ದೇವಾಲಯದ ವಿಶೇಷತೆಗಳು:
ಈ ದೇವಾಲಯವು ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಪಟ್ಟಣದ ಎಂ.ಜಿ.ರಸ್ತೆಯ ಮುನಿಸಿಪಲ್ ಲೇಔಟ್ ನಲ್ಲಿರುವ ಮಕ್ಕಳ ಉದ್ಯಾನವನದ ಪಕ್ಕದಲ್ಲಿ ಇರುತ್ತದೆ. ಈ ದೇವಾಲಯವನ್ನು ಚಿಕ್ಕಬಳ್ಳಾಪುರ ನಗರಸಭೆಯವರು ದೇವಾಲಯದ ಟ್ರಸ್ಟ್ ಗೆ ನೀಡಿರುವ 60x100 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗಿದೆ.
ಸಿದ್ಧಿವಿನಾಯಕ ದೇವಾಲಯದ ಭೂಮಿ ಪೂಜೆಯನ್ನು 14ನೇ ಅಕ್ಟೋಬರ್ 2000 ದಂದು ನೆರವೇರಿಸಲಾಯಿತು.
ಮೊದಲಿಗೆ ಸಿದ್ಧಿವಿನಾಯಕ ದೇವಾಲಯದ ಉದ್ಘಾಟನೆಯನ್ನು 28ನೇ ಫೆಬ್ರವರಿ 2003 ರಂದು ನೆರವೇರಿಸಲಾಯಿತು.ಸಿದ್ಧಿವಿನಾಯಕ ದೇವಾಲಯದ ಗರ್ಭಗುಡಿಯಲ್ಲಿ ಸುಮಾರು 3 ಅಡಿ ಎತ್ತರದ ಕಪ್ಪು ಶಿಲೆಯ ಸಿದ್ಧಿವಿನಾಯಕನ ವಿಗ್ರಹವನ್ನು ಸ್ಥಾಪಿಸಲಾಯಿತು ಹಾಗೂ ದಿನನಿತ್ಯದ ಪೂಜಾ ಕೈಂಕರ್ಯಗಳನ್ನು ಪ್ರಾರಂಭ ಮಾಡಲಾಗುತ್ತಿತ್ತು. ಸಿದ್ಧಿವಿನಾಯಕ ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿ ಸುಮಾರು 2-1/2 ಅಡಿ ಎತ್ತರದ ಪಂಚಲೋಹದ ಗಣೇಶನ ವಿಗ್ರಹವನ್ನು ಇರಿಸಲಾಗಿದ್ದು ಈ ವಿಗ್ರಹವನ್ನು ಸಂಕಷ್ಟ ಚತುರ್ಥಿಯಂದು ಹಾಗೂ ವಿಶೇಷ ಉತ್ಸವದ ದಿನಗಳಂದು ಪೂಜೆಗೆ ಬಳಸಲಾಗುತ್ತದೆ.

ಶಿರಡಿ ಸಾಯಿಬಾಬಾ ದೇವಾಲಯದ ಉದ್ಘಾಟನೆಯನ್ನು 28ನೇ ನವೆಂಬರ್ 2013 ರಂದು ಟ್ರಸ್ಟ್ ನ ಸದಸ್ಯರುಗಳು ಸಾವಿರಾರು ಸ್ಥಳೀಯ ಸಾಯಿ ಭಕ್ತರ ಸಮ್ಮುಖದಲ್ಲಿ ನೆರವೇರಿಸಿರುತ್ತಾರೆ.
ದೇವಾಲಯದ
ಟ್ರಸ್ಟ್ ನ ಆಡಳಿತ ಮಂಡಳಿಯ ಸದಸ್ಯರುಗಳು ದೇವಾಲಯದ ದಿನನಿತ್ಯದ ಆಗುಹೋಗುಗಳನ್ನು ಮತ್ತು
ಅಭಿವೃದ್ಧಿ ಕಾರ್ಯಗಳನ್ನು ಬಹಳ ಅಚ್ಚುಕಟ್ಟಾಗಿ ನೋಡಿಕೊಳ್ಳುತ್ತಿದ್ದಾರೆ.
ಸಿದ್ಧಿ ವಿನಾಯಕ ದೇವಾಲಯದ ಗರ್ಭಗುಡಿಯ ಪಕ್ಕದಲ್ಲಿರುವ ಖಾಲಿ ಸ್ಥಳದಲ್ಲಿ 3 ಅಡಿ ಎತ್ತರದ ಸುಂದರ ಅಮೃತಶಿಲೆಯ ಸಾಯಿಬಾಬಾರವರ ವಿಗ್ರಹವನ್ನು ಸ್ಥಾಪಿಸಲಾಗಿದೆ. ಅಲ್ಲದೇ, ಸಾಯಿಬಾಬಾರವರ ವಿಗ್ರಹದ ಎದುರುಗಡೆ ಇರುವಂತೆ ಅಮೃತಶಿಲೆಯ ಪಾದುಕೆಗಳನ್ನು ಕೂಡ ಸ್ಥಾಪಿಸಲಾಗಿದೆ.
ಶಿರಡಿ ಸಾಯಿಬಾಬಾ ದೇವಾಲಯದ ಪಕ್ಕದಲ್ಲಿ ನಿರ್ಮಿಸಲಾಗಿರುವ ದೇವಾಲಯದ ಗರ್ಭಗುಡಿಯಲ್ಲಿ ಕಪ್ಪು ಶಿಲೆಯ ನವಗ್ರಹ ದೇವರುಗಳ ವಿಗ್ರಹವನ್ನು ಪ್ರತಿಷ್ಟಾಪಿಸಲಾಗಿದೆ.
ದೇವಾಲಯದ ಕಾರ್ಯಚಟುವಟಿಕೆಗಳು:
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ : 06:30 ರಿಂದ 12:00.
ಸಂಜೆ : 05:30 ರಿಂದ 08:30.
ಆರತಿಯ ಸಮಯ:
ಕಾಕಡಾ ಆರತಿ : 06:30 ಗಂಟೆ
ದಿನನಿತ್ಯದ ಕಾರ್ಯಕ್ರಮಗಳು:
ದೇವಾಲಯದ ಸಮಯ:
ಬೆಳಿಗ್ಗೆ : 06:30 ರಿಂದ 12:00.
ಸಂಜೆ : 05:30 ರಿಂದ 08:30.
ಆರತಿಯ ಸಮಯ:
ಕಾಕಡಾ ಆರತಿ : 06:30 ಗಂಟೆ
ಮಧ್ಯಾನ್ಹ ಆರತಿ:12:00 ಗಂಟೆ
ಧೂಪಾರತಿ : 06:00 ಗಂಟೆ
ಧೂಪಾರತಿ : 06:00 ಗಂಟೆ
ಶೇಜಾರತಿ : 08:00 ಗಂಟೆ
ಪ್ರತಿ ತಿಂಗಳ ಬಹುಳ ಚತುರ್ಥಿಯಂದು ಸಂಜೆ 06:30 ರಿಂದ 08:00 ರವರಗೆ ಸಂಕಷ್ಟ ಚತುರ್ಥಿ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 30/- ರೂಪಾಯಿಗಳು.
ಪ್ರತಿ ತಿಂಗಳ ಹುಣ್ಣಿಮೆಯಂದು ಸಂಜೆ 06:30 ರಿಂದ 08:00 ರವರಗೆ ಶ್ರೀ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಳ್ಳಲಾಗುತ್ತದೆ. ಸೇವಾ ಶುಲ್ಕ 30/- ರೂಪಾಯಿಗಳು.
ವಿಶೇಷ ಉತ್ಸವದ ದಿನಗಳು:
ದೇವಾಲಯದ ವಾರ್ಷಿಕೋತ್ಸವ ಪ್ರತಿ ವರ್ಷ 28ನೇ ಫೆಬ್ರವರಿಯಂದು.
ಗುರುಪೂರ್ಣಿಮೆ.

ವಿನಾಯಕ ಚತುರ್ಥಿ.
ಶ್ರೀರಾಮನವಮಿ.
ವಿಜಯದಶಮಿ.
ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಚಟುವಟಿಕೆಗಳು:
ದೇವಾಲಯದ ಟ್ರಸ್ಟ್ ನ ಆಡಳಿತ ಮಂಡಳಿಯು ಮಕ್ಕಳಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿವರ್ಷದ ಗಾಂಧಿ ಜಯಂತಿಯಂದು ಬಡಾವಣೆಯನ್ನು ಶುಚಿಗೊಳಿಸುವ "ಶ್ರಮದಾನ" ಕಾರ್ಯಕ್ರಮ, ಮತ್ತು ರಕ್ತದಾನ ಶಿಬಿರಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳುತ್ತಾ ಬಂದಿರುತ್ತದೆ.
ದೇಣಿಗೆಗೆ ಮನವಿ:
ದೇವಾಲಯದ ಟ್ರಸ್ಟ್
ತಾನು ನಿಯಮಿತವಾಗಿ ಹಮ್ಮಿಕೊಳ್ಳುತ್ತಿರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಾಮಾಜಿಕ ಕಾರ್ಯಚಟುವಟಿಕೆಗಳಿಗಾಗಿ ಹಾಗೂ
ದೇವಾಲಯದ ಅಭಿವೃದ್ಧಿ ಕಾರ್ಯಗಳಿಗಾಗಿ ದೇಣಿಗೆಯನ್ನು ಸ್ವೀಕರಿಸುತ್ತದೆ. ದೇಣಿಗೆಯನ್ನು
ನೀಡಲು ಬಯಸುವ ಸಾಯಿಭಕ್ತರು "ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್ (ನೋಂದಣಿ)", ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಎ.ಪಿ.ಎಂ.ಸಿ ಶಾಖೆ, ಎಮ್.ಜಿ.ರಸ್ತೆ, ಚಿಕ್ಕಬಳ್ಳಾಪುರ, ಚಾಲ್ತಿ ಖಾತೆ ಸಂಖ್ಯೆ: 64026998693 ಐ.ಎಫ್.ಎಸ್.ಸಿ. ಸಂಖ್ಯೆ:SBMY0040414, ಇವರಿಗೆ ಸಂದಾಯವಾಗುವಂತೆ ಹಣವನ್ನು ನಗದು, ಚೆಕ್ ಅಥವಾ ಡಿಮ್ಯಾಂಡ್ ಡ್ರಾಫ್ಟ್ ಮುಖಾಂತರವಾಗಿ ಕಳುಹಿಸಬಹುದಾಗಿದೆ.
ದೇವಾಲಯದ ವಿಳಾಸ ಮತ್ತು ಮಾರ್ಗಸೂಚಿ:
ಸ್ಥಳ:
ಎಂ.ಜಿ.ರಸ್ತೆಯ ಮುನಿಸಿಪಲ್ ಲೇಔಟ್ ನ ಮಕ್ಕಳ ಉದ್ಯಾನವನದ ಪಕ್ಕ.
ವಿಳಾಸ:
ಶ್ರೀ ಸಿದ್ಧಿವಿನಾಯಕ ಶ್ರೀ ಶಿರಡಿ ಸಾಯಿಬಾಬಾ ಮಂದಿರ,
ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್ (ನೋಂದಣಿ),
ಮುನಿಸಿಪಲ್ ಲೇಔಟ್, 6ನೇ ವಾರ್ಡ್, ಎಂ.ಜಿ.ರಸ್ತೆ,
ಚಿಕ್ಕಬಳ್ಳಾಪುರ-562 101,
ಕರ್ನಾಟಕ, ಭಾರತ
ಶ್ರೀ ಸಿದ್ಧಿವಿನಾಯಕ ದೇವಾಲಯ ಟ್ರಸ್ಟ್ (ನೋಂದಣಿ),
ಮುನಿಸಿಪಲ್ ಲೇಔಟ್, 6ನೇ ವಾರ್ಡ್, ಎಂ.ಜಿ.ರಸ್ತೆ,
ಚಿಕ್ಕಬಳ್ಳಾಪುರ-562 101,
ಕರ್ನಾಟಕ, ಭಾರತ
ಸಂಪರ್ಕಿಸಬೇಕಾದ ವ್ಯಕ್ತಿಗಳು:
ಶ್ರೀ.ಎಲ್. ರವಿ/ ಶ್ರೀ.ಆರ್.ಸಂತೋಷ್/ ಶ್ರೀ.ಆರ್.ಸಂದೀಪ್/ಶ್ರೀ.ಸಿ.ಎಲ್. ಹರೀಶ್/ ಶ್ರೀ.ಸಿ.ಎಲ್. ರಂಜಿತ್/ ಶ್ರೀ.ಕೆ.ಎನ್. ಮಂಜುನಾಥ್
ದೂರವಾಣಿ ಸಂಖ್ಯೆಗಳು:
+91 87108 32521/+91 98804 24527/91 90365 59976/+91 98457 58884/+91 97432 25331/+91 99809 88140
ಇ-ಮೈಲ್ ವಿಳಾಸ:
ssvssbt@gmail.com
ಮಾರ್ಗಸೂಚಿ:
ದೇವಾಲಯವು ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿದೆ. ದೇವಾಲಯವು ಗೌರಿಬಿದನೂರಿಗೆ ಹೋಗುವ ದಾರಿಯಲ್ಲಿರುವ ಎಂ.ಜಿ.ರಸ್ತೆಯ ಮುನಿಸಿಪಲ್ ಬಡಾವಣೆಯಲ್ಲಿರುವ ಲಿಯೋಕರ್ ಬಿಲ್ಡಿಂಗ್ ಹಾಗೂ ಓವರ್ ಹೆಡ್ ಟ್ಯಾಂಕ್ ಹತ್ತಿರದಲ್ಲಿ ಹಾಗೂ ಮಕ್ಕಳ ಉದ್ಯಾನವನದ ಪಕ್ಕದಲ್ಲಿ ಇರುತ್ತದೆ.ಚಿಕ್ಕಬಳ್ಳಾಪುರ ಬಸ್ ನಿಲ್ದಾಣದಿಂದ ಹೇರಳವಾಗಿ ನಗರ ಬಸ್ ಗಳು ಹಾಗೂ ಆಟೋಗಳು ಸಿಗುತ್ತವೆ. ಎ.ಪಿ.ಎಮ್.ಸಿ/ಮುನಿಸಿಪಲ್ ಬಡಾವಣೆಯ ಬಸ್ ನಿಲ್ದಾಣದಲ್ಲಿ ಇಳಿದು 2 ನಿಮಿಷ ನಡೆದರೆ ದೇವಾಲಯ ಸಿಗುತ್ತದೆ.
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment