ಪ್ರಖ್ಯಾತ ಸಾಯಿ ಬರಹಗಾರ ಹಾಗೂ ಶಿಕ್ಷಣತಜ್ಞ ಡಾಕ್ಟರ್ ಸುಬೋಧ್ ಅಗರವಾಲ್ - ಕೃಪೆ: ಸಾಯಿಅಮೃತಧಾರಾ.ಕಾಂ
ಡಾಕ್ಟರ್ ಸುಬೋಧ್ ಅಗರವಾಲ್ ರವರು ಶಿರಡಿ ಸಾಯಿಬಾಬಾರವರ ಅನನ್ಯ ಭಕ್ತರು. ಇವರು ಪ್ರಖ್ಯಾತ ಬರಹಗಾರರೂ ಹಾಗೂ ಶಿಕ್ಷಣತಜ್ಞರಾಗಿದ್ದಾರೆ.
ಡಾಕ್ಟರ್ ಸುಬೋಧ್ ಅಗರವಾಲ್ ರವರು 1ನೇ ಮಾರ್ಚ್ 1950 ರಂದು ಉತ್ತರಖಂಡ ರಾಜ್ಯದ ಹರಿದ್ವಾರ ಜಿಲ್ಲೆಯ ಮಂಗಲೋರ್ ಪಟ್ಟಣದಲ್ಲಿ ಶ್ರೀಮತಿ.ಕಾಂತಾದೇವಿ ಹಾಗೂ ಶ್ರೀ.ಮಹೇಂದ್ರ ಕುಮಾರ್ ರವರ ಪುತ್ರನಾಗಿ ಜನಿಸಿರುತ್ತಾರೆ.
ಇವರು ಎಂ.ಎ.(ಆಂಗ್ಲ ಸಾಹಿತ್ಯ), ಎಂ.ಎ. (ಇತಿಹಾಸ), ಪಿ.ಹೆಚ್.ಡಿ. (ಆಂಗ್ಲ ಸಾಹಿತ್ಯ), ಪಿ.ಹೆಚ್.ಡಿ. (ಇತಿಹಾಸ), ಡಿ.ಲಿಟ್ (ಆಂಗ್ಲ ಸಾಹಿತ್ಯ) ಹಾಗೂ ಡಿ.ಲಿಟ್ (ಇತಿಹಾಸ) ಪದವಿಗಳನ್ನು ಗಳಿಸಿರುತ್ತಾರೆ.
ಇವರು ಡೆಹರಾಡೂನ್ ನ ಡಿ.ಎ.ವಿ.ಸ್ನಾತಕೋತ್ತರ ಕಾಲೇಜಿನಲ್ಲಿ ಹಲವಾರು ವರ್ಷಗಳ ಕಾಲ ಆಂಗ್ಲ ಸಾಹಿತ್ಯ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಪೆಸರ್ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿರುತ್ತಾರೆ.
ಇವರು 1985 ನೇ ಇಸವಿಯಲ್ಲಿ ಸಾಯಿಬಾಬಾರವರ ಭಕ್ತರಾಗಿ ರೂಪುಗೊಂಡು ಸಾಯಿಬಾಬಾರವರ ಬಗ್ಗೆ ಪ್ರಕಟವಾಗುವ ಪತ್ರಿಕೆಗಳಾದ ಸಾಯಿ ಅಮೃತ್ (ಗಜಿಯಾಬಾದ್, ಉತ್ತರಪ್ರದೇಶ), ಸಾಯಿ ಸುಧಾ (ಚನ್ನೈ, ತಮಿಳುನಾಡು), ಶ್ರೀ.ಸಾಯಿ ಸೇವಾ (ಅಲಹಾಬಾದ್ ಮತ್ತು ಕಾನ್ಪುರ, ಉತ್ತರಪ್ರದೇಶ) ಸಾಯಿ ಅರ್ಪಣ್ (ಮೊರದಾಬಾದ್, ಉತ್ತರಪ್ರದೇಶ) ಹಾಗೂ ಶಿರಡಿ ಸಾಯಿಬಾಬಾ ಸಂಸ್ಥಾನದಿಂದ ಪ್ರಕಟವಾಗುವ ಶ್ರೀ.ಸಾಯಿಲೀಲಾ ದ್ವೈಮಾಸಿಕ ಪತ್ರಿಕೆಗಳಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲದಿಂದ ಆಂಗ್ಲ ಭಾಷೆಯಲ್ಲಿ ಸಾಯಿಬಾಬಾರವರ ಬಗ್ಗೆ ಲೇಖನಗಳನ್ನು ಬರೆಯುತ್ತಾ ಬಂದಿದ್ದಾರೆ.
ಇವರು ಶ್ರೀಮತಿ.ಉಷಾ ಅಗರವಾಲ್ ರವರನ್ನು ವಿವಾಹವಾಗಿದ್ದು ಇವರಿಗೆ ಡಾಕ್ಟರ್.ಕುಮಾರಿ.ವಿಭೂತಿ ಅಗರವಾಲ್ ಎಂಬ ಹೆಣ್ಣು ಮಗಳಿದ್ದಾಳೆ.
ಪ್ರಸ್ತುತ ಇವರು ಡೆಹರಾಡೂನ್ ನಗರದ ಸ್ವಗೃಹದಲ್ಲಿ ತಮ್ಮ ಧರ್ಮಪತ್ನಿ ಹಾಗೂ ಮಗಳೊಂದಿಗೆ ಸುಖೀಜೀವನವನ್ನು ನಡೆಸುತ್ತಿದ್ದಾರೆ.
ಡಾಕ್ಟರ್ ಸುಬೋಧ್ ಅಗರವಾಲ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಡಾಕ್ಟರ್ ಸುಬೋಧ್ ಅಗರವಾಲ್
"ಶಿರಡಿ ಸಾಯಿಧಾಮ್",ನಂ.29, ತಿಲಕ್ ರಸ್ತೆ,
ಡೆಹರಾಡೂನ್ - 248 001,
ಉತ್ತರಖಂಡ, ಭಾರತ
ದೂರವಾಣಿ ಸಂಖ್ಯೆಗಳು:
+91 135 2622810 (ಫ್ಯಾಕ್ಸ್)/+91 98972 02810 (ಮೊಬೈಲ್)
ಇ-ಮೈಲ್ ವಿಳಾಸ:
subodhagarwal27@gmail.com
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment