Sunday, November 3, 2013

ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸ್ಥಳೀಯ ನಿವಾಸಿಗಳಿಗೆ ಮನವಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 2ನೇ ನವೆಂಬರ್ 2013, ಶನಿವಾರ ದಂದು ಪತ್ರಿಕಾ ಪ್ರಕಟಣೆಯನ್ನು ನೀಡಿ ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ಸಾಯಿಬಾಬಾ ಸಮಾಧಿ ಮಂದಿರ ಹಾಗೂ ದೇವಾಲಯದ ಪ್ರಾಂಗಣದ ಒಳಗಡೆ ತರಬಾರದೆಂದು ಶಿರಡಿ ಪಟ್ಟಣದ ನಿವಾಸಿಗಳಿಗೆ  ವಿನಂತಿ ಮಾಡಿದೆ. ಶಿರಡಿ ಸಾಯಿಬಾಬಾ ಸಂಸ್ಥಾನದ ಪರವಾಗಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆ ಮತ್ತು ಇತರ ಸಮಿತಿ ಸದಸ್ಯರುಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಸಾಯಿಬಾಬಾ ಮಂದಿರದ ಸುರಕ್ಷತೆಗಾಗಿ ಶಿರಡಿ ನಿವಾಸಿಗಳ ಸಹಕಾರವನ್ನು ಕೋರಿದ್ದಾರೆ. 

"ಸಾಯಿಬಾಬಾ ಮಂದಿರಕ್ಕೆ ಬರುವ ಶಿರಡಿ ಪಟ್ಟಣದ ಎಲ್ಲಾ ನಿವಾಸಿಗಳು ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ಮಂದಿರದ ಸುರಕ್ಷತೆಯ ದೃಷ್ಟಿಯಿಂದ ಸಾಯಿಬಾಬಾ ಸಮಾಧಿ ಮಂದಿರ ಹಾಗೂ ದೇವಾಲಯದ ಪ್ರಾಂಗಣದ ಒಳಗಡೆ ತರಬಾರದು; ದಿನೇ ದಿನೇ ದೇಶದ ಎಲ್ಲೆಡೆ ಹೆಚ್ಚುತ್ತಿರುವ ಉಗ್ರರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಶಿರಡಿ ಸಾಯಿಬಾಬಾ ಸಂಸ್ಥಾನವು  ಈ ಭದ್ರತಾ ಕ್ರಮಗಳನ್ನು ಕೈಗೊಂಡಿದೆ; ಶಿರಡಿಯ ಎಲ್ಲಾ ನಿವಾಸಿಗಳು ಈ ವಿಷಯದಲ್ಲಿ ಸಹಕಾರ ನೀಡಬೇಕು; ದೇವಾಲಯದ ಭದ್ರತೆಯ ದೃಷ್ಟಿಯಿಂದ ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ದೇವಾಲಯದ ಆವರಣದ ಒಳಗಡೆ ತರದಂತೆ ನಿರ್ಬಂಧ ಹೇರಲಾಗಿದೆ; ಆದ ಕಾರಣ, ಶಿರಡಿಯ ಎಲ್ಲಾ ನಿವಾಸಿಗಳನ್ನು ದೇವಾಲಯದ ಎಲ್ಲಾ ನಾಲ್ಕೂ ಗೇಟ್ ಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತದೆ" ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಶಿರಡಿ ಸಾಯಿಬಾಬಾ ಸಂಸ್ಥಾನದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶಿರಡಿಯ ಎಲ್ಲಾ ನಿವಾಸಿಗಳೂ ಈ ವಿಷಯದಲ್ಲಿ ತುಂಬು ಹೃದಯದಿಂದ ಸಹಕರಿಸಬೇಕೆಂದು ಶ್ರೀ. ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment