Saturday, November 30, 2013

ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಸೋನಾಲಿ ಕುಲಕರ್ಣಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಸೋನಾಲಿ ಕುಲಕರ್ಣಿಯವರು ಇದೇ ತಿಂಗಳ 30ನೇ  ನವೆಂಬರ್  2013, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.
 
 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಸೋನಾಲಿ ಕುಲಕರ್ಣಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.
 
 
ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 29, 2013

ಚನ್ನೈನ ಸಾಯಿ ಭಕ್ತೆಯಿಂದ ಸಾಯಿಬಾಬನಿಗೆ ನಲವತ್ತು ಲಕ್ಷ ರೂಪಾಯಿಗಳ ಕಾಣಿಕೆ - ಕೃಪೆ: ಕೃಪೆ: ಸಾಯಿಅಮೃತಧಾರಾ.ಕಾಂ

ಚನ್ನೈನ ಸಾಯಿ ಭಕ್ತೆ ಶ್ರೀಮತಿ. ಸರಳಾ ದೇವಿಯವರು ಇದೇ ತಿಂಗಳ 29ನೇ  ನವೆಂಬರ್  2013, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬನಿಗೆ 40,000,00/- (ನಲವತ್ತು ಲಕ್ಷ) ರೂಪಾಯಿಗಳ ಕಾಣಿಕೆಯನ್ನು ಅರ್ಪಿಸಿದರು. ಅವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು. 

 
ಕನ್ನಡ ಅನುವಾದ: ಶ್ರೀಕಂಠ ಶರ್ಮ

ಮಹಾರಾಷ್ಟ್ರ ರಾಜ್ಯದ ಜಲ ಸಂಪನ್ಮೂಲ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ  ಜಲ ಸಂಪನ್ಮೂಲ ಸಚಿವರಾದ ಶ್ರೀ.ಶಶಿಕಾಂತ್ ಶಿಂಧೆಯವರು ಇದೇ ತಿಂಗಳ 29ನೇ  ನವೆಂಬರ್  2013, ಶುಕ್ರವಾರ ದಂದು ತಮ್ಮ ಧರ್ಮಪತ್ನಿಯವರೊಂದಿಗೆ ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಜಲ ಸಂಪನ್ಮೂಲ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, November 28, 2013

ಎಸ್. ಕೆ.ವಿ. ಫಿಲಂಸ್ ನ ವತಿಯಿಂದ ಶಿರಡಿಯಲ್ಲಿ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭದ ಆಯೋಜನೆ - ಕೃಪೆ: ಸಾಯಿಅಮೃತಧಾರಾ.ಕಾಂ


ಎಸ್. ಕೆ.ವಿ. ಫಿಲಂಸ್  ಇದೇ ತಿಂಗಳ 28ನೇ ನವೆಂಬರ್ 2013, ಗುರುವಾರ ದಂದು ಮಧ್ಯಾನ್ಹ 3:30 ಕ್ಕೆ ಶಿರಡಿಯ ಸಮಾಧಿ ಮಂದಿರದ ಆವರಣದಲ್ಲಿ ತನ್ನ ಹೊಸ ಹಿಂದಿ ಚಲನಚಿತ್ರ "ಶಿರಡಿ ಜೈ ಸಾಯಿರಾಂ" ನ ಧ್ವನಿಸುರಳಿ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿದೆ. 

ಚಲನಚಿತ್ರದ ಧ್ವನಿಸುರಳಿಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಬಿಡುಗಡೆ ಮಾಡಲಿದ್ದು ಸಮಾರಂಭದ ಅಧ್ಯಕ್ಷತೆಯನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ಶ್ರೀ.ಮೋಹನ್ ಯಾದವ್ ರವರು ವಹಿಸಲಿದ್ದಾರೆ. 

 
ಚಲನಚಿತ್ರವನ್ನು ಶ್ರೀಮತಿ.ವಿ.ರಾಧಿಕಾ ಹಾಗೂ ಶ್ರೀಮತಿ. ಸಾಯಿ ವೆಂಕಟೇಶ್ವರಮ್ಮ ರವರು ಜಂಟಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. 

ಚಲನಚಿತ್ರದಲ್ಲಿ ಶಿರಡಿ ಸಾಯಿಬಾಬಾರವರ ಅವತರಣ ಕಾಲದಲ್ಲಿ ಜರುಗಿದ ಅಪರೂಪದ ಘಟನೆಗಳನ್ನು ಚಿತ್ರಿಸಲಾಗಿದ್ದು ಇದುವರೆಗೂ  ಸಾಯಿಬಾಬಾರವರ ಬಗ್ಗೆ ಬಿಡುಗಡೆಯಾದ ಯಾವ ಚಿತ್ರದಲ್ಲೂ ಈ ದೃಶ್ಯಗಳನ್ನು ಚಿತ್ರಣ ಮಾಡಿರುವುದಿಲ್ಲ ಎಂದು ನಿರ್ಮಾಪಕರು ಪತ್ರಕರ್ತರಿಗೆ ತಿಳಿಸಿದರು. 

ಸಾಯಿಬಾಬಾರವರು ತಮ್ಮ ಸಮಾಧಿಯಾಗುವುದಕ್ಕೆ ಮುಂಚೆ ಭಕ್ತೆ ಲಕ್ಷ್ಮಿಭಾಯಿಗೆ ಒಂಬತ್ತು ರೂಪಾಯಿಗಳನ್ನು ದಾನವಾಗಿ ನೀಡಿದಂತೆ ಈ ಚಲನಚಿತ್ರದಲ್ಲಿ ಒಂಬತ್ತು ಸುಂದರ ಹಾಡುಗಳಿರುತ್ತವೆ

ಸಾಯಿ ಭಕ್ತರಿಗೆಲ್ಲಾ ತಿಳಿದಿರುವಂತೆ ಸಾಯಿಬಾಬಾರವರು ಎಲ್ಲಾ ತರಹದ ಯೋಗಾಸನಗಳಲ್ಲೂ ಪರಿಣತಿಯನ್ನು ಹೊಂದಿದ್ದರು. ಸಾಯಿಬಾಬಾರವರ ಬಗ್ಗೆ ಇದುವರೆಗೂ ಬಿಡುಗಡೆಯಾಗಿರುವ ಯಾವುದೇ ಚಿತ್ರದಲ್ಲೂ ಚಿತ್ರಣ ಮಾಡಿರದ ಖಂಡ ಯೋಗ ದೃಶ್ಯವನ್ನು ಈ ಚಲನಚಿತ್ರದಲ್ಲಿ ಸೇರಿಸಲಾಗಿದೆ ಎಂದು ನಿರ್ಮಾಪಕರು ತಿಳಿಸಿದರು. 

ಚಲನಚಿತ್ರದ ಕಲಾ ನಿರ್ದೇಶಕರಾದ ಪದ್ಮಶ್ರೀ ತೋಟಾ ತರಾಣಿಯವರು ಈ ಚಲನಚಿತ್ರಕ್ಕೆಂದೇ ವಿಶೇಷವಾದ ಸೆಟ್ ಗಳನ್ನು ನಿರ್ಮಾಣ ಮಾಡಿದ್ದು ಸಾಯಿ ಭಕ್ತರನ್ನು ಸಾಯಿಬಾಬಾರವರ ಅವತರಣ ಕಾಲಕ್ಕೆ ಕೊಂಡೊಯ್ಯುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ನಿರ್ಮಾಪಕಿಯರು ಅಭಿಪ್ರಾಯ ಪಡುತ್ತಾರೆ. 

ಚಲನಚಿತ್ರದಲ್ಲಿ ತಾತಾ ರೆಡ್ಡಿ, ನಾರಾಯಣ ರಾವ್, ರಾಜಕುಮಾರ್, ದಿವಂಗತ ಸುತ್ತಿವೇಲು, ಸೂರ್ಯ ಭಗವಾನ್ ರಾಜ್, ಮುರಳಿ, ಭಾವನಾ, ವಿಜಯ್ ಕುಟ್ಟಿ  ಹಾಗೂ ಇನ್ನೂ ಹಲವಾರು ಕಲಾವಿದರು ಪಾತ್ರವಹಿಸುತ್ತಿದ್ದು ಛಾಯಾಗ್ರಹಣ ಹಾಗೂ ನಿರ್ದೇಶನದ ಹೊಣೆಯನ್ನು ಶ್ರೀ.ಪಿ.ಭಾಸ್ಕರ ಬಾಬಾರವರು ಹೊತ್ತಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಖ್ಯಾತ ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಮೌಸಮಿ ಚಟರ್ಜಿ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ


ಖ್ಯಾತ ಹಿಂದಿ ಚಲನಚಿತ್ರ ತಾರೆ ಶ್ರೀಮತಿ.ಮೌಸಮಿ ಚಟರ್ಜಿಯವರು ಇದೇ ತಿಂಗಳ 28ನೇ  ನವೆಂಬರ್  2013, ಗುರುವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು.


 ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶ್ರೀಮತಿ.ಮೌಸಮಿ ಚಟರ್ಜಿಯವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.


ಕನ್ನಡ ಅನುವಾದ: ಶ್ರೀಕಂಠ ಶರ್ಮ

Saturday, November 23, 2013

ಮಹಾರಾಷ್ಟ್ರ ರಾಜ್ಯದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಮಹಾರಾಷ್ಟ್ರ ರಾಜ್ಯದ ಉನ್ನತ ಹಾಗೂ ತಾಂತ್ರಿಕ ಶಿಕ್ಷಣ ಸಚಿವರಾದ ಶ್ರೀ.ರಾಜೇಶ್ ತೋಪೆಯವರು ಇದೇ ತಿಂಗಳ 23ನೇ  ನವೆಂಬರ್  2013, ಶನಿವಾರ ದಂದು ಶಿರಡಿಗೆ ಭೇಟಿ ನೀಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು. ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ  ಶ್ರೀ.ಮೋಹನ್ ಯಾದವ್ ರವರು ಕೂಡ ಉಪಸ್ಥಿತರಿದ್ದರು.

 
ಶ್ರೀ ಸಾಯಿಬಾಬಾರವರ ಸಮಾಧಿಯ ದರ್ಶನದ ನಂತರ ಶಿಕ್ಷಣ ಸಚಿವರನ್ನು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಸನ್ಮಾನಿಸಿದರು.


 ಕನ್ನಡ ಅನುವಾದ: ಶ್ರೀಕಂಠ ಶರ್ಮ

Friday, November 22, 2013

ಮರಾಠಿ ಚಲನಚಿತ್ರ ನಟ ಶ್ರೀ. ಭರತ್ ಜಾಧವ್ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಖ್ಯಾತ ಮರಾಠಿ ಚಲನಚಿತ್ರ ನಟರಾದ  ಶ್ರೀ.ಭರತ್ ಜಾಧವ್ ರವರು ಇದೇ ತಿಂಗಳ 22ನೇ ನವೆಂಬರ್  2013, ಶುಕ್ರವಾರ ದಂದು ಶಿರಡಿಗೆ ಭೇಟಿ ನೀಡಿ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  
 
 
 ಕನ್ನಡ ಅನುವಾದ: ಶ್ರೀಕಂಠ ಶರ್ಮ

Thursday, November 21, 2013

ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆ ಕೇಂದ್ರ ಸಚಿವರ ಶಿರಡಿ ಭೇಟಿ - ಕೃಪೆ: ಸಾಯಿಅಮೃತಧಾರಾ.ಕಾಂ

ಅತಿ ಸಣ್ಣ ಹಾಗೂ ಸಣ್ಣ ಕೈಗಾರಿಕೆ ಕೇಂದ್ರ ಸಚಿವರಾದ ಶ್ರೀ.ಕೆ.ಹೆಚ್. ಮುನಿಯಪ್ಪನವರು ಇದೇ ತಿಂಗಳ 21ನೇ ನವೆಂಬರ್  2013, ಗುರುವಾರ ದಂದು ತಮ್ಮ  ಪರಿವಾರದೊಂದಿಗೆ ಶಿರಡಿಗೆ ಭೇಟಿ ನೀಡಿ ಶ್ರೀ ಶಿರಡಿ ಸಾಯಿಬಾಬಾರವರ ಸಮಾಧಿಯ ದರ್ಶನವನ್ನು ಪಡೆದರು.  ಆ ಸಂದರ್ಭದಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆಯವರು ಕೂಡ ಉಪಸ್ಥಿತರಿದ್ದರು. 


ಕನ್ನಡ ಅನುವಾದ: ಶ್ರೀಕಂಠ ಶರ್ಮ

Wednesday, November 20, 2013

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ - ಕೃಪೆ: ಸಾಯಿಅಮೃತಧಾರಾ.ಕಾಂ

ಶಿರಡಿ ಸಾಯಿಬಾಬಾ ಸಂಸ್ಥಾನವು ಇದುವರೆಗೆ ಚಾಲ್ತಿಯಲ್ಲಿದ್ದ ಉಚಿತ ದರ್ಶನ ಹಾಗೂ ಆರತಿ ಪಾಸುಗಳಿಗೆ ಕಡಿವಾಣ ಹಾಕಲು ನಿರ್ಧರಿಸಿ ಇದೇ ತಿಂಗಳ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧರಿಸಿದೆ ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಶಿರಡಿ ಸಾಯಿಬಾಬಾ ಸಂಸ್ಥಾನದ ಆಡಳಿತ ಸಮಿತಿಯ ಸದಸ್ಯರುಗಳು 26ನೇ ಜನವರಿ 2010 ರಂದು ಸಭೆ ನಡೆಸಿ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಸಾರ್ವಜನಿಕ ಸಂಪರ್ಕ ಕಾರ್ಯಾಲಯದ ವತಿಯಿಂದ ನೀಡಲು ನಿರ್ಧಾರವನ್ನು ಕೈಗೊಂಡಿದ್ದರು. ಸಮಿತಿಯ ಈ ನಿರ್ಧಾರದಿಂದ ಶನಿವಾರ ಹಾಗೂ ಭಾನುವಾರಗಳಂದು ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿತ್ತು.  ಇದರಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರಿಗೆ ಲಾಭವಾಗಿತ್ತು ಹಾಗೂ ಸೋಮವಾರದಿಂದ ಶುಕ್ರವಾರದವರೆಗೆ ಶುಲ್ಕ ಸಹಿತ ದರ್ಶನ ಹಾಗೂ ಆರತಿ ಪಾಸುಗಳನ್ನು ಪಡೆಯುವವರ ಸಂಖ್ಯೆಯು ಹೆಚ್ಚಾಗಿತ್ತು. 

ಮೇಲಿನ ಈ ಬೆಳವಣಿಗೆಗಳನ್ನು ಗಮನಿಸಿದ ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯು ಇದೇ ತಿಂಗಳ 14ನೇ ನವೆಂಬರ್ 2013 ರಂದು ಸಭೆ ಸೇರಿ 18ನೇ ನವೆಂಬರ್ 2013 ರಿಂದ ಎಲ್ಲಾ ನಾಲ್ಕು ಆರತಿಗಳಿಗೂ ಶುಲ್ಕ ವಿಧಿಸಲು ನಿರ್ಧಾರ ಕೈಗೊಂಡಿತು. ಆದ ಕಾರಣ ಮುಂದಿನ ದಿನಗಳಲ್ಲಿ  ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವವರನ್ನು ಹೊರತುಪಡಿಸಿ ವಿಐಪಿ ವರ್ಗೀಕರಣಕ್ಕೆ ಸೇರಿದವರನ್ನೂ ಒಳಗೊಂಡು ಎಲ್ಲರೂ ನಾಲ್ಕು ಆರತಿಗಳಿಗೂ ಶುಲ್ಕ ನೀಡಬೇಕಾಗಿರುತ್ತದೆ. 

ಶ್ರೀ ಸಾಯಿಬಾಬಾ ಸಂಸ್ಥಾನ, ಶಿರಡಿಯ ತ್ರಿಸದಸ್ಯ ಸಮಿತಿಯ ಈ ನಿರ್ಧಾರದಿಂದ ಸಾಮಾನ್ಯ ಸರತಿಯಲ್ಲಿ ಬಂದು ದರ್ಶನ ಪಡೆಯುವ  ಹಾಗೂ ಆರತಿಯನ್ನು ನೋಡ ಬಯಸುವ  ಸಾಯಿ ಭಕ್ತರಿಗೆ ಬಹಳ ಅನುಕೂಲವಾಗುತ್ತದೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ


Sunday, November 3, 2013

ಉಗ್ರರ ದಾಳಿ ಬೆದರಿಕೆ ಹಿನ್ನೆಲೆಯಲ್ಲಿ ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ಸ್ಥಳೀಯ ನಿವಾಸಿಗಳಿಗೆ ಮನವಿ - ಕೃಪೆ: ಸಾಯಿಅಮೃತಧಾರಾ.ಕಾಂ


ಶಿರಡಿ ಸಾಯಿಬಾಬಾ ಸಂಸ್ಥಾನವು ಇದೇ ತಿಂಗಳ 2ನೇ ನವೆಂಬರ್ 2013, ಶನಿವಾರ ದಂದು ಪತ್ರಿಕಾ ಪ್ರಕಟಣೆಯನ್ನು ನೀಡಿ ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ಸಾಯಿಬಾಬಾ ಸಮಾಧಿ ಮಂದಿರ ಹಾಗೂ ದೇವಾಲಯದ ಪ್ರಾಂಗಣದ ಒಳಗಡೆ ತರಬಾರದೆಂದು ಶಿರಡಿ ಪಟ್ಟಣದ ನಿವಾಸಿಗಳಿಗೆ  ವಿನಂತಿ ಮಾಡಿದೆ. ಶಿರಡಿ ಸಾಯಿಬಾಬಾ ಸಂಸ್ಥಾನದ ಪರವಾಗಿ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆ ಮತ್ತು ಇತರ ಸಮಿತಿ ಸದಸ್ಯರುಗಳು ಈ ನಿರ್ಧಾರವನ್ನು ಕೈಗೊಂಡಿದ್ದು ಸಾಯಿಬಾಬಾ ಮಂದಿರದ ಸುರಕ್ಷತೆಗಾಗಿ ಶಿರಡಿ ನಿವಾಸಿಗಳ ಸಹಕಾರವನ್ನು ಕೋರಿದ್ದಾರೆ. 

"ಸಾಯಿಬಾಬಾ ಮಂದಿರಕ್ಕೆ ಬರುವ ಶಿರಡಿ ಪಟ್ಟಣದ ಎಲ್ಲಾ ನಿವಾಸಿಗಳು ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ಮಂದಿರದ ಸುರಕ್ಷತೆಯ ದೃಷ್ಟಿಯಿಂದ ಸಾಯಿಬಾಬಾ ಸಮಾಧಿ ಮಂದಿರ ಹಾಗೂ ದೇವಾಲಯದ ಪ್ರಾಂಗಣದ ಒಳಗಡೆ ತರಬಾರದು; ದಿನೇ ದಿನೇ ದೇಶದ ಎಲ್ಲೆಡೆ ಹೆಚ್ಚುತ್ತಿರುವ ಉಗ್ರರ ಚಟುವಟಿಕೆಗಳನ್ನು ಗಮನದಲ್ಲಿಟ್ಟುಕೊಂಡು ಶಿರಡಿ ಸಾಯಿಬಾಬಾ ಸಂಸ್ಥಾನವು  ಈ ಭದ್ರತಾ ಕ್ರಮಗಳನ್ನು ಕೈಗೊಂಡಿದೆ; ಶಿರಡಿಯ ಎಲ್ಲಾ ನಿವಾಸಿಗಳು ಈ ವಿಷಯದಲ್ಲಿ ಸಹಕಾರ ನೀಡಬೇಕು; ದೇವಾಲಯದ ಭದ್ರತೆಯ ದೃಷ್ಟಿಯಿಂದ ಮೊಬೈಲ್ ಫೋನ್, ಬ್ಯಾಗ್ ಹಾಗೂ ಯಾವುದೇ ರೀತಿಯ ಆಯುಧಗಳನ್ನು ದೇವಾಲಯದ ಆವರಣದ ಒಳಗಡೆ ತರದಂತೆ ನಿರ್ಬಂಧ ಹೇರಲಾಗಿದೆ; ಆದ ಕಾರಣ, ಶಿರಡಿಯ ಎಲ್ಲಾ ನಿವಾಸಿಗಳನ್ನು ದೇವಾಲಯದ ಎಲ್ಲಾ ನಾಲ್ಕೂ ಗೇಟ್ ಗಳಲ್ಲಿ ತೀವ್ರ ತಪಾಸಣೆಗೆ ಒಳಪಡಿಸಲಾಗುತ್ತದೆ" ಎಂದು ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ. ಅಜಯ್ ಮೋರೆಯವರು ತಿಳಿಸಿದರು. 

ಶಿರಡಿ ಸಾಯಿಬಾಬಾ ಸಂಸ್ಥಾನದ ಭದ್ರತೆಯನ್ನು ಗಮನದಲ್ಲಿಟ್ಟುಕೊಂಡು ಶಿರಡಿಯ ಎಲ್ಲಾ ನಿವಾಸಿಗಳೂ ಈ ವಿಷಯದಲ್ಲಿ ತುಂಬು ಹೃದಯದಿಂದ ಸಹಕರಿಸಬೇಕೆಂದು ಶ್ರೀ. ಅಜಯ್ ಮೋರೆಯವರು ಈ ಮುಖಾಂತರ ಮನವಿ ಮಾಡಿದ್ದಾರೆ. 

ಕನ್ನಡ ಅನುವಾದ: ಶ್ರೀಕಂಠ ಶರ್ಮ

ಶಿರಡಿ ಸಾಯಿಬಾಬಾ ಸಂಸ್ಥಾನದ ವತಿಯಿಂದ ದೀಪಾವಳಿಯ ಅಂಗವಾಗಿ ಲಕ್ಷ್ಮೀ ಪೂಜೆಯ ಆಚರಣೆ - ಕೃಪೆ:ಸಾಯಿಅಮೃತಧಾರಾ.ಕಾಂ

ದೀಪಾವಳಿಯ ಅಂಗವಾಗಿ  ಶಿರಡಿ  ಸಾಯಿಬಾಬಾ ಸಂಸ್ಥಾನದ ವತಿಯಿಂದ ಇದೇ  ತಿಂಗಳ 3ನೇ ನವೆಂಬರ್ 2013, ಭಾನುವಾರ ಸಾಯಂಕಾಲ ಲಕ್ಷ್ಮೀ ಪೂಜೆಯನ್ನು ಬಹಳ ವೈಭವದಿಂದ ಆಚರಿಸಲಾಯಿತು. ಶಿರಡಿ ಸಾಯಿಬಾಬಾ ಸಂಸ್ಥಾನದ ಕಾರ್ಯಕಾರಿ ಅಧಿಕಾರಿಗಳಾದ ಶ್ರೀ.ಅಜಯ್ ಮೋರೆ ಹಾಗೂ ಅವರ ಧರ್ಮಪತ್ನಿಯವರು ಸಮಾಧಿ ಮಂದಿರದಲ್ಲಿ ನಡೆದ ಲಕ್ಷ್ಮೀ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಮಾಧಿ ಮಂದಿರವನ್ನು ಸುಂದರವಾದ ಹೂವುಗಳಿಂದ ಅಲಂಕರಿಸಲಾಗಿತ್ತು. ಸಾಯಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಷ್ಟೇ ಅಲ್ಲದೇ ಲೇಂಡಿ ಉದ್ಯಾನವನದಲ್ಲಿ ಸಾವಿರಾರು ದೀಪಗಳನ್ನು ಹಚ್ಚುವುದರ ಮುಖಾಂತರ ಶಿರಡಿ ಸಾಯಿಬಾಬಾರವರ ಕೃಪೆಗೆ ಪಾತ್ರರಾದರು. 




 
ಕನ್ನಡ ಅನುವಾದ:  ಶ್ರೀಕಂಠ ಶರ್ಮ