Friday, November 16, 2012

ಶಿರಡಿಯಲ್ಲಿ ಗಿನ್ನೀಸ್ ದಾಖಲೆಯ ಪ್ರಪ್ರಥಮ ಲಕ್ಷ ದೀಪೋತ್ಸವ ಕಾರ್ಯಕ್ರಮ - ಒಂದು ವರದಿ - ಕೃಪೆ:ಸಾಯಿಅಮೃತಧಾರಾ.ಕಾಂ

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್, ಇದೇ ತಿಂಗಳ ದೀಪಾವಳಿ ಹಬ್ಬದ ನಡುವೆ ಬರುವ ಅಮಾವಾಸ್ಯೆಯ ದಿನದಂದು ಆಚರಿಸುವ ಲಕ್ಷ್ಮೀ ಕುಬೇರ ಪೂಜೆಯ ಪರಮ ಪವಿತ್ರ ದಿನವಾದ 13ನೇ ನವೆಂಬರ್ 2012, ಮಂಗಳವಾರದಂದು ಸಂಜೆ 7:00 ಗಂಟೆಗೆ ಶಿರಡಿಯ ಬಸ್ ನಿಲ್ದಾಣದ ಎದುರುಗಡೆ ಇರುವ ಸಾಯಿನಗರ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಲಕ್ಷ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.  ಈ ಕಾರ್ಯಕ್ರಮದಲ್ಲಿ 15,000 ಸಾಯಿ ಭಕ್ತರು ಪಾಲ್ಗೊಂಡು ಏಕ ಕಾಲದಲ್ಲಿ 1 ಲಕ್ಷ 8 ಸಾವಿರ ದೀಪಗಳನ್ನು ಕೇವಲ 30 ಸೆಕೆಂಡ್ ಗಳಲ್ಲಿ ಹಚ್ಚಿ ಒಂದು ಹೊಸ ವಿಶ್ವ ದಾಖಲೆಗೆ ಕಾರಣವಾದರು.  ಈ ಕಾರ್ಯಕ್ರಮವು ಹೊಸ ಗಿನ್ನೀಸ್ ದಾಖಲೆಯನ್ನು ಸೃಷ್ಟಿಸುವುದರೊಂದಿಗೆ ಇತಿಹಾಸದ ಪುಟಗಳನ್ನು ಸೇರಿದುದು ಒಂದು ವಿಶೇಷವೇ ಸರಿ!!!!!!

ಶಿರಡಿಯ ಸಾಯಿಭಕ್ತ ಲಕ್ಷ್ಮೀಬಾಯಿ ಶಿಂಧೆ ಟ್ರಸ್ಟ್ ನ ಪದಾಧಿಕಾರಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಅದರ ಯಶಸ್ಸಿಗೆ ಕಾರಣರಾದ ಎಲ್ಲಾ ಸಾಯಿ ಭಕ್ತರು, ಶಿರಡಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ನಿವಾಸಿಗಳು, ಶಿರಡಿ ಸಾಯಿಬಾಬಾ ಸಂಸ್ಥಾನದ ಟ್ರಸ್ಟಿಗಳು, ಶಿರಡಿ ನಗರ ಪಂಚಾಯತಿಯ ಅಧಿಕಾರಿಗಳು, ಶಿರಡಿ ಪೋಲಿಸ್ ಅಧಿಕಾರಿಗಳು, ಶಿರಡಿ ಸಾಯಿ ಟ್ರಸ್ಟ್ (ಚನ್ನೈ), ಸಾಯಿ ಪ್ರೇರಣಾ ಟ್ರಸ್ಟ್ (ನವದೆಹಲಿ), ಎಲ್ಲಾ ಪತ್ರಿಕೆಗಳು ಹಾಗೂ ಮಾಧ್ಯಮದವರಿಗೆ ತನ್ನ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುವುದನ್ನು ಮರೆಯಲಿಲ್ಲ. 






ಕನ್ನಡ ಅನುವಾದ: ಶ್ರೀಕಂಠ ಶರ್ಮ

No comments:

Post a Comment