿರುವುದಿಲ್ಲ.  31ನೇ ಡಿಸೆಂಬರ್ 2013 ರಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 6.30 ರಿಂದ ರಾತ್ರಿ 8.30  ರವರೆಗೆ  ಮುಂಬೈನ ಪ್ರಸಿದ್ಧ ಕಲಾವಿದರಾದ ಶ್ರೀ.ಸಚ್ಚಿದಾನಂದ ಅಪ್ಪಾರವರಿಂದ ಭಕ್ತಿ ಸಂಗೀತ ಕಾರ್ಯಕ್ರಮವಿರುತ್ತದೆ. ರಾತ್ರಿ 8.45 ರಿಂದ 10.15 ರವರೆಗೆ ಶಿರಡಿಯ ಕಲಾವಿದರುಗಳಾದ ಶ್ರೀ.ಪಾರಸ್ ಜೈನ್, ಶ್ರೀ.ಪ್ರವೀಣ್ ಮಹಾಮುನಿ ಹಾಗೂ ಶ್ರೀ.ಜಿಮ್ಮಿ ಶರ್ಮ ರವರುಗಳಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ ಹಾಗೂ ರಾತ್ರಿ  10.30 ರಿಂದ 12.00 ರವರೆಗೆ ಥಾಣೆಯ ಜಗದೀಶ್ ಮಾರುತಿ ಪಾಟೀಲ್  ರವರಿಂದ ಸಾಯಿ ಭಜನೆಯ ಕಾರ್ಯಕ್ರಮವಿರುತ್ತದೆ ಎಂದು ಶ್ರೀ.ಅಜಯ್ ಮೋರೆಯವರು ತಿಳಿಸಿದರು. 

ಸಾಯಿ ಭಕ್ತರ ಹಿತದೃಷ್ಠಿಯಿಂದ ಸಮಾಧಿ ಮಂದಿರದ ಪ್ರಾಂಗಣದಲ್ಲಿ ಪಟಾಕಿ ಹಚ್ಚುವುದನ್ನು ಹಾಗೂ ಸಂಗೀತ ವಾದ್ಯಗಳನ್ನು ತರುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು ಸಾಯಿಭಕ್ತರು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಈ ಮುಖಾಂತರ ಮನವಿ ಮಾಡಿಕೊಳ್ಳಲಾಗಿದೆ.

ಮರಾಠಿಯಿಂದ ಆಂಗ್ಲ ಭಾಷೆಗೆ: ಶ್ರೀಮತಿ.ಸುವರ್ಣ ನಾಗರಾಜ್ ಅನ್ವೇಕರ್  
ಆಂಗ್ಲ ಭಾಷೆಯಿಂದ ಕನ್ನಡಕ್ಕೆ: ಶ್ರೀಕಂಠ ಶರ್ಮ

No comments:

Post a Comment