ಸುಪ್ರಸಿದ್ಧ ಶಿರಡಿಯ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ - ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ - ಕೃಪೆ: ಸಾಯಿಅಮೃತಧಾರಾ.ಕಾಂ
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡದ ಮುಖ್ಯಸ್ಥ. ಇವರದು ಬಹುಮುಖ ಪ್ರತಿಭೆಯ ವ್ಯಕ್ತಿತ್ವ. ಇವರು ಉತ್ತಮ ಗಾಯಕರು, ಡ್ರಮ್ಮರ್, ಗೀತರಚನಕಾರರು ಹಾಗೂ ನಟರೂ ಆಗಿರುತ್ತಾರೆ. ಇವರು 26ನೇ ಫೆಬ್ರವರಿ 1969 ರಂದು ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯ ಶಿರಡಿಯಲ್ಲಿ ಶ್ರೀಮತಿ.ಅಮೀನಾ ಹಾಗೂ ದಿವಂಗತ ಶ್ರೀ.ಗುಲ್ಜಾರ್ ಅನ್ವರ್ ಪಠಾಣ್ ರವರ ಮಗನಾಗಿ ಜನ್ಮ ತಳೆದರು.
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು 1980ನೇ ಇಸವಿಯಲ್ಲಿ ತಮ್ಮ 11ನೇ ಎಳೆಯ ವಯಸ್ಸಿಯನಲ್ಲಿಯೇ ಶಿರಡಿಯ ಪ್ರಖ್ಯಾತ ಪಾರ್ಸಿ ಸಂತರಾದ ಶ್ರೀ.ಹೋಮಿಬಾಬಾರವರಿಂದ ಆಕರ್ಷಿತರಾಗಿ ಅವರನ್ನು ತಮ್ಮ ಭೌತಿಕ ಗುರುಗಳನ್ನಾಗಿ ಸ್ವೀಕರಿಸಿ 1985 ನೇ ಇಸವಿಯಲ್ಲಿ ಅವರ ಸಮಾಧಿಯಾಗುವವರೆವಿಗೂ ಅವರ ಸೇವೆಯನ್ನು ನಿಸ್ವಾರ್ಥತೆಯಿಂದ ಮಾಡಿದರು. ಪ್ರಸ್ತುತ ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಹೋಮಿಬಾಬಾ ಅಶ್ರಮದ ಮೇಲ್ವಿಚಾರಣೆಯನ್ನು ಸ್ವಯಂಸೇವಕರಾಗಿ ನಿರ್ವಹಿಸುತ್ತಿದ್ದಾರೆ.
ಇವರು ಡ್ರಮ್ಮಿಂಗ್ ವಿದ್ಯೆಯನ್ನು ಯಾವ ಗುರುಗಳ ಬಳಿಯೂ ತರಬೇತಿ ಪಡೆದಿರದೆ, ಬದಲಿಗೆ ಕೇವಲ ಸಾಯಿಬಾಬಾರವರ ಆಶೀರ್ವಾದದಿಂದಲೇ ಕಲಿತಿರುವುದಾಗಿ ಅತ್ಯಂತ ವಿನಮ್ರ ಭಾವದಿಂದ ಹೇಳುತ್ತಾರೆ.
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ ಪ್ರತಿ ಗುರುವಾರ ಹಾಗೂ ಹಬ್ಬದ ದಿನಗಳಂದು ನಡೆಸುತ್ತಿರುವ ಸುಪ್ರಸಿದ್ಧ ಚಾವಡಿ ಉತ್ಯವದ ಬ್ಯಾಂಡ್ ಸೆಟ್ ತಂಡವನ್ನು ತಯಾರಿ ಮಾಡುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾ ಬಂದಿದ್ದಾರೆ. ಇವರು ತಮ್ಮ 10ನೇ ವಯಸ್ಸಿನಿಂದಲೇ ತಮ್ಮ ತಂದೆಯವರ ಜೊತೆಯಲ್ಲಿ ಚಾವಡಿ ಉತ್ಸವದಲ್ಲಿ ಪಾಲ್ಗೊಳ್ಳಲು ಪ್ರಾರಂಭಿಸಿದ್ದು ಸುಮಾರು 30 ವರ್ಷಗಳಿಗೂ ಹೆಚ್ಚು ಕಾಲದಿಂದ ಈ ನಿಸ್ವಾರ್ಥ ಸೇವಯನ್ನು ಮಾಡುತ್ತಾ ಬಂದಿದ್ದಾರೆ.
ಚಾವಡಿ ಉತ್ಯವದ ದಿನಗಳಂದು ಇವರ ಬ್ಯಾಂಡ್ ಸೆಟ್ ತಂಡದ ಪ್ರತಿಯೊಬ್ಬ ಸದಸ್ಯರೂ ಬಿಳಿಯ ಪ್ಯಾಂಟ್ ಹಾಗೂ ಕೇಸರಿ ಬಣ್ಣದ ಪಲ್ಲಕ್ಕಿಯ ಚಿತ್ರವನ್ನು ಹೊಂದಿರುವ ಟಿ-ಶರ್ಟ್ ಧರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ತಮ್ಮ ಕಣ್ಣಿನ ಸನ್ನೆಯಿಂದ, ಮುಖದಲ್ಲಿ ತೋರ್ಪಡಿಸುವ ಹಾವ-ಭಾವಗಳಿಂದ ಹಾಗೂ ಕೈಗಳ ಚಲನೆಯಿಂದಲೇ ತಮ್ಮ ತಂಡದ ಎಲ್ಲಾ ಸದಸ್ಯರಿಗೂ ಸೂಚನೆಗಳನ್ನು ಬಹಳ ಸುಂದರವಾಗಿ ನೀಡುತ್ತಾರೆ ಹಾಗೂ ತಂಡದ ಎಲ್ಲಾ ಸದಸ್ಸರುಗಳೂ ಇವರ ಸೂಚನೆಗಳನ್ನು ತಪ್ಪದೇ ಪಾಲಿಸುತ್ತಾರೆ.
ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಪ್ರತಿ ಗುರುವಾರ ಸಂಜೆ 7 ಗಂಟೆಗೆ ಸರಿಯಾಗಿ ಶಿರಡಿಯ ಸಮಾಧಿ ಮಂದಿರದ ಮಧ್ಯದ ಹಾಲ್ ನಲ್ಲಿ ಸೇರಿ ಬ್ಯಾಂಡ್ ಅನ್ನು ಬಾರಿಸಲು ಪ್ರಾರಂಭಿಸುತ್ತಾರೆ. ಸುಮಾರು 8:30 ಕ್ಕೆ ಚಾವಡಿ ಉತ್ಸವವು ಸಮಾಧಿ ಮಂದಿರದಿಂದ ಪ್ರಾರಂಭವಾಗುತ್ತದೆ. ಉತ್ಸವವು ಸಮಾಧಿ ಮಂದಿರದಿಂದ ಹೊರಟು ದ್ವಾರಕಾಮಾಯಿಗೆ ತೆರಳಿ ಅಲ್ಲಿಂದ ಚಾವಡಿ ಸೇರುತ್ತದೆ. ಚಾವಡಿಯಲ್ಲಿ ಸಾಯಿಬಾಬಾರವರಿಗೆ ಆರತಿ ಮಾಡಲಾಗುತ್ತದೆ. ನಂತರ ಉತ್ಸವವು ಚಾವಡಿಯಿಂದ ಹೊರಟು ಶಿರಡಿ ಗ್ರಾಮದ ಪ್ರದಕ್ಷಿಣೆ ಮಾಡಿದ ನಂತರ ಪುನಃ ಸಮಾಧಿ ಮಂದಿರಕ್ಕೆ ಬಂದು ಸೇರುತ್ತದೆ. ಹೀಗೆ ಸುಮಾರು 3 ಗಂಟೆಯ ಕಾಲ ಉತ್ಸವ ಕಾರ್ಯಕ್ರಮ ನಡೆಯುತ್ತದೆ. ಈ ರೀತಿಯಲ್ಲಿ ಸತತ 3 ಗಂಟೆಗಳ ಕಾಲ ಬ್ಯಾಂಡ್ ಸೆಟ್ ತಂಡದ ಸದಸ್ಯರುಗಳು ಎಡೆಬಿಡದೆ ವೈವಿಧ್ಯಮಯವಾಗಿ ಬ್ಯಾಂಡ್ ಅನ್ನು ಬಾರಿಸುತ್ತಾರೆ. ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಮಾರ್ಗದರ್ಶನದಲ್ಲಿ ಈ ರೀತಿ ವೈವಿಧ್ಯಮಯವಾಗಿ ಬ್ಯಾಂಡ್ ಬಾರಿಸುವ ಆ ತಂಡವನ್ನು ನೋಡಲು ಎರಡು ಕಣ್ಣುಗಳು ಸಾಲದು ಎಂದರೆ ಉತ್ಪ್ರೇಕ್ಷೆಯಲ್ಲ!!!
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಒಂದು ಹಿಂದಿ ಚಲನಚಿತ್ರ "ಪ್ರಣಾಮ್ ವಾಲೇ ಕುಂ" ಹಾಗೂ ಎರಡು ಹಿಂದಿ ವೀಡಿಯೋಗಳಾದ "ಸಾಯಿನಾಥ ಮೇರೆ" ಮತ್ತು "ಸಾಯಿ ಸಿಮರ್ಲೋ" ಗಳಲ್ಲಿ ನಟರಾಗಿ ಅಭಿನಯಿಸಿದ್ದಾರೆ.
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರು ಶಿರಡಿ, ಸೂರತ್, ದೆಹಲಿ, ಮೀರತ್, ಬದಾಯೂನ್ ಹಾಗೂ ಗ್ವಾಲಿಯರ್ ನಗರಗಳಲ್ಲಿ ಸಾಯಿ ಭಜನೆಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಇವರು ನೀಡಿದ ಸಾಯಿ ಭಜನೆಯ ಕಾರ್ಯಕ್ರಮಕ್ಕಾಗಿ ಸೂರತ್ ನ "ಸಾಯಿ ಸೇವಕ್ ಮಂಡಲ್" ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರನ್ನು ಸನ್ಮಾನಿಸಿರುತ್ತದೆ.
ಪ್ರಸ್ತುತ ಇವರು ತಮ್ಮ ಧರ್ಮಪತ್ನಿ ಹಾಗೂ ತಮ್ಮ ಮಕ್ಕಳೊಂದಿಗೆ ಶಿರಡಿಯ ತಮ್ಮ ನಿವಾಸದಲ್ಲಿ ಸುಖೀಜೀವನವನ್ನು ನಡೆಸುತ್ತಿದ್ದಾರೆ.
ಶ್ರೀ.ಅಯೂಬ್ ಗುಲ್ಜಾರ್ ಪಠಾಣ್ ರವರ ಸಂಪರ್ಕದ ವಿವರಗಳನ್ನು ಸಾಯಿಭಕ್ತರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿದೆ:
ವಿಳಾಸ:
ಹೋಮಿಬಾಬಾ ಆಶ್ರಮ,
ಪಿಂಪಲವಾಡಿ ರಸ್ತೆ, ಗೋಬಿಂದ್ ಧಾಮ್ ನ ಪಕ್ಕ,
ಶಿರಡಿ - 423 109,
ರಹತಾ ತಾಲ್ಲೂಕು, ಅಹಮದ್ ನಗರ ಜಿಲ್ಲೆ,
ಮಹಾರಾಷ್ಟ್ರ, ಭಾರತ.
ದೂರವಾಣಿ ಸಂಖ್ಯೆ:
+91 94204 70868 / +91 98504 49728
ಕನ್ನಡ ಅನುವಾದ: ಶ್ರೀಕಂಠ ಶರ್ಮ
No comments:
Post a Comment